ನಕಲಿ ಪ್ರಮಾಣ ಪತ್ರಕ್ಕೆ ಲಂಚ: ಜಾಮಿಯಾ ಮಿಲಿಯಾ ಪ್ರೊಫೆಸರ್ ಖಲೀದ್ ಮೊಯಿನ್ ಅಂದರ್
CBI: ಅನೇಕ ಖಾಸಗಿ ಬಿಲ್ಡರ್ಗಳು, ಆರ್ಕಿಟೆಕ್ಟ್ಗಳು, ಮಧ್ಯವರ್ತಿಗಳು ಮುಂತಾದವರೊಂದಿಗೆ ಶಾಮೀಲಾಗಿ ಲಂಚ ಪಡೆದು, ಕಟ್ಟಡಗಳ ಬಾಳಿಕೆ ಬಗ್ಗೆ ನಕಲಿ ಪ್ರಮಾಣ ಪತ್ರಗಳನ್ನು ವಿತರಿಸುತ್ತಿದ್ದರು ಎಂದು ಆರೋಪಿಸಲಾಗಿದೆ. ಪ್ರಕರಣವೊಂದರಲ್ಲಿ 1 ಲಕ್ಷ ರೂಪಾಯಿ ಸ್ವೀಕರಿಸುವಾಗ ಬಲೆ ಬೀಸಿದ ಸಿಬಿಐ ಮೂವರನ್ನೂ ಬಂಧಿಸಿದೆ.
ನವದೆಹಲಿ: ಸುಮಾರು 1 ಲಕ್ಷ ರೂಪಾಯಿ ಲಂಚ ಪಡೆಯುವ ಸಂದರ್ಭದಲ್ಲಿ ಸಿಬಿಐ ಬಲೆ ಬೀಸಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ಯೂನಿವರ್ಸಿಟಿಯ ಪ್ರೊಫೆಸರ್ ಖಲೀದ್ ಮೊಯಿನ್ ಮತ್ತು ಇನ್ನಿಬ್ಬರನ್ನು ಬುಧವಾರ ಬಂಧಿಸಿದೆ. ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ (Jamia Milia Islamia University) ಸಿವಿಲ್ ಎಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಮೊಹಮದ್ ಖಲೀದ್ ಮೊಯಿನ್, ಅವರ ಇಬ್ಬರು ಸಹವರ್ತಿಗಳಾದ ಅಬೀದ್ ಖಾನ್ ಮತ್ತು ಪ್ರಖಾರ್ ಪವಾರ್ ಅವರುಗಳನ್ನು ದೆಹಲಿಯ ಓಕ್ಲಾ ಪ್ರದೇಶದಲ್ಲಿರುವ ಖಾಸಗಿ ಕಂಪನಿಯಲ್ಲಿ ಸಿಬಿಐ ಅಧಿಕಾರಿಗಳು (Central Bureau of Investigation -CBI) ಬಂಧಿಸಿದರು.
ಗುರುಗಾವ್ನಲ್ಲಿ ಚಿಂಟೆಲ್ಸ್ ಪರಡಿಸೊ ಅಪಾರ್ಟ್ಮೆಂಟ್ ಗೆ ಸುರಕ್ಷಾ ಪ್ರಮಾಣ ಪತ್ರವನ್ನು ಪ್ರೊಫೆಸರ್ ಮೊಹಮದ್ ಖಲೀದ್ ಮೊಯಿನ್ ಅವರು ವಿತರಿಸಿದ್ದರು. ಆದರೆ ಈ ಅಪಾರ್ಟ್ಮೆಂಟ್ ಇತ್ತೀಚೆಗೆ ಕುಸಿದುಬಿದ್ದು, ಇಬ್ಬರು ಮಹಿಳೆಯರು ಮೃತಪಟ್ಟಿದ್ದರು. ಆದರೆ ಅಪಾರ್ಟ್ಮೆಂಟ್ ಕುಸಿತಕ್ಕೂ ಪ್ರೊಫೆಸರ್ ಮೊಹಮದ್ ಬಂಧನಕ್ಕೂ ಸಂಬಂಧ ಇಲ್ಲ.
ಅನೇಕ ಖಾಸಗಿ ಬಿಲ್ಡರ್ಗಳು, ಆರ್ಕಿಟೆಕ್ಟ್ಗಳು, ಮಧ್ಯವರ್ತಿಗಳು ಮುಂತಾದವರೊಂದಿಗೆ ಶಾಮೀಲಾಗಿ ಲಂಚ ಪಡೆದು, ಕಟ್ಟಡಗಳ ಬಾಳಿಕೆ ಬಗ್ಗೆ ನಕಲಿ ಪ್ರಮಾಣ ಪತ್ರಗಳನ್ನು ವಿತರಿಸುತ್ತಿದ್ದರು ಎಂದು ಆರೋಪಿಸಲಾಗಿದೆ. ಪ್ರಕರಣವೊಂದರಲ್ಲಿ 1 ಲಕ್ಷ ರೂಪಾಯಿ ಸ್ವೀಕರಿಸುವಾಗ ಬಲೆ ಬೀಸಿದ ಸಿಬಿಐ ಮೂವರನ್ನೂ ಬಂಧಿಸಿದೆ.
ಬಳಿಕ, ಆರೋಪಿಗಳ ವಾಸ ಸ್ಥಳಗಳ ಮೇಲೂ ಸಿಬಿಐ ದಾಳಿ ನಡೆಸಿದೆ. ಆ ವೇಳೆ, ಪ್ರೊಫೆಸರ್ ಮೊಹಮದ್ ಅವರಿಗೆ ಸೇರಿದ 30 ಲಕ್ಷ ರೂಪಾಯಿ ನಗದು ಮತ್ತು ಬ್ಯಾಂಕ್ ಖಾತೆಯೊಂದರಲ್ಲಿ ಒಂದು ಕೋಟಿ 20 ಲಕ್ಷ ರೂಪಾಯಿ ಪತ್ತೆಯಾಗಿದೆ.
Also Read: ಮಂಗಳೂರು: ಕಾಲೇಜು ಸರಿಯಿಲ್ಲ, ಕಾಲೇಜಿಗೆ ಬೋಧಕರು ಸರಿಯಾಗಿ ಬರುತ್ತಿಲ್ಲ ಅಂತಾ ಬೆಂಗಳೂರು ಮೂಲದ ವಿದ್ಯಾರ್ಥಿ ಆತ್ಮಹತ್ಯೆ