Temple Tour: ಸಕಲ ಸಿರಿ ಸಂಪತ್ತು ನೀಡುವ ಮಹಾಲಕ್ಷ್ಮಿಯನ್ನ ನೋಡಿದ್ದೀರಾ?

Temple Tour: ಸಕಲ ಸಿರಿ ಸಂಪತ್ತು ನೀಡುವ ಮಹಾಲಕ್ಷ್ಮಿಯನ್ನ ನೋಡಿದ್ದೀರಾ?

TV9 Web
| Updated By: shruti hegde

Updated on: Nov 14, 2021 | 9:18 AM

ಬಾರ್ಕೂರು ದೇವಳದಲ್ಲಿ ಪ್ರವೇಶವಿಲ್ಲದ ಕಾರಣ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ವಾಸಿಸುತ್ತಿದ್ದ ಮೊಗವೀರರಿಗೆ ಅನುಕೂಲವಾಗುವಂತೆ ಈ ದೇವಸ್ಥಾನವನ್ನು 1957 ರಲ್ಲಿ ನಿರ್ಮಿಸಲಾಯಿತು.

ಸಂಪತ್ತಿನ ಅಧಿದೇವತೆ ಅಂದರೆ ಲಕ್ಷ್ಮಿ. ದಾರಿದ್ರ್ಯವನ್ನು ದೂರ ಮಾಡಿ ಸಕಲ ಸಿರಿ ಸಂಪತ್ತನ್ನ ಕರುಣಿಸುವ ಮಹಾತಾಯಿ. ಸಿರಿಯಾಗಿ ಬಂದು ಹರಸುವ ಲಕ್ಷ್ಮಿಯ ಆಲಯಗಳು ನಾಡಿನ ನಾನಾ ಭಾಗಗಲ್ಲಿವೆ. ಅಂತಾ ದೇಗುಲಗಳ ಪೈಕಿ ಉಡುಪಿಯ ಮಹಾಲಕ್ಷ್ಮಿ ಮಂದಿರವು ಒಂದು. ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಉಚ್ಚಿಲದಲ್ಲಿ ಒಂದು ಸುಂದರವಾದ ಮಹಾಲಕ್ಷ್ಮಿ ದೇವಸ್ಥಾನ ಭಕ್ತರನ್ನು ಸೆಳೆಯುತ್ತದೆ. ಬಾರ್ಕೂರು ದೇವಳದಲ್ಲಿ ಪ್ರವೇಶವಿಲ್ಲದ ಕಾರಣ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ವಾಸಿಸುತ್ತಿದ್ದ ಮೊಗವೀರರಿಗೆ ಅನುಕೂಲವಾಗುವಂತೆ ಈ ದೇವಸ್ಥಾನವನ್ನು 1957 ರಲ್ಲಿ ನಿರ್ಮಿಸಲಾಯಿತು. ದೇವಾಲಯದ ಉತ್ತರ ಭಾಗವು ಇದರ ಪಕ್ಕದಲ್ಲಿರುವ ಸರೋವರವನ್ನು ಒಳಗೊಂಡಿದೆ. ಅಲ್ಲಿ ವಾಸುಕಿ ದೇವರ ದೇವಸ್ಥಾನವಿದೆ. ಸುಂದರ ವಸಂತ ಮಂಟಪದ ದಕ್ಷಿಣ ಭಾಗವು ಪ್ರವಾಸಿಗರನ್ನು ಆಕರ್ಷಿಸುತ್ತದೆ.