ಯಾವ ಸ್ಥಿತಿಯಲ್ಲಿದೆ ನೋಡಿ ಡಾ. ರಾಜ್ ಬೆಳೆದ ಮನೆ; ಇದರ ಬಗ್ಗೆ ಪುನೀತ್ ಕಂಡಿದ್ದರು ಕನಸು
Puneeth Rajkumar: ಡಾ. ರಾಜ್ಕುಮಾರ್ ಆಡಿ ಬೆಳೆದ ಗಾಜನೂರಿನ ಮನೆಯನ್ನು ದುರಸ್ತಿ ಮಾಡಿಸುವ ಬಗ್ಗೆ ಪುನೀತ್ ರಾಜ್ಕುಮಾರ್ ಅವರು ಕನಸು ಕಂಡಿದ್ದರು. ಆ ಮನೆ ಈಗ ಹೇಗಿದೆ ನೋಡಿ..
ಚಾಮರಾಜನಗರ ಗಡಿಯ ತಾಳವಾಡಿ ಸಮೀಪದ ಗಾಜನೂರಿನಲ್ಲಿ ಡಾ. ರಾಜ್ಕುಮಾರ್ (Dr Rajkumar) ಅವರು ಆಡಿ ಬೆಳೆದ ಮನೆ ಇದೆ. ಆ ಜಾಗ ಎಂದರೆ ಪುನೀತ್ ರಾಜ್ಕುಮಾರ್ (Puneeth Rajkumar) ಅವರಿಗೆ ಅಚ್ಚುಮೆಚ್ಚು ಆಗಿತ್ತು. ಅಲ್ಲಿಗೆ ಅವರು ಆಗಾಗ ಭೇಟಿ ನೀಡುತ್ತಿದ್ದರು. ಸದ್ಯ ಈ ಮನೆ ಕುಸಿಯುವ ಹಂತದಲ್ಲಿದೆ. ಕಳೆದ ಮೂರುವರೆ ತಿಂಗಳ ಹಿಂದೆ ಗಾಜನೂರಿನ ಹಳೆ ಮನೆಗೆ (Dr Rajkumar Gajanur House) ಪುನೀತ್ ಭೇಟಿ ನೀಡಿದ್ದರು. ಈ ವರ್ಷ ಸುರಿದ ಭಾರಿ ಮಳೆಯಿಂದಾಗಿ ಈ ಮನೆಗೆ ಹಾನಿ ಆಗಿದೆ. ಹಾಗಾಗಿ ಅದನ್ನು ದುರಸ್ತಿ ಮಾಡಿಸಲು ಅಪ್ಪು ನಿರ್ಧರಿಸಿದ್ದರು.
ಹೃದಯಾಘಾತದಿಂದ ನಿಧನರಾಗುವುದಕ್ಕೂ ಮುನ್ನ ಪುನೀತ್ ಅವರು ಅನೇಕ ಕನಸುಗಳನ್ನು ಕಂಡಿದ್ದರು. ಆದರೆ ಅವು ನನಸಾಗುವುದಕ್ಕೂ ಮುನ್ನವೇ ಅವರು ಇಹಲೋಕ ತ್ಯಜಿಸಿದ್ದು ನೋವಿನ ಸಂಗತಿ. ಅಪ್ಪು ಕಂಡಿದ್ದ ಅನೇಕ ಕನಸುಗಳನ್ನು ಅವರ ಕುಟುಂಬದವರು ಈಗ ನನಸು ಮಾಡುತ್ತಿದ್ದಾರೆ.
ಇದನ್ನೂ ಓದಿ:
ಮ್ಯೂಸಿಯಂ ಆಗಲಿದೆ ಡಾ. ರಾಜ್ ಆಡಿ ಬೆಳೆದ ಮನೆ; ಪುನೀತ್ ಆಸೆ ಈಡೇರಿಸಲು ಕುಟುಂಬದ ನಿರ್ಧಾರ
‘ಪುನೀತ್ ಅಣ್ಣ ಇಲ್ಲದೇ ನಾವು ತಬ್ಬಲಿ ಆಗಿದ್ದೇವೆ’: ಅಪ್ಪು ಹೇಳಿಕೊಟ್ಟ ಪಾಠಗಳ ಬಗ್ಗೆ ನಿಖಿಲ್ ಮಾತು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ

