AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

60 ಪ್ರಕರಣಗಳ ಆರೋಪಿಯನ್ನು ಎನ್​ಕೌಂಟರ್​​ನಲ್ಲಿ ಕೊಂದ ತಮಿಳುನಾಡು ಪೊಲೀಸರು; ತನಿಖೆ ಪ್ರಾರಂಭ

ಮುರುಗನ್ ಬಂಧನಕ್ಕಾಗಿ ಸಬ್​ ಇನ್ಸ್​​ಪೆಕ್ಟರ್​ ಎಸಕ್ಕಿರಾಜಾ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿತ್ತು. ಕಲಕ್ಕಾಡ್​ ಬಳಿ ನಮ್ಮ ಪೊಲೀಸರ ತಂಡ ಹೋಗುತ್ತಿದ್ದಂತೆ ಮುರುಗನ್​ ಕಾರಿನಲ್ಲಿ ಪರಾರಿಯಾಗಲು ಪ್ರಯತ್ನಿಸಿದ್ದಾನೆ. ಆಗ ಗುಂಡು ಹಾರಿಸಲಾಯಿತು ಎಂದು ಪೊಲೀಸ್​ ಅಧಿಕಾರಿ ಮಾಹಿತಿ ನೀಡಿದ್ದಾರೆ.

60 ಪ್ರಕರಣಗಳ ಆರೋಪಿಯನ್ನು ಎನ್​ಕೌಂಟರ್​​ನಲ್ಲಿ ಕೊಂದ ತಮಿಳುನಾಡು ಪೊಲೀಸರು; ತನಿಖೆ ಪ್ರಾರಂಭ
ಸಾಂದರ್ಭಿಕ ಚಿತ್ರ
TV9 Web
| Updated By: Lakshmi Hegde|

Updated on:Mar 17, 2022 | 10:23 AM

Share

ತಮಿಳುನಾಡಿನ ದಿಂಡಿಗಲ್​ ಪೊಲೀಸರು (Tamil Nadu Police)ಮಾರ್ಚ್​ 16ರಂದು ನಿರವಿ ಮುರುಗನ್​ ಎಂಬ ರೌಡಿಯನ್ನು ಎನ್​ಕೌಂಟರ್​​​ನಲ್ಲಿ ಹತ್ಯೆ ಮಾಡಿದ್ದಾರೆ. ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಈ ನಿರವಿ ಮುರುಗನ್​ ಸುಮಾರು 60 ಪ್ರಕರಣಗಳಲ್ಲಿ ಆರೋಪಿಯಾಗಿದ್ದ. ಈತ ಸುಮಾರು ಹೇಯ ಕೃತ್ಯಗಳನ್ನೂ ಮಾಡಿದವನು. ತಿರುನಲ್ವೇಲಿ, ಟುಟಿಕೋರಿನ್ ಮತ್ತು ಕನ್ಯಾಕುಮಾರಿ ಜಿಲ್ಲೆಗಳ ಪೊಲೀಸ್​ ಠಾಣೆಗಳಲ್ಲಿ ಮುರುಗನ್ ವಿರುದ್ಧ ಹಲವು ಅಪಹರಣ ಮತ್ತು ಕೊಲೆ ಪ್ರಕರಣಗಳು ದಾಖಲಾಗಿವೆ.

ಇತ್ತೀಚೆಗೆ ದಿಂಡಿಗಲ್​​ ಒಡ್ಡಾಣಛತ್ರಂ ಎಂಬಲ್ಲಿದ್ದ ವೈದ್ಯರ ಮನೆಯಲ್ಲಿ ದರೋಡೆಯಾಗಿತ್ತು. ಈ ದರೋಡೆಯಲ್ಲೂ ಮುರಗುನ್ ಭಾಗಿಯಾಗಿದ್ದ. ಅದರಲ್ಲೂ ಈತನ ವಿರುದ್ಧದ ಪ್ರಮುಖ ಕೇಸ್​ ಎಂದರೆ 2004ರಲ್ಲಿ ನಡೆದಿದ್ದ ತಮಿಳುನಾಡಿನ ಮಾಜಿ ಕಾನೂನು ಸಚಿವ ಅಲಾದಿ ಅರುಣಾರ ಹತ್ಯೆ. ಮುರುಗನ್​ ಬರೀ ತಮಿಳುನಾಡಿನಷ್ಟೇ ಅಲ್ಲದೆ, ಕರ್ನಾಟಕ ಸೇರಿ ಇನ್ನೂ ಹಲವು ರಾಜ್ಯಗಳಲ್ಲಿ ಕ್ರೈಂಗಳಲ್ಲಿ ಪಾಲ್ಗೊಂಡಿದ್ದಾನೆ. ಈತ ಕಲಕ್ಕಡ್​ ಬಳಿ ಅಡಗಿದ್ದಾನೆ ಎಂಬ ಮಾಹಿತಿ ಮೇರೆಗೆ ಆತನನ್ನು ಬಂಧಿಸಲು ಪೊಲೀಸರು ಹೋದಾಗ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಇದೇ ವೇಳೆ ಪೊಲೀಸರು ಗುಂಡು ಹಾರಿಸಿ ಕೊಂಡಿದ್ದಾರೆ.

ಎನ್​ಕೌಂಟರ್ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ತಿರುನಲ್ವೇಲಿ ಪೊಲೀಸ್ ವರಿಷ್ಠಾಧಿಕಾರಿ ಪಿ ಸರವಣನ್, ಮುರುಗನ್ ಬಂಧನಕ್ಕಾಗಿ ಸಬ್​ ಇನ್ಸ್​​ಪೆಕ್ಟರ್​ ಎಸಕ್ಕಿರಾಜಾ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿತ್ತು. ಕಲಕ್ಕಾಡ್​ ಬಳಿ ನಮ್ಮ ಪೊಲೀಸರ ತಂಡ ಹೋಗುತ್ತಿದ್ದಂತೆ ಮುರುಗನ್​ ಕಾರಿನಲ್ಲಿ ಪರಾರಿಯಾಗಲು ಪ್ರಯತ್ನಿಸಿದ್ದಾನೆ. ಪೊಲೀಸರು ಅದನ್ನು ತಡೆಯಲು ಪ್ರಯತ್ನಿಸಿದ್ದಾರೆ. ಆದರೆ ಆತ ಕುಡುಗೋಲಿನಿಂದ ಪೊಲೀಸರ ಮೇಲೆ ಹಲ್ಲೆಗೆ ಮುಂದಾದ. ಆಗ ಎಸ್​ಐ ಗುಂಡು ಹಾರಿಸಿದರು ಎಂದು ತಿಳಿಸಿದ್ದಾರೆ.  ಅಂದಹಾಗೇ, ಮುರುಗನ್​ ಹಲ್ಲೆಗೆ ಎಸಕ್ಕಿರಾಜ ಸೇರಿ ಒಟ್ಟು ನಾಲ್ವರು ಪೊಲೀಸರು ಗಾಯಗೊಂಡಿದ್ದಾರೆ. ಎನ್​ಕೌಂಟರ್​ ಪ್ರಕರಣದ ನ್ಯಾಯಾಂಗ ತನಿಖೆಯನ್ನು ನುಂಗುನೇರಿ ನ್ಯಾಯಾಂಗ ಮ್ಯಾಜಿಸ್ಟ್ರೇಟ್​ ಪ್ರಾರಂಭ ಮಾಡಿಕೊಂಡಿದೆ.

ನಿನ್ನೆ ಅಸ್ಸಾಂನಲ್ಲಿ ಇಬ್ಬರು ರೇಪಿಸ್ಟ್​​ಗಳನ್ನು ಅಲ್ಲಿನ ಪೊಲೀಸರು ಎನ್​ಕೌಂಟರ್​​ನಲ್ಲಿ ಹತ್ಯೆ ಮಾಡಿದ್ದರು. 24 ಗಂಟೆಯೊಳಗೆ, ಎರಡು ಪ್ರತ್ಯೇಕ ಅತ್ಯಾಚಾರ ಪ್ರಕರಣಗಳ ಆರೋಪಿಗಳನ್ನು ಅಸ್ಸಾಂ ಪೊಲೀಸರು ಎನ್​ಕೌಂಟರ್​ ಮಾಡಿದ್ದಾರೆ. ಅದರಲ್ಲಿ ಒಬ್ಬಾತ 7 ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿ, ಕೊಂದಿದ್ದವನಾಗಿದ್ದಾರೆ, ಇನ್ನೊಬ್ಬಾತ 16ವರ್ಷದ ಹುಡುಗಿಯ ಸಾಮೂಹಿಕ ಅತ್ಯಾಚಾರದಲ್ಲಿ ಪಾಲ್ಗೊಂಡವನಾಗಿದ್ದ. ಇವರಿಬ್ಬರೂ ಕೂಡ ಪೊಲೀಸರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಗುಂಡೇಟಿಗೆ ಬಲಿಯಾಗಿದ್ದರು.

ಇದನ್ನೂ ಓದಿ: ಅತ್ಯಾಚಾರ ಆರೋಪಿಗಳ ಎನ್​ಕೌಂಟರ್​​: ಅಸ್ಸಾಂನಲ್ಲಿ 24 ಗಂಟೆಯಲ್ಲಿ ಇಬ್ಬರು ರೇಪಿಸ್ಟ್​​ಗಳಿಗೆ ಗುಂಡಿಕ್ಕಿ ಕೊಂದ ಪೊಲೀಸರು

Published On - 9:55 am, Thu, 17 March 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ