‘ಊಟ, ತಿಂಡಿ ಇಲ್ಲದೇ ಗಾಂಧಿನಗರದಲ್ಲಿ ಅಲೆದವನು ನಾನು’: ಜೋಗಿ ಪ್ರೇಮ್​ ಫ್ಲ್ಯಾಶ್​ ಬ್ಯಾಕ್​

ಊಟ-ತಿಂಡಿ ಇಲ್ಲದೇ, ಕೇವಲ ಅರ್ಧ ಕಪ್​ ಟೀ ಕುಡಿದು ಗಾಂಧಿನಗರದಲ್ಲಿ ಅವಕಾಶಕ್ಕಾಗಿ ಅಲೆದಾಡಿದ ಸಂದರ್ಭವನ್ನು ನಿರ್ದೇಶಕ ಜೋಗಿ ಪ್ರೇಮ್​ ಮೆಲುಕು ಹಾಕಿದ್ದಾರೆ.

TV9kannada Web Team

| Edited By: Madan Kumar

Dec 12, 2021 | 4:03 PM

ನಿರ್ದೇಶಕ ಜೋಗಿ ಪ್ರೇಮ್​ ಅವರು ಈಗ ಚಂದನವನದಲ್ಲಿ ಯಶಸ್ವಿ ನಿರ್ದೇಶಕ. ಕರಿಯ, ಎಕ್ಸ್​​ಕ್ಯೂಸ್​ ಮೀ, ಜೋಗಿ ಮುಂತಾದ ಹಿಟ್​ ಸಿನಿಮಾಗಳನ್ನು ನೀಡಿದ ಖ್ಯಾತಿ ಅವರಿಗೆ ಇದೆ. ಇಂದು ಅವರ ಸಿನಿಮಾಗಳಿಗೆ ಹಣ ಹೂಡಲು ಅನೇಕರು ಮುಂದೆ ಬರುತ್ತಾರೆ. ಆದರೆ ಅವರು ಚಿತ್ರರಂಗಕ್ಕೆ ಕಾಲಿಟ್ಟಾಗ ಪರಿಸ್ಥಿತಿ ಹೀಗೆ ಇರಲಿಲ್ಲ. ಆ ಕಷ್ಟದ ದಿನಗಳ ಬಗ್ಗೆ ಪ್ರೇಮ್​ ಮಾತನಾಡಿದ್ದಾರೆ. ಊಟ-ತಿಂಡಿ ಇಲ್ಲದೇ, ಕೇವಲ ಅರ್ಧ ಕಪ್​ ಟೀ ಕುಡಿದು ಗಾಂಧಿನಗರದಲ್ಲಿ ಅವಕಾಶಕ್ಕಾಗಿ ಅಲೆದಾಡಿದ ಸಂದರ್ಭವನ್ನು ಪ್ರೇಮ್​ ಮೆಲುಕು ಹಾಕಿದ್ದಾರೆ. ಇಂದು ಚಿತ್ರರಂಗಕ್ಕೆ ಬರುತ್ತಿರುವ ಹೊಸ ಪ್ರತಿಭಾವಂತರಿಗೆ ಆ ರೀತಿ ಕಷ್ಟ ಆಗಬಾರದು ಎಂದು ಅವರು ಅನೇಕರಿಗೆ ಅವಕಾಶ ನೀಡುತ್ತಿದ್ದಾರೆ. ಈ ಕುರಿತು ‘ಏಕ್​ ಲವ್​ ಯಾ’ ಚಿತ್ರದ ಹಾಡು ಬಿಡುಗಡೆ ಸಮಾರಂಭದಲ್ಲಿ ಪ್ರೇಮ್​ ಮಾತನಾಡಿದ್ದಾರೆ. ಹುಬ್ಬಳಿಯಲ್ಲಿ ನಡೆದ ಕಾರ್ಯಕ್ರದಮಲ್ಲಿ ಅವರು ಫ್ಲ್ಯಾಶ್​ ಬ್ಯಾಕ್​ ನೆನಪಿಸಿಕೊಂಡಿದ್ದಾರೆ.

ಇದನ್ನೂ ಓದಿ:

‘ನನ್ನ ಉಸಿರು ಇರೋವರೆಗೆ ಪುನೀತ್​ ಫೋನ್​​ ನಂಬರ್​ ಡಿಲೀಟ್​ ಮಾಡಲ್ಲ’: ಜೋಗಿ ಪ್ರೇಮ್​ ಭಾವುಕ ಮಾತು

‘ಏಕ್​ ಲವ್​ ಯಾ’ ತಂಡದಿಂದ ಅಪ್ಪುಗೆ ಅವಮಾನ ಆಗಿದ್ದು ಹೇಗೆ? ಸುದ್ದಿಗೋಷ್ಠಿಯಲ್ಲಿ ಪ್ರೇಮ್​ ಸ್ಪಷ್ಟನೆ

Follow us on

Click on your DTH Provider to Add TV9 Kannada