Cyclone Asani: ಮುಂದಿನವಾರ ಅಪ್ಪಳಿಸಲಿದೆ ಅಸನಿ ಚಂಡಮಾರುತ; ಹವಾಮಾನ ಇಲಾಖೆಯಿಂದ ಎಚ್ಚರಿಕೆ

ಚಂಡಮಾರುತ ಅಪಾಯ ಇರುವ ಹಿನ್ನೆಲೆಯಲ್ಲಿ ಬಂಗಾಳಕೊಲ್ಲಿಯ ದಕ್ಷಿಣ ಕರಾವಳಿ ಮತ್ತು ಅದಕ್ಕೆ ಹೊಂದಿಕೊಂಡಿರುವ ಹಿಂದೂ ಮಹಾಸಾಗರ ಸಮಭಾಜಕ ಪ್ರದೇಶಗಳ ಕರಾವಳಿಯಲ್ಲಿನ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಸೂಚಿಸಿದೆ.

Cyclone Asani: ಮುಂದಿನವಾರ ಅಪ್ಪಳಿಸಲಿದೆ ಅಸನಿ ಚಂಡಮಾರುತ; ಹವಾಮಾನ ಇಲಾಖೆಯಿಂದ ಎಚ್ಚರಿಕೆ
ಸಾಂಕೇತಿಕ ಚಿತ್ರ
Follow us
TV9 Web
| Updated By: Lakshmi Hegde

Updated on:Mar 17, 2022 | 8:26 AM

ಹಿಂದೂ ಮಹಾಸಾಗರದ ನೈಋತ್ಯ ಭಾಗದಲ್ಲಿ (ಬಂಗಾಳ ಕೊಲ್ಲಿ) ಕಡಿಮೆ ಒತ್ತಡ ಸ್ಥಿತಿ ಉಂಟಾಗಿದ್ದು, ಮುಂದಿನ ವಾರದಷ್ಟೊತ್ತಿಗೆ ಇನ್ನಷ್ಟು ತೀವ್ರಗೊಳ್ಳಲಿದೆ. ಈ ಕಾರಣದಿಂದ ಅಸನಿ ಚಂಡಮಾರುತ (Cyclone Asani) ಏಳುವ ಸಾಧ್ಯತೆ ಹೆಚ್ಚಾಗಿದೆ. ಈ ಚಂಡಮಾರುತ ಬಾಂಗ್ಲಾದೇಶ ಮತ್ತು ಉತ್ತರ ಮ್ಯಾನ್ಮಾರ್​​ ಕಡೆಗೆ ಚಲಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.  ಸಾಗರದಲ್ಲಿ ಕಡಿಮೆ ಒತ್ತಡ ವಾತಾವರಣ ಪರಿಸ್ಥಿತಿ ಮಂಗಳವಾರ ರಚಿತಗೊಂಡಿದ್ದು, ಅದು ಶನಿವಾರದ ಹೊತ್ತಿಗೆ ಇನ್ನಷ್ಟು ತೀವ್ರಗೊಳ್ಳುತ್ತದೆ. ಹೀಗಾಗಿ ಗಾಳಿಯು ಪೂರ್ವ ಮತ್ತು ಈಶಾನ್ಯ ರಾಜ್ಯಗಳತ್ತ ಚಲಿಸಲಿದೆ. ಹಾಗೇ ದುರ್ಬಲ ಗೊಳ್ಳುವುದಕ್ಕೂ ಮೊದಲು ಅಂಡಮಾನ್​-ನಿಕೋಬಾರ್​ ಪ್ರವೇಶಿಸಲಿದೆ ಎಂದೂ ಐಎಂಡಿ ವಿವರಿಸಿದೆ.

ಸದ್ಯ ಕಡಿಮೆ ಒತ್ತಡ ಪ್ರದೇಶ ಸೃಷ್ಟಿಯಾಗಿದ್ದರೂ ಯಾವುದೇ ಚಂಡಮಾರುತ ಎದ್ದಿಲ್ಲ. ಆದರೆ ಈ ಸ್ಥಿತಿ ಇನ್ನಷ್ಟು ತೀವ್ರ ಆದರೆ ಚಂಡಮಾರುತವಾಗಿ ಪರಿವರ್ತನೆಗೊಳ್ಳಲಿದೆ. ಇದೇ ವಾತಾವರಣ ಮಾರ್ಚ್​ 21ರಂದು ತೀವ್ರಗೊಂಡು, ಚಂಡಮಾರುತವಾಗಿ ಪರಿವರ್ತನೆಯಾಗಲಿದ್ದು, ಮಾರ್ಚ್​ 22ರವರೆಗೂ ಉತ್ತರ, ವಾಯುವ್ಯದತ್ತ ಚಲಿಸಲಿದೆ. ಈ ಬಾರಿ ಏಳುವ ಚಂಡಮಾರುತಕ್ಕೆ ಅಸನಿ ಎಂದು ಹೆಸರಿಸಲಾಗಿದೆ. ಈ ಹೆಸರನ್ನು ಶ್ರೀಲಂಕಾ ದೇಶ ನಾಮಕರಣ ಮಾಡಿದ್ದು, ಹೀಗೆಂದರೆ ಸಿಡಿಲು ಎಂಬ ಅರ್ಥವೂ ಇದೆ.  ಚಂಡ ಮಾರುತ ಉತ್ತರ-ವಾಯುವ್ಯದ ಕಡೆಗೆ ಚಲಿಸಿ ಬಾಂಗ್ಲಾದೇಶದ ಸಮೀಪ ತಲುಪಲಿದೆ. ಮಾರ್ಚ್​ 23ರಷ್ಟರಲ್ಲಿ ಉತ್ತರ ಮ್ಯಾನ್ಮಾರ್​​ ಕರಾವಳಿ  ತಲುಪಲಿದೆ ಎಂದೂ ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಚಂಡಮಾರುತ ಅಪಾಯ ಇರುವ ಹಿನ್ನೆಲೆಯಲ್ಲಿ ಬಂಗಾಳಕೊಲ್ಲಿಯ ದಕ್ಷಿಣ ಕರಾವಳಿ ಮತ್ತು ಅದಕ್ಕೆ ಹೊಂದಿಕೊಂಡಿರುವ ಹಿಂದೂ ಮಹಾಸಾಗರ ಸಮಭಾಜಕ ಪ್ರದೇಶಗಳ ಕರಾವಳಿಯಲ್ಲಿನ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಸೂಚಿಸಿದೆ. ಹಾಗೇ ಅಂಡಮಾನ್​ ದ್ವೀಪ, ಆಗ್ನೇಯ ಬಂಗಾಳ ಕೊಲ್ಲಿ  ಪ್ರದೇಶದ ಜನರಿಗೂ ಎಚ್ಚರವಾಗಿರುವಂತೆ ತಿಳಿಸಲಾಗಿದೆ. ಭಾನುವಾರದ ಸುಮಾರಿಗೆ ಅಂಡಮಾನ್​-ನಿಕೋಬಾರ್​ ದ್ವೀಪದಲ್ಲಿ ಜೋರಾದ ಗಾಳಿ ಇರಬಹುದು. ಅದು ತಾಸಿಗೆ 70-80 ಕಿಮೀ ವೇಗದಲ್ಲಿ ಬೀಸುವಷ್ಟು ವೇಗ ತಲುಪಿ, ಮರುದಿನ ಅಂದರೆ ಸೋಮವಾರದ ಹೊತ್ತಿಗೆ ಗಂಟೆಗೆ 90 ಕಿಮೀ ವೇಗದಲ್ಲಿ ಬೀಸುವ ಸಾಧ್ಯತೆ ಇದೆ ಎಂದೂ ಹೇಳಲಾಗಿದೆ.

ಇದನ್ನೂ ಓದಿ: Banana Disadvantages: ಅತಿ ಹೆಚ್ಚು ಬಾಳೆಹಣ್ಣು ಸೇವಿಸುತ್ತಿದ್ದೀರಾ? ಅಡ್ಡಪರಿಣಾಮಗಳ ಬಗ್ಗೆಯೂ ಇರಲಿ ನಿಮ್ಮ ಗಮನ

Published On - 8:23 am, Thu, 17 March 22

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್