‘ನನ್ನ ಉಸಿರು ಇರೋವರೆಗೆ ಪುನೀತ್​ ಫೋನ್​​ ನಂಬರ್​ ಡಿಲೀಟ್​ ಮಾಡಲ್ಲ’: ಜೋಗಿ ಪ್ರೇಮ್​ ಭಾವುಕ ಮಾತು

Puneeth Rajkumar: ಪುನೀತ್​ ರಾಜ್​ಕುಮಾರ್ ಅವರನ್ನು ಕನ್ನಡ ಚಿತ್ರರಂಗ ಸದಾ ಮಿಸ್​ ಮಾಡಿಕೊಳ್ಳುತ್ತದೆ. ಎಲ್ಲ ಸಿನಿಮಾ ಕಾರ್ಯಕ್ರಮಗಳಲ್ಲೂ ಅವರನ್ನು ನೆನಪು ಮಾಡಿಕೊಳ್ಳಲಾಗುತ್ತಿದೆ.

TV9kannada Web Team

| Edited By: Madan Kumar

Dec 12, 2021 | 9:57 AM

ನಿರ್ದೇಶಕ ಜೋಗಿ ಪ್ರೇಮ್​ (Jogi Prem) ಅವರು ಆ್ಯಕ್ಷನ್​-ಕಟ್​ ಹೇಳಿರುವ ‘ಏಕ್​ ಲವ್​ ಯಾ’ ಸಿನಿಮಾ ಬಿಡುಗಡೆಗೆ ಹತ್ತಿರವಾಗುತ್ತಿದೆ. ಹೊಸ ನಟ ರಾಣಾ ಅವರು ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ. ‘ಏಕ್​ ಲವ್​ ಯಾ’ (Ek Love Ya) ಹಾಡುಗಳು ರಿಲೀಸ್​ ಆಗಿ ಧೂಳೆಬ್ಬಿಸುತ್ತಿವೆ. ಹುಬ್ಬಳಿಯಲ್ಲಿ ಇನ್ನೊಂದು ಸಾಂಗ್​ ಬಿಡುಗಡೆ ಮಾಡಲಾಗಿದೆ. ಈ ಸಮಾರಂಭದಲ್ಲಿ ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರನ್ನು ಪ್ರೇಮ್​ ನೆನಪಿಸಿಕೊಂಡರು. ‘ಈ ಸಿನಿಮಾದ ಮೊದಲು ಹಾಡು ಬಿಡುಗಡೆ ಆದಾಗ ಪುನೀತ್​ ಫೋನ್​ ಮಾಡಿ ಮೆಚ್ಚುಗೆ ಸೂಚಿಸಿದ್ದರು. 50 ಬಾರಿ ಸಾಂಗ್​ ಕೇಳಿದೆ ಅಂತ ಹೇಳಿದ್ರು. ಅವರನ್ನು ನಾನು ತುಂಬ ಮಿಸ್​ ಮಾಡಿಕೊಳ್ಳುತ್ತೇನೆ. ನನ್ನ ಪ್ರತಿ ಸಿನಿಮಾದ ಹಾಡು ರಿಲೀಸ್​ ಆದಾಗಲೂ ಅವರು ಫೋನ್​ ಮಾಡುತ್ತಿದ್ದರು. ಅವರ ನಂಬರ್​ ನಮ್ಮ ಫೋನ್​ನಲ್ಲಿ ಹಾಗೆಯೇ ಇದೆ. ನನ್ನ ಉಸಿರು ಇರುವವರೆಗೂ ಅದನ್ನು ಡಿಲೀಟ್​ ಮಾಡಲ್ಲ’ ಎಂದು ಪ್ರೇಮ್​ ಹೇಳಿದರು.

ಇದನ್ನೂ ಓದಿ:

ಮ್ಯೂಸಿಯಂ ಆಗಲಿದೆ ಡಾ. ರಾಜ್​ ಆಡಿ ಬೆಳೆದ ಮನೆ; ಪುನೀತ್​ ಆಸೆ ಈಡೇರಿಸಲು ಕುಟುಂಬದ ನಿರ್ಧಾರ

ಪುಷ್ಪ, ಆರ್​ಆರ್​ಆರ್​ ಮೀರಿಸಿ ಟ್ರೆಂಡ್​ ಆದ ‘ಗಂಧದ ಗುಡಿ’; ಪುನೀತ್​ ಡಾಕ್ಯುಮೆಂಟರಿಗೆ ಬಹುಪರಾಕ್​

Follow us on

Click on your DTH Provider to Add TV9 Kannada