AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಲವೇ ಗಂಟೆಗಳಲ್ಲಿ 8 ಮಿಲಿಯನ್​ ವ್ಯೂಸ್​​ ಪಡೆದ ಸಮಂತಾ ಸಾಂಗ್​; ಇನ್ನಷ್ಟು ಹೆಚ್ಚಿತು ‘ಪುಷ್ಪ’ ಹವಾ​

Oo Antava Oo Oo Antava: ‘ಪುಷ್ಪ’ ತಂಡದಿಂದ ಸದ್ಯಕ್ಕೆ ರಿಲೀಸ್​ ಆಗಿರುವುದು ಲಿರಿಕಲ್​ ವಿಡಿಯೋ ಮಾತ್ರ. ಬರೀ ಇಷ್ಟರಲ್ಲೇ ಸಮಂತಾ ಅವರು ಪಡ್ಡೆ ಹುಡುಗರ ಎದೆಬಡಿತ ಹೆಚ್ಚಿಸಿದ್ದಾರೆ. ವಿಡಿಯೋ ಸಾಂಗ್​ ಬಿಡುಗಡೆ ಆಗಲಿ ಎಂದು ಎಲ್ಲರೂ ಕಾಯುತ್ತಿದ್ದಾರೆ.

ಕೆಲವೇ ಗಂಟೆಗಳಲ್ಲಿ 8 ಮಿಲಿಯನ್​ ವ್ಯೂಸ್​​ ಪಡೆದ ಸಮಂತಾ ಸಾಂಗ್​; ಇನ್ನಷ್ಟು ಹೆಚ್ಚಿತು ‘ಪುಷ್ಪ’ ಹವಾ​
ಸಮಂತಾ
Follow us
TV9 Web
| Updated By: ಡಾ. ಭಾಸ್ಕರ ಹೆಗಡೆ

Updated on:Dec 11, 2021 | 2:44 PM

ನಾಗ ಚೈತನ್ಯ ಜೊತೆಗಿನ ದಾಂಪತ್ಯಕ್ಕೆ ಅಂತ್ಯ ಹಾಡಿ, ವಿಚ್ಛೇದನ ಪಡೆದುಕೊಂಡ ಬಳಿಕ ನಟಿ ಸಮಂತಾ (Samantha) ಅವರ ಬದುಕಿನಲ್ಲಿ ಒಳ್ಳೆಯ ಘಟನೆಗಳೇ ನಡೆಯುತ್ತಿವೆ. ಅವರಿಗೆ ಮೊದಲಿಗಿಂತಲೂ ಒಳ್ಳೊಳ್ಳೆಯ ಆಫರ್​ಗಳು ಬರುತ್ತಿವೆ. ಮಾಡಿದ ಕೆಲಸಗಳು ಭರ್ಜರಿ ಫಲ ಕೊಡುತ್ತಿವೆ. ಅದಕ್ಕೆ ಲೇಟೆಸ್ಟ್​ ಉದಾಹರಣೆ ಎಂದರೆ ‘ಪುಷ್ಪ’ (Pushpa Movie) ಸಿನಿಮಾದಲ್ಲಿ ಅವರು ಡ್ಯಾನ್ಸ್​ ಮಾಡಿರುವ ಹಾಡು ಸೂಪರ್​ ಹಿಟ್​ ಆಗಿರುವುದು. ಹೌದು, ಅಲ್ಲು ಅರ್ಜುನ್​ (Allu Arjun) ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ಪುಷ್ಪ’ ಚಿತ್ರದ ಒಂದು ಐಟಂ ಸಾಂಗ್​ನಲ್ಲಿ ಸಮಂತಾ ಹೆಜ್ಜೆ ಹಾಕಿದ್ದಾರೆ. ಆ ಹಾಡು ಡಿ.10ರಂದು ಬಿಡುಗಡೆಯಾಗಿ ಧೂಳೆಬ್ಬಿಸುತ್ತಿದೆ. ರಿಲೀಸ್​ ಆಗಿ ಕೆಲವೇ ಗಂಟೆಗಳು ಕಳೆಯುವುದರೊಳಗೆ 8 ಮಿಲಿಯನ್​ (80 ಲಕ್ಷ) ಬಾರಿ ವೀಕ್ಷಣೆ ಕಂಡಿರುವುದು ಈ ಗೀತೆಯ ಹೆಚ್ಚುಗಾರಿಕೆ. ಇದರಿಂದಾಗಿ ‘ಪುಷ್ಪ’ ಸಿನಿಮಾದ ಹವಾ ಹೆಚ್ಚಾಗಿದೆ. ಚಿತ್ರದ ಮೇಲಿದ್ದ ನಿರೀಕ್ಷೆ ದುಪ್ಪಟ್ಟಾಗಿದೆ.

ಈ ಹಾಡಿಗೆ ಖ್ಯಾತ ಸಂಗೀತ ನಿರ್ದೇಶಕ ದೇವಿ ಶ್ರೀಪ್ರಸಾದ್​ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಸದ್ಯಕ್ಕೆ ರಿಲೀಸ್​ ಆಗಿರುವುದು ಲಿರಿಕಲ್​ ವಿಡಿಯೋ ಮಾತ್ರ. ಪಡ್ಡೆ ಹುಡುಗರಿಗೆ ನಶೆ ಏರಿಸುವಂತಿರುವ ಈ ಹಾಡಿನಲ್ಲಿ ಸಮಂತಾ ಅವರು ಸಖತ್​ ಹಾಟ್​ ಆಗಿ ಕಾಣಿಸಿಕೊಂಡಿದ್ದಾರೆ. ವಿಡಿಯೋ ಸಾಂಗ್​ ಬಿಡುಗಡೆ ಆಗಲಿ ಎಂದು ಎಲ್ಲರೂ ಕಾಯುತ್ತಿದ್ದಾರೆ. ಸದ್ಯಕ್ಕೆ ಲಿರಿಕಲ್​ ವಿಡಿಯೋದ ನಾಗಾಲೋಟ ಮುಂದುವರಿದಿದೆ.

ಸಮಂತಾ ಅವರಿಗೆ ಈಗ ಭರ್ಜರಿ ಡಿಮ್ಯಾಂಡ್​ ಇದೆ. ಅದೇ ರೀತಿ ಅವರು ಸಂಭಾವನೆ ಕೂಡ ಹೆಚ್ಚಿಸಿಕೊಂಡಿದ್ದಾರೆ. ಮೂಲಗಳ ಪ್ರಕಾರ ‘ಪುಷ್ಪ’ ಸಿನಿಮಾದ ಈ ಹಾಡಿನಲ್ಲಿ ನರ್ತಿಸಲು ಸಮಂತಾ ಅವರು ಬರೋಬ್ಬರಿ 1.5 ಕೋಟಿ ರೂಪಾಯಿ ಪಡೆದಿದ್ದಾರೆ ಎಂಬ ಮಾಹಿತಿ ಹರಡಿದೆ. ಆ ಬಗ್ಗೆ ಚಿತ್ರತಂಡದವರಾಗಲಿ, ಸಮಂತಾ ಆಗಲಿ ಈವರೆಗೆ ಎಲ್ಲಿಯೂ ಬಾಯಿ ಬಿಟ್ಟಿಲ್ಲ.

ಇದಲ್ಲದೇ ಸಮಂತಾಗೆ ಇಂಗ್ಲಿಷ್​ ಸಿನಿಮಾಗಳಿಂದಲೂ ಆಫರ್​ ಬಂದಿದೆ. ಇತ್ತೀಚೆಗೆ ಅವರು ‘ಅರೇಂಜ್​ಮೆಂಟ್ಸ್​ ಆಫ್​ ಲವ್​’ ಸಿನಿಮಾಗೆ ಆಯ್ಕೆಯಾದ ಬಗ್ಗೆ ಸುದ್ದಿ ಹೊರಬಿದ್ದಿತ್ತು. ಆ ಚಿತ್ರಕ್ಕೆ ಖ್ಯಾತ ನಿರ್ದೇಶಕ ಫಿಲಪ್​ ಜಾನ್​ ಅವರು ಆ್ಯಕ್ಷನ್​-ಕಟ್​ ಹೇಳಲಿದ್ದಾರೆ. ಈ ಸಿನಿಮಾದಲ್ಲಿ ಸಮಂತಾ ಅವರು ದ್ವಿಲಿಂಗಿ ಪಾತ್ರ ಮಾಡಲಿದ್ದಾರೆ. ಅಂದರೆ, ಗಂಡು ಮತ್ತು ಹೆಣ್ಣು ಇಬ್ಬರಲ್ಲೂ ಲೈಂಗಿಕ ಆಸಕ್ತಿ ಹೊಂದಿರುವ ಮಹಿಳೆಯಾಗಿ ಅವರು ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇದನ್ನೂ ಓದಿ:

Filmfare OTT Awards 2021: ಫಿಲ್ಮ್​ಫೇರ್​ ಓಟಿಟಿ ಅವಾರ್ಡ್ಸ್​: ಪ್ರತಿಷ್ಠಿತ ಪ್ರಶಸ್ತಿ ಬಾಚಿಕೊಂಡು ಮಿಂಚಿದ ಸಮಂತಾ, ಪ್ರತೀಕ್​ ಗಾಂಧಿ

ಸಮಂತಾಗೆ ಕಂಗನಾ ಮೆಚ್ಚುಗೆ ಮಾತು; ಎರಡೇ ಪದಗಳಲ್ಲಿ ಪ್ರಶಂಸೆ ವ್ಯಕ್ತಪಡಿಸಿದ ಕಾಂಟ್ರವರ್ಸಿ ನಟಿ

Published On - 9:01 am, Sat, 11 December 21

ಸ್ಥಳೀಯ ಪೋಲೀಸರ ಬಗ್ಗೆ ಕಳ್ಳರಿಗೆ ಕಿಂಚಿತ್ತೂ ಭಯವಿದ್ದಂತಿಲ್ಲ!
ಸ್ಥಳೀಯ ಪೋಲೀಸರ ಬಗ್ಗೆ ಕಳ್ಳರಿಗೆ ಕಿಂಚಿತ್ತೂ ಭಯವಿದ್ದಂತಿಲ್ಲ!
ತೆಲಂಗಾಣ: ರೈಲ್ವೆ ಹಳಿ ಮೇಲೆ ಕಾರು ಚಲಾಯಿಸಿದ ಯುವತಿ
ತೆಲಂಗಾಣ: ರೈಲ್ವೆ ಹಳಿ ಮೇಲೆ ಕಾರು ಚಲಾಯಿಸಿದ ಯುವತಿ
ಬಿಜೆಪಿ ಪ್ರಚಾರಕ್ಕಾಗಿ ಎಮರ್ಜೆನ್ಸಿ ವಿಚಾರ ಬಳಸಿಕೊಳ್ಳುತ್ತಿದೆ: ಶಿವಕುಮಾರ್
ಬಿಜೆಪಿ ಪ್ರಚಾರಕ್ಕಾಗಿ ಎಮರ್ಜೆನ್ಸಿ ವಿಚಾರ ಬಳಸಿಕೊಳ್ಳುತ್ತಿದೆ: ಶಿವಕುಮಾರ್
ಕೇವಲ ಬೆಳಗಾವಿ ಮತ್ತು ಖಾನಾಪುರ ತಾಲೂಕುಗಳಲ್ಲಿ ಮಳೆಯಾಗುತ್ತಿದೆ: ಜಾರಕಿಹೊಳಿ
ಕೇವಲ ಬೆಳಗಾವಿ ಮತ್ತು ಖಾನಾಪುರ ತಾಲೂಕುಗಳಲ್ಲಿ ಮಳೆಯಾಗುತ್ತಿದೆ: ಜಾರಕಿಹೊಳಿ
ದೈವ ನುಡಿದಂತೆ ಮನೆಗೆ ಬಂದ ಅಣ್ಣ: ತಮ್ಮ ಹೇಳಿದ್ದಿಷ್ಟು
ದೈವ ನುಡಿದಂತೆ ಮನೆಗೆ ಬಂದ ಅಣ್ಣ: ತಮ್ಮ ಹೇಳಿದ್ದಿಷ್ಟು
ಚಿಕ್ಕಮಗಳೂರು: ಹಾಲಿನ ಟ್ಯಾಂಕರ್ ಪಲ್ಟಿ, ಹರಿಯಿತು ಹಾಲಿನ ಹೊಳೆ
ಚಿಕ್ಕಮಗಳೂರು: ಹಾಲಿನ ಟ್ಯಾಂಕರ್ ಪಲ್ಟಿ, ಹರಿಯಿತು ಹಾಲಿನ ಹೊಳೆ
ಮಗನಿಗಾಗಿ ಶಬರಿಯಂತೆ ಕಾಯ್ದ ತಾಯಿ, ದೈವದ ಮೊರೆ ಹೊಕ್ಕಿದ್ದ ಕುಟುಂಬ
ಮಗನಿಗಾಗಿ ಶಬರಿಯಂತೆ ಕಾಯ್ದ ತಾಯಿ, ದೈವದ ಮೊರೆ ಹೊಕ್ಕಿದ್ದ ಕುಟುಂಬ
ರಮೋಲಾಗೆ ಆಗಸದಲ್ಲಿ ಪ್ರಪೋಸ್ ಮಾಡಿ ಹಣೆಗೆ ಮುತ್ತಿಟ್ಟ ರಕ್ಷಕ್ ಬುಲೆಟ್
ರಮೋಲಾಗೆ ಆಗಸದಲ್ಲಿ ಪ್ರಪೋಸ್ ಮಾಡಿ ಹಣೆಗೆ ಮುತ್ತಿಟ್ಟ ರಕ್ಷಕ್ ಬುಲೆಟ್
ಸೇತುವೆಗಳ ಎತ್ತರ ಹೆಚ್ಚಿಸಿ ಮರುನಿರ್ಮಾಣ ಮಾಡುವ ಅವಶ್ಯಕತೆ ಇದೆ
ಸೇತುವೆಗಳ ಎತ್ತರ ಹೆಚ್ಚಿಸಿ ಮರುನಿರ್ಮಾಣ ಮಾಡುವ ಅವಶ್ಯಕತೆ ಇದೆ
ಚೀನಾಗೆ ಹೋಗಿ ಭಯೋತ್ಪಾದನೆ ವಿರುದ್ಧ ಗುಡುಗಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಚೀನಾಗೆ ಹೋಗಿ ಭಯೋತ್ಪಾದನೆ ವಿರುದ್ಧ ಗುಡುಗಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್