AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಾಮುಂಡಿ ಬೆಟ್ಟದಲ್ಲಿ ಬೈಕ್ ಎದುರು ಚಿರತೆ ಪ್ರತ್ಯಕ್ಷವಾಯಿತು, ಧೃತಿಗೆಡದ ಸವಾರರು ಅದನ್ನು ಸೆರೆಹಿಡಿದರು ತಮ್ಮ ಕೆಮೆರಾನಲ್ಲಿ!

ಚಾಮುಂಡಿ ಬೆಟ್ಟದಲ್ಲಿ ಬೈಕ್ ಎದುರು ಚಿರತೆ ಪ್ರತ್ಯಕ್ಷವಾಯಿತು, ಧೃತಿಗೆಡದ ಸವಾರರು ಅದನ್ನು ಸೆರೆಹಿಡಿದರು ತಮ್ಮ ಕೆಮೆರಾನಲ್ಲಿ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Nov 12, 2021 | 9:40 PM

Share

ಗಮನಿಸಬೇಕಾದ ಸಂಗತಿಯೇನೆಂದರೆ ಚಿರತೆಯನ್ನು ಕಂಡ ಬೈಕ್ ಸವಾರರು ಪರಾರಿಯಾಗುವ ಪ್ರಯತ್ನ ಮಾಡಿಲ್ಲ. ಬದಲಿಗೆ ಅದು ಮರೆಯಾಗುವವರೆಗೆ ಶೂಟ್ ಮಾಡಿದ್ದಾರೆ. ಅವರ ಧೈರ್ಯವನ್ನು ಮೆಚ್ಚಬೇಕು

ಕೆಲ ವಾರಗಳ ಹಿಂದೆ ಭಾರತದ ಖ್ಯಾತ ಉದ್ಯಮಿ ಆನಂದ ಮಹಿಂದ್ರಾ ಅವರು ಕರಡಿಗಳ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದು ನಿಮಗೆ ನೆನಪಿದೆಯಾ? ಬೈಕ್ನಲ್ಲಿ ಹೋಗುತ್ತಿದ್ದ ಇಬ್ಬರು ಆ ವಿಡಿಯೋವನ್ನು ಶೂಟ್ ಮಾಡಿದ್ದರು. ಜಾಲಿಯಾಗಿ ತಮ್ಮ ರೈಡನ್ನು ಶೂಟ್ ಮಾಡುತ್ತಿದ್ದ ಆವರು ಕರಡಿಗಳನ್ನು ಕಂಡಕೂಡಲೇ ಜಂಘಾಬಲವೇ ಉಡುಗಿ ಹೋದಂತಾಗಿ ಬೈಕನ್ನು ಅದೇ ವೇಗದಲ್ಲಿ ಯು-ಟರ್ನ್ ಮಾಡಿಕೊಂಡು ವಾಪಸ್ಸು ಹೋಗಿದ್ದರು! ಸದಾ ಇಂಥ ಆಸಕ್ತಿದಾಯಕ ಮತ್ತು ಕುತೂಹಲಭರಿತ ಸುದ್ದಿ ಮತ್ತು ವಿಡಿಯೋಗಳ ಅನ್ವೇಷಣೆಯಲ್ಲಿರುವ ಆನಂದ ಮಹಿಂದ್ರಾ ಅವರು ಅದೆಲ್ಲಿಂದಲೋ ಸದರಿ ವಿಡಿಯೋವನ್ನು ಹೆಕ್ಕಿ ತಮ್ಮ ಟ್ವಿಟರ್ ಹ್ಯಾಂಡಲ್ ನಲ್ಲಿ ಪೋಸ್ಟ್ ಮಾಡಿದ್ದರು.

ನಮಗೂ ಅಂಥದೊಂದು ವಿಡಿಯೋ ಸಿಕ್ಕಿದೆ ಮಾರಾಯ್ರೇ. ಇದು ಶೂಟ್ ಆಗಿರೋದು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ. ಆದರೆ ಇಲ್ಲಿ ಬೈಕ್ ಸವಾರರಿಗೆ ಎದುರಾಗಿದ್ದು ಕರಡಿಗಳಲ್ಲ, ಚಿರತೆ! ಈ ವಿಡಿಯೋ ಸಹ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಗಮನಿಸಬೇಕಾದ ಸಂಗತಿಯೇನೆಂದರೆ ಚಿರತೆಯನ್ನು ಕಂಡ ಬೈಕ್ ಸವಾರರು ಪರಾರಿಯಾಗುವ ಪ್ರಯತ್ನ ಮಾಡಿಲ್ಲ. ಬದಲಿಗೆ ಅದು ಮರೆಯಾಗುವವರೆಗೆ ಶೂಟ್ ಮಾಡಿದ್ದಾರೆ. ಅವರ ಧೈರ್ಯವನ್ನು ಮೆಚ್ಚಬೇಕು ಮಾರಾಯ್ರೇ.

ಆನಂದ ಮಹಿಂದ್ರಾ ಅವರಿಗೆ ಈ ವಿಡಿಯೋ ಸಿಕ್ಕರೆ ತಮ್ಮ ಸೋಶಿಯಲ್ ಮಿಡಿಯಾ ಹ್ಯಾಂಡಲ್ಗಳಲ್ಲಿ ಖಂಡಿತವಾಗಿಯೂ ಪೋಸ್ಟ್ ಮಾಡುತ್ತಾರೆ. ಅಂದಹಾಗೆ, ಚಾಮುಂಡಿ ಬೆಟ್ಟದಲ್ಲಿ ಇತ್ತೀಚಿನ ದಿನಗಳಲ್ಲಿ ಚಿರತೆಗಳು ಪ್ರತ್ಯಕ್ಷ ಆಗುವುದು ಸಾಮಾನ್ಯವಾಗಿ ಬಿಟ್ಟಿದೆ.

ಈ ಮೊದಲು ನಾವು ಚರ್ಚಿಸಿದ ಹಾಗೆ, ನಗರ ಪ್ರದೇಶಗಳು ಬೆಳೆದು ಕ್ರಮೇಣವಾಗಿ ಕಾಡುಗಳನ್ನು ಅತಿಕ್ರಮಿಸುತ್ತಿರುವುದರಿಂದ ಕಾಡುಮೃಗಗಳು ನಗರಗಳತ್ತ ಬರುತ್ತಿವೆ.

ಇದನ್ನೂ ಓದಿ:   ರಾಮನಗರ: ಪ್ರಕರಣ ಸಂಬಂಧ ನ್ಯಾಯ ಕೇಳಲು ತೆರಳಿದ್ದ ವ್ಯಕ್ತಿಗೆ ಸಿಪಿಐ ಆವಾಜ್; ವಿಡಿಯೋ ವೈರಲ್