Honor Killing: ಮರ್ಯಾದಾ ಹತ್ಯೆ ಪ್ರಕರಣ; ಗರ್ಭಿಣಿ ತಂಗಿ, ಬಾವನನ್ನು ಕೊಂದಿದ್ದ ಆರೋಪಿಗೆ ಗಲ್ಲು ಶಿಕ್ಷೆ
ಆರೋಪಿ ತನ್ನ ತಂಗಿ ಗರ್ಭಿಣಿಯಾಗಿರುವಾಗಲೇ ಆಕೆಯನ್ನು ಹಾಗೂ ಆಕೆಯ ಪತಿಯನ್ನು ಕೊಲೆ ಮಾಡಿದ್ದರಿಂದ ಪೊಲೀಸರು ಈ ಪ್ರಕರಣದಲ್ಲಿ ಮೂವರ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದರು.
ಅಹಮದಾಬಾದ್: 2018ರಲ್ಲಿ ಗುಜರಾತ್‌ನ ಅಹಮದಾಬಾದ್ ಜಿಲ್ಲೆಯಲ್ಲಿ ಸನಂದ್ ಅವರ ಮರ್ಯಾದಾ ಹತ್ಯೆ (Honor Killing) ನಡೆದಿತ್ತು. ಈ ಪ್ರಕರಣ ದೇಶಾದ್ಯಂತ ಸುದ್ದಿ ಮಾಡಿತ್ತು. ಈ ಪ್ರಕರಣದಲ್ಲಿ ಅಹಮದಾಬಾದ್ ಗ್ರಾಮಾಂತರ ನ್ಯಾಯಾಲಯವು ಆರೋಪಿಯಾದ ಮೃತ ಯುವತಿಯ ಸಹೋದರನಿಗೆ ಗಲ್ಲು ಶಿಕ್ಷೆ (Death Sentence) ವಿಧಿಸಿದೆ. ಇದೀಗ ಮರಣದಂಡನೆಗೆ ಒಳಗಾಗಿರುವ ವ್ಯಕ್ತಿ ಮೂರು ಜನರನ್ನು ಕೊಂದಿದ್ದ. ಬೇರೆ ಧರ್ಮದವರನ್ನು ಮದುವೆಯಾದ ಕಾರಣಕ್ಕೆ ಆತ ತನ್ನ ಸಹೋದರಿ, ಅವಳ ಪತಿ ಮತ್ತು ಅವರ ಹುಟ್ಟಲಿರುವ ಮಗುವನ್ನು ಕೊಲೆ ಮಾಡಿದ್ದ.
ಆರೋಪಿ ತನ್ನ ತಂಗಿ ಗರ್ಭಿಣಿಯಾಗಿರುವಾಗಲೇ ಆಕೆಯನ್ನು ಹಾಗೂ ಆಕೆಯ ಪತಿಯನ್ನು ಕೊಲೆ ಮಾಡಿದ್ದರಿಂದ ಪೊಲೀಸರು ಈ ಪ್ರಕರಣದಲ್ಲಿ ಮೂವರ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದರು. ಈ ಪ್ರಕರಣದಲ್ಲಿ 17 ಪ್ರತ್ಯಕ್ಷ ಸಾಕ್ಷಿಗಳನ್ನು ಆಲಿಸಿ 67 ದಾಖಲೆಗಳನ್ನು ಗಣನೆಗೆ ತೆಗೆದುಕೊಂಡು ನ್ಯಾಯಾಲಯವು ಮೃತ ಯುವತಿಯ ಸಹೋದರನಿಗೆ ಮರಣದಂಡನೆ ವಿಧಿಸಿದೆ.
ಮೃತ ಯುವತಿ ಅನ್ಯ ಜಾತಿಯವನನ್ನು ಪ್ರೀತಿಸುತ್ತಿದ್ದಳು. ತಮ್ಮ ಮದುವೆಗೆ ಮನೆಯವರು ಒಪ್ಪುವುದಿಲ್ಲ ಎಂಬ ಕಾರಣಕ್ಕೆ ಆಕೆ ಓಡಿಹೋಗಿ ಆತನೊಂದಿಗೆ ಮದಉವೆಯಾಗಿದ್ದಳು. ಮನೆಯವರಿಂದ ದೂರ ಹೋಗಿ ಸನಂದ್‌ನಲ್ಲಿ ವಾಸಿಸಲು ಪ್ರಾರಂಭಿಸಿದ್ದರು. ಈ ವಿಷಯ ಬಾಲಕಿಯ ಸಹೋದರನಿಗೆ ತಿಳಿದು ಆಕೆಯ ಮನೆಗೆ ಹೋಗಿ ಹಲ್ಲೆ ನಡೆಸಿದ್ದ. ಆಕೆ ಗರ್ಭಿಣಿಯಾಗಿದ್ದಾಗ ಮತ್ತೆ ಆಕೆಯ ಮನೆಗೆ ಹೋಗಿ ಆಕೆಗೆ ಏಳು ಬಾರಿ ಚಾಕುವಿನಿಂದ ಇರಿದು, 17 ಬಾರಿ ತನ್ನ ತಂಗಿಯ ಗಂಡನ ಮೇಲೆ ಹಲ್ಲೆ ನಡೆಸಿದ್ದ. ಇದರಿಂದ ಅವರಿಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದರು.
ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಮೃತಪಟ್ಟ ಯುವತಿ ಆಗ ಗರ್ಭಿಣಿಯಾಗಿದ್ದ ಕಾರಣ ಪೊಲೀಸರು ತ್ರಿವಳಿ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದರು. ಈ ಘಟನೆಯ ನಂತರವೂ ಆರೋಪಿ ತನ್ನ ತಪ್ಪಿಗೆ ಪ್ರಾಯಶ್ಚಿತ್ತ ಪಟ್ಟಿರಲಿಲ್ಲ. ಬದಲಾಗಿ ಆಕೆಯನ್ನು ಕೊಲೆ ಮಾಡಿ ನಮ್ಮ ಕುಟುಂಬದ ಗೌರವ ಉಳಿಸಿದ್ದೇನೆ ಎಂದು ಹೇಳಿದ್ದ.
ಇದನ್ನೂ ಓದಿ: Shocking News: ಹೆಂಡತಿಯನ್ನು ಕೊಂದು, ಆಕೆಯ ರುಂಡ ಹಿಡಿದು ರಸ್ತೆ ತುಂಬ ಓಡಾಡಿದ ಗಂಡ!