ಗೋವಾದ ಬುಡಕಟ್ಟು ಮಹಿಳೆಯರೊಂದಿಗೆ ಜಾನಪದ ನೃತ್ಯ ಮಾಡಿದ ಪ್ರಿಯಾಂಕಾ ಗಾಂಧಿ; ನಾಚಿಕೆಯಾಗಲ್ವ? ಎಂದ ಬಿಜೆಪಿ

ಗೋವಾದ ಬುಡಕಟ್ಟು ಮಹಿಳೆಯರೊಂದಿಗೆ ಜಾನಪದ ನೃತ್ಯ ಮಾಡಿದ ಪ್ರಿಯಾಂಕಾ ಗಾಂಧಿ; ನಾಚಿಕೆಯಾಗಲ್ವ? ಎಂದ ಬಿಜೆಪಿ
ಪ್ರಿಯಾಂಕಾ ಗಾಂಧಿ ಬುಡಕಟ್ಟು ನೃತ್ಯ

Priyanka Gandhi Dance Video: ಪ್ರಿಯಾಂಕಾ ಗಾಂಧಿ ಕೆಂಪು ಸೀರೆಯನ್ನು ಧರಿಸಿ ಡೋಲಿನ ಶಬ್ದಕ್ಕೆ ನೃತ್ಯ ಮಾಡಿದ್ದಾರೆ. ಕೆಂಪು ಮತ್ತು ನೇರಳೆ ಬಣ್ಣದ ಸೀರೆಯುಟ್ಟ ಬುಡಕಟ್ಟು ಮಹಿಳೆಯರು ತಲೆಯ ಮೇಲೆ ಮಡಕೆ ಹೊತ್ತು ಕುಣಿದು ಕುಪ್ಪಳಿಸಿದ್ದಾರೆ.

TV9kannada Web Team

| Edited By: Sushma Chakre

Dec 11, 2021 | 3:23 PM

ಪಣಜಿ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi) ಇತ್ತೀಚೆಗಷ್ಟೇ ಗೋವಾದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಗೆ (Goa Assembly Election) ಪ್ರಚಾರ ಆರಂಭಿಸಿದ್ದಾರೆ. ಮೋರ್ಪಿರ್ಲಾ ಗ್ರಾಮದಲ್ಲಿ ಚುನಾವಣಾ ಪ್ರಚಾರದ ವೇಳೆ ಅಲ್ಲಿನ ಬುಡಕಟ್ಟು ಮಹಿಳೆಯರೊಂದಿಗೆ (Tribal Women) ಜಾನಪದ ನೃತ್ಯಕ್ಕೆ ಹೆಜ್ಜೆ ಹಾಕುವ ಮೂಲಕ ಪ್ರಿಯಾಂಕಾ ಗಾಂಧಿ (Priyanka Vadra) ಗಮನ ಸೆಳೆದಿದ್ದಾರೆ. ಈ ವಿಡಿಯೋವನ್ನು ಕಾಂಗ್ರೆಸ್​ ತನ್ನ ಟ್ವಿಟ್ಟರ್​ ಪೇಜಿನಲ್ಲಿ ಶೇರ್ ಮಾಡಿಕೊಂಡಿದೆ. ಬುಡಕಟ್ಟು ಸಮುದಾಯದ ಸಾಂಪ್ರದಾಯಿಕ ಜಾನಪದ ಹಾಡಿಗೆ ಪ್ರಿಯಾಂಕಾ ಗಾಂಧಿ ವಾದ್ರಾ ಮಹಿಳೆಯರೊಂದಿಗೆ ನೃತ್ಯ ಮಾಡುತ್ತಿರುವ ವೀಡಿಯೊವನ್ನು ಕಾಂಗ್ರೆಸ್ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದೆ.

ಪ್ರಿಯಾಂಕಾ ಗಾಂಧಿ ಕೆಂಪು ಸೀರೆಯನ್ನು ಧರಿಸಿ ಡೋಲಿನ ಶಬ್ದಕ್ಕೆ ನೃತ್ಯ ಮಾಡಿದ್ದಾರೆ. ಕೆಂಪು ಮತ್ತು ನೇರಳೆ ಬಣ್ಣದ ಸೀರೆಯುಟ್ಟ ಬುಡಕಟ್ಟು ಮಹಿಳೆಯರು ತಲೆಯ ಮೇಲೆ ಮಡಕೆ ಹೊತ್ತು ಕುಣಿದು ಕುಪ್ಪಳಿಸಿದ್ದಾರೆ. ಪ್ರಿಯಾಂಕಾ ಗಾಂಧಿ ಅವರ ಬಳಿ ತಮ್ಮೊಂದಿಗೆ ನೃತ್ಯ ಮಾಡಬೇಕೆಂದು ಮಹಿಳೆಯರು ಮನವಿ ಮಾಡಿದಾಗ ಮೊದಲು ಹಿಂದೇಟು ಹಾಕಿದ ಪ್ರಿಯಾಂಕಾ ನಂತರ ತಾವು ಕೂಡ ಜಾನಪದ ಹಾಡಿನ ತಾಳಕ್ಕೆ ಹೆಜ್ಜೆ ಹಾಕಿದ್ದಾರೆ. ಆ ಮಹಿಳೆಯರ ಕೈ ಹಿಡಿದುಕೊಂಡು ಅವರ ಸಾಂಪ್ರದಾಯಿಕ ನೃತ್ಯಕ್ಕೆ ಜೊತೆಯಾಗಿದ್ದಾರೆ.

45 ಸೆಕೆಂಡುಗಳ ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, 1.58 ಲಕ್ಷ ವೀಕ್ಷಣೆಗಳನ್ನು ಗಳಿಸಿದೆ. ಪ್ರಿಯಾಂಕಾ ಗಾಂಧಿ ಅವರು ಮೊರ್ಪಿರ್ಲಾ ಗ್ರಾಮಕ್ಕೆ ಭೇಟಿ ನೀಡಿದ ಚಿತ್ರಗಳನ್ನು ತಮ್ಮ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದರು. “ಮೊರ್ಪಿರ್ಲಾದ ಆತ್ಮವಿಶ್ವಾಸದ ಮಹಿಳೆಯರೊಂದಿಗ ಒಂದು ಫೋಟೋ. ಈ ಮಹಿಳೆಯರು ಗೋವಾದಲ್ಲಿ ಪರಿಸರ ಸಂರಕ್ಷಣೆ ಮತ್ತು ಹಸಿರು ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಪ್ರಿಯಾಂಕಾ ಗಾಂಧಿ ಟ್ವೀಟ್ ಮಾಡಿದ್ದರು.

ಇನ್ನೊಂದೆಡೆ, ತಮಿಳುನಾಡಿನಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ ಹುತಾತ್ಮರಾದ ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥ (ಸಿಡಿಎಸ್) ಜನರಲ್ ರಾವತ್ ಅವರ ನಿಧನದಿಂದ ದೇಶವು ಶೋಕದಲ್ಲಿರುವಾಗ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಈ ರೀತಿ ಬುಡಕಟ್ಟು ಮಹಿಳೆಯರೊಂದಿಗೆ ನೃತ್ಯ ಮಾಡಿದ್ದಕ್ಕಾಗಿ ಬಿಜೆಪಿ ಐಟಿ ಸೆಲ್ ಉಸ್ತುವಾರಿ ಅಮಿತ್ ಮಾಳವಿಯಾ ವಾಗ್ದಾಳಿ ನಡೆಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಮಾಳವಿಯಾ, “26/11 ದುರಂತ ಸಂಭವಿಸಿದಾಗ ರಾಹುಲ್ ಗಾಂಧಿ ಬೆಳಗಿನ ಜಾವದವರೆಗೂ ಪಾರ್ಟಿ ಮಾಡುತ್ತಿದ್ದರು. ಇದೀಗ ಹೆಲಿಕಾಪ್ಟರ್ ಪತನವಾಗಿ ಬಿಪಿನ್ ರಾವತ್ ಹಾಗೂ 12 ಜನರು ಸಾವನ್ನಪ್ಪಿರುವಾಗ ಪ್ರಿಯಾಂಕಾ ವಾದ್ರಾ ಕೂಡ ಗೋವಾದಲ್ಲಿ ನೃತ್ಯ ಮಾಡುತ್ತಿದ್ದಾರೆ. ಇದಕ್ಕಿಂತ ನಾಚಿಕೆಗೇಡು ಇನ್ನೇನಿದೆ? ಎಂದು ಟೀಕಿಸಿದ್ದಾರೆ.

ಇದನ್ನೂ ಓದಿ: ಗೋವಾಕ್ಕೆ ಪ್ರಿಯಾಂಕಾ ಗಾಂಧಿ ಭೇಟಿ ದಿನವೇ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ನಾಯಕರು

ಸಚಿವ ಅಜಯ್​ ಮಿಶ್ರಾ ಜತೆ ನೀವು ವೇದಿಕೆ ಮೇಲೆ ಕುಳಿತುಕೊಳ್ಳಬೇಡಿ: ಪ್ರಧಾನಿ ಮೋದಿಗೆ ಸಲಹೆ ನೀಡಿದ ಪ್ರಿಯಾಂಕಾ ಗಾಂಧಿ ವಾದ್ರಾ

Follow us on

Related Stories

Most Read Stories

Click on your DTH Provider to Add TV9 Kannada