ಪುನೀತ್​ ಜನ್ಮದಿನಕ್ಕೆ ಶುಭಕೋರದ ರಶ್ಮಿಕಾ ಮಂದಣ್ಣ; ‘ನಿಯತ್ತಿಲ್ಲದವರು’ ಎಂದು ಕಿಡಿಕಾರಿದ ಫ್ಯಾನ್ಸ್​

ರಶ್ಮಿಕಾ ಹಾಗೂ ಪುನೀತ್​ ರಾಜ್​ಕುಮಾರ್​ ಅವರು ‘ಅಂಜನಿಪುತ್ರ’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದರು. 2 ಒಟ್ಟಿಗೆ ನಟಿಸಿದ ಹೊರತಾಗಿಯೂ ಪುನೀತ್​ಗೆ ರಶ್ಮಿಕಾ ಬರ್ತ್​ಡೇ ವಿಶ್​ ಮಾಡದೆ ಇರುವುದು ಸಾಕಷ್ಟು ಜನರ ಸಿಟ್ಟಿಗೆ ಕಾರಣವಾಗಿದೆ.

ಪುನೀತ್​ ಜನ್ಮದಿನಕ್ಕೆ ಶುಭಕೋರದ ರಶ್ಮಿಕಾ ಮಂದಣ್ಣ; ‘ನಿಯತ್ತಿಲ್ಲದವರು’ ಎಂದು ಕಿಡಿಕಾರಿದ ಫ್ಯಾನ್ಸ್​
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Mar 18, 2022 | 1:33 PM

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಸದಾ ಚರ್ಚೆಯಲ್ಲಿರುತ್ತಾರೆ. ಅವರು ಕನ್ನಡದ ಬಗ್ಗೆ ಪ್ರೀತಿ ತೋರಿಸುವುದಿಲ್ಲ ಎನ್ನುವ ಆರೋಪ ಸದಾ ಕೇಳಿ ಬರುತ್ತಲೇ ಇರುತ್ತದೆ. ಸದ್ಯ, ಅವರು ಯಾವುದೇ ಕನ್ನಡ ಸಿನಿಮಾ ಒಪ್ಪಿಕೊಂಡಿಲ್ಲ. ಬಾಲಿವುಡ್​, ಟಾಲಿವುಡ್​ ಎಂದು ಹೈದರಾಬಾದ್ ಹಾಗೂ ಮುಂಬೈನಲ್ಲಿ ಸುತ್ತಾಟ ನಡೆಸುತ್ತಿದ್ದಾರೆ. ಅಲ್ಲಿಯೇ ಮನೆ ಖರೀದಿಸಿ ಸೆಟಲ್​ ಆಗುವ ಆಲೋಚನೆಯಲ್ಲಿ ಇದ್ದಾರೆ. ಈ ಮಧ್ಯೆ ರಶ್ಮಿಕಾ ಗೊತ್ತಿದ್ದೋ ಅಥವಾ ಗೊತ್ತಿಲ್ಲದೆಯೋ ತಪ್ಪೊಂದನ್ನು ಮಾಡಿದ್ದಾರೆ. ಇದಕ್ಕೆ ಅವರು ತೀವ್ರ ಟೀಕೆ ಎದುರಿಸುತ್ತಿದ್ದಾರೆ. ಹಾಗಾದರೆ, ರಶ್ಮಿಕಾ ಮಂದಣ್ಣ ಮಾಡಿದ ತಪ್ಪೇನು? ಪುನೀತ್​ ರಾಜ್​ಕುಮಾರ್​ (Puneeth Rajkumar) ಬರ್ತ್​ಡೇಗೆ ಅವರು ವಿಶ್ ಮಾಡಿಲ್ಲ.

ಮಾರ್ಚ್​ 17ರಂದು ಪುನೀತ್​ ರಾಜ್​ಕುಮಾರ್​ ಬರ್ತ್​ಡೇ ಇತ್ತು. ಈ ವಿಶೇಷ ದಿನವನ್ನು ಅಭಿಮಾನಿಗಳು ಹಬ್ಬದಂತೆ ಆಚರಿಸಿದ್ದಾರೆ. ಪುನೀತ್​ ಹೀರೋ ಆಗಿ ನಟಿಸಿದ ಕೊನೆಯ ಸಿನಿಮಾ ‘ಜೇಮ್ಸ್​’ ಚಿತ್ರವನ್ನು ಅವರಿಲ್ಲ ಎನ್ನುವ ನೋವನ್ನು ಎದೆಯಲ್ಲಿ ಇಟ್ಟುಕೊಂಡೇ ವೀಕ್ಷಣೆ ಮಾಡಿದ್ದಾರೆ. ಹಲವು ಸೆಲೆಬ್ರಿಟಿಗಳು ಪುನೀತ್​ ಅವರನ್ನು ನೆನಪಿಸಿಕೊಂಡಿದ್ದಾರೆ. ಆದರೆ, ರಶ್ಮಿಕಾ ಮಾತ್ರ ಈ ವಿಚಾರದಲ್ಲಿ ಮೌನ ತಾಳಿದ್ದಾರೆ. ಇದು ಅನೇಕರ ಕೋಪಕ್ಕೆ ಕಾರಣವಾಗಿದೆ.

ರಶ್ಮಿಕಾ ಹಾಗೂ ಪುನೀತ್​ ರಾಜ್​ಕುಮಾರ್​ ಅವರು ‘ಅಂಜನಿಪುತ್ರ’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದರು. 2017ರಲ್ಲಿ ತೆರೆಗೆ ಬಂದ ಈ ಸಿನಿಮಾಗೆ ಎ. ಹರ್ಷ ಅವರ ನಿರ್ದೇಶನ ಇತ್ತು. ಒಟ್ಟಿಗೆ ನಟಿಸಿದ ಹೊರತಾಗಿಯೂ ಪುನೀತ್​ಗೆ ರಶ್ಮಿಕಾ ಬರ್ತ್​ಡೇ ವಿಶ್​ ಮಾಡದೆ ಇರುವುದು ಸಾಕಷ್ಟು ಜನರ ಸಿಟ್ಟಿಗೆ ಕಾರಣವಾಗಿದೆ. ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ. ಕೆಲವರು ರಶ್ಮಿಕಾ ಅವರಿಗೆ ನಿಯತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ. ಇನ್ನೂ ಕೆಲವರು ‘ಅಪ್ಪು ಬರ್ತ್​ಡೇ ದಿನ ಯಾರನ್ನೂ ದ್ವೇಷ ಮಾಡಬೇಡಿ’ ಎಂದು ಕೋರಿದ್ದಾರೆ.

ರಶ್ಮಿಕಾ ಮಂದಣ್ಣ ಈ ರೀತಿ ವಿವಾದಕ್ಕೆ ಸಿಲುಕಿದ್ದು ಇದೇ ಮೊದಲೇನಲ್ಲ. ಈ ಮೊದಲು ಕೂಡ ಅವರು ಇದೇ ರೀತಿಯ ತಪ್ಪನ್ನು ಮಾಡಿದ್ದರು. ಈ ವಿಚಾರದಲ್ಲಿ ಅವರು ಎಷ್ಟೇ ಟ್ರೋಲ್​ ಆದರೂ ತಲೆಕೆಡಿಸಿಕೊಳ್ಳುವುದಿಲ್ಲ.

ಸಿನಿಮಾ ವಿಚಾರಕ್ಕೆ ಬರೋದಾದರೆ, ಬಾಲಿವುಡ್​ನಲ್ಲಿ ರಶ್ಮಿಕಾ ನಟಿಸಿರುವ ‘ಮಿಷನ್​ ಮಜ್ನು’ ಸಿನಿಮಾ ರಿಲೀಸ್​ಗೆ ರೆಡಿ ಇದೆ. ಈ ಚಿತ್ರದಲ್ಲಿ ಸಿದ್ದಾರ್ಥ್​ ಮಲ್ಹೋತ್ರಾಗೆ ಅವರು ಜತೆಯಾಗಿದ್ದಾರೆ. ಅಮಿತಾಭ್​ ಬಚ್ಚನ್​ ನಟನೆಯ ‘ಗುಡ್​ಬೈ’ ಸಿನಿಮಾದಲ್ಲೂ ಅವರು ನಟಿಸುತ್ತಿದ್ದಾರೆ. ತೆಲುಗಿನ ‘ಪುಷ್ಪ 2’ ಸಿನಿಮಾ ಕೆಲಸಗಳು ಇನ್ನಷ್ಟೇ ಆರಂಭವಾಗಬೇಕಿದೆ.

ಇದನ್ನೂ ಓದಿ: ರಶ್ಮಿಕಾ ರೀತಿಯಲ್ಲಿ ಸೂಪರ್ ಆಗಿ​ ಡಾನ್ಸ್ ಮಾಡಿದ ವಂಶಿಕಾ; ‘ಪುಷ್ಪ ಪಾರ್ಟ್​ 10’ನಲ್ಲಿ ನೀನೇ ಇರ್ತೀಯಾ ಎಂದ ಸೃಜನ್

ಮೊನ್ನೆ ರಶ್ಮಿಕಾ, ನಿನ್ನೆ ಸಮಂತಾ; ದಕ್ಷಿಣ ಭಾರತದ ಬೆಡಗಿಯರ ಜತೆ ವರುಣ್​ ಧವನ್​ ಸುತ್ತಾಟ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ