ಬಸ್​ ನಿಲ್ದಾಣದಲ್ಲಿ ಪುನೀತ್​ ಫೋಟೋಗೆ ಮುತ್ತಿಟ್ಟು ಕಂಬನಿ ಸುರಿಸಿದ ಅಜ್ಜಿ; ವಿಡಿಯೋ ವೈರಲ್​

TV9 Digital Desk

| Edited By: ಮದನ್​ ಕುಮಾರ್​

Updated on: Nov 13, 2021 | 8:59 AM

Puneeth Rajkumar: ಅಪ್ಪು ಫೋಟೋ ಮುಂದೆ ಅಜ್ಜಿ ಕಣ್ಣೀರು ಹಾಕುತ್ತಿದ್ದಾರೆ. ಪುನೀತ್ ರಾಜ್​ಕುಮಾರ್​​ ಅವರನ್ನು ತಮ್ಮ ಮನೆ ಮಗ ಎಂದೇ ಭಾವಿಸಿದ್ದ ಇಂಥ ಹೃದಯಗಳಿಗೆ ಆಗಿರುವ ಆಘಾತವನ್ನು ಪದಗಳಲ್ಲಿ ವಿವರಿಸಲು ಆಗದು.

ಪುನೀತ್​ ರಾಜ್​ಕುಮಾರ್​ ಎಂದರೆ ಎಲ್ಲ ವಯಸ್ಸಿನವರಿಗೂ ಇಷ್ಟ. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಅವರನ್ನು ಇಷ್ಟಪಡುತ್ತಿದ್ದಾರೆ. ಪುನೀತ್​ ಹೃದಯಾಘಾತದಿಂದ ಮೃತಪಟ್ಟ ಘಟನೆಯಿಂದ ಕೋಟ್ಯಂತರ ಜನರಿಗೆ ನೋವಾಗಿದೆ. ಅಪ್ಪು ಅಗಲಿಕೆಯಿಂದ ಅನೇಕ ಹಿರಿಯ ಜೀವಗಳು ಮರುಗುತ್ತಿವೆ. ಅಪ್ಪು ಫೋಟೋ ಮುಂದೆ ಅಜ್ಜಿಯರು ಕಣ್ಣೀರು ಹಾಕುತ್ತಿದ್ದಾರೆ. ಕೊಪ್ಪಳ ಜಿಲ್ಲೆಯ ಕುಕನೂರು ಬಸ್​ ನಿಲ್ದಾಣದಲ್ಲಿ ಇದೇ ರೀತಿಯ ಒಂದು ಘಟನೆ ನಡೆದಿದೆ. ಬಸ್​ ಮೇಲೆ ಅಂಟಿಸಿದ್ದ ಜಾಹೀರಾತಿನಲ್ಲಿ ಇರುವ ಪುನೀತ್ ಫೋಟೋಗೆ ವೃದ್ಧೆಯೊಬ್ಬರು ಮುತ್ತಿಟ್ಟು ಕಂಬನಿ ಸುರಿಸಿದ್ದಾರೆ.

ಪುನೀತ್​ ಭಾವಚಿತ್ರಕ್ಕೆ ಅಜ್ಜಿ ಮುತ್ತಿಟ್ಟು ಕಣ್ಣೀರು ಹಾಕುತ್ತಿರುವ ಆ ದೃಶ್ಯ ಸ್ಥಳೀಯರ ಮೊಬೈಲ್​ನಲ್ಲಿ ಸೆರೆ ಆಗಿದೆ. ಅದೀಗ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಪುನೀತ್​ ಅವರನ್ನು ತಮ್ಮ ಮನೆ ಮಗ ಎಂದೇ ಭಾವಿಸಿದ್ದ ಇಂಥ ಹೃದಯಗಳಿಗೆ ಆಗಿರುವ ಆಘಾತವನ್ನು ಪದಗಳಲ್ಲಿ ವಿವರಿಸಲು ಆಗದು. ಇನ್ನು, ಅಪ್ಪು ಸಮಾಧಿಗೆ ಪ್ರತಿ ದಿನ ಸಾವಿರಾರು ಜನರು ಭೇಟಿ ನೀಡುತ್ತಿದ್ದಾರೆ. ಬೆಂಗಳೂರಿನಲ್ಲಿ ನ.16ರಂದು ಚಿತ್ರರಂಗದ ವತಿಯಿಂದ ‘ಪುನೀತ್​ ನಮನ’ ಕಾರ್ಯಕ್ರಮ ನಡೆಯಲಿದೆ.

ಇದನ್ನೂ ಓದಿ:

‘ಪುನೀತ್​ ನಮನ’ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗಿಲ್ಲ ಅವಕಾಶ; ಕಾಲಿವುಡ್​, ಟಾಲಿವುಡ್​ ಸ್ಟಾರ್​ಗಳ ಹಾಜರಿ  

ಪುನೀತ್​ ನಿಧನದ ಬಳಿಕ ಜಿಮ್​ಗೆ ತೆರಳಲು ಯುವಕರ ಹಿಂದೇಟು; ಪೋಷಕರಲ್ಲೂ ಆವರಿಸಿದೆ ಭಯ

Follow us on

Click on your DTH Provider to Add TV9 Kannada