ಅಮೇರಿಕಾ: ಚಂಡಮಾರುತಕ್ಕೆ ನಲುಗಿದ ಐದು ರಾಜ್ಯಗಳು; 80ಕ್ಕೂ ಅಧಿಕ ಜನರ ದುರ್ಮರಣ

Kentucky: ಅಮೇರಿಕಾದ ಐದು ರಾಜ್ಯಗಳಲ್ಲಿ ಚಂಡಮಾರುತದಿಂದ ಒಟ್ಟು 80ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ. ಅಧ್ಯಕ್ಷ ಜೋ ಬಿಡೆನ್ ಈ ಘಟನೆಯನ್ನು ಇತಿಹಾಸದ ಅತ್ಯಂತ ವಿನಾಶಕಾರಿ ಘಟನೆಗಳಲ್ಲಿ ಒಂದು ಎಂದು ವ್ಯಾಖ್ಯಾನಿಸಿದ್ದಾರೆ.

ಅಮೇರಿಕಾ: ಚಂಡಮಾರುತಕ್ಕೆ ನಲುಗಿದ ಐದು ರಾಜ್ಯಗಳು; 80ಕ್ಕೂ ಅಧಿಕ ಜನರ ದುರ್ಮರಣ
ಕೆಂಟಕಿಯಲ್ಲಿ ಆಗಿರುವ ಹಾನಿಯನ್ನು ವೀಕ್ಷಿಸುತ್ತಿರುವ ಜನರು (Credits: Gunnar Word/AFP/Getty Images)
Follow us
TV9 Web
| Updated By: shivaprasad.hs

Updated on: Dec 12, 2021 | 9:03 AM

ಅಮೇರಿಕಾದ ಐದು ರಾಜ್ಯಗಳಲ್ಲಿ ಚಂಡಮಾರುತ ಅಪ್ಪಳಿಸಿದ ಪರಿಣಾಮದಿಂದ ಇದುವರೆಗೆ 80ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ. ಅಧ್ಯಕ್ಷ ಜೋ ಬಿಡೆನ್ ಇದನ್ನು ಇತಿಹಾಸದ ಅತಿದೊಡ್ಡ ಚಂಡಮಾರುತಗಳಲ್ಲಿ ಒಂದು ಎಂದು ವ್ಯಾಖ್ಯಾನಿಸಿದ್ದಾರೆ. ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಬಿಡೆನ್ ಮಾತನಾಡಿದ್ದು, ಇದೊಂದು ದುರಂತವಾಗಿದೆ. ಒಟ್ಟು ಎಷ್ಟು ಜನ ನಾಪತ್ತೆಯಾಗಿದ್ದಾರೆ, ಹಾನಿ ಯಾವ ಪ್ರಮಾಣದಲ್ಲಾಗಿದೆ ಎಂಬುದರ ಬಗ್ಗೆ ಇನ್ನೂ ಸಂಪೂರ್ಣ ಮಾಹಿತಿ ಲಭ್ಯವಾಗಿಲ್ಲ ಎಂದಿದ್ದಾರೆ. ಮನೆಗಳು, ಕಛೇರಿ,ಕಾರ್ಖಾನೆಗಳು ಸೇರಿದಂತೆ ವಿವಿದೆಡೆ ಪರಿಹಾರ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ಮೂಲಕ ಕಟ್ಟಡಗಳ ಅವಶೇಷಗಳಡಿ ಸಿಲುಕಿದವರನ್ನು ಹುಡುಕುವ ಪ್ರಯತ್ನಗಳು ನಿರಂತರವಾಗಿ ಸಾಗಿವೆ. ಕೆಂಟಕಿಯೊಂದರಲ್ಲೇ 70ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ ಎಂದು ಅಂದಾಜಿಸಲಾಗಿದೆ. ಅವರಲ್ಲಿ ಹೆಚ್ಚಿನವರು ಕ್ಯಾಂಡಲ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿರುವವರಾಗಿದ್ದಾರೆ. ಇಲಿನಾಯ್ಸ್​ನ ಆಮೆಜಾನ್ ವೇರ್​​ಹೌಸ್​ನಲ್ಲಿ ಕನಿಷ್ಠ ಆರು ಜನರು ಮೃತಪಟ್ಟಿದ್ದಾರೆ. ಕ್ರಿಸ್​ಮಸ್ ಕಾರಣದಿಂದ ಬಹುತೇಕರು ರಾತ್ರಿಪಾಳಿಯ ಕೆಲಸದಲ್ಲಿದ್ದವರಾಗಿದ್ದಾರೆ.​

“ಈ ಘಟನೆಯು ಕೆಂಟಕಿಯ ಇತಿಹಾಸದಲ್ಲಿ ಅತ್ಯಂತ ಕೆಟ್ಟ, ಅತ್ಯಂತ ವಿನಾಶಕಾರಿ, ಅತ್ಯಂತ ಮಾರಣಾಂತಿಕ ಚಂಡಮಾರುತದ ಘಟನೆಯಾಗಿದೆ” ಎಂದು ಕೆಂಟಕಿ ಗವರ್ನರ್ ಆಂಡಿ ಬೆಶಿಯರ್ ಹೇಳಿದ್ದಾರೆ. ಅಲ್ಲದೇ ಸಾವಿನ ಸಂಖ್ಯೆ 100ನ್ನು ದಾಟಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಚಂಡಮಾರುತ ಅಪ್ಪಳಿಸಿದಾಗ ಮೇಣದಬತ್ತಿಯ ಕಾರ್ಖಾನೆಯಲ್ಲಿ ಸುಮಾರು 110 ಜನರು ಕೆಲಸ ಮಾಡುತ್ತಿದ್ದರು, ಇದರಿಂದಾಗಿ ಛಾವಣಿ ಕುಸಿದಿದ್ದು, ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗಿದೆ ಎಂದು ಬೆಶಿಯರ್ ಹೇಳಿದರು. ಇದುವರೆಗೆ ನಲವತ್ತು ಜನರನ್ನು ರಕ್ಷಿಸಲಾಗಿದ್ದು, ಅಲ್ಲಿ ಬೇರೆ ಯಾರಾದರೂ ಜೀವಂತವಾಗಿ ಕಂಡುಬಂದರೆ ಅದು ಪವಾಡ ಎಂದು ಅವರು ಹೇಳಿದ್ದಾರೆ.

Kentucky tornado

ಕೆಂಟಕಿಯಲ್ಲಿ ಹಾನಿಗೊಳಗಾಗಿರುವ ಕ್ಯಾಂಡಲ್ ಫ್ಯಾಕ್ಟರಿ (Credits: Mark Humphrey/AP)

ಮೇಫೀಲ್ಡ್ ಮೂಲಕ ಅಪ್ಪಳಿಸಿದ ಚಂಡಮಾರುತವು ಕೆಂಟಕಿಯಲ್ಲಿ 200 ಮೈಲುಗಳಷ್ಟು ಮತ್ತು ಒಟ್ಟಾರೆಯಾಗಿ 227 ಮೈಲುಗಳವರೆಗೆ ನೆಲದ ಉದ್ದಕ್ಕೂ ಹಾನಿ ಮಾಡಿದೆ. ಈ ಹಿಂದೆ 1925ರಲ್ಲಿ ಮಿಸೌರಿಯಲ್ಲಿ 219-ಮೈಲಿಗಳ ಚಂಡಮಾರುತವು ನೆಲದ ಉದ್ದಕ್ಕೂ ಹಾನಿ ಮಾಡಿದ್ದು, ಈ ಹಿಂದಿನ ದೊಡ್ಡ ಚಂಡಮಾರುತವಾಗಿತ್ತು. ಅದು ಒಟ್ಟು 695 ಜೀವಗಳನ್ನು ಬಲಿತೆಗೆದುಕೊಂಡಿತ್ತು ಎಂದು ಬೆಶಿಯರ್ ಮಾಹಿತಿ ನೀಡಿದ್ದಾರೆ.

ಹವಾಮಾನ ಬದಲಾವಣೆಯು ಚಂಡಮಾರುತಗಳನ್ನು ಹೆಚ್ಚು ಶಕ್ತಿಯುತವಾಗಿಸುತ್ತಿದ್ದು, ಆಗಾಗ್ಗೆ ಸಂಭವಿಸುವಂತೆ ಮಾಡುತ್ತಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಅಮೇರಿಕನ್ ರೆಡ್ ಕ್ರಾಸ್ ಎಲ್ಲಾ ಐದು ರಾಜ್ಯಗಳಲ್ಲಿ ಪರಿಹಾರ ನೀಡಲು ಕೆಲಸ ಮಾಡುತ್ತಿದೆ. ಕೆಂಟಕಿಯಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದ್ದು, ರಾಷ್ಟ್ರೀಯ ಗಾರ್ಡ್ ಜೊತೆಗೆ ಹಲವಾರು ಹುಡುಕಾಟ ಮತ್ತು ರಕ್ಷಣಾ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಲಾಗಿದೆ.

ಚಂಡಮಾರುತಕ್ಕೆ ಸಿಲುಕಿದ ಅಮೆಜಾನ್ ಕೆಲಸಗಾರರು: ಮತ್ತೊಂದು ಸುಂಟರಗಾಳಿಯು ದಕ್ಷಿಣ ಇಲಿನಾಯ್ಸ್ ನಗರದ ಎಡ್ವರ್ಡ್ಸ್‌ವಿಲ್ಲೆಯಲ್ಲಿ ಅಮೆಜಾನ್ ವೇರ್​ಹೌಸ್​ಗೆ ಅಪ್ಪಳಿಸಿದಾಗ ಸುಮಾರು 100 ಕಾರ್ಮಿಕರು ಒಳಗೆ ಸಿಲುಕಿಕೊಂಡರು. ಸಿಕ್ಕಿಬಿದ್ದಿದ್ದ ನೌಕರರನ್ನು ರಕ್ಷಿಸಲು ನೂರಾರು ರಕ್ಷಣಾ ಸಿಬ್ಬಂದಿಗಳು ಹರಸಾಹಸ ಪಟ್ಟರು. “ಕಟ್ಟಡದಿಂದ ಸುರಕ್ಷಿತವಾಗಿ ಹೊರಬಂದ 45 ಸಿಬ್ಬಂದಿಯನ್ನು ನಾವು ಗುರುತಿಸಿದ್ದೇವೆ, ಒಬ್ಬರನ್ನು ಚಿಕಿತ್ಸೆಗಾಗಿ ಪ್ರಾದೇಶಿಕ ಆಸ್ಪತ್ರೆಗೆ ಸಾಗಿಸಬೇಕಾಯಿತು. ಒಟ್ಟು ಆರು ಮಂದಿ ಮೃತಪಟ್ಟಿದ್ದಾರೆ’’ ಎಂದು ಇಲಿನಾಯ್ಸ್ ಅಗ್ನಿಶಾಮಕ ಮುಖ್ಯಸ್ಥ ಜೇಮ್ಸ್ ವೈಟ್‌ಫೋರ್ಡ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Kentucky tornado

ಅಮೆಜಾನ್ ವೇರ್​ಹೌಸ್ ಕುಸಿದಿರುವುದು (Credits: Tim Vizer/AFP/Getty Images)

ಇದನ್ನೂ ಓದಿ:

ಕೋಟ್ಯಂತರ ರೂ. ಸಂಭಾವನೆ ಪಡೆಯುವ ರಜನಿಕಾಂತ್​ ಎಷ್ಟು ಆಸ್ತಿ ಹೊಂದಿದ್ದಾರೆ? ಇಲ್ಲಿದೆ ವಿವರ..

ಕಟ್ಟಡ ಕಾರ್ಮಿಕರಿಗೆ ಸಿಹಿ ಸುದ್ದಿ; ವಾಸಸ್ಥಳದಿಂದ ಕೆಲಸದ ಸ್ಥಳಕ್ಕೆ ಹೋಗಿ ಬರಲು ಇನ್ಮುಂದೆ ಸಿಗಲಿದೆ ಫ್ರೀ ಬಸ್ ಪಾಸ್

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್