AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೃಜನ್ ಲೋಕೇಶ್​ ಡ್ಯಾನ್ಸ್​ ನೋಡಿ ಹೊಟ್ಟೆ ಹುಣ್ಣಾಗುವಂತೆ ನಕ್ಕ ಫ್ಯಾನ್ಸ್​; ಈ ವಿಚಿತ್ರ ನೃತ್ಯದ ಹೆಸರೇನು?

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ರಾಜಾ ರಾಣಿ’ ರಿಯಾಲಿಟಿ ಶೋ ಇತ್ತೀಚೆಗೆ ಪೂರ್ಣಗೊಂಡಿತ್ತು. ಇದಾದ ಬೆನ್ನಲ್ಲೇ ಕಲರ್ಸ್​ ಕನ್ನಡ ವಾಹಿನಿ ಹೊಸ ರಿಯಾಲಿಟಿ ಶೋ ಒಂದಿಗೆ ಬಂದಿದೆ.

ಸೃಜನ್ ಲೋಕೇಶ್​ ಡ್ಯಾನ್ಸ್​ ನೋಡಿ ಹೊಟ್ಟೆ ಹುಣ್ಣಾಗುವಂತೆ ನಕ್ಕ ಫ್ಯಾನ್ಸ್​; ಈ ವಿಚಿತ್ರ ನೃತ್ಯದ ಹೆಸರೇನು?
ಸೃಜನ್​ ಲೋಕೇಶ್​
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Dec 12, 2021 | 7:00 AM

Share

ಸೃಜನ್​ ಲೋಕೇಶ್​ ಅವರು ಇದ್ದಲ್ಲಿ ನಗು ಇರುತ್ತದೆ. ಅವರು ಯಾವುದೇ ಕಾರ್ಯಕ್ರಮದ ಜಡ್ಜ್​ ಆಗಲಿ. ಎಲ್ಲರನ್ನೂ ನಗಿಸುವ ಕೆಲಸವನ್ನು ಮಾಡುತ್ತಾರೆ. ‘ಮಜಾ ಟಾಕೀಸ್​’ ಮೂಲಕ ಸಾಕಷ್ಟು ಮನರಂಜನೆಯನ್ನು ಅವರು ನೀಡಿದ್ದಾರೆ. ಈಗ ಸೃಜನ್​ ಬೇರೆ ಬೇರೆ ಕಿರುತೆರೆ ಕಾರ್ಯಕ್ರಮಗಳಿಗೆ ಜಡ್ಜ್​ ಆಗಿ ಬರುತ್ತಿದ್ದಾರೆ. ಈ ಬಾರಿ ಅವರು ‘ನನ್ನಮ್ಮ ಸೂಪರ್ ಸ್ಟಾರ್​’ ಕಾರ್ಯಕ್ರಮಕ್ಕೆ ಬಂದಿದ್ದಾರೆ. ಇಲ್ಲಿಯೂ ಅವರು ನಗುವಿನ ಹೊಳೆ ಹರಿಸುವುದನ್ನು ಮುಂದುವರಿಸಿದ್ದಾರೆ. ಈ ಬಾರಿ ಅವರು ವಿಚಿತ್ರ ಡ್ಯಾನ್ಸ್​ ಒಂದನ್ನು ಮಾಡಿದ್ದಾರೆ. ಇದನ್ನು ನೋಡಿ ಅಭಿಮಾನಿಗಳು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ರಾಜಾ ರಾಣಿ’ ರಿಯಾಲಿಟಿ ಶೋ ಇತ್ತೀಚೆಗೆ ಪೂರ್ಣಗೊಂಡಿತ್ತು. ಇದಾದ ಬೆನ್ನಲ್ಲೇ ಕಲರ್ಸ್​ ಕನ್ನಡ ವಾಹಿನಿ ಹೊಸ ರಿಯಾಲಿಟಿ ಶೋನೊಂದಿಗೆ ಬಂದಿದೆ. ಅದುವೇ ‘ನನ್ನಮ್ಮ ಸೂಪರ್ ಸ್ಟಾರ್’. ನಟಿ ತಾರಾ ಅನುರಾಧ, ಸೃಜನ್ ಲೋಕೇಶ್‌ ಮತ್ತು ಅನು ಪ್ರಭಾಕರ್ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದಾರೆ. ನವೆಂಬರ್ 27ರಂದು ಈ ಶೋ ಆರಂಭವಾಗಿದೆ. ಸೃಜನ್​ ಲೋಕೇಶ್​ ಅವರು ಇಲ್ಲಿಯೂ ನಗೆ ಚಟಾಕಿ ಹಾರಿಸುತ್ತಿದ್ದಾರೆ.

ಅನುಪಮಾ ಗೌಡ ಅವರು ಈ ಶೋ ನಡೆಸಿಕೊಡುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ತಾರಾ ಹಾಗೂ ಅನು ಪ್ರಭಾಕರ್​ ಅವರು ಡ್ಯಾನ್ಸ್​ ಮಾಡಿದ್ದಾರೆ. ವೇದಿಕೆಯ ಮೇಲೆ ಅವರ ಡ್ಯಾನ್ಸ್​ ನೋಡಿ ಎಲ್ಲರೂ ಖುಷಿಪಟ್ಟರು. ಇದಾದ ಬೆನ್ನಲ್ಲೇ ಸೃಜನ್​ ಲೋಕೇಶ್​ ಅವರ ಬಳಿ ಡ್ಯಾನ್ಸ್​ ಮಾಡೋಕೆ ಹೇಳಲಾಯಿತು. ಅವರು ಕುಳಿತಲ್ಲಿಯೇ ಡ್ಯಾನ್ಸ್​ ಮಾಡುವುದಾಗಿ ಹೇಳಿದರು. ಅಷ್ಟೇ ಅಲ್ಲ ಚಿತ್ರವಿಚಿತ್ರವಾಗಿ ಅವರು ಸ್ಟೆಪ್​ ಹಾಕಿದರು. ಇದನ್ನು ನೋಡಿ ಅಭಿಮಾನಿಗಳು ನಕ್ಕಿದ್ದಾರೆ.

ಈ ಪ್ರೋಮೋವನ್ನು ಕಲರ್ಸ್​ ಕನ್ನಡ ವಾಹಿನಿ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದೆ. ಇದಕ್ಕೆ ಹಲವರು ನಗುವ ಎಮೋಜಿ ಹಾಕಿದ್ದಾರೆ. ಈ ಕಾರ್ಯಕ್ರಮ ಶನಿವಾರ ಮತ್ತು ಭಾನುವಾರ ರಾತ್ರಿ 7.30ಕ್ಕೆ ಪ್ರಸಾರವಾಗಲಿದೆ. ಸ್ಪರ್ಧಿಗಳಾಗಿ ಕಿರುತೆರೆ ನಟಿಯರು ಮತ್ತು ಅವರ ಮಕ್ಕಳು ಕಾಣಿಸಿಕೊಳ್ಳುತ್ತಿದ್ದಾರೆ. ಮಾಸ್ಟರ್ ಆನಂದ್ ಪುತ್ರಿಯ ತುಂಟ ಮಾತುಗಳು ಈಗಾಗಲೇ ಹಲವರ ಗಮನ ಸೆಳೆದಿದೆ.

ಇದನ್ನೂ ಓದಿ: ‘ಸೃಜನ್ ಲೋಕೇಶ್​​ ಹೆದರುತ್ತಾರೆ, ಅದಕ್ಕೆ ಹೆಂಡತಿ ಎದುರು ಜಾಸ್ತಿ ಮಾತನಾಡಲ್ಲ’; ಅಚ್ಚರಿ ವಿಚಾರ ಬಿಚ್ಚಿಟ್ಟ ಅನುಪಮಾ ಗೌಡ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ