AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Maryada Hatya: ವಿಜಯಪುರದಲ್ಲಿ ಪ್ರೇಮಿಗಳ ಮರ್ಯಾದಾ ಹತ್ಯೆ ಪ್ರಕರಣಕ್ಕೆ ತಿರುವು; ಯುವಕನ ತಾಯಿ ಬಿಚ್ಚಿಟ್ಟರು ಮಹತ್ವದ ಸುಳಿವು

Vijayapura: ಯವತಿ ದಾವಲಭೀ ತಂಬಗಿಯ ತಂದೆ ಬಂದಗಿಸಾಬ್, ಸಹೋದರ ದಾವಲ್‌ಪಟೇಲ್, ಅಳಿಯರಾದ ಲಾಳೆಸಾಬ್, ಅಲ್ಲಾಪಟೇಲ್ ರಫೀಕ್ ಎಂಬುವರು ಹತ್ಯೆ ಬಳಿಕ ಪರಾರಿಯಾಗಿದ್ದಾರೆ. ಐವರು ಆರೋಪಿಗಳ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ. ಕಲಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Maryada Hatya: ವಿಜಯಪುರದಲ್ಲಿ ಪ್ರೇಮಿಗಳ ಮರ್ಯಾದಾ ಹತ್ಯೆ ಪ್ರಕರಣಕ್ಕೆ ತಿರುವು; ಯುವಕನ ತಾಯಿ ಬಿಚ್ಚಿಟ್ಟರು ಮಹತ್ವದ ಸುಳಿವು
Maryada Hatya: ವಿಜಯಪುರದಲ್ಲಿ ಪ್ರೇಮಿಗಳ ಮರ್ಯಾದಾ ಹತ್ಯೆ ಪ್ರಕರಣಕ್ಕೆ ತಿರುವು; ಯುವಕನ ತಾಯಿ ಬಿಚ್ಚಿಟ್ಟರು ಮಹತ್ವದ ಸುಳಿವು
TV9 Web
| Edited By: |

Updated on:Jun 23, 2021 | 3:49 PM

Share

ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ನಿನ್ನೆ ‌ನಡೆದಿದ್ದ ಪ್ರೇಮಿಗಳ ಮರ್ಯಾದಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ತಿರುವು ಸಿಕ್ಕಿದೆ. ಈ ವಿಷಯವಾಗಿ, ಹತ್ಯೆಯಾದ ಯುವಕನ ತಾಯಿ ಮಲ್ಲಮ್ಮ ಟಿವಿ9 ಜೊತೆ ಮಾತನಾಡಿದ್ದಾರೆ. ಸಲಾದಹಳ್ಳಿಯಲ್ಲಿ‌ ಪ್ರೇಮಿಗಳ ಕೊಚ್ಚಿ ಕೊಲೆ ಮಾಡಿರುವ ಪ್ರಕರಣದಲ್ಲಿ ಯುವಕನ ತಾಯಿ ಮತ್ತು ಸಹೋದರ ಕಲ್ಯಾಣಕುಮಾರ್ ಎದುರೇ ಆ ಪ್ರೇಮಿಗಳಿಬ್ಬರ ಹತ್ಯೆಯಾಗಿದೆ ಎಂದು ಯುವಕನ ತಾಯಿ ಮಲ್ಲಮ್ಮ ಹೇಳಿದ್ದಾರೆ.

ಯುವಕನ ತಾಯಿ ಟಿವಿ9 ಗೆ ಹೇಳಿದ್ದಿಷ್ಟು: ಪ್ರೀತಿ ಮಾಡಿದ್ದಕ್ಕೆ ಇಬ್ಬರ ಮೇಲೆ ಹಲ್ಲೆ ಮಾಡಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಮೊದಲು ಪ್ರೇಮಿಗಳನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸಿದ್ದರು. ಯುವತಿಯ ತಂದೆ ಮತ್ತು ಸಂಬಂಧಿಕರು ಹಲ್ಲೆ ಮಾಡಿದವರು. ಈ ವೇಳೆ ಕೊಲೆ ಮಾಡದಂತೆ ತಾಯಿ ಬೇಡಿಕೊಂಡಿದ್ದರಂತೆ. ಇಬ್ಬರಿಗೂ ಬುದ್ಧಿ ಮಾತು ಹೇಳೋಣ ಎಂದಿದ್ದರಂತೆ. ಯುವಕನ ತಾಯಿಯ ಆ ಮಾತುಗಳನ್ನು ಕೇಳದೆ ಪ್ರೇಮಿಗಳ ಕೊಲೆ ಮಾಡಲಾಗಿದೆ.

ಯುವತಿಯ ತಂದೆಯೇ ಚಾಕು, ಚೂರಿಯನ್ನ ತಂದಿದ್ದ. ಪ್ರೇಮಿಗಳಿಬ್ಬರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲಾಯಿತು. ಹಲ್ಲೆ ಮಾಡಿ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾರೆ. ಯುವತಿಯ ತಂದೆ ಬಂದಗಿಸಾಬ್ ತಂಬದ್ ಮತ್ತು ಯುವತಿಯ ಸಹೋದರ ದಾವಲ್ ಈ ಕುಕೃತ್ಯವೆಸಗಿದ್ದಾರೆ.

ಯುವತಿ ಸಂಬಂಧಿಕರಿಂದಲೇ ಪ್ರೇಮಿಗಳ ಬರ್ಬರ ಹತ್ಯೆ ನಡೆದಿದೆ. ಯುವಕನ ತಾಯಿಯ ಎದುರೇ ಹತ್ಯೆ ನಡೆದಿದ್ದು, ಭೀಕರ ಹತ್ಯೆಯ ದೃಶ್ಯ ಕಂಡು ಮಲ್ಲಮ್ಮ ಬೆಚ್ಚಿಬಿದ್ದಿದ್ದಾರೆ.

ಏನಿದು ಘಟನೆ: ದೇವರಹಿಪ್ಪರಗಿ ತಾಲೂಕಿನ ಸಲಾದಹಳ್ಳಿಯ‌ ಹೊರ ಭಾಗದಲ್ಲಿ ಬಸವರಾಜ್ ಬಡಿಗೇರ್ ಹಾಗೂ ದಾವಲಭೀ ತಂಬಗಿ ಎಂಬಿಬ್ಬರು ಪ್ರೇಮಿಗಳ ಕೊಲೆ ನಡೆದಿತ್ತು. ಯುವತಿಯ ತಂದೆ ಬಂದಗಿಸಾಬ್ ತಂಬದ್ ಹಾಗೂ ಇತರರ ವಿರುದ್ಧ ಕೊಲೆ ಆರೋಪ ಕೆಳಿಬಂದಿದೆ.

ಯವತಿ ದಾವಲಭೀ ತಂಬಗಿಯ ತಂದೆ ಬಂದಗಿಸಾಬ್, ಸಹೋದರ ದಾವಲ್‌ಪಟೇಲ್, ಅಳಿಯರಾದ ಲಾಳೆಸಾಬ್, ಅಲ್ಲಾಪಟೇಲ್ ರಫೀಕ್ ಎಂಬುವರು ಹತ್ಯೆ ಬಳಿಕ ಪರಾರಿಯಾಗಿದ್ದಾರೆ. ಐವರು ಆರೋಪಿಗಳ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ. ಕಲಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಜಯನಗರ: ಅನ್ಯ ಜಾತಿ ಯುವಕನನ್ನು ಪ್ರೀತಿಸಿದ ಯುವತಿ; ಪೋಷಕರಿಂದ ಮರ್ಯಾದಾ ಹತ್ಯೆ ಶಂಕೆ

(Maryada Hatya in vijayapura district murdered youth mother mallamma narrates incident)

Published On - 3:47 pm, Wed, 23 June 21

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್