AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಗಳೂರು: ಕಾಲೇಜು ಸರಿಯಿಲ್ಲ, ಕಾಲೇಜಿಗೆ ಬೋಧಕರು ಸರಿಯಾಗಿ ಬರುತ್ತಿಲ್ಲ ಅಂತಾ ಬೆಂಗಳೂರು ಮೂಲದ ವಿದ್ಯಾರ್ಥಿ ಆತ್ಮಹತ್ಯೆ

ಕರಾವಳಿ ಕಾಲೇಜಿನಲ್ಲಿ ಹೋಟೆಲ್ ಮ್ಯಾನೇಜ್ಮೆಂಟ್ ಓದುತ್ತಿದ್ದ ವಿದ್ಯಾರ್ಥಿ ಭರತ್, ಕಾಲೇಜು ಸರಿಯಿಲ್ಲ, ಕಾಲೇಜಿಗೆ ಬೋಧಕರು ಸರಿಯಾಗಿ ಬರುತ್ತಿಲ್ಲ. ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮಂಗಳೂರು: ಕಾಲೇಜು ಸರಿಯಿಲ್ಲ, ಕಾಲೇಜಿಗೆ ಬೋಧಕರು ಸರಿಯಾಗಿ ಬರುತ್ತಿಲ್ಲ ಅಂತಾ ಬೆಂಗಳೂರು ಮೂಲದ ವಿದ್ಯಾರ್ಥಿ ಆತ್ಮಹತ್ಯೆ
ಕಾಲೇಜು ಸರಿಯಿಲ್ಲ, ಕಾಲೇಜಿಗೆ ಬೋಧಕರು ಸರಿಯಾಗಿ ಬರುತ್ತಿಲ್ಲ ಅಂತಾ ಬೆಂಗಳೂರು ಮೂಲದ ವಿದ್ಯಾರ್ಥಿ ಆತ್ಮಹತ್ಯೆ
TV9 Web
| Edited By: |

Updated on:Mar 16, 2022 | 9:00 PM

Share

ಮಂಗಳೂರು: ಕಾಲೇಜು ಸರಿಯಿಲ್ಲ, ಕಾಲೇಜಿಗೆ ಬೋಧಕರು ಸರಿಯಾಗಿ ಬರುತ್ತಿಲ್ಲ ಎಂದು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳೂರಿನ ಕೊಟ್ಟಾರ ಬಳಿಯ ಪಿಜಿಯಲ್ಲಿ ನಡೆದಿದೆ. ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಮೂಲದ ಭರತ್ ಭಾಸ್ಕರ್ (20) ಎಂಬ ವಿದ್ಯಾರ್ಥಿ ನೇಣಿಗೆ ಶರಣಾಗಿದ್ದಾನೆ.

ಕರಾವಳಿ ಕಾಲೇಜಿನಲ್ಲಿ ಹೋಟೆಲ್ ಮ್ಯಾನೇಜ್ಮೆಂಟ್ ಓದುತ್ತಿದ್ದ ವಿದ್ಯಾರ್ಥಿ ಭರತ್, ಕಾಲೇಜು ಸರಿಯಿಲ್ಲ, ಕಾಲೇಜಿಗೆ ಬೋಧಕರು ಸರಿಯಾಗಿ ಬರುತ್ತಿಲ್ಲ. ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಿನ್ನೆ ಸಂಜೆ ಆತ್ಮಹತ್ಯೆಗೆ ಶರಣಾಗಿದ್ದು ಇಂದು ಪ್ರಕರಣ ದಾಖಲಾಗಿದೆ. ಕಾಲೇಜು ಮಾಲೀಕ ಗಣೇಶ್ ರಾವ್, ಪ್ರಾಧ್ಯಾಪಕ ರಾಹುಲ್ ಮೇಲೆ ದೂರು ದಾಖಲಾಗಿದೆ. ಇಂದು ಉರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಾಟ್ಸಾಪ್ ಮೆಸೇಜ್ ಮೂಲಕ ಡೆತ್ ನೋಟ್ ಕಳಿಸಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಡೆತ್ ನೋಟ್ ಬರೆದಿಟ್ಟು ಸಾವಿಗೆ ಶರಣಾದ ಪೊಲೀಸ್ ಸಿಬ್ಬಂದಿ ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ನಿವಾಸಿಯಾದ ಅಜ್ಜುಗೌಡ ಪಾಟೀಲ್‌ ಡೆತ್ ನೋಟ್ ಬರೆದಿಟ್ಟು ಸಾವಿಗೆ ಶರಣಾಗಿದ್ದಾರೆ. ಮೃತ ಅಜ್ಜುಗೌಡ ಪಾಟೀಲ್, ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯ ಸಿಬ್ಬಂದಿ. ಲಕ್ಕುಂಡಿ ಗ್ರಾಮದ ತಮ್ಮ ಮನೆಯಲ್ಲಿ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆರೇಳು ಪೇಜ್ ಡೆತ್ ನೋಟ್ ಬರೆದು ಸಾವಿಗೆ ಶರಣಾಗಿದ್ದಾರೆ. ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮರದ‌ ಕೊಂಬೆ ಸಮೇತ ವಿದ್ಯುತ್ ತಂತಿ ಬಿದ್ದು ವ್ಯಕ್ತಿ ಸಾವು ಆಲದ ಮರದ‌ ಕೊಂಬೆ ಸಮೇತ ವಿದ್ಯುತ್ ತಂತಿ ವ್ಯಕ್ತಿ ಮೇಲೆ ಬಿದ್ದ ಹಿನ್ನೆಲೆ ಓರ್ವ ವ್ಯಕ್ತಿ ಮೃತಪಟ್ಟ ಘಟನೆ ಬಾಗಲಕೋಟೆ ಜಿಲ್ಲೆ ರಬಕವಿಬನಹಟ್ಟಿ ಪಟ್ಟಣದಲ್ಲಿ ನಡೆದಿದೆ. ಮಹಾದೇವ ಮಾಲಿಂಗಪುರ(42) ಮೃತ ವ್ಯಕ್ತಿ. ಬನಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಅತ್ಯಾಚಾರಿಯನ್ನು ಮರಕ್ಕೆ ಕಟ್ಟಿ, ಹೊಡೆದು ಕೊಂದ ಮಹಿಳೆಯರು! ಅಗರ್ತಲಾ: ಭಾರತದಲ್ಲಿ ಅತ್ಯಾಚಾರಿಗಳ (Rapists) ಸಂಖ್ಯೆ ಹೆಚ್ಚುತ್ತಲೇ ಇದೆ. ದಿನದಿಂದ ದಿನಕ್ಕೆ ಅತ್ಯಾಚಾರ ಪ್ರಕರಣಗಳು ಏರಿಕೆಯಾಗುತ್ತಿದೆ. ಕಾನೂನಿನ ಯಾವುದೇ ಅಂಜಿಕೆಯಿಲ್ಲದೆ ಸಣ್ಣ ಮಕ್ಕಳನ್ನೂ ತಮ್ಮ ಕಾಮತೃಷೆಗೆ ಬಳಸಿಕೊಳ್ಳುವ ಅತ್ಯಾಚಾರಿಗಳಿಗೆ ಎಷ್ಟೋ ಕಡೆಗಳಲ್ಲಿ ಊರಿನ ಜನರೇ ಸೇರಿಕೊಂಡು ಶಿಕ್ಷೆ ನೀಡಿದ್ದಾರೆ. ಅದೇ ರೀತಿ, ಮಹಿಳೆಯರ ಗುಂಪೊಂದು 46 ವರ್ಷದ ಅತ್ಯಾಚಾರಿಯನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸಿ, ಕೊಂದಿರುವ ಘಟನೆ ತ್ರಿಪುರಾದ ಧಲೈ ಜಿಲ್ಲೆಯಲ್ಲಿ ಇಂದು ನಡೆದಿದೆ. ಈ ಘಟನೆ ಇದೀಗ ದೇಶಾದ್ಯಂತ ಸುದ್ದಿಯಾಗಿದೆ.

ತ್ರಿಪುರಾದ ಗಂಡಚೆರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಈ ಹಿಂದೆ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಆರೋಪಿ 8 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ಪೂರ್ಣಗೊಳಿಸಿ ಊರಿಗೆ ವಾಪಾಸ್ ಬಂದಿದ್ದ. ಮಂಗಳವಾರ ರಾತ್ರಿ ತನ್ನ ತಾಯಿಯೊಂದಿಗೆ ಧಾರ್ಮಿಕ ಕಾರ್ಯಕ್ರಮಕ್ಕೆ ಬಂದಿದ್ದ 5 ವರ್ಷದ ಬಾಲಕಿಯನ್ನು ಸಮೀಪದ ಕಾಡಿಗೆ ಕರೆದುಕೊಂಡು ಹೋಗಿದ್ದ ಆತ ಆ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ.

ಇದನ್ನೂ ಓದಿ: Crime News: ಅತ್ಯಾಚಾರಿಯನ್ನು ಮರಕ್ಕೆ ಕಟ್ಟಿ, ಹೊಡೆದು ಕೊಂದ ಮಹಿಳೆಯರು!

ಚಹಾದೊಂದಿಗೆ ಬೇಯಿಸಿದ ಮೊಟ್ಟೆಗಳನ್ನು ತಿನ್ನುತ್ತಿದ್ದೀರಾ? ಅಪಾಯದ ಬಗ್ಗೆ ಇರಲಿ ಎಚ್ಚರ

Published On - 7:36 pm, Wed, 16 March 22