‘ಅಪ್ಪುಗೆ ಅವಮಾನ ಮಾಡಲು ಯಾರಿಂದಲೂ ಸಾಧ್ಯವಿಲ್ಲ’: ಶಾಂಪೇನ್ ಅಚಾತುರ್ಯಕ್ಕೆ ರಕ್ಷಿತಾ ಪ್ರೇಮ್ ಕ್ಷಮೆ
Rakshitha Prem: ‘ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಶಾಂಪೇನ್ ಓಪನ್ ಮಾಡಿದ್ದು ಅಪ್ಪು ಅಭಿಮಾನಿಗಳಲ್ಲಿ ಅಸಮಾಧಾನ ಉಂಟಾಗಿದ್ದರೆ ನನ್ನ ಮತ್ತು ನನ್ನ ತಂಡದ ಕಡೆಯಿಂದ ಕ್ಷಮೆ ಯಾಚಿಸುತ್ತೇವೆ’ ಎಂದು ರಕ್ಷಿತಾ ಪ್ರೇಮ್ ಪೋಸ್ಟ್ ಮಾಡಿದ್ದಾರೆ.
ಪುನೀತ್ ರಾಜ್ಕುಮಾರ್ (Puneeth Rajkumar) ಕುಟುಂಬದ ಜೊತೆ ನಟಿ ರಕ್ಷಿತಾ ಪ್ರೇಮ್ (Rakshitha Prem) ಅವರಿಗೆ ಆಪ್ತ ಒಡನಾಟ ಇದೆ. ರಕ್ಷಿತಾ ಅವರು ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದೇ ಪುನೀತ್ ನಟನೆಯ ‘ಅಪ್ಪು’ ಚಿತ್ರದ ಮೂಲಕ. ಇಬ್ಬರ ನಡುವೆ ಒಳ್ಳೆಯ ಗೆಳೆತನ ಇತ್ತು. ಪುನೀತ್ ನಿಧನರಾದ ಸುದ್ದಿ ಕೇಳಿ ರಕ್ಷಿತಾಗೆ ತೀವ್ರ ಆಘಾತ ಆಗಿತ್ತು. ಆ ಘಟನೆ ನಡೆದು ಕೆಲವೇ ದಿನಗಳು ಕಳೆದಿದೆ. ಅಷ್ಟೆರಲ್ಲಾಗಲೇ ಪುನೀತ್ಗೆ ಅವಮಾನ ಮಾಡಿರುವ ಆರೋಪ ರಕ್ಷಿತಾ ಮೇಲೆ ಬಂದಿದೆ. ಅದಕ್ಕೆ ಕಾರಣ ಆಗಿದ್ದು ‘ಏಕ್ ಲವ್ ಯಾ’ (Ek Love Ya) ಚಿತ್ರದ ಹಾಡಿನ ಕಾರ್ಯಕ್ರಮ. ಈ ಕಾರ್ಯಕ್ರಮದ ವೇದಿಕೆಯಲ್ಲಿ ಪುನೀತ್ ಫೋಟೋ ಇರಿಸಿ ನಮನ ಸಲ್ಲಿಸಲಾಗಿತ್ತು. ಬಳಿಕ ಹಾಡು ಬಿಡುಗಡೆ ಮಾಡುವಾಗ ಶಾಂಪೇನ್ (Champagne) ಬಾಟಲ್ ಓಪನ್ ಮಾಡುವ ಮೂಲಕ ಚಿತ್ರತಂಡದಿಂದ ಅಪ್ಪುಗೆ ಅಗೌರವ ತೋರಲಾಗಿದೆ. ಆ ಬಗ್ಗೆ ರಕ್ಷಿತಾ ಪ್ರೇಮ್ ಪ್ರತಿಕ್ರಿಯೆ ನೀಡಿದ್ದು, ಪುನೀತ್ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದಾರೆ.
‘ಅಪ್ಪು ಅಗಲಿಕೆಯ ನೋವಿಂದ ನಾನಿನ್ನೂ ಹೊರಬರಲು ಸಾಧ್ಯವಾಗಿಲ್ಲ. ಹಲವಾರು ವಿಷಯಗಳು ನನ್ನನ್ನು ಇನ್ನೂ ಕಾಡುತ್ತಿವೆ. ಅಪ್ಪುಗೆ ಅವಮಾನ ಮಾಡಲು ಯಾರಿಂದಲೂ ಸಾಧ್ಯವಿಲ್ಲ, ಮಾಡುವುದೂ ಇಲ್ಲ. ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಶಾಂಪೇನ್ ಓಪನ್ ಮಾಡಿದ್ದು ಅಪ್ಪು ಅಭಿಮಾನಿಗಳಲ್ಲಿ ಅಸಮಾಧಾನ ಉಂಟಾಗಿದ್ದರೆ ನನ್ನ ಮತ್ತು ನನ್ನ ತಂಡದ ಕಡೆಯಿಂದ ಕ್ಷಮೆ ಯಾಚಿಸುತ್ತೇವೆ. ಇದು ಯಾವುದೂ ಉದ್ದೇಶಪೂರ್ವಕವಲ್ಲ. ಅಪ್ಪು ಇಂದಿಗೂ ಎಂದಿಗೂ ನಮ್ಮ ಮನಸ್ಸಿನಲ್ಲಿದ್ದಾರೆ’ ಎಂದು ರಕ್ಷಿತಾ ಪ್ರೇಮ್ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ.
View this post on Instagram
‘ಜೋಗಿ’ ಪ್ರೇಮ್ ಹೇಳಿದ್ದೇನೆ?
‘ಇದು ಇಷ್ಟು ದೊಡ್ಡ ಇಶ್ಯೂ ಆಗುತ್ತೆ ಅಂತ ನನಗೆ ಗೊತ್ತಿರಲಿಲ್ಲ. ನನ್ನಿಂದಾಗಿ ಯಾರಿಗಾದರೂ ನೋವಾಗಿದ್ದರೆ ಖಂಡಿತ ಅಭಿಮಾನಿಗಳಲ್ಲಿ ಕ್ಷಮೆ ಕೇಳುತ್ತೇನೆ. ಅಪ್ಪು ಅವರು ಬೆಡ್ ಮೇಲೆ ಮಲಗಿದ್ದಾಗ ನಾನು ಆಸ್ಪತ್ರೆಗೆ ಹೋಗಿದ್ದೆ. ಅವರ ಎರಡೂ ಕಾಲುಗಳನ್ನು ಹಿಡಿದುಕೊಂಡು ಕ್ಷಮೆ ಕೇಳಿದ್ದೆ. ನಮ್ಮ ಅಮ್ಮ ತೀರಿಹೋದಾಗಲೂ ಸಹ ಮೊದಲು ಅವರ ಮುಖ ನೋಡಲಿಲ್ಲ. ನನ್ನಿಂದ ಏನಾದರೂ ತಪ್ಪಾಗಿದ್ದರೆ ಕ್ಷಮಿಸಿಬಿಡು ಅಂತ ಕಾಲು ಹಿಡಿದುಕೊಂಡಿದ್ದೆ. ಈಗಲೂ ನನ್ನಿಂದ ಕಿಂಚಿತ್ತು ತೊಂದರೆ ಆಗಿದ್ದರೂ ಕ್ಷಮಿಸಿ ಅಂತ ಜನರಲ್ಲಿ ಕೇಳಿಕೊಳ್ಳುತ್ತೇನೆ’ ಎಂದಿದ್ದಾರೆ ಪ್ರೇಮ್.
ಇದನ್ನೂ ಓದಿ:
Rachita Ram: ವೇದಿಕೆ ಮೇಲೆ ಪುನೀತ್ಗೆ ಅವಮಾನ: ಕ್ಷಮೆ ಕೇಳಿದ ರಚಿತಾ ರಾಮ್ ಈಗ ನೀಡಿದ ಸಮಜಾಯಿಷಿ ಏನು?
ಸಕ್ರೆಬೈಲು ಆನೆ ಮರಿಗೆ ಪುನೀತ್ ಹೆಸರು; ವನ್ಯಜೀವಿಗಳ ಬಗ್ಗೆ ಅಪ್ಪುಗೆ ಇತ್ತು ವಿಶೇಷ ಕಾಳಜಿ