ಸಾಲದ ಹಣ ವಾಪಸ್​ ನೀಡಲು ದ್ವಾರಕೀಶ್​ಗೆ ಕೋರ್ಟ್​ ಆದೇಶ​; ಅವರು ಪಡೆದಿರುವ ಸಾಲ ಎಷ್ಟು?

Dwarakish: 2013ರಲ್ಲಿ ಕೆಸಿಎನ್​ ಚಂದ್ರಶೇಖರ್‌ ಅವರಿಂದ ಸಾಲ ಪಡೆಯುವಾಗ ದ್ವಾರಕೀಶ್​ ಅವರು ಚೆಕ್​ ನೀಡಿದ್ದರು. ನಂತರ ‘ನಾನು ಚೆಕ್​ ನೀಡಿಲ್ಲ, ಚೆಕ್​ಗೆ ಸಹಿ ಮಾಡಿಲ್ಲ’ ಎಂದು ಅವರು ವಾದಿಸಿದ್ದರು.

ಸಾಲದ ಹಣ ವಾಪಸ್​ ನೀಡಲು ದ್ವಾರಕೀಶ್​ಗೆ ಕೋರ್ಟ್​ ಆದೇಶ​; ಅವರು ಪಡೆದಿರುವ ಸಾಲ ಎಷ್ಟು?
ದ್ವಾರಕೀಶ್
Follow us
TV9 Web
| Updated By: ಮದನ್​ ಕುಮಾರ್​

Updated on: Dec 12, 2021 | 9:31 AM

ಕನ್ನಡ ಚಿತ್ರರಂಗದ ಖ್ಯಾತ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್​ (Dwarakish) ಅವರಿಗೆ ಸಂಕಷ್ಟ ಎದುರಾಗಿದೆ. ಅವರೀಗ ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ. ಸಾಲದ ಹಣ ವಾಪಸ್ ನೀಡುವಂತೆ ದ್ವಾರಕೀಶ್‌ಗೆ ಕೋರ್ಟ್​ ಆದೇಶಿಸಿದೆ. 1 ತಿಂಗಳಲ್ಲಿ ಸಾಲದ ಹಣ ಹಿಂದಿರುಗಿಸಲು ಗಡುವು ನೀಡಲಾಗಿದೆ. 2013ರಲ್ಲಿ ನಿರ್ಮಾಪಕ ಕೆಸಿಎನ್​ ಚಂದ್ರಶೇಖರ್‌ (KCN Chandrashekar) ಅವರಿಂದ ದ್ವಾರಕೀಶ್​ ಸಾಲ ಪಡೆದುಕೊಂಡಿದ್ದರು. ‘ಚಾರುಲತಾ’ ಸಿನಿಮಾ ಬಿಡುಗಡೆಗಾಗಿ 50 ಲಕ್ಷ ರೂ. ಮೊತ್ತವನ್ನು ಅವರು ಪಡೆದಿದ್ದರು. ನಂತರ ಸಾಲದ ಹಣ ವಾಪಸ್​ ನೀಡದೇ ಸತಾಯಿಸಿದ್ದರು. ಈ ಪ್ರಕರಣ ಕೋರ್ಟ್​ ಮೆಟ್ಟಿಲೇರಿತ್ತು. ಇನ್ನು ಒಂದು ತಿಂಗಳ ಒಳಗೆ 52 ಲಕ್ಷ ರೂ.ಗಳನ್ನು ಹಿಂದಿರುಗಿಸುವಂತೆ ದ್ವಾರಕೀಶ್​ ಅವರಿಗೆ ಕೋರ್ಟ್​ ಆದೇಶ ನೀಡಿದೆ.

2013ರಲ್ಲಿ ಕೆಸಿಎನ್​ ಚಂದ್ರಶೇಖರ್‌ ಅವರಿಂದ ಸಾಲ ಪಡೆಯುವಾಗ ದ್ವಾರಕೀಶ್​ ಅವರು ಚೆಕ್​ ನೀಡಿದ್ದರು. ನಂತರ ‘ನಾನು ಚೆಕ್​ ನೀಡಿಲ್ಲ, ಚೆಕ್​ಗೆ ಸಹಿ ಮಾಡಿಲ್ಲ’ ಎಂದು ಅವರು ವಾದಿಸಿದ್ದರು. ಹೀಗಾಗಿ ಕೋರ್ಟ್​ ಮೊರೆ ಹೋಗುವುದು ಕೆಸಿಎನ್​ ಚಂದ್ರಶೇಖರ್‌ ಅವರಿಗೆ ಅನಿವಾರ್ಯ ಆಗಿತ್ತು. ಆ ಸಹಿ ದ್ವಾರಕೀಶ್ ಅವರದ್ದೇ ಎಂದು ಫೋರೆನ್ಸಿಕ್ ಲ್ಯಾಬ್​ನಲ್ಲಿ ಸಾಬೀತಾಗಿತ್ತು.

ಹಣ ಹಿಂದಿರುಗಿಸುವಂತೆ 2019ರಲ್ಲಿ ದ್ವಾರಕೀಶ್​ ಅವರಿಗೆ ನ್ಯಾಯಾಲಯ ಆದೇಶಿಸಿತ್ತು. ಅದನ್ನು ಪ್ರಶ್ನಿಸಿ ಅವರು ಸೆಷನ್ಸ್​ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ಬಳಿಕ ಕೆಳ ನ್ಯಾಯಾಲಯದ ಆದೇಶವನ್ನು ಸೆಷನ್ಸ್​ ಕೋರ್ಟ್​ ಎತ್ತಿ ಹಿಡಿದಿದೆ.

ಇದನ್ನೂ ಓದಿ:

ಆಯುಷ್ಮಾನ್ ಭವ ಚಿತ್ರದ ಹಣದ ವಿಚಾರಕ್ಕೆ ಕಿರಿಕ್, ದ್ವಾರಕೀಶ್​ ನಿವಾಸಕ್ಕೆ ನುಗ್ಗಿ ವಿತರಕರಿಂದ ಗಲಾಟೆ

ಯಾವ ಸ್ಥಿತಿಯಲ್ಲಿದೆ ನೋಡಿ ಡಾ. ರಾಜ್​ ಬೆಳೆದ ಮನೆ; ಇದರ ಬಗ್ಗೆ ಪುನೀತ್​ ಕಂಡಿದ್ದರು ಕನಸು

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ