ಕೋಟ್ಯಂತರ ರೂ. ಸಂಭಾವನೆ ಪಡೆಯುವ ರಜನಿಕಾಂತ್​ ಎಷ್ಟು ಆಸ್ತಿ ಹೊಂದಿದ್ದಾರೆ? ಇಲ್ಲಿದೆ ವಿವರ..

Rajinikanth Net Worth: ಪ್ರತಿ ಸಿನಿಮಾಗೆ ರಜನಿಕಾಂತ್​ ಅವರು ಬಹುಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಎಷ್ಟೇ ಎತ್ತರಕ್ಕೆ ಬೆಳೆದರೂ ತಾವು ಬೆಳೆದ ಬಂದ ಹಾದಿನನ್ನು ಅವರು​ ಮರೆತಿಲ್ಲ.

ಕೋಟ್ಯಂತರ ರೂ. ಸಂಭಾವನೆ ಪಡೆಯುವ ರಜನಿಕಾಂತ್​ ಎಷ್ಟು ಆಸ್ತಿ ಹೊಂದಿದ್ದಾರೆ? ಇಲ್ಲಿದೆ ವಿವರ..
ರಜನಿಕಾಂತ್​
Follow us
TV9 Web
| Updated By: ಮದನ್​ ಕುಮಾರ್​

Updated on:Dec 12, 2021 | 8:53 AM

ಭಾರತೀಯ ಚಿತ್ರರಂಗದಲ್ಲಿ ರಜನಿಕಾಂತ್ (Rajinikanth )​ ಅವರಿಗೆ ಸಾಟಿ ಆಗಬಲ್ಲ ಮತ್ತೋರ್ವ ನಟ ಇಲ್ಲ. ‘ತಲೈವಾ’ (Thalaiva) ಬೆಳೆದು ಬಂದ ಹಾದಿ ಅನೇಕರಿಗೆ ಮಾದರಿ. ಮಾಮೂಲಿ ಬಸ್​ ಕಂಡಕ್ಟರ್​ ಆಗಿದ್ದ ಅವರು ‘ಸೂಪರ್​ ಸ್ಟಾರ್​’ ಎನಿಸಿಕೊಳ್ಳುವ ಮಟ್ಟಕ್ಕೆ ಬೆಳೆದಿದ್ದು ಒಂದು ಇತಿಹಾಸ. ‘ದಾದಾಸಾಹೇಬ್​ ಫಾಲ್ಕೆ’ ಸೇರಿದಂತೆ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳು ಅವರನ್ನು ಅರಸಿಬಂದಿವೆ. ರಜನಿಕಾಂತ್​ ಅವರನ್ನು ಪ್ರೀತಿಸುವ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಸೋಲು-ಗೆಲುವು ಏನೇ ಇರಲಿ, ತಲೈವಾ ನಟಿಸುವ ಸಿನಿಮಾಗಳ ಮೇಲಿನ ಕ್ರೇಜ್​ ಕಮ್ಮಿ ಆಗಿಲ್ಲ. ಹಾಗಾಗಿ ಇಂದಿಗೂ ಅವರು ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಹಾಗಾದರೆ ರಜನಿಕಾಂತ್​ ಅವರ ಒಟ್ಟು ಆಸ್ತಿ ಮೌಲ್ಯ (Rajinikanth Net Worth) ಎಷ್ಟಿರಬಹುದು ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡುವುದು ಸಹಜ. ಅದಕ್ಕೆ ಇಲ್ಲಿದೆ ಉತ್ತರ. ಮೂಲಗಳ ಪ್ರಕಾರ, ರಜನಿಕಾಂತ್​ ಅವರು ಬರೋಬ್ಬರಿ 365 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ!

1975ರಲ್ಲೇ ಚಿತ್ರರಂಗಕ್ಕೆ ಕಾಲಿಟ್ಟವರು ರಜನಿಕಾಂತ್​. ವರ್ಷದಿಂದ ವರ್ಷಕ್ಕೆ ಅವರ ಡಿಮ್ಯಾಂಡ್​ ಹೆಚ್ಚುತ್ತಲೇ ಹೋಯಿತು. ಅನೇಕ ಸೂಪರ್​ ಹಿಟ್​ ಸಿನಿಮಾಗಳನ್ನು ಅವರು ನೀಡಿದರು. ದೇಶಾದ್ಯಂತ ಜನಪ್ರಿಯರಾದರು. ‘ಬಾಷಾ’, ‘ತಂಗ ಮಗನ್​’, ‘ಪಡಯಪ್ಪ’, ‘ಶಿವಾಜಿ’, ‘2.0’ ಮುಂತಾದ ಸೂಪರ್​ ಹಿಟ್​ ಸಿನಿಮಾಗಳನ್ನು ಅವರು ನೀಡಿದರು. ಪ್ರತಿ ಸಿನಿಮಾಗೆ ಅವರು ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುತ್ತಾರೆ.

ಅನೇಕ ಕಡೆಗಳಲ್ಲಿ ರಜನಿಕಾಂತ್​ ಅವರು ತಮ್ಮ ಹಣ ಹೂಡಿಕೆ ಮಾಡಿದ್ದಾರೆ. ಮೂಲಗಳ ಪ್ರಕಾರ ಅವರು ಅಂದಾಜು 110 ಕೋಟಿ ರೂ. ಹೂಡಿಕೆ ಮಾಡಿದ್ದಾರೆ. ಅವರ ಬಳಿ ಕೆಲವು ಐಷಾರಾಮಿ ಕಾರುಗಳು ಇವೆ. ಇದೆಲ್ಲದರ ಜತೆಗೆ ಅವರು ಕೆಲವು ಸಮಾಜಮುಖಿ ಕೆಲಸಗಳಿಗೂ ತಮ್ಮ ಹಣವನ್ನು ಮೀಸಲಿಡುತ್ತಾರೆ.

ಎಷ್ಟೇ ಎತ್ತರಕ್ಕೆ ಬೆಳೆದರೂ ರಜನಿಕಾಂತ್​ ಅವರು ತಾವು ನಡೆದು ಬಂದ ಹಾದಿಯನ್ನು ಮರೆತಿಲ್ಲ. ಬೆಂಗಳೂರಿನಲ್ಲಿ ಬಸ್​ ಕಂಡಕ್ಟರ್​ ಆಗಿದ್ದಾಗ ತಮಗೆ ಸಹಾಯ ಮಾಡಿದ ಸ್ನೇಹಿತ ರಾಜ್​ ಬಹದ್ದೂರ್​ ಜತೆಗೆ ಅವರು ಇಂದಿಗೂ ಅದೇ ಸ್ನೇಹವನ್ನು ಇಟ್ಟುಕೊಂಡಿದ್ದಾರೆ. ಆ ಕಾರಣಕ್ಕಾಗಿ ರಜನಿಕಾಂತ್​ ಅವರು ಹೃದಯಶ್ರೀಮಂತ ಎನಿಸಿಕೊಳ್ಳುತ್ತಾರೆ. ಪ್ರತಿ ಬಾರಿ ಬೆಂಗಳೂರಿಗೆ ಬಂದಾಗ ತಮ್ಮ ಗೆಳೆಯನನ್ನು ಭೇಟಿ ಮಾಡುತ್ತಾರೆ. ಈ ವರ್ಷ ಅವರು ‘ದಾದಾಸಾಹೇಬ್​ ಫಾಲ್ಕೆ’ ಪ್ರಶಸ್ತಿ ಪಡೆದುಕೊಳ್ಳುವಾಗಲೂ ತಮ್ಮ ಸ್ನೇಹಿತನನ್ನು ನೆನಪು ಮಾಡಿಕೊಂಡರು. ಆ ಬಗ್ಗೆ ರಾಜ್​ ಬಹದ್ದೂರ್​ ಖುಷಿ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ:

Rajinikanth Birthday: ರಜನಿಕಾಂತ್​ ಜನ್ಮದಿನ; ‘ತಲೈವಾ’ 71ನೇ ಹುಟ್ಟುಹಬ್ಬಕ್ಕೆ ಶುಭಾಶಯಗಳ ಸುರಿಮಳೆ

ಪುನೀತ್​ ನಿಧನ ವಾರ್ತೆ ಕೇಳಿ ರಜನಿಕಾಂತ್​ ಪ್ರತಿಕ್ರಿಯೆ ಹೇಗಿತ್ತು? ಶಿವರಾಜ್​ಕುಮಾರ್​ ವಿವರಿಸಿದ್ದು ಹೀಗೆ

Published On - 8:20 am, Sun, 12 December 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ