ರಶ್ಮಿಕಾ ರೀತಿಯಲ್ಲಿ ಸೂಪರ್ ಆಗಿ​ ಡಾನ್ಸ್ ಮಾಡಿದ ವಂಶಿಕಾ; ‘ಪುಷ್ಪ ಪಾರ್ಟ್​ 10’ನಲ್ಲಿ ನೀನೇ ಇರ್ತೀಯಾ ಎಂದ ಸೃಜನ್

ಕಲರ್ಸ್​ ಕನ್ನಡ ವಾಹಿನಿಯಲ್ಲಿ ‘ನನ್ನಮ್ಮ ಸೂಪರ್ ಸ್ಟಾರ್​’ ಶೋ ಪ್ರಸಾರ ಆಗುತ್ತಿದೆ. ಧಾರಾವಾಹಿ ಕಲಾವಿದರು ಹಾಗೂ ಅವರ ಮಕ್ಕಳು ಈ ಶೋನಲ್ಲಿ ಸ್ಪರ್ಧಿಯಾಗಿ ಪಾಲ್ಗೊಂಡಿದ್ದಾರೆ. ಮಾಸ್ಟರ್​ ಆನಂದ್ ಪತ್ನಿ ಯಶಸ್ವಿನಿ ಹಾಗೂ ಅವರ ಮಗಳು ವಂಶಿಕಾ ಕೂಡ ‘ನನ್ನಮ್ಮ ಸೂಪರ್​ ಸ್ಟಾರ್​’ ವೇದಿಕೆ ಏರಿದ್ದಾರೆ.

ರಶ್ಮಿಕಾ ರೀತಿಯಲ್ಲಿ ಸೂಪರ್ ಆಗಿ​ ಡಾನ್ಸ್ ಮಾಡಿದ ವಂಶಿಕಾ; ‘ಪುಷ್ಪ ಪಾರ್ಟ್​ 10’ನಲ್ಲಿ ನೀನೇ ಇರ್ತೀಯಾ ಎಂದ ಸೃಜನ್
ವಂಶಿಕಾ-ರಶ್ಮಿಕಾ
TV9kannada Web Team

| Edited By: Rajesh Duggumane

Mar 12, 2022 | 6:00 AM

ಮಾಸ್ಟರ್ ಆನಂದ್ ಮಗಳು ವಂಶಿಕಾ (Vanshika) ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಅವಳು ಎಷ್ಟು ಚೂಟಿ ಎಂಬುದು ‘ನನ್ನಮ್ಮ ಸೂಪರ್​ ಸ್ಟಾರ್​’ (Nannamma Super Star) ಕಾರ್ಯಕ್ರಮ ನೋಡುವ ಎಲ್ಲರಿಗೂ ಗೊತ್ತಿರುತ್ತದೆ. ಅವಳು ಆಡುವ ಮಾತುಗಳು ವೀಕ್ಷಕರಿಗೆ ತುಂಬಾನೇ ಇಷ್ಟವಾಗುತ್ತದೆ. ವಂಶಿಕಾ ಮಾಡುವ ತರಲೆಗಳು ಒಂದೆರಡಲ್ಲ. ಹಾಗಂತ ಅವಳು ಫೇಮಸ್ ಆಗಿದ್ದು ತರಲೆ, ಚೂಟಿ ಮಾತುಗಳಿಂದ ಮಾತ್ರವಲ್ಲ. ಅವಳ ಬಳಿ ಸಖತ್​ ಟ್ಯಾಲೆಂಟ್​ ಇದೆ. ಈಗಾಗಲೇ ಅದನ್ನು ಪ್ರೇಕ್ಷಕರ ಮುಂದೆ ತೆರೆದಿಟ್ಟಿದ್ದಾಳೆ. ಈಗ ವಂಶಿಕಾ ಸಖತ್ ಆಗಿ ಡಾನ್ಸ್ ಮಾಡಿದ್ದಾಳೆ. ಈ ವಿಡಿಯೋ ನೋಡಿ ಅವಳ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.

ಕಲರ್ಸ್​ ಕನ್ನಡ ವಾಹಿನಿಯಲ್ಲಿ ‘ನನ್ನಮ್ಮ ಸೂಪರ್ ಸ್ಟಾರ್​’ ಶೋ ಪ್ರಸಾರ ಆಗುತ್ತಿದೆ. ಧಾರಾವಾಹಿ ಕಲಾವಿದರು ಹಾಗೂ ಅವರ ಮಕ್ಕಳು ಈ ಶೋನಲ್ಲಿ ಸ್ಪರ್ಧಿಯಾಗಿ ಪಾಲ್ಗೊಂಡಿದ್ದಾರೆ. ಮಾಸ್ಟರ್​ ಆನಂದ್ ಪತ್ನಿ ಯಶಸ್ವಿನಿ ಹಾಗೂ ಅವರ ಮಗಳು ವಂಶಿಕಾ ಕೂಡ ‘ನನ್ನಮ್ಮ ಸೂಪರ್​ ಸ್ಟಾರ್​’ ವೇದಿಕೆ ಏರಿದ್ದಾರೆ. ವಂಶಿಕಾ ಮಾಡುವ ತರಲೆ ಆಟಗಳನ್ನು ನೋಡಿ ಎಲ್ಲರೂ ಸಖತ್​ ಖುಷಿಪಟ್ಟಿದ್ದಾರೆ.

‘ಪುಷ್ಪ’ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್​ ಆಗಿದೆ. ಈ ಸಿನಿಮಾಗೆ ರಶ್ಮಿಕಾ ನಾಯಕಿ. ಅವರು ಮಾಡಿದ ಡ್ಯಾನ್ಸ್ ನೋಡಿ ಎಲ್ಲರೂ ಖುಷಿಪಟ್ಟಿದ್ದರು. ಇದೇ ರೀತಿಯ ಸ್ಟೆಪ್​ ಹಾಕೋಕೆ ವಂಶಿಕಾ ಕೂಡ ಪ್ರಯತ್ನಿಸಿ, ಗೆದ್ದಿದ್ದಾಳೆ. ಅವಳು ಮಾಡಿರುವ ಡಾನ್ಸ್ ಎಲ್ಲರಿಗೂ ಇಷ್ಟವಾಗಿದೆ. ಸೃಜನ್​ ಲೋಕೇಶ್​ ಕೂಡ ವಂಶಿಕಾಳನ್ನು ಹೊಗಳಿದ್ದಾರೆ. ‘ಪುಷ್ಪ ಪಾರ್ಟ್​ 10ಕ್ಕೆ ನೀನೇ ಹೀರೋಯಿನ್​’ ಎಂದಿದ್ದಾರೆ ಅವರು.

ವೇದಿಕೆ ಮೇಲೆ ಈ ರೀತಿಯ ಡಾನ್ಸ್​ ಮಾಡಬೇಕು ಎಂದರೆ ಸಾಕಷ್ಟು ಸಿದ್ಧತೆ ಮಾಡಿಕೊಂಡಿರಬೇಕು. ಎಷ್ಟೇ ಪ್ರಾಕ್ಟೀಸ್​ ಮಾಡಿದರೂ ವೇದಿಕೆ ಮೇಲೆ ಸರಿಯಾಗಿ ಅದನ್ನು ಪ್ರೆಸೆಂಟ್​ ಮಾಡುತ್ತೇವೆ ಎನ್ನುವ ಗ್ಯಾರಂಟಿ ಇಲ್ಲ. ಆದರೆ, ವಂಶಿಕಾ ಮಾತ್ರ ಒಂದೇ ಒಂದು ಸ್ಟೆಪ್​ ತಪ್ಪದೆ ಡಾನ್ಸ್​ ಮಾಡಿ ತೋರಿಸಿದ್ದಾಳೆ.

‘ನನ್ನಮ್ಮ ಸೂಪರ್​ ಸ್ಟಾರ್’ ಕಾರ್ಯಕ್ರಮ ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 7.30ಕ್ಕೆ ಪ್ರಸಾರವಾಗುತ್ತಿದೆ. ಸೃಜನ್​ ಲೋಕೇಶ್​, ತಾರಾ ಅನುರಾಧಾ ಹಾಗೂ ಅನು ಪ್ರಭಾಕರ್​ ಈ ಶೋಗೆ ಜಡ್ಜ್​ ಆಗಿದ್ದಾರೆ.

ಇದನ್ನೂ ಓದಿ: ‘ಮಗಳು ವಂಶಿಕಾಳಿಂದ ಜನರು ನನ್ನನ್ನು ಮತ್ತೆ ಪ್ರೀತಿಸುತ್ತಿದ್ದಾರೆ’; ಮಾಸ್ಟರ್​ ಆನಂದ್ ಭಾವುಕ ನುಡಿ

ಪಟಾಕಿ ಯಾರದ್ದೇ ಆಗಿರ್ಲಿ, ಹಚ್ಚೋದು ಮಾತ್ರ ಪುನೀತ್​ ರಾಜ್​ಕುಮಾರ್​: ವಂಶಿಕಾ ಸೂಪರ್​ ಮಾತು

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada