ಸ್ಟಾರ್​ವಾರ್​​ಗೆ ರೆಡಿ ಆಯ್ತು ವೇದಿಕೆ; ಜನವರಿಯಲ್ಲಿ ರಿಲೀಸ್​ ಆಗ್ತಿದೆ ಸಾಲುಸಾಲು ಸಿನಿಮಾ

‘ರಾಧೆ ಶ್ಯಾಮ್​’ ಚಿತ್ರ ಜನವರಿ 14ರಂದು ರಿಲೀಸ್​ ಆಗುತ್ತಿದೆ. ಈ ಮಧ್ಯೆ ಪವನ್​ ಕಲ್ಯಾಣ್​ ಅಭಿನಯದ ‘ಭಿಮ್ಲಾ ನಾಯಕ್​’ ಕೂಡ ತೆರೆಗೆ ಬರುತ್ತಿದೆ. ಈ ಕಾರಣಕ್ಕೆ ಟಾಲಿವುಡ್​​ ಬಾಕ್ಸ್​ ಆಫೀಸ್​ನಲ್ಲಿ ಸ್ಟಾರ್​ ವಾರ್​ ಏರ್ಪಡುವ ಸಾಧ್ಯತೆ ಇದೆ.

TV9kannada Web Team

| Edited By: Rajesh Duggumane

Dec 12, 2021 | 9:04 PM

ಈ ಬಾರಿಯ ಸಂಕ್ರಾಂತಿ ಟಾಲಿವುಡ್​​ ಪಾಲಿಗೆ ವಿಶೇಷವಾಗಲಿದೆ. ಸಾಲುಸಾಲು ಸಿನಿಮಾಗಳು ರಿಲೀಸ್​ ಆಗುತ್ತಿದ್ದು, ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಹಲವು ಸ್ಟಾರ್ ಸಿನಿಮಾಗಳು ಒಟ್ಟಿಗೆ ತೆರೆಗೆ ಬರುತ್ತಿರುವುದರಿಂದ ಚಿತ್ರಮಂದಿರಗಳ ಕೊರತೆ ಎದುರಾದರೂ ಅಚ್ಚರಿ ಏನಿಲ್ಲ. ಡಿಸೆಂಬರ್​ ಅಂತ್ಯದಿಂದಲೇ ಬಿಗ್​ ಬಜೆಟ್​ ಸಿನಿಮಾಗಳು ರಿಲೀಸ್​ ಆಗೋಕೆ ಪ್ರಾರಂಭವಾಗಲಿದೆ. ಡಿಸೆಂಬರ್​ 17ಕ್ಕೆ ‘ಪುಷ್ಪ’ ಸಿನಿಮಾ ತೆರೆಗೆ ಬರಲಿದೆ. ಜನವರಿ 7ಕ್ಕೆ ‘ಆರ್​ಆರ್​ಆರ್​’ ತೆರೆಗೆ ಬರುತ್ತಿದೆ. ‘ರಾಧೆ ಶ್ಯಾಮ್​’ ಚಿತ್ರ ಜನವರಿ 14ರಂದು ರಿಲೀಸ್​ ಆಗುತ್ತಿದೆ. ಈ ಮಧ್ಯೆ ಪವನ್​ ಕಲ್ಯಾಣ್​ ಅಭಿನಯದ ‘ಭೀಮ್ಲಾ ನಾಯಕ್​’ ಕೂಡ ತೆರೆಗೆ ಬರುತ್ತಿದೆ. ಈ ಕಾರಣಕ್ಕೆ ಟಾಲಿವುಡ್​​ ಬಾಕ್ಸ್​ ಆಫೀಸ್​ನಲ್ಲಿ ಸ್ಟಾರ್​ ವಾರ್​ ಏರ್ಪಡುವ ಸಾಧ್ಯತೆ ಇದೆ. ಸಾಲುಸಾಲು ಸಿನಿಮಾ ರಿಲೀಸ್​ ಆಗುತ್ತಿರುವುದಕ್ಕೆ ಸಿನಿಪ್ರಿಯರಿಗೆ ಈ ವಿಚಾರ ಸಖತ್​ ಖುಷಿ ನೀಡಿದೆ.

ಇದನ್ನೂ ಓದಿ:ಕೆಲವೇ ಗಂಟೆಗಳಲ್ಲಿ 8 ಮಿಲಿಯನ್​ ವ್ಯೂಸ್​​ ಪಡೆದ ಸಮಂತಾ ಸಾಂಗ್​; ಇನ್ನಷ್ಟು ಹೆಚ್ಚಿತು ‘ಪುಷ್ಪ’ ಹವಾ​ 

‘ಪುಷ್ಪ’ ಸಿನಿಮಾದ ಐಟಂ ಸಾಂಗ್​ ಹಾಡಿದ್ದು ‘ಮಂಗ್ಲಿ’ ಸಹೋದರಿ; ಹಿಟ್​ ಆಯ್ತು ಹಾಡು

 

Follow us on

Click on your DTH Provider to Add TV9 Kannada