‘ಸರಿಗಮಪ’, ‘ಡ್ರಾಮಾ ಜ್ಯೂನಿಯರ್ಸ್’ ಹೊಸ ಸೀಸನ್; ಆಡಿಷನ್ ಕೊಡೋಕೆ ಇದೆ ಷರತ್ತು
‘ಸರಿಗಮಪ ಸೀಸನ್ 19’ ಹಾಗೂ ‘ಡ್ರಾಮಾ ಜ್ಯೂನಿಯರ್ಸ್ ಸೀಸನ್ 4’ ಆರಂಭವಾಗುತ್ತಿದೆ. ಇವೆರಡರಲ್ಲೂ ಭಾಗವಹಿಸುವ ಸ್ಪರ್ಧಿಗಳಿಗೆ ವಯಸ್ಸಿನ ಮಿತಿ ಇದೆ. ಈ ಎರಡೂ ರಿಯಾಲಿಟಿ ಶೋಗಳನ್ನು ಈ ಬಾರಿ ಮಕ್ಕಳಿಗಾಗಿಯೇ ಮೀಸಲಿಡಲಾಗುತ್ತಿದೆ.
ಕನ್ನಡ ಕಿರುತೆರೆಯಲ್ಲಿ ಈಗ ರಿಯಾಲಿಟಿ ಶೋಗಳು ಸಾಕಷ್ಟು ಹೈಲೈಟ್ ಆಗುತ್ತಿವೆ. ಎಲ್ಲಾ ವಾಹಿನಿಗಳ ಮಧ್ಯೆ ಇದಕ್ಕಾಗಿ ದೊಡ್ಡ ಮಟ್ಟದ ಕಾಂಪಿಟೇಷನ್ ಇದೆ. ಹೀಗಾಗಿ ಒಂದಕ್ಕಿಂತ ಒಂದು ಶೋಅನ್ನು ಅದ್ದೂರಿಯಾಗಿ ವೀಕ್ಷಕರ ಮುಂದೆ ಇಡುವ ಪ್ರಯತ್ನ ನಡೆಯುತ್ತಿದೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಸರಿಗಮಪ’, ‘ಡ್ರಾಮಾ ಜ್ಯೂನಿಯರ್ಸ್’ ಈಗಾಗಲೇ ಸಾಕಷ್ಟು ಖ್ಯಾತಿ ಪಡೆದುಕೊಂಡಿದೆ. ಈ ಎರಡೂ ಶೋಗಳು ಹಲವು ಪ್ರತಿಭೆಗಳಿಗೆ ವೇದಿಕೆ ಆಗಿದೆ. ‘ಸರಿಗಮಪ’ ಮೂಲಕ ಸಾಕಷ್ಟು ಗಾಯಕರು ರಾಜ್ಯಕ್ಕೆ ಪರಿಚಯವಾದರೆ, ‘ಡ್ರಾಮಾ ಜ್ಯೂನಿಯರ್ಸ್’ ಮೂಲಕ ಹಲವು ಕಲಾವಿದರು ಗುರುತಿಸಿಕೊಂಡಿದ್ದಾರೆ. ಈಗ ಇವೆರಡೂ ಕಾರ್ಯಕ್ರಮದ ಹೊಸ ಸೀಸನ್ ಆರಂಭವಾಗುತ್ತಿದೆ. ಇದಕ್ಕೆ ನೀವು ಕೂಡ ಆಡಿಷನ್ ಕೊಡಬಹುದು. ಆದರೆ, ಕೆಲವು ಷರತ್ತುಗಳಿವೆ.
‘ಸರಿಗಮಪ ಸೀಸನ್ 19’ ಹಾಗೂ ‘ಡ್ರಾಮಾ ಜ್ಯೂನಿಯರ್ಸ್ ಸೀಸನ್ 4’ ಆರಂಭವಾಗುತ್ತಿದೆ. ಸರಿಗಮಪ ಶೋನಲ್ಲಿ ಭಾಗವಹಿಸುವ ಸ್ಪರ್ಧಿಗಳಿಗೆ ವಯಸ್ಸಿನ ಮಿತಿ ಇದೆ. ಈ ಬಾರಿ ಸರಿಗಮಪ ಶೋಅನ್ನೂ ಮಕ್ಕಳಿಗಾಗಿಯೇ ಮೀಸಲಿಡಲಾಗಿದೆ. ಹೀಗಾಗಿ, ‘ಸರಿಗಮಪ ಸೀಸನ್ 19’ರಲ್ಲಿ ಪಾಲ್ಗೊಳ್ಳುವವರ ವಯಸ್ಸು 4ರಿಂದ 16 ವರ್ಷದ ಒಳಗೆ ಇರಬೇಕು. ‘ಡ್ರಾಮಾ ಜ್ಯೂನಿಯರ್ಸ್ ಸೀಸನ್ 4’ರಲ್ಲಿ ಪಾಲ್ಗೊಳ್ಳುವವರ ವಯಸ್ಸು 4 ವರ್ಷದಿಂದ 14 ವರ್ಷದ ಒಳಗೆ ಇರಬೇಕು. ಅಂದರೆ ಮಾತ್ರ ನೀವು ಆಡಿಷನ್ ಕೊಡಬಹುದು.
ಹಾಗಾದರೆ, ಈ ಕಾರ್ಯಕ್ರಮಕ್ಕೆ ಆಡಿಷನ್ ಕೊಡೋಕೆ ಏನು ಮಾಡಬೇಕು? ಅದಕ್ಕೂ ಉತ್ತರವಿದೆ. ಆಡಿಷನ್ಗೆ ನಿಮ್ಮ ಪರ್ಫಾರ್ಮೆನ್ಸ್ ವಿಡಿಯೋ ಕಳುಹಿಸಬೇಕು. ಸರಿಗಮಪಕ್ಕೆ ಆಡಿಷನ್ ಕೊಡುವವರು ತಮ್ಮ ಹಾಡಿನ ವಿಡಿಯೋವನ್ನು ವಾಟ್ಸಾಪ್ ಸಂಖ್ಯೆ 9513516200 ಕಳುಹಿಸಬೇಕು ಮತ್ತು ಡ್ರಾಮಾ ಜ್ಯೂನಿಯರ್ಸ್ಗೆ ವಾಟ್ಸಾಪ್ ಸಂಖ್ಯೆ 9513134434 ವಿಡಿಯೋ ಕಳುಹಿಸಬೇಕು.
ಈ ಎರಡೂ ರಿಯಾಲಿಟಿ ಶೋಗಳನ್ನು ಇಷ್ಟಪಡುವವರು ಸಾಕಷ್ಟು ಮಂದಿ ಇದ್ದಾರೆ. ಈ ಎರಡೂ ಕಾರ್ಯಕ್ರಮ ಒಟ್ಟಿಗೆ ಪ್ರಸಾರವಾದರೆ ವೀಕ್ಷಕರ ಪಾಲಿಗೆ ವಿಶೇಷವಾಗಲಿದೆ. ಅಂದಹಾಗೆ, ಈ ಶೋ ಯಾವಾಗ ಪ್ರಸಾರವಾಗುತ್ತದೆ, ಯಾರೆಲ್ಲ ಇದರ ಜಡ್ಜ್ ಆಗಿ ಇರಲಿದ್ದಾರೆ ಎಂಬಿತ್ಯಾದಿ ಮಾಹಿತಿಗಳು ಇನ್ನಷ್ಟೇ ಹೊರಬೀಳಬೇಕಿದೆ.
ಇದನ್ನೂ ಓದಿ: ‘ಸರಿಗಮಪ’ ಶೋಗೆ ಹಂಸಲೇಖ ಗೈರಾಗಿದ್ದೇಕೆ?; ವಾಹಿನಿ ಕಡೆಯಿಂದ ಸ್ಪಷ್ಟನೆ
‘ಸರಿಗಮಪ ನನ್ನ ಪ್ರೀತಿಯ ಭೂಮಿಕೆ, ಬೇಗ ಬಂದು ಸೇರಿಕೊಳ್ಳುತ್ತೇನೆ’; ಹಂಸಲೇಖ ಪತ್ರ
Published On - 5:10 pm, Sun, 12 December 21