ದೀರ್ಘಾವಧಿ ಹೂಡಿಕೆ ಕುರಿತ ನಮ್ಮ ತಿಳುವಳಿಕೆ ಹೆಚ್ಚಿಸಿಕೊಳ್ಳಬೇಕು ಮತ್ತು ಭಯಮುಕ್ತರಾಗಿ ಹಣ ಹೂಡಬೇಕು: ಡಾ ಬಾಲಾಜಿ ರಾವ್

ದೀರ್ಘಾವಧಿ ಹೂಡಿಕೆ ಕುರಿತ ನಮ್ಮ ತಿಳುವಳಿಕೆ ಹೆಚ್ಚಿಸಿಕೊಳ್ಳಬೇಕು ಮತ್ತು ಭಯಮುಕ್ತರಾಗಿ ಹಣ ಹೂಡಬೇಕು: ಡಾ ಬಾಲಾಜಿ ರಾವ್

TV9 Web
| Updated By: shruti hegde

Updated on:Nov 14, 2021 | 9:22 AM

ಶೇರುಗಳನ್ನು ಖರೀದಿಸಿದ ನಂತರ ಬಹಳ ವರ್ಷಗಳವರೆಗೆ ನಮ್ಮಲ್ಲೇ ಇಟ್ಟುಕೊಂಡರೆ ಕಂಪನಿ ನೀಡುವ ಬೋನಸ್ ಮತ್ತು ಡಿವಿಡೆಂಟ್ ಗಳು ಸಿಗುತ್ತವೆ ಎಂದು ರಾವ್ ಹೇಳುತ್ತಾರೆ.

ಹೂಡಿಕೆ ತಜ್ಞ ಡಾ ಬಾಲಾಜಿ ರಾವ್ ಡಿಜಿ ಮತ್ತೊಮ್ಮೆ ದಿರ್ಘಾವಧಿಗೆ ಶೇರುಗಳಲ್ಲಿ ಹೂಡುವ ಬಗ್ಗೆ ಮಾತಾಡಿದ್ದಾರೆ ಮತ್ತು ಒಬ್ಬ ಉತ್ತಮ ಹೂಡಿಕೆದಾರನಾಗಲು ಏನು ಮಾಡಬೇಕು ಅನ್ನುವುದನ್ನು ಸವಿವರವಾಗಿ ಉದಾಹರಣೆ ಸಮೇತ ತಿಳಿಸಿದ್ದಾರೆ. ನಮ್ಮ ದೇಶದಲ್ಲಿ ಅನೇಕ ಚಾಂಪಿಯನ್ ಹೂಡಿಕೆದಾರರಿದ್ದಾರೆ ಅವರಲ್ಲೊಬ್ಬರು ರಾಕೇಶ್ ಜುಂಜುನ್​​ವಾಲಾ ಎಂದು ಡಾ. ರಾವ್ ಹೇಳುತ್ತಾರೆ. 61-ವರ್ಷ ವಯಸ್ಸಿನ ಜುಂಜುನ್​​ವಾಲಾ ಅವರು 1986 ರಿಂದ ಅಂದರೆ ಮೂರೂವರೆ ದಶಕಗಳಿಂದ ವಿವಿಧ ಕಂಪನಿಗಳ ಶೇರುಗಳಲ್ಲಿ ಹಣ ತೊಡಗಿಸುತ್ತಿದ್ದಾರೆ. ಅವರು ಬಹುಕೋಟಿ ಸಂಪತ್ತಿನ ಒಡೆಯನಾಗಿರುವುದರಿಂದ ಕೋಟಿಗಟ್ಟಲೆ ಹಣ ಹೂಡಿಕೆ ಮಾಡಿ ದುಡ್ಡು ಗಳಿಸಿರಬಹುದೆಂದು ಸರ್ವಥಾ ಭಾವಿಸಬೇಡಿ ಅಂತ ರಾವ್ ಹೇಳುತ್ತಾರೆ.

ಜುಂಜುನ್​​ವಾಲಾ ಹೂಡಿಕೆ ಆರಂಭಿಸಿದ್ದು ಕೇವಲ ರೂ. 5,000 ಗಳಿಂದ ಎಂದು ಡಾ ರಾವ್ ಹೇಳುತ್ತಾರೆ. ಅವರ ಹೂಡಿಕೆ ಮಂತ್ರ ಬಹಳ ಸಿಂಪಲ್. ಶೇರುಗಳನ್ನು ಖರೀದಿಸಿ ಅವುಗಳನ್ನು ದೀರ್ಘಾವಧಿಯವರೆಗೆ ಇಟ್ಟುಕೊಳ್ಳುತ್ತಾರೆ. 2002 ರಲ್ಲಿ ಅವರು ಖರೀದಿಸಿದ ಟೈಟನ್ ಕಂಪನಿಯ ಶೇರುಗಳು ಅವರಲ್ಲಿ ಈಗಲೂ ಇವೆ. ಈ ಕಂಪನಿಯ ಶೇರುಗಳು ಅವರಿಗೆ ಕೋಟ್ಯಾಂತರ ಹಣ ಗಳಿಸಿ ಕೊಟ್ಟಿವೆ.

ಹಾಗೆಯೇ ಕ್ರೈಸಿಲ್, ಲುಪಿನ್ ಫಾರ್ಮಾ, ಎಸ್ಕಾರ್ಟ್ಸ್, ಅರಬಿಂದೋ ಫಾರ್ಮಾ ಮೊದಲಾದ ಕಂಪನಿಗಳಲ್ಲಿ ಜುಂಜುನ್ವಾಲಾ ಅವರು ಹಣ ಹೂಡಿದ್ದಾರೆ. ಅವರು ಶೇರುಗಳನ್ನು ಖರೀದಿ ಮಾಡಿದಾಗಿನ ಬೆಲೆ ಮತ್ತು ಈಗಿನ ಬೆಲೆಯ ನಡುವೆ ಅಜಗಜಾಂತರ ವ್ಯತ್ಯಾಸವಿದೆ ಎಂದು ಡಾ ರಾವ್ ಹೇಳುತ್ತಾರೆ.

ಜುಂಜುನ್​​ವಾಲಾ ಅವರು ಹಣ ಹೂಡಲು ಕಂಪನಿಗಳನ್ನು ಹೇಗೆ ಆರಿಸಿಕೊಳ್ಳುತ್ತಾರೆ, ಯಾವ ಮಾನದಂಡಗಳನ್ನು ಅಳವಡಿಸಿಕೊಳ್ಳುತ್ತಾರೆ ಎನ್ನುವುದನ್ನು ಸಹ ಬಾಲಾಜಿ ರಾವ್ ತಿಳಿಸಿದ್ದಾರೆ. ಜುಂಜುನ್ವಾಲಾ ಕಂಪನಿಗಳ ಬಗ್ಗೆ ಬಹಳಷ್ಟು ಸಂಶೋಧನೆ ನಡೆಸುತ್ತಾರೆ ಮತ್ತು ತಮಗೆ ಸರಿ ಅನಿಸಿದ ನಂತರವೇ ಹಣ ಹೂಡಲು ಮುಂದಾಗುತ್ತಾರೆ.

ಶೇರುಗಳನ್ನು ಖರೀದಿಸಿದ ನಂತರ ಬಹಳ ವರ್ಷಗಳವರೆಗೆ ನಮ್ಮಲ್ಲೇ ಇಟ್ಟುಕೊಂಡರೆ ಕಂಪನಿ ನೀಡುವ ಬೋನಸ್ ಮತ್ತು ಡಿವಿಡೆಂಟ್ ಗಳು ಸಿಗುತ್ತವೆ ಎಂದು ರಾವ್ ಹೇಳುತ್ತಾರೆ.

ನಾವು ಸಹ ಜುಂಜುನ್​​ವಾಲಾ ಅವರ ಹಾಗೆ ದೊಡ್ಡ ಇನ್ವೆಸ್ಟರ್ ಆಗಬೇಕಾದರೆ, ಮೊಟ್ಟಮೊದಲನೆಯದಾಗಿ ಭಯಮುಕ್ತರಾಗಬೇಕು ಅಂತ ಡಾ ರಾವ್ ಹೇಳುತ್ತಾರೆ. ಇಂದು ಹಣ ಹೂಡಿ ಮುಂದಿನ ವರ್ಷ ಅವುಗಳನ್ನು ಮಾರಿಬಿಡುವ ಪ್ರಯತ್ನ ಮಾಡಬಾರದು. ದೀರ್ಘಾವಧಿ ಹೂಡಿಕೆ ಬಗ್ಗೆ ನಮ್ಮ ತಿಳುವಳಿಕೆ ಹೆಚ್ಚಿಸಿಕೊಳ್ಳಬೇಕು ಅಂತ ಅವರು ಹೇಳುತ್ತಾರೆ.

ಇದನ್ನೂ ಓದಿ:    ಬಸ್​ ನಿಲ್ದಾಣದಲ್ಲಿ ಪುನೀತ್​ ಫೋಟೋಗೆ ಮುತ್ತಿಟ್ಟು ಕಂಬನಿ ಸುರಿಸಿದ ಅಜ್ಜಿ; ವಿಡಿಯೋ ವೈರಲ್​

Published on: Nov 14, 2021 09:21 AM