ಹೀಗೊಂದು ಒಂಟೆ ಉತ್ಸವ: ಸೌಂದರ್ಯವರ್ಧಕ ಚುಚ್ಚುಮದ್ದು ಬಳಕೆಯಿಂದ ಡಿಸ್ಕ್ವಾಲಿಫೈ ಆದ 40 ಒಂಟೆಗಳು
ಒಂಟೆ ಉತ್ಸವದಲ್ಲಿ ಗೆದ್ದ ಒಂಟೆಯ ಮಾಲೀಕನಿಗೆ 66 ಮಿಲಿಯನ್ ಡಾಲರ್ ಬಹುಮಾನ ನೀಡಲಾಗುತ್ತದೆ. ಈ ಉತ್ಸವದಲ್ಲಿ ಒಂಟೆಗೆ ತಲೆ, ಕುತ್ತಿಗೆ, ಗೂನಿಗೆ ಹಾಕಲಾದ ಉಡುಗೆ ಹಾಗೂ ಒಂಟೆಯನ್ನು ಅಲಂಕರಿಸಿದ ರೀತಿಗೆ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಸೌದಿ ಅರೆಬಿಯಾ: ಸಾಮಾನ್ಯವಾಗಿ ಮನುಷ್ಯರ ಸೌಂದರ್ಯ ಸ್ಪರ್ಧೇಯಲ್ಲಿ ಕ್ವಾಲಿಫೈ ಅಥವ ಡಿಸ್ಕ್ವಾಲಿಫೈ ಎನ್ನುವುದನ್ನು ಕೇಳಿರುತ್ತೀರಾ. ಆದರೆ ಸೌದಿ ಅರೇಬಿಯಾದಲ್ಲಿ ಪ್ರತೀ ವರ್ಷ ಒಂಟೆಗಳ ಸೌಂದರ್ಯ ಉತ್ಸವ ನಡೆಯುತ್ತದೆ. ಸೌದಿಯ ಖ್ಯಾತ ರಾಜನ ಹೆಸರಿನಲ್ಲಿ ಅಬ್ದುಲಜೀಜ್ಕ್ಯಾಮಲ್ ಫೆಸ್ಟಿವಲ್ ನಡೆಯುತ್ತದೆ. ಈ ಬಾರಿ ಈ ಉತ್ಸವದಲ್ಲಿ 40 ಒಂಟೆಗಳನ್ನು ಸ್ಪರ್ಧೆಯಿಂದ ಹೊರಹಾಕಲಾಗಿದೆ. ಬೊಟೋಕ್ಸ್ ಎನ್ನುವ ಸೌಂದರ್ಯವರ್ಧಕ ಚುಚ್ಚುಮದ್ದು ಪಡೆದ ಹಾಗೂ ಕೃತಕ ಮೇಕಪ್ಗಳನ್ನು ಮಾಡಿ ಸ್ಪರ್ಧೆಗೆ ಕರೆತಂದಿದ್ದ 40 ಒಂಟೆಗಳನ್ನು ಸ್ಪರ್ಧೆಯಿಂದ ಹೊರಹಾಕಲಾಗಿದೆ. ಈ ಒಂಟೆ ಉತ್ಸವದಲ್ಲಿ ಗೆದ್ದ ಒಂಟೆಯ ಮಾಲೀಕನಿಗೆ 66 ಮಿಲಿಯನ್ ಡಾಲರ್ ಬಹುಮಾನ ನೀಡಲಾಗುತ್ತದೆ. ಈ ಉತ್ಸವದಲ್ಲಿ ಒಂಟೆಗೆ ತಲೆ, ಕುತ್ತಿಗೆ, ಗೂನಿಗೆ ಹಾಕಲಾದ ಉಡುಗೆ ಹಾಗೂ ಒಂಟೆಯನ್ನು ಅಲಂಕರಿಸಿದ ರೀತಿಗೆ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಸೌದಿ ರಾಜಧಾನಿ ರಿಯಾದ್ನಲ್ಲಿ ಒಂದು ತಿಂಗಳುಗಳ ಕಾಲ ಈ ಒಂಟೆ ಉತ್ಸವ ನಡೆಯುತ್ತದೆ. ಬೊಟೋಕ್ಸ್ ಚುಚ್ಚುಮದ್ದನ್ನು ಒಂಟೆಗಳ ಸೌಂದರ್ಯ ಹೆಚ್ಚಿಸಲು ಬಳಸುತ್ತಾರೆ. ಒಂಟೆಯ ತಲೆ ಮತ್ತು ತುಟಿಗಳನ್ನು ದೊಡ್ಡದಾಗಿಸಲು ಈ ಚುಚ್ಚುಮದ್ದನ್ನು ಬಳಸುತ್ತಾರೆ. ಇದರ ಜೊತೆಗೆ ಒಂಟೆ ಸುಂದರವಾಗಿ ಕಾಣಲು ದೇಹಕ್ಕೆ ಅಲ್ಲಲ್ಲಿ ರಬ್ಬರ್ಬ್ಯಾಂಡ್ಗಳಿಂದ ಸುತ್ತುತ್ತಾರೆ. ಇದರಿಂದ ಒಂಟೆಯ ದೇಹ ಒಂದು ಮಿತಿಯಲ್ಲಿ ಮಾತ್ರ ಬೆಳೆದು ಸುಂದರವಾಗಿ ಕಾಣುತ್ತದೆ.
ಸೌದಿ ಅರೇಬಿಯಾದಲ್ಲಿ ಮರುಭೂಮಿ ಪ್ರದೇಶ ಅಧಿಕವಾಗಿರುವ ಇರುವ ಕಾರಣ ಸಂಚಾರಕ್ಕೆ ಹೆಚ್ಚು ಒಂಟೆಗಳನ್ನೇ ಅಲ್ಲಿಯ ಜನ ಅವಲಂಬಿಸಿದ್ದಾರೆ. ಸೌದಿಯಲ್ಲಿ ಒಂಟೆಗಳ ಉತ್ಸವದ ಜತೆಗೆ ಒಂಟೆ ಸಾಕಾಣಿಕೆ ಹಾಗೂ ಮಾರಾಟದ ಉದ್ಯಮವೂ ನಡೆಯುತ್ತದೆ. ಸೌದಿಯಲ್ಲಿ ಒಂಟೆ ಉದ್ಯಮ ಅತೀ ಲಾಭದಾಯಕ ಉದ್ಯಮವಾಗಿದೆ. ತೈಲ ಸಮೃದ್ಧ ದೇಶ ಸೌದಿ ಅರೇಬಿಯಾದಲ್ಲಿ ಬೆಡೋಯಿನ್ ಎಂಬ ಸಂಪ್ರದಾಯವನ್ನು ಉತ್ತೇಜಿಸಲು ಹಾಗೂ ಒಂಟೆಗಳ ಬಳಕೆಯ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವ ನಿಟ್ಟಿನಲ್ಲಿ ಪ್ರತೀ ವರ್ಷ ಒಂದು ತಿಂಗಳುಗಳ ಕಾಲ ಈ ಒಂಟೆ ಉತ್ಸವ ನಡೆಯುತ್ತದೆ.
ಇದನ್ನೂ ಓದಿ:
ಗೋವಾದ ಬುಡಕಟ್ಟು ಮಹಿಳೆಯರೊಂದಿಗೆ ಜಾನಪದ ನೃತ್ಯ ಮಾಡಿದ ಪ್ರಿಯಾಂಕಾ ಗಾಂಧಿ; ನಾಚಿಕೆಯಾಗಲ್ವ? ಎಂದ ಬಿಜೆಪಿ
Viral Video: ಬೆಟ್ಟದಿಂದ ಬೈಕ್ ಸಮೇತ ಜಂಪ್ ಮಾಡಿದ ಸವಾರ; ಡೇಂಜರಸ್ ವಿಡಿಯೋ ಹೇಗಿತ್ತು ನೀವೇ ನೋಡಿ