ಒಂದು ಸಂಬಂಧದಲ್ಲಿ ಪ್ರೀತಿ ಮತ್ತು ಗೌರವ ಬಹಳ ಮುಖ್ಯ, ಸಂಗಾತಿಯಲ್ಲಿ ತಪ್ಪು ಹುಡುಕುವ ಪ್ರಯತ್ನ ಬೇಡ: ಡಾ ಸೌಜನ್ಯ ವಶಿಷ್ಠ
ಮದುವೆಯಾದ ನಂತರ ಹಣಕಾಸು ನಿಭಾಯಿಸುವುದು ಬಹಳ ಮುಖ್ಯವಾಗುತ್ತದೆ. ಪತಿ-ಪತ್ನಿ ಇಬ್ಬರೂ ನೌಕರಿ ಮಾಡುವವರಾಗಿದ್ದರೆ, ನನ್ನ ಹಣ, ನಿನ್ನ ಹಣ ಎಂಬ ಸಮಸ್ಯೆ ಬರೋದು ಸಹಜವೇ!
ಮದುವೆಯಾಗಲ್ಲಿಕ್ಕಿರುವ ಯುವಕ ಯುವತಿಯರಲ್ಲಿ ತಮ್ಮ ಸಂಗಾತಿ ಹೇಗಿರಬೇಕು, ಅವರಿಂದ ಏನು ನಿರೀಕ್ಷೆ ಮಾಡಬಹುದು, ಮಾಡಬಾರದು; ತಮ್ಮಿಂದ ಅವರು ಏನು ನಿರೀಕ್ಷೆ ಮಾಡುತ್ತಾರೆ, ನಮ್ಮ ಸಂಬಂಧ ಕೊನೆವರೆಗೂ ಬಾಳುತ್ತಾ ಮೊದಲಾದ ನೂರೆಂಟು ಸಂದೇಹ ಮತ್ತು ಗೊಂದಲಗಳಿರುತ್ತವೆ ಅಂತ ಮನಶಾಸ್ತ್ರಜ್ಞೆ ಡಾ ಸೌಜನ್ಯ ವಶಿಷ್ಠ ಹೇಳುತ್ತಾರೆ. ವಿವಾಹ ಅನ್ನೋದು ಬದುಕಿನ ಒಂದು ಪ್ರಮುಖ ಮತ್ತು ಮಹತ್ವದ ಘಟ್ಟ, ಉತ್ತಮ ಬಾಳ ಸಂಗಾತಿ ಸಿಕ್ಕಿದ್ದೇಯಾದರೆ, ಬದುಕಿನ ಶೇಕಡಾ 70 ರಷ್ಟು ಸಮಸ್ಯೆಗಳು ಪರಿಹಾರ ಕಂಡುಕೊಂಡಂತೆಯೇ, ಹಾಗಾಗಿ ಸಂಗಾತಿ ಆಯ್ಕೆ ಮಾಡಿಕೊಳ್ಳುವಾಗ ಎಲ್ಲ ಆಯಾಮಗಳನ್ನು ಗಣನೆಗೆ ತೆಗೆದುಕೊಳ್ಳಿ ಎಂಬ ಸಲಹೆಯನ್ನು ಡಾ ಸೌಜನ್ಯ ನೀಡುತ್ತಾರೆ. ಒಂದು ಸಂಬಂಧ ಗಟ್ಟಿಯಾಗಿರಬೇಕಾದರೆ, ಕೇವಲ ಪ್ರೀತಿಯೊಂದೇ ಸಾಕಾಗುವುದಿಲ್ಲ, ಅದರಲ್ಲಿ ಭಾವನಾತ್ಮಕ ಸೆಳೆತ, ಹಣಕಾಸು ಹಾಗೂ ಇನ್ನು ಹಲವಾರು ಆಯಾಮಗಳು ಒಳಗೊಂಡಿರುತ್ತವೆ ಎಂದು ಅವರು ಹೇಳುತ್ತಾರೆ.
ಒಂದು ಸಂಬಂಧವನ್ನು ಬೆಳಸುವ ಮೊದಲು ನಮ್ಮನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಅದನ್ನು ಮಾಡದೆ ನಾವು ಬೇರೆಯವರನ್ನು ತಿಳಿದುಕೊಳ್ಳವುದು ಸಾಧ್ಯವಿಲ್ಲ. ನಮ್ಮ ಸಂಗಾತಿಯಾಗಲಿರುವವರ ಕೌಟುಂಬಿಕ ಹಿನ್ನೆಲೆ, ಅವರು ಬೆಳೆದ ಪರಿಸರವನ್ನು ಅರ್ಥ ಮಾಡಿಕೊಳ್ಳಬೇಕು. ಅವರ ಬಾಲ್ಯ ಅಬ್ಯುಸಿವ್ ಆಗಿದ್ದರೆ ಅವರ ವ್ಯಕ್ತಿತ್ವ ಭಿನ್ನವಾಗಿರುತ್ತದೆ, ಅದಕ್ಕೆ ತಕ್ಕನಾಗಿ ಹೊಂದಿಕೊಳ್ಳುವ ಪ್ರಯತ್ನ ನಾವು ಮಾಡಬೇಕಾಗುತ್ತದೆ ಎಂದು ಸೌಜನ್ಯ ಹೇಳುತ್ತಾರೆ
ಸಂಬಂಧದಲ್ಲಿ ನಿರೀಕ್ಷೆಗಳಿರುತ್ತವೆ. ನಿಮ್ಮ ಸಂಗಾತಿಗೂ ನಿಮ್ಮ ಬಗ್ಗೆ ನಿರೀಕ್ಷೆಗಳಿರುತ್ತವೆ ಅನ್ನುವುದನ್ನು ಮರೆಯಬಾರದು. ನಮ್ಮ ನಿರೀಕ್ಷೆಗಳೇನು, ಮತ್ತು ನಿಮ್ಮ ಸಂಗಾತಿಯ ನಿರೀಕ್ಷೆಗಳಿಗೆ ಅನುಗುಣವಾಗಿ ಇರಬಲ್ಲಿರಾ ಅನ್ನೋದನ್ನು ವಿಶ್ಲೇಷಣೆ ಮಾಡಿಕೊಳ್ಳಿ ಅಂತ ಸೌಜನ್ಯ ಹೇಳುತ್ತಾರೆ. ಬೇರೆಯವರಲ್ಲಿ ತಪ್ಪು ಹುಡುಕುವ ವ್ಯಕ್ತಿತ್ವ ನಿಮ್ಮದಾಗಿದ್ದರೆ ನಿಮ್ಮಲ್ಲಿ ಏನೋ ಕೊರತೆ ಇದೆ ಎಂದರ್ಥ.
ಮದುವೆಯಾದ ನಂತರ ಹಣಕಾಸು ನಿಭಾಯಿಸುವುದು ಬಹಳ ಮುಖ್ಯವಾಗುತ್ತದೆ. ಪತಿ-ಪತ್ನಿ ಇಬ್ಬರೂ ನೌಕರಿ ಮಾಡುವವರಾಗಿದ್ದರೆ, ನನ್ನ ಹಣ, ನಿನ್ನ ಹಣ ಎಂಬ ಸಮಸ್ಯೆ ಬರೋದು ಸಹಜವೇ. ಹಾಗಾಗಿ ಹಣವನ್ನು ಹೇಗೆ ಮ್ಯಾನೇಜ್ ಮಾಡುವುದು ಅಂತ ಮೊದಲೇ ಮಾತಾಡಿಕೊಳ್ಳಿ ಎಂದು ಡಾ ಸೌಜನ್ಯ ಹೇಳುತ್ತಾರೆ.
ಮನಸ್ತಾಪಗಳು ಅತಿರೇಕಕ್ಕೆ ಹೋಗದಂತೆ ನೋಡಿಕೊಳ್ಳಬೇಕು, ವಾಗ್ವಾದ ಉಂಟಾದಾಗ ದೈಹಿಕ ಹಲ್ಲೆ, ಅವಾಚ್ಯ ಪದಗಳ ನಿಂದನೆ ಆಗಲೇಕೂಡದು. ಪ್ರೀತಿ ಮತ್ತು ಗೌರವ ಒಂದೇ ನಾಣ್ಯದ ಎರಡು ಮುಖಗಳು. ಒಬ್ಬರೊನ್ನಬ್ಬರು ಪ್ರೀತಿಸುವ ಹಾಗೆ ಗೌರವಿಸಲೂ ಬೇಕು.
ಸಂಬಂಧದಲ್ಲಿ ಅಹಮಿಕೆ, ಜಂಭ ಇರಬಾರದು ಮತ್ತು ತಪ್ಪು ಮಾಡಿದಾಗ ಸಾರಿ ಅಂತ ಹೇಳಿದರೆ, ನೀವು ದೊಡ್ಡವರಾಗುತ್ತೀರಿಯೇ ಹೊರತು ಸಣ್ಣವರಲ್ಲ, ಎಂದು ಡಾ ಸೌಜನ್ಯ ಹೇಳುತ್ತಾರೆ.
ಇದನ್ನೂ ಓದಿ: ‘ಜೇಮ್ಸ್’ ಸಿನಿಮಾ ಶೂಟಿಂಗ್ ವಿಡಿಯೋ ವೈರಲ್; ಪುನೀತ್ ನೋಡಿ ಭಾವುಕರಾದ ಫ್ಯಾನ್ಸ್
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್ಗೇರಿದ ಸಿಡ್ನಿ ಸಿಕ್ಸರ್ಸ್
ರಾಹುಲ್ ನೀಡಿದ್ದ ಭರವಸೆ ಬಗ್ಗೆ ಬೈಕ್ ಟ್ಯಾಕ್ಸಿ ರೈಡರ್ಗಳು ಏನಂದ್ರು?
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು

