ಆಯುಷ್ಮಾನ್ ಭವ ಚಿತ್ರದ ಹಣದ ವಿಚಾರಕ್ಕೆ ಕಿರಿಕ್, ದ್ವಾರಕೀಶ್ ನಿವಾಸಕ್ಕೆ ನುಗ್ಗಿ ವಿತರಕರಿಂದ ಗಲಾಟೆ
ಬೆಂಗಳೂರು: ಹಿರಿಯ ನಟ, ನಿರ್ಮಾಪಕ ಮತ್ತು ನಿರ್ದೇಶಕ ದ್ವಾರಕೀಶ್ ನಿವಾಸಕ್ಕೆ ನಿರ್ಮಾಪಕರಾದ ಜಯಣ್ಣ, ರಮೇಶ್ ನುಗ್ಗಿ ಗಲಾಟೆ ಮಾಡಿರುವ ಘಟನೆ ಬೆಂಗಳೂರಿನ ಹೆಚ್.ಎಸ್.ಆರ್ ಲೇಔಟ್ನ ದ್ವಾರಕೀಶ್ ನಿವಾಸದಲ್ಲಿ ನಡೆದಿದೆ. ದ್ವಾರಕೀಶ್ಗೆ ಧಮ್ಕಿ ಹಾಕಿರುವ ಆರೋಪ ಕೇಳಿ ಬಂದಿದೆ. ಈ ಪ್ರಕರಣ ಸಂಬಂಧ ನಿರ್ಮಾಪಕರ ವಿರುದ್ಧ ಎಚ್.ಎಸ್.ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದ್ವಾರಕೀಶ್ ಆಯುಷ್ಮಾನ್ ಭವ ಚಿತ್ರ ನಿರ್ಮಾಣಕ್ಕೆ ನಿರ್ಮಾಪಕ ಜಯಣ್ಣ, ಭೋಗೇಂದ್ರ, ರಮೇಶ್ ಮೂರು ನಿರ್ಮಾಪಕರಿಂದ 12 ಕೋಟಿಗೂ ಹೆಚ್ಚು ಹಣ ಪಡೆದಿದ್ದರು. ಆದರೆ […]
ಬೆಂಗಳೂರು: ಹಿರಿಯ ನಟ, ನಿರ್ಮಾಪಕ ಮತ್ತು ನಿರ್ದೇಶಕ ದ್ವಾರಕೀಶ್ ನಿವಾಸಕ್ಕೆ ನಿರ್ಮಾಪಕರಾದ ಜಯಣ್ಣ, ರಮೇಶ್ ನುಗ್ಗಿ ಗಲಾಟೆ ಮಾಡಿರುವ ಘಟನೆ ಬೆಂಗಳೂರಿನ ಹೆಚ್.ಎಸ್.ಆರ್ ಲೇಔಟ್ನ ದ್ವಾರಕೀಶ್ ನಿವಾಸದಲ್ಲಿ ನಡೆದಿದೆ. ದ್ವಾರಕೀಶ್ಗೆ ಧಮ್ಕಿ ಹಾಕಿರುವ ಆರೋಪ ಕೇಳಿ ಬಂದಿದೆ. ಈ ಪ್ರಕರಣ ಸಂಬಂಧ ನಿರ್ಮಾಪಕರ ವಿರುದ್ಧ ಎಚ್.ಎಸ್.ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದ್ವಾರಕೀಶ್ ಆಯುಷ್ಮಾನ್ ಭವ ಚಿತ್ರ ನಿರ್ಮಾಣಕ್ಕೆ ನಿರ್ಮಾಪಕ ಜಯಣ್ಣ, ಭೋಗೇಂದ್ರ, ರಮೇಶ್ ಮೂರು ನಿರ್ಮಾಪಕರಿಂದ 12 ಕೋಟಿಗೂ ಹೆಚ್ಚು ಹಣ ಪಡೆದಿದ್ದರು. ಆದರೆ ಚಿತ್ರ ಬಿಡುಗಡೆಯಾಗಿ ನಿರೀಕ್ಷಿತ ಯಶಸ್ಸು ಕಂಡಿರಲಿಲ್ಲ. ಚಿತ್ರ ನಷ್ಟವುಂಟಾಗಿ ಕೇವಲ ಎರಡು ಕೋಟಿ ಲಾಭ ಬಂದಿತ್ತು. ಹೂಡಿಕೆ ಮಾಡಿದ ಹಣ ವಾಪಸ್ ಬಂದಿರಲಿಲ್ಲ. ಒಪ್ಪಂದದ ಪ್ರಕಾರ ನಿರ್ಮಾಪಕರಿಗೆ ದ್ವಾರಕೀಶ್ ಹಣ ನೀಡಬೇಕಿತ್ತು. ಆದ್ರೆ ಲಾಭಬಾರದ ಕಾರಣ ಹಣ ನೀಡಲಾಗಿಲ್ಲ.
ಹೀಗಾಗಿ ಹಣ ವಾಪಸ್ ಕೊಡುವಂತೆ ದ್ವಾರಕೀಶ್ ಮನೆ ಬಳಿ ನಿರ್ಮಾಪಕರು ತೆರಳಿದ್ದಾರೆ. ಈ ವೇಳೆ ಎರಡು ವರ್ಷ ಬಿಟ್ಟು ಹಣ ವಾಪಸ್ ಕೊಡುವುದಾಗಿ ದ್ವಾರಕೀಶ್ ಹೇಳಿದ್ದಾರೆ. ಹೀಗಾಗಿ ಗರಂ ಆಗಿದ್ದ ನಿರ್ಮಾಪಕರು ದ್ವಾರಕೀಶ್ಗೆ ತರಾಟೆಗೆ ತೆಗೆದುಕೊಂಡಿದ್ರು. ಮಾತಿನ ಚಕಮಕಿಯಾಗಿದೆ. ನಿರ್ಮಾಪಕರು ಬಂದು ಧಮ್ಕಿ ಹಾಕಿದ್ದಾರೆ ಎಂದು ಹೆಚ್.ಎಸ್.ಆರ್ ಲೇಔಟ್ ಠಾಣೆಯಲ್ಲಿ ದ್ವಾರಕೀಶ್ ಮಗ ಯೋಗೀಶ್ ದೂರು ನೀಡಿದ್ದಾರೆ. ನಿರ್ಮಾಪಕರಿಗೆ ಫೀಲಂ ಚೇಂಬರ್, ಕೋರ್ಟ್ ಇರುವಾಗ ಮನೆ ಬಳಿ ಬಂದಿದ್ದು ಸರಿಯಲ್ಲ ಎಂದು ಆರೋಪಿಸಿದ್ದಾರೆ.
ಗಲಾಟೆಯಿಂದ ನಮ್ಮ ತಂದೆಗೆ ಬೇಸರವಾಗಿದೆ: ಹಣ ಕೇಳಲು ಜಯಣ್ಣಗೆ ಹಕ್ಕಿದೆ, ರಮೇಶ್ ಏಕೆ ಬಂದದ್ದು? ರಮೇಶ್ ಬಂದು ಗಲಾಟೆ ಮಾಡಿದ್ದು ಯಾಕೆ? ಗಲಾಟೆಯಿಂದ ನಮ್ಮ ತಂದೆ ಬೇಸರಗೊಂಡಿದ್ದಾರೆ. ನಮ್ಮ ತಂದೆ ರಮೇಶ್ ವಿರುದ್ಧ ದೂರು ನೀಡಿದ್ದಾರೆ ಎಂದು ಟಿವಿ9ಗೆ ಹಿರಿಯ ನಟ ದ್ವಾರಕೀಶ್ ಪುತ್ರ ಯೋಗೀಶ್ ಪ್ರತಿಕ್ರಿಯಿಸಿದ್ದಾರೆ.
Published On - 9:50 am, Sun, 2 February 20