AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿಕೆಟ್​ ಸಿಗದಿದ್ದಕ್ಕೆ ಅಭಿಮಾನಿಗಳ ಆಕ್ರೋಶ; ಟಾಕೀಸ್​ಗೆ ಕಲ್ಲು ತೂರಾಟ ಕಿಟಕಿ ಗಾಜು ಪುಡಿ ಪುಡಿ

ಬೆಳಿಗ್ಗೆ 5 ಗಂಟೆಗೆ ಮೊದಲ ಶೋ ಆರಂಭವಾಗಿದೆ. ಚಿತ್ರ ಮಂದಿರದ ಬಳಿ ಜನಸಾಗರ ಜಮಾವಣೆಗೊಂಡಿದ್ದು, ಈ ಮಧ್ಯೆ ಟಿಕೆಟ್​​ಗಾಗಿ ಅಭಿಮಾನಿಗಳು ಮುಗಿಬಿದಿದ್ದಾರೆ.

ಟಿಕೆಟ್​ ಸಿಗದಿದ್ದಕ್ಕೆ ಅಭಿಮಾನಿಗಳ ಆಕ್ರೋಶ; ಟಾಕೀಸ್​ಗೆ ಕಲ್ಲು ತೂರಾಟ ಕಿಟಕಿ ಗಾಜು ಪುಡಿ ಪುಡಿ
ಚಿತ್ರಮಂದಿರ ಮುಂದೆ ಜಮಾಯಿಸಿದ ಅಭಿಮಾನಿಗಳು.
TV9 Web
| Edited By: |

Updated on:Mar 17, 2022 | 8:57 AM

Share

ಕೊಪ್ಪಳ: ಜಿಲ್ಲೆಯಲ್ಲಿ ಇಂದು ಜೇಮ್ಸ್ (James) ಮೊದಲ ಶೋ ಆರಂಭವಾಗಿದೆ. ಟಿಕೆಟ್​ಗಾಗಿ ಅಭಿಮಾನಿಗಳು ಮುಗಿಬಿದಿದ್ದು, ಟಿಕೆಟ್ ಸಿಗದಿದ್ದಕ್ಕೆ ಟಾಕೀಸ್​ಗೆ ಕಲ್ಲು ತೂರಾಟ ಮಾಡಿದ್ದಾರೆ. ನಗರದ ಗಂಗಾವತಿಯ ಶಿವ ಚಿತ್ರಮಂದಿರದಲ್ಲಿ ಘಟನೆ ನಡೆದಿದೆ. ಬೆಳಿಗ್ಗೆ 5 ಗಂಟೆಗೆ ಮೊದಲ ಶೋ ಆರಂಭವಾಗಿದೆ. ಚಿತ್ರ ಮಂದಿರದ ಬಳಿ ಜನಸಾಗರ ಜಮಾವಣೆಗೊಂಡಿದ್ದು, ಈ ಮಧ್ಯೆ ಟಿಕೆಟ್​​ಗಾಗಿ ಅಭಿಮಾನಿಗಳು ಮುಗಿಬಿದಿದ್ದಾರೆ. ಟಿಕೆಟ್​ಗಾಗಿ ರಾತ್ರಿಯೆಲ್ಲ ಅಪ್ಪು ಅಭಿಮಾನಿಗಳು ಕಾದು ಕುಳಿತಿದ್ದು, ಟಿಕೆಟ್​ ಸಿಗದಿದ್ದಾಗ ಆಕ್ರೋಶಗೊಂಡ ಅಭಿಮಾನಿಗಳು, ಶಟರ್​​ಗೆ ಕಲ್ಲು ತೂರಿ, ಚಿತ್ರಮಂದಿರದ ಹಿಂಬಾಗ ಕಿಟಕಿಗಳನ್ನು ಪುಡಿ ಮಾಡಿದ್ದಾರೆ. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ‌ ಪಟ್ಟಿದ್ದಾರೆ. ಚಿತ್ರಮಂದಿರದೊಳಗೆ ಅಭಿಮಾನಿಯೊಬ್ಬ ಅಪ್ಪು ಭಾವಚಿತ್ರ ಹಿಡಿದು ಬಂದಿದ್ದ. ಅದೇ ರೀತಿಯಾಗಿ ಅಂಗವಿಕಲನೊಬ್ಬ ಟಿಕೆಟ್ ತೆಗೆದುಕೊಳ್ಳಲು ಪರದಾಡಿದ್ದಾನೆ.

ಲಾಠಿ ಪ್ರಹಾರ:

ಬಳ್ಳಾರಿ: ಜಿಲ್ಲೆಯಲ್ಲಿ ಇಂದು ಎಲ್ಲ ಚಿತ್ರಮಂದಿರಗಳಲ್ಲೂ ಜೇಮ್ಸ್ ಜಾತ್ರೆ ನಡೆಯುತ್ತಿದೆ. ಜೇಮ್ಸ್ ಚಿತ್ರ ನೋಡಲು ರಾತ್ರಿಯಿಂದಲೇ ಅಭಿಮಾನಿಗಳು ಕಾಯ್ದು ಕುಳಿತಿದ್ದಾರೆ.  ಅಭಿಮಾನಿಗಳು ನೂಕು ನುಗ್ಗಲಿಂದ ರಸ್ತೆ ಜಾಮ್ ಕೂಡ ಆಗಿದೆ. ನಗರದ ಉಮಾ‌ ನಟರಾಜ, ಶಿವ ಗಂಗಾ ಚಿತ್ರ ಮಂದಿರಗಳಲ್ಲಿ ನಸುಕಿನ ಜಾವ್ 4 ಗಂಟೆಗೆ ಶೋ ಆರಂಭಗೊಂಡಿದೆ. ಪೇಕ್ಷಕರ ನೂಕುನುಗ್ಗಲಾಗಿದ್ದು, ಪೇಕ್ಷಕರನ್ನ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಿದ್ದಾರೆ. ಪೇಕ್ಷಕರನ್ನ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.

ಪಿಕ್ ಪಾಕೇಟ್​ರಗೆ ಧರ್ಮದೇಟು:

ಬೆಂಗಳೂರು: ಪುನೀತ ರಾಜ್ ಕುಮಾರ್ ಅಭಿನಯದ ಜೇಮ್ಸ್ ಚಿತ್ರ ಇಂದು ರಾಜ್ಯಾದ್ಯಂತ ತೆರೆ ಕಂಡಿದೆ. ಹಲವು ಕಡೆ ಬೆಳಗಿನ ಜಾವ 4 ಗಂಟೆಗೆ ಶೋ ಆರಂಭಗೊಂಡಿವೆ. ಬಹುತೇಕ ಎಲ್ಲಾ ಚಿತ್ರಮಂದಿರಗಳಲ್ಲಿ ಕಿಕ್ಕಿರಿದು ಅಪ್ಪು ಫ್ಯಾನ್ಸ್ ತುಂಬಿ ಕೊಂಡಿದ್ದಾರೆ. ಅದೇ ರೀತಿಯಾಗಿ ಈತ್ತ ಬೆಂಗಳೂರಿನ ಚಿತ್ರಮಂದಿರಗಳಲ್ಲಿ ಅಭಿಮಾನಿಗಳಿಂದ ತುಂಬಿ ಹೋಗಿದ್ದು, ಅದರ ಮಧ್ಯೆ ವ್ಯಕ್ತಿಯೋರ್ವ ಪಿಕ್​ ಪಾಕೇಟ್​ ಮಾಡಲು ಹೋಗಿ ಸಿಕ್ಕಿಬಿದ್ದು ಧರ್ಮದೇಟು ತಿಂದಿದ್ದಾನೆ.

ಬೆಂಕಿಗಾಹುತಿಯಾದ ರಸಗೊಬ್ಬರ ಅಂಗಡಿ:

ವಿಜಯಪುರ: ರಸಗೊಬ್ಬರ ಸಂಗ್ರಹ ಮಾಡಿದ್ದ ಅಂಗಡಿ ಬೆಂಕಿಗಾಹುತಿಯಾದ ಘಟನೆ ನಡೆದಿದೆ. ಜಿಲ್ಲೆ ಇಂಡಿ ಪಟ್ಟಣದ ಅಗರಖೇಡ ರಸ್ತೆ ಬಳಿ ಅವಘಡ ಸಂಭವಿಸಿದೆ. ರಾಘು ಧನಶೆಟ್ಟಿ ಎಂಬುವರಿಗೆ ಸೇರಿದ ನಂದಿ ಅಗ್ರೊ ಟ್ರೇಡರ್ಸ್‌ ಅಂಗಡಿಗೆ ಬೆಂಕಿ ಬಿದಿದ್ದು, ಶಾರ್ಟ್ ಸರ್ಕ್ಯೂಟ್​ನಿಂದ ಬೆಂಕಿ ಕಾಣಿಸಿಕೊಂಡಿರಬೇಕು ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಲಕ್ಷಾಂತರ ಮೌಲ್ಯದ ಗೊಬ್ಬರ ಬೆಂಕಿಗಾಹುತಿಯಾಗಿದ್ದು, ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಇಂಡಿ ಶಹರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ:

Cyclone Asani: ಮುಂದಿನವಾರ ಅಪ್ಪಳಿಸಲಿದೆ ಅಸನಿ ಚಂಡಮಾರುತ; ಹವಾಮಾನ ಇಲಾಖೆಯಿಂದ ಎಚ್ಚರಿಕೆ

Published On - 8:55 am, Thu, 17 March 22

Follow Us
ಮಂಡ್ಯದ ವಸತಿಶಾಲೆಯಲ್ಲಿ ಮಕ್ಕಳಿಗೆ ಫುಡ್ ಪಾಯಿಸನ್
ಮಂಡ್ಯದ ವಸತಿಶಾಲೆಯಲ್ಲಿ ಮಕ್ಕಳಿಗೆ ಫುಡ್ ಪಾಯಿಸನ್
‘ಜೈಲಿನಲ್ಲಿ ಖುದ್ದು ಹಾಜರಿ ಬೇಕು’; ಹೈಕೋರ್ಟ್​​ನಲ್ಲಿ ದರ್ಶನ್ ಅರ್ಜಿ
‘ಜೈಲಿನಲ್ಲಿ ಖುದ್ದು ಹಾಜರಿ ಬೇಕು’; ಹೈಕೋರ್ಟ್​​ನಲ್ಲಿ ದರ್ಶನ್ ಅರ್ಜಿ
ಅಸಲಿ ಮುಖ ತೋರಿಸೋಕೆ ಆರಂಭಿಸಿದ ಸೌಂದರ್ಯಾ ಶೆಟ್ಟಿ; ಅಣಕಿಸಿದ ವಿಡಿಯೋ ವೈರಲ್
ಅಸಲಿ ಮುಖ ತೋರಿಸೋಕೆ ಆರಂಭಿಸಿದ ಸೌಂದರ್ಯಾ ಶೆಟ್ಟಿ; ಅಣಕಿಸಿದ ವಿಡಿಯೋ ವೈರಲ್
ಡಿಕೆಶಿ ಸರ್ಕಾರಕ್ಕೆ 100 ದಿನ: ಕೆಆರ್​ಎಸ್ ಡ್ಯಾಂಗೆ ಕಲರ್​ಫುಲ್​ ​ಲೈಟಿಂಗ್
ಡಿಕೆಶಿ ಸರ್ಕಾರಕ್ಕೆ 100 ದಿನ: ಕೆಆರ್​ಎಸ್ ಡ್ಯಾಂಗೆ ಕಲರ್​ಫುಲ್​ ​ಲೈಟಿಂಗ್
ಸತೀಶ್ ಜಾರಕಿಹೊಳಿ ನಿವಾಸದಲ್ಲಿ ತಡರಾತ್ರಿ 2 ಗಂಟೆವರೆಗೆ ಇಡಿ ಶೋಧ
ಸತೀಶ್ ಜಾರಕಿಹೊಳಿ ನಿವಾಸದಲ್ಲಿ ತಡರಾತ್ರಿ 2 ಗಂಟೆವರೆಗೆ ಇಡಿ ಶೋಧ
ಗುರುಗಳ ಲಹರಿ ಇರುವ ಶುಭ ದಿನ: ಸೆಪ್ಟೆಂಬರ್ 10 ರ ರಾಶಿ ಭವಿಷ್ಯ
ಗುರುಗಳ ಲಹರಿ ಇರುವ ಶುಭ ದಿನ: ಸೆಪ್ಟೆಂಬರ್ 10 ರ ರಾಶಿ ಭವಿಷ್ಯ
ಬಾಂಗ್ಲಾದೇಶ ಸೇನೆಯ ಟ್ಯಾಂಕ್ ಫೈರಿಂಗ್ ಅಭ್ಯಾಸದ ವೇಳೆ ಸ್ಫೋಟ; ಇಬ್ಬರು ಸಾವು
ಬಾಂಗ್ಲಾದೇಶ ಸೇನೆಯ ಟ್ಯಾಂಕ್ ಫೈರಿಂಗ್ ಅಭ್ಯಾಸದ ವೇಳೆ ಸ್ಫೋಟ; ಇಬ್ಬರು ಸಾವು
ಅತಿಯಾಗಿ ಮಾತನಾಡುವ ಬಿಗ್ ಬಾಸ್ ಸ್ಪರ್ಧಿಗಳಿಗೆ ವಾರ್ನಿಂಗ್ ಕೊಟ್ಟ ಅವಿನಾಶ್
ಅತಿಯಾಗಿ ಮಾತನಾಡುವ ಬಿಗ್ ಬಾಸ್ ಸ್ಪರ್ಧಿಗಳಿಗೆ ವಾರ್ನಿಂಗ್ ಕೊಟ್ಟ ಅವಿನಾಶ್
ಬಿಜೆಪಿಎಂಎಲ್​ಎಗೆ ಸಚಿವ ಮಲ್ಲಿಕಾರ್ಜುನ್ ಬೈದ ಬೈಗುಳ
ಬಿಜೆಪಿಎಂಎಲ್​ಎಗೆ ಸಚಿವ ಮಲ್ಲಿಕಾರ್ಜುನ್ ಬೈದ ಬೈಗುಳ
ಒಂದೇ ಗೋರಿಗೆ ಹಿಂದೂ-ಮುಸ್ಲಿಂ ಪೂಜೆ: ಬೀದರ್​​ನಲ್ಲೊಂದು ಭಾವೈಕ್ಯತೆಯ ಜಾತ್ರೆ
ಒಂದೇ ಗೋರಿಗೆ ಹಿಂದೂ-ಮುಸ್ಲಿಂ ಪೂಜೆ: ಬೀದರ್​​ನಲ್ಲೊಂದು ಭಾವೈಕ್ಯತೆಯ ಜಾತ್ರೆ