2027 ರ ಏಕದಿನ ವಿಶ್ವಕಪ್ಗೆ 12 ನಗರಗಳ ಆತಿಥ್ಯ; ಐಸಿಸಿ ಅಧಿಕೃತ ಪ್ರಕಟಣೆ
ICC Announces 2027 ODI World Cup Host Cities: 2027ರ ಏಕದಿನ ವಿಶ್ವಕಪ್ ಆಫ್ರಿಕಾದ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾ ದೇಶಗಳಲ್ಲಿ ನಡೆಯಲಿದೆ. ಐಸಿಸಿ 12 ಆತಿಥೇಯ ನಗರಗಳನ್ನು ಬಹಿರಂಗಪಡಿಸಿದೆ, ಇದರಲ್ಲಿ ದಕ್ಷಿಣ ಆಫ್ರಿಕಾದ 8, ಜಿಂಬಾಬ್ವೆಯ 3 ಮತ್ತು ನಮೀಬಿಯಾದ 1 ನಗರ ಸೇರಿವೆ. ಒಟ್ಟು 54 ಪಂದ್ಯಗಳು ನಡೆಯಲಿದ್ದು, 24 ವರ್ಷಗಳ ನಂತರ ಆಫ್ರಿಕಾ ಖಂಡಕ್ಕೆ ವಿಶ್ವಕಪ್ ಮರಳುತ್ತಿದೆ.

2027 ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ಗೆ (2027 ODI World Cup) ಮೂರು ದೇಶಗಳು ಆತಿಥ್ಯವಹಿಸುತ್ತಿವೆ ಎಂಬುದು ಈ ಹಿಂದೆಯೇ ಖಚಿತವಾಗಿತ್ತು. ಇದೀಗ ಈ ಮೂರು ದೇಶಗಳ ಯಾವ್ಯಾವ ನಗರಗಳು ಈ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ಆತಿಥ್ಯವಹಿಸುತ್ತಿವೆ ಎಂಬುದನ್ನು ಐಸಿಸಿ ಇಂದು ಬಹಿರಂಗಪಡಿಸಿದೆ. ಮುಂದಿನ ಏಕದಿನ ವಿಶ್ವಕಪ್ ಆಫ್ರಿಕಾ ಖಂಡದ ಮೂರು ದೇಶಗಳಾದ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ನಡೆಯುತ್ತಿದೆ. ಈ ಮೂರು ದೇಶಗಳ ಒಟ್ಟು 12 ನಗರಗಳಲ್ಲಿ 54 ಪಂದ್ಯಗಳನ್ನು ಆಯೋಜಿಸಲಾಗುತ್ತಿದೆ. ಇದರಲ್ಲಿ ಅತಿ ಹೆಚ್ಚು ಪಂದ್ಯಗಳು ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿವೆ.
12 ನಗರಳಲ್ಲಿ ಆಯೋಜನೆ
ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ವಿಶ್ವಕಪ್ ಪಂದ್ಯಗಳು ನಡೆಯಲಿರುವ 12 ಸ್ಥಳಗಳನ್ನು ಬಹಿರಂಗಪಡಿಸಲಾಯಿತು. ಇವುಗಳಲ್ಲಿ, ಜೋಹಾನ್ಸ್‌ಬರ್ಗ್ ಮತ್ತು ಕೇಪ್ ಟೌನ್ ಸೇರಿದಂತೆ ಎಂಟು ಸ್ಥಳಗಳು ದಕ್ಷಿಣ ಆಫ್ರಿಕಾದಲ್ಲಿದ್ದರೆ, ಜಿಂಬಾಬ್ವೆಯ ಮೂರು ನಗರಗಳು ವಿಶ್ವಕಪ್ ಪಂದ್ಯಗಳನ್ನು ಆಯೋಜಿಸುತ್ತವೆ. ನಮೀಬಿಯಾದ ಒಂದು ನಗರದಲ್ಲಿ ವಿಶ್ವಕಪ್ ಪಂದ್ಯಗಳು ನಡೆಯಲಿವೆ.
24 ವರ್ಷಗಳ ನಂತರ ಏಕದಿನ ವಿಶ್ವಕಪ್
2027 ರ ವಿಶ್ವಕಪ್ ಅಕ್ಟೋಬರ್ 4 ರಿಂದ ನವೆಂಬರ್ 21, 2027 ರವರೆಗೆ ನಡೆಯುವ ನಿರೀಕ್ಷೆಯಿದೆ. ಈ ಬಾರಿಯ ವಿಶ್ವಕಪ್ನ ವಿಶೇಷತೆ ಏನೆಂದರೆ 24 ವರ್ಷಗಳ ನಂತರ ಪುರುಷರ ಏಕದಿನ ವಿಶ್ವಕಪ್ ಆಫ್ರಿಕಾ ಖಂಡದಲ್ಲಿ ನಡೆಯುತ್ತಿದೆ. ಇದಕ್ಕೂ ಮೊದಲು ಅಂದರೆ 2003 ರಲ್ಲಿ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ಕೀನ್ಯಾದಲ್ಲಿ ಏಕದಿನ ವಿಶ್ವಕಪ್ ಪಂದ್ಯಾವಳಿ ನಡೆದಿತ್ತು. ಆದಾಗ್ಯೂ, ಈ ಬಾರಿ ಕೀನ್ಯಾ ಬದಲಿಗೆ ನಮೀಬಿಯಾದಲ್ಲಿ ಪಂದ್ಯಗಳನ್ನು ಆಯೋಜಿಸಲಾಗುತ್ತಿದೆ.
ಅದರಂತೆ ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್, ಸೆಂಚುರಿಯನ್, ಡರ್ಬನ್, ಗ್ಕೆಬರ್ಹಾ, ಕುಗೊಂಪೊ ಸಿಟಿ, ಕೇಪ್ ಟೌನ್, ಪಾರ್ಲ್ ಮತ್ತು ಬ್ಲೂಮ್ಫಾಂಟೈನ್ನಲ್ಲಿ 2027 ರ ವಿಶ್ವಕಪ್ ಪಂದ್ಯಗಳು ನಡೆಯಲಿವೆ. ಫೈನಲ್ ಪಂದ್ಯವು ವಾಂಡರರ್ಸ್ ಅಥವಾ ನ್ಯೂಲ್ಯಾಂಡ್ಸ್‌ನಲ್ಲಿ ನಡೆಯಲಿದೆ. ಜಿಂಬಾಬ್ವೆಯ ಹರಾರೆ, ಬುಲವಾಯೊ ಮತ್ತು ವಿಕ್ಟೋರಿಯಾ, 7 ರಿಂದ 10 ಪಂದ್ಯಗಳನ್ನು ಆಯೋಜಿಸುತ್ತವೆ. ಉಳಿದಂತೆ ನಮೀಬಿಯಾದ ವಿಂಡ್‌ಹೋಕ್ ಮೈದಾನದಲ್ಲಿ ಮೂರು ಪಂದ್ಯಗಳು ನಡೆಯಲಿವೆ. ಹಾಗೆಯೇ ಬೆನೋನಿ ಮತ್ತು ಪೊಚೆಫ್‌ಸ್ಟ್ರೂಮ್ ಕ್ರೀಡಾಂಗಣಗಳನ್ನು ಅಭ್ಯಾಸಕ್ಕಾಗಿ ಬಳಸುವುದರ ಜೊತೆಗೆ ವಿಶ್ವಕಪ್ ಅರ್ಹತಾ ಪಂದ್ಯಗಳನ್ನು ಸಹ ಇಲ್ಲಿ ಆಯೋಜಿಸುವ ಸಾಧ್ಯತೆಯಿದೆ.
It’s exciting to announce the 12 venues across three nations and a new brand for the ICC Men’s @CricketWorldCup 2027. The unveiling signals the start of a journey that will unite fans around the world and build anticipation for one of our sport’s biggest global events. #CWC27 pic.twitter.com/wSW4j4sAPP
— Jay Shah (@JayShah) July 30, 2026
ಪಂದ್ಯಗಳು ನಡೆಯಲಿರುವ ನಗರಗಳ ಪಟ್ಟಿ
ದಕ್ಷಿಣ ಆಫ್ರಿಕಾ
- ವಾಂಡರರ್ಸ್ ಕ್ರೀಡಾಂಗಣ, ಜೋಹಾನ್ಸ್‌ಬರ್ಗ್ (ದಕ್ಷಿಣ ಆಫ್ರಿಕಾ)
- ಸೆಂಚುರಿಯನ್ ಕ್ರೀಡಾಂಗಣ, ಶ್ವಾನೆ (ದಕ್ಷಿಣ ಆಫ್ರಿಕಾ)
- ನ್ಯೂಲ್ಯಾಂಡ್ಸ್ ಕ್ರಿಕೆಟ್ ಮೈದಾನ, ಕೇಪ್ ಟೌನ್ (ದಕ್ಷಿಣ ಆಫ್ರಿಕಾ)
- ಕಿಂಗ್ಸ್‌ಮೀಡ್ ಕ್ರಿಕೆಟ್ ಮೈದಾನ, ಡರ್ಬನ್ (ದಕ್ಷಿಣ ಆಫ್ರಿಕಾ)
- ಸೇಂಟ್ ಜಾರ್ಜ್ ಪಾರ್ಕ್, ಗ್ಬೆರೆಖಾ (ದಕ್ಷಿಣ ಆಫ್ರಿಕಾ)
- ಮಾಗೌಂಗ್ ಓವಲ್, ಬ್ಲೂಮ್‌ಫಾಂಟೈನ್ (ದಕ್ಷಿಣ ಆಫ್ರಿಕಾ)
- ಬೋಲ್ಯಾಂಡ್ ಪಾರ್ಕ್, ಪಾರ್ಲ್ (ದಕ್ಷಿಣ ಆಫ್ರಿಕಾ)
- ಬಫಲೋ ಪಾರ್ಕ್, ಕುಗೊಂಪೊ ನಗರ – ಪೂರ್ವ ಲಂಡನ್ (ದಕ್ಷಿಣ ಆಫ್ರಿಕಾ)
ಜಿಂಬಾಬ್ವೆ
- ಹರಾರೆ ಸ್ಪೋರ್ಟ್ಸ್ ಕ್ಲಬ್, ಹರಾರೆ (ಜಿಂಬಾಬ್ವೆ)
- ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್, ಬುಲವಾಯೊ (ಜಿಂಬಾಬ್ವೆ)
- ಫೇಲ್ ಮೋಸಿ-ಓ-ತುನ್ಯಾ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ, (ಜಿಂಬಾಬ್ವೆ)
ನಮೀಬಿಯಾ
- ನಮೀಬಿಯಾ ಕ್ರಿಕೆಟ್ ಮೈದಾನ, ವಿಂಡ್‌ಹೋಕ್ (ನಮೀಬಿಯಾ)
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:37 pm, Fri, 31 July 26




