ಗೋವಾಕ್ಕೆ ಪ್ರಿಯಾಂಕಾ ಗಾಂಧಿ ಭೇಟಿ ದಿನವೇ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ನಾಯಕರು
Goa election 2021 ಪೊರ್ವೊರಿಮ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ನಾಯಕರ ಗುಂಪು ಶುಕ್ರವಾರ ಬೆಳಗ್ಗೆ ರಾಜೀನಾಮೆ ಸಲ್ಲಿಸಿದೆ. 2022 ರ ಆರಂಭದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಕಾಂಗ್ರೆಸ್ ಗಂಭೀರವಾಗಿಲ್ಲ ಎಂದು ಪಕ್ಷೇತರ ಶಾಸಕ ರೋಹನ್ ಖೌಂಟೆ ಬೆಂಬಲಿತ ಗುಂಪು ಹೇಳಿಕೊಂಡಿದೆ.
ಪಣಜಿ: ಶುಕ್ರವಾರದಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ(Priyanka Gandhi Vadra) ಸರಣಿ ಸಭೆಗಳಿಗೆ ಸಿದ್ಧವಾಗುತ್ತಿದ್ದಂತೆ, ಗೋವಾದಲ್ಲಿ ಮುಂಬರುವ ಚುನಾವಣೆಗೆ (Goa assembly election 2022)ಸಮಾನ ಮನಸ್ಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ವಿಷಯದಲ್ಲಿ ಗೋವಾ ಕಾಂಗ್ರೆಸ್ ಸದಸ್ಯರು ರಾಜೀನಾಮೆ ನೀಡಿದ್ದಾರೆ. ಪೊರ್ವೊರಿಮ್ (Porvorim)ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ನಾಯಕರ ಗುಂಪು ಶುಕ್ರವಾರ ಬೆಳಗ್ಗೆ ರಾಜೀನಾಮೆ ಸಲ್ಲಿಸಿದೆ. 2022 ರ ಆರಂಭದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಕಾಂಗ್ರೆಸ್ ಗಂಭೀರವಾಗಿಲ್ಲ ಎಂದು ಪಕ್ಷೇತರ ಶಾಸಕ ರೋಹನ್ ಖೌಂಟೆ (Rohan Khaunte) ಬೆಂಬಲಿತ ಗುಂಪು ಹೇಳಿಕೊಂಡಿದೆ. ಮುಂಬರುವ ಗೋವಾ ಚುನಾವಣೆಯಲ್ಲಿ ಗಂಭೀರವಾಗಿ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷ ಆಸಕ್ತಿ ತೋರುತ್ತಿಲ್ಲ. ಅದರ ಕೆಲವು ನಾಯಕರ ವರ್ತನೆಯಿಂದಾಗಿ ಇದು ನಾನ್ ಸ್ಟಾರ್ಟರ್ ಆಗಿದೆ ಎಂದು ಪೋರ್ವೊರಿಮ್‌ನಿಂದ ಗುಂಪನ್ನು ಮುನ್ನಡೆಸಿದ್ದ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಗುಪೇಶ್ ನಾಯ್ಕ್ ಸುದ್ದಿಗಾರರಿಗೆ ತಿಳಿಸಿದರು. ಕಾಂಗ್ರೆಸ್‌ಗೆ ಮತ್ತೊಂದು ಹಿನ್ನಡೆ ಎಂಬಂತೆ ದಕ್ಷಿಣ ಗೋವಾದ ಅದರ ಹಿರಿಯ ನಾಯಕ ಮೊರೆನೊ ರೆಬೆಲೊ ಕೂಡಾ ರಾಜೀನಾಮೆ ನೀಡಿದ್ದಾರೆ.
ಪಕ್ಷದ ವಿರುದ್ಧ ಕೆಲಸ ಮಾಡಿದರೂ ಕರ್ಟೋರಿಮ್ ಕ್ಷೇತ್ರದಿಂದ ಹಾಲಿ ಶಾಸಕ ಅಲೆಕ್ಸೊ ರೆಜಿನಾಲ್ಡೊ ಲೌರೆಂಕೊ ಅವರಿಗೆ ಪಕ್ಷವು ಟಿಕೆಟ್ ಘೋಷಿಸಿದ ನಂತರ ಅವರು ಅಸಮಾಧಾನಗೊಂಡಿದ್ದಾರೆ ಎಂದು ರೆಬೆಲೊ ಅವರ ರಾಜೀನಾಮೆ ಪತ್ರದಲ್ಲಿ ಹೇಳಲಾಗಿದೆ. ರೆಬೆಲೊ ಕರ್ಟೋರಿಮ್‌ನವರಾಗಿದ್ದಾರೆ.
“ಕಳೆದ ನಾಲ್ಕೂವರೆ ವರ್ಷಗಳಿಂದ ಪಕ್ಷದ ಯಾವುದೇ ಚಟುವಟಿಕೆಯಲ್ಲಿ ಭಾಗವಹಿಸದೇ ಪಕ್ಷದ ನಾಯಕರನ್ನು ಮತ್ತು ನಿಮ್ಮನ್ನು ನಿಂದಿಸಿರುವ ಅಲೆಕ್ಸೊ ರೆಜಿನಾಲ್ಡೊ ಲೌರೆಂಕೊ ಅವರು ಇತ್ತೀಚೆಗೆ ನಡೆದ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಕರ್ಟೊರಿಮ್‌ನ ಅಧಿಕೃತ ಅಭ್ಯರ್ಥಿ ವಿರುದ್ಧ ಕೆಲಸ ಮಾಡಿದ್ದಾರೆ. ಅವರಿಗೆ ಪಕ್ಷದ ಕಾರ್ಯಾಧ್ಯಕ್ಷರಾಗಿ ಬಡ್ತಿ ನೀಡಲಾಗಿದೆ. ಇತ್ತೀಚೆಗೆ ನಡೆದ ಸಮಾವೇಶದಲ್ಲಿ ಹಿರಿಯ ನಾಯಕರು ಅಭ್ಯರ್ಥಿ ಎಂದು ಘೋಷಿಸಿದ್ದಾರೆ ಎಂದು ರೆಬೆಲೊ ಅವರು ಗೋವಾ ಪ್ರದೇಶ ಕಾಂಗ್ರೆಸ್ ಸಮಿತಿ (ಜಿಪಿಸಿಸಿ) ಅಧ್ಯಕ್ಷ ಗಿರೀಶ್ ಚೋಡಂಕರ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ವಿಧಾನಸಭಾ ಚುನಾವಣೆಗೆ ಗೋವಾ ಫಾರ್ವರ್ಡ್ ಪಾರ್ಟಿ (ಜಿಎಫ್‌ಪಿ) ಜೊತೆಗಿನ ಒಪ್ಪಂದದ ಸ್ವರೂಪದ ಬಗ್ಗೆ ಕಾಂಗ್ರೆಸ್‌ನಲ್ಲಿ ಭಿನ್ನಾಭಿಪ್ರಾಯಗಳು ಹೊರಹೊಮ್ಮಿದ ನಂತರ ಸದಸ್ಯರು ರಾಜೀನಾಮೆ ನೀಡಿದ್ದಾರೆ.
ಜಿಎಫ್‌ಪಿ ಕಾಂಗ್ರೆಸ್‌ಗೆ ಬೆಂಬಲವನ್ನು ನೀಡಿದೆ ಮತ್ತು ಈ ಹಂತದಲ್ಲಿ ಅದನ್ನು ಮೈತ್ರಿ ಎಂದು ಕರೆಯಲು ನಿರಾಕರಿಸಿದೆ ಎಂದು ಗುರುವಾರ ಎಐಸಿಸಿ ಗೋವಾ ಚುನಾವಣಾ ಉಸ್ತುವಾರಿ ಪಿ ಚಿದಂಬರಂ ಹೇಳಿದ್ದಾರೆ. ಮತ್ತೊಂದೆಡೆ ಹಿರಿಯ ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಅವರು ಜಿಎಫ್‌ಪಿ ಮುಖ್ಯಸ್ಥ ವಿಜಯ್ ಸರ್ದೇಸಾಯಿ ಮತ್ತು ಚೋಡಂಕರ್ ನಡುವೆ ಶನಿವಾರ ಸಭೆ ನಡೆಸುವುದಾಗಿ ಹೇಳಿದ್ದಾರೆ.
ಪಣಜಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಚಿದಂಬರಂ, ಇಲ್ಲಿಯವರೆಗೆ ಒಂದು ಪಕ್ಷದ ನಾಯಕ ವಿಜಯ್ ಸರ್ದೇಸಾಯಿ ದೆಹಲಿಗೆ ಬಂದು ಬಿಜೆಪಿಯನ್ನು ಸೋಲಿಸಲು ತನ್ನ ಪಕ್ಷವು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುತ್ತದೆ ಎಂದು ಹೇಳಿದ್ದರು. ನಾವು ಬೆಂಬಲವನ್ನು ಸ್ವೀಕರಿಸುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದರು. ಎಲ್ಲಾ ಇತರ ವಿವರಗಳನ್ನು ಮತ್ತಷ್ಟು ಚರ್ಚಿಸಬೇಕಾಗಿದೆ ಎಂದಿದ್ದರು.
ಈ ಹೇಳಿಕೆಯ ಕೆಲವೇ ನಿಮಿಷಗಳಲ್ಲಿ ರಾವ್ “ನಾನು ಗೋವಾ ಫಾರ್ವರ್ಡ್ ಪಾರ್ಟಿ ಅಧ್ಯಕ್ಷರಾದ ವಿಜಯ್ ಸರ್ದೇಸಾಯಿ ಗೋವಾ ಅಧ್ಯಕ್ಷರಾದ ಗಿರೀಶ್ ಮತ್ತು ಇತರರನ್ನು 11/12/21, 10 ರಂದು ಕಾಂಗ್ರೆಸ್ ಚುನಾವಣಾ ಕಚೇರಿ, ಪಟ್ಟೋ ಪ್ಲಾಜಾ, ಪಂಜಿಮ್ ಸಭೆಗೆ ಆಹ್ವಾನಿಸಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.
I have invited Sri @VijaiSardesai, President of @Goaforwardparty for a meeting with Sri @girishgoa, President of @INCGoa and others on 11/12/21, 10.00am at Congress Election Office, Patto Plaza, Panjim.
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) December 9, 2021
ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಗೋವಾಕ್ಕೆ ದಿನವಿಡೀ ಭೇಟಿ ನೀಡುವ ಸಂದರ್ಭದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಉದ್ದೇಶಿಸಿ ಮತ್ತು ಯುವಕರು ಮತ್ತು ಮಹಿಳೆಯರೊಂದಿಗೆ ಸಂವಾದ ನಡೆಸಲಿದ್ದಾರೆ.