‘ಏಕ್​ ಲವ್​ ಯಾ’ ತಂಡದಿಂದ ಅಪ್ಪುಗೆ ಅವಮಾನ ಆಗಿದ್ದು ಹೇಗೆ? ಸುದ್ದಿಗೋಷ್ಠಿಯಲ್ಲಿ ಪ್ರೇಮ್​ ಸ್ಪಷ್ಟನೆ

‘ಏಕ್​ ಲವ್​ ಯಾ’ ಚಿತ್ರದ ಹಾಡು ಬಿಡುಗಡೆ ಮಾಡುವ ವೇಳೆ ಪುನೀತ್​ ರಾಜ್​ಕುಮಾರ್​ ಫೋಟೋ ಇಟ್ಟಿದ್ದ ವೇದಿಕೆಯಲ್ಲೇ ಶಾಂಪೇನ್​ ಬಾಟಲ್​ ಓಪನ್​ ಮಾಡಲಾಯ್ತು. ಇದರಿಂದ ಅಪ್ಪುಗೆ ಅವಮಾನ ಆಗಿದೆ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಜೋಗಿ’ ಪ್ರೇಮ್​ (Jogi Prem) ನಿರ್ದೇಶನದ ‘ಏಕ್​ ಲವ್​ ಯಾ’ (Ek Love Ya) ಸಿನಿಮಾ ತಂಡ ಖುಷಿಖುಷಿಯಾಗಿ ‘ಎಣ್ಣೆಗೂ ಹೆಣ್ಣಿಗೂ..’ ಹಾಡನ್ನು ಬಿಡುಗಡೆ ಮಾಡಿಕೊಂಡಿತು. ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಶುಕ್ರವಾರ (ನ.12) ನಡೆದ ಈ ಕಾರ್ಯಕ್ರಮದಲ್ಲಿ ಅಪ್ಪುಗೆ ನಮನ ಸಲ್ಲಿಸಲು ವೇದಿಕೆ ಮೇಲೆ ಫೋಟೋ ಇರಿಸಲಾಗಿತ್ತು. ಹಾಡು ಬಿಡುಗಡೆ ಆಗುವಾಗ ಅದೇ ವೇದಿಕೆಯಲ್ಲಿ ಶಾಂಪೇನ್​ (Champagne) ಬಾಟಲ್​ ಓಪನ್​ ಮಾಡಲಾಯ್ತು. ಇದರಿಂದ ಪುನೀತ್​ ರಾಜ್​ಕುಮಾರ್​ಗೆ​ (Puneeth Rajkumar) ಅವಮಾನ ಆಗಿದೆ ಎಂದು ಅಪ್ಪು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತಂತೆ ಚಿತ್ರತಂಡ ಕ್ಷಮೆ ಕೇಳಿದ. ಅಲ್ಲದೇ, ಜೋಗಿ ಪ್ರೇಮ್​ ಅವರು ಇಂದು (ನ.13) ಪ್ರತ್ಯೇಕವಾಗಿ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ.

‘ತಪ್ಪಿನಿಂದಾಗಿ ಹಿಂಬದಿಯ ಎಲ್​ಇಡಿಯಲ್ಲಿ ಪುನೀತ್​ ಅವರ ಫೋಟೋ ಬಂತು. ಅಪ್ಪು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ನಾವು ಹಾಡು ಪ್ಲೇ ಮಾಡಿದ್ದೆವು. ಇದನ್ನೇ ಯಾಕೆ ದೊಡ್ಡದು ಮಾಡುತ್ತಿದ್ದಾರೋ ಗೊತ್ತಿಲ್ಲ. ಏನೇ ಮಾಡಿದರೂ ನನ್ನ ಒಳ್ಳೆಯದಕ್ಕೆ ಮಾಡಿದ್ದಾರೆ ಅಂತ ನಾನು ತಿಳಿದುಕೊಳ್ಳುತ್ತೇನೆ. ಗೊತ್ತಿಲ್ಲದೇ ನಡೆದ ತಪ್ಪಿಗಾಗಿ ಕೊನೆವರೆಗೂ ಕ್ಷಮೆ ಕೇಳುತ್ತೇನೆ’ ಎಂದು ಪ್ರೇಮ್​ ಹೇಳಿದ್ದಾರೆ.

ಇದನ್ನೂ ಓದಿ:

‘ಅಪ್ಪುಗೆ ಅವಮಾನ ಮಾಡಲು ಯಾರಿಂದಲೂ ಸಾಧ್ಯವಿಲ್ಲ’: ಶಾಂಪೇನ್​ ಅಚಾತುರ್ಯಕ್ಕೆ ರಕ್ಷಿತಾ ಪ್ರೇಮ್​ ಕ್ಷಮೆ

Rachita Ram: ವೇದಿಕೆ ಮೇಲೆ ಪುನೀತ್​ಗೆ ಅವಮಾನ: ಕ್ಷಮೆ ಕೇಳಿದ ರಚಿತಾ ರಾಮ್​ ಈಗ ನೀಡಿದ ಸಮಜಾಯಿಷಿ ಏನು?

Click on your DTH Provider to Add TV9 Kannada