James Movie First Day Collection:​ ಮೊದಲ ದಿನ 30 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ ‘ಜೇಮ್ಸ್​’​

James movie collection: ಪುನೀತ್​ ಜನ್ಮದಿನದ ಪ್ರಯುಕ್ತ ಬಿಡುಗಡೆಯಾದ ‘ಜೇಮ್ಸ್​’ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಆರ್ಭಟಿಸಿದೆ. ಮೊದಲ ದಿನ 30 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಆಗಿದೆ.

James Movie First Day Collection:​ ಮೊದಲ ದಿನ 30 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ ‘ಜೇಮ್ಸ್​’​
ಪುನೀತ್​ ರಾಜ್​ಕುಮಾರ್
Follow us
TV9 Web
| Updated By: ಮದನ್​ ಕುಮಾರ್​

Updated on:Mar 18, 2022 | 9:07 AM

‘ಪವರ್​ ಸ್ಟಾರ್​’ ಪುನೀತ್​ ರಾಜ್​ಕುಮಾರ್ (Puneeth Rajkumar)​ ನಟನೆಯ ‘ಜೇಮ್ಸ್​’ ಸಿನಿಮಾ ಎಲ್ಲ ಕಡೆಗಳಲ್ಲಿ ಧೂಳೆಬ್ಬಿಸಿದೆ. ಮೊದಲ ದಿನ ಸಾವಿರಾರು ಶೋಗಳು ಹೌಸ್​ಫುಲ್​ ಆಗಿವೆ. ಅದರ ಪರಿಣಾಮವಾಗಿ ಚಿತ್ರಕ್ಕೆ ಉತ್ತಮ ಕಲೆಕ್ಷನ್​ ಆಗಿದೆ. ಮೊದಲ ದಿನ ‘ಜೇಮ್ಸ್​’ ಸಿನಿಮಾದ ಬಾಕ್ಸ್​ ಆಫೀಸ್​ ಕಲೆಕ್ಷನ್​ (James movie Box Office Collection) ಬಗ್ಗೆ ಈಗ ಮಾಹಿತಿ ಸಿಕ್ಕಿದೆ. ಗುರುವಾರ (ಮಾ.17) ಈ ಸಿನಿಮಾ ಬರೋಬ್ಬರಿ 30 ಕೋಟಿ ರೂಪಾಯಿಗಿಂತಲೂ ಅಧಿಕ ಗಳಿಕೆ ಮಾಡಿದೆ. ಆ ಮೂಲಕ ಯಶ್​ ನಟನೆಯ ‘ಕೆಜಿಎಫ್​: ಚಾಪ್ಟರ್​ 1’ ಚಿತ್ರದ ದಾಖಲೆಯನ್ನೂ ಉಡೀಸ್​ ಮಾಡಿದೆ. ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯ ಮತ್ತು ವಿದೇಶಗಳಲ್ಲೂ ‘ಜೇಮ್ಸ್​’ (James Movie) ಪ್ರದರ್ಶನ ಕಾಣುತ್ತಿದೆ. ಪುನೀತ್​ ರಾಜ್​ಕುಮಾರ್​ ಅವರ ಕೊನೇ ಸಿನಿಮಾ ಎಂಬ ಕಾರಣಕ್ಕೆ ಅಭಿಮಾನಿಗಳು ಮುಗಿಬಿದ್ದು ಈ ಚಿತ್ರವನ್ನು ನೋಡುತ್ತಿದ್ದಾರೆ. ಅಭಿಮಾನಿಗಳ ಪಾಲಿಗೆ ಇದೊಂದು ಎಮೋಷನ್​ ಆಗಿದೆ. ಈ ಸಿನಿಮಾಗೆ ಸಿಗುತ್ತಿರುವ ಅಭೂತಪೂರ್ವ ಯಶಸ್ಸು ಕಂಡು ಫ್ಯಾನ್ಸ್​ ಖುಷಿ ಆಗಿದ್ದಾರೆ. ಈ ಖುಷಿಯನ್ನು ಸವಿಯಲು ಅಪ್ಪು ನಮ್ಮ ಜೊತೆ ಇಲ್ಲ ಎಂಬ ನೋವು ಎಲ್ಲರನ್ನೂ ಕಾಣುತ್ತಿದೆ.

ಚೇತನ್​ ಕುಮಾರ್​ ಅವರು ‘ಜೇಮ್ಸ್​’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಪುನೀತ್​ ರಾಜ್​ಕುಮಾರ್​ ಅವರಿಗೆ ನಾಯಕಿಯಾಗಿ ಪ್ರಿಯಾ ಆನಂದ್​ ನಟಿಸಿದ್ದಾರೆ. ಕಿಶೋರ್​ ಪತ್ತಿಕೊಂಡ ಅವರು ಅದ್ದೂರಿಯಾಗಿ ಈ ಸಿನಿಮಾ ನಿರ್ಮಿಸಿದ್ದಾರೆ. ನಿರ್ಮಾಪಕರಿಗೆ ‘ಜೇಮ್ಸ್​’ ಚಿತ್ರದಿಂದ ಭರ್ಜರಿ ಲಾಭ ಆಗಲಿದೆ. ಎರಡನೇ ದಿನವಾದ ಶುಕ್ರವಾರ (ಮಾ.18) ಕೂಡ ಬಹುತೇಕ ಕಡೆಗಳಲ್ಲೂ ಹೌಸ್​ಫುಲ್​ ಪ್ರದರ್ಶನ ಆಗುತ್ತಿದೆ. ಅನೇಕ ಮಲ್ಟಿಪ್ಲೆಕ್ಸ್​ಗಳಲ್ಲಿ ಟಿಕೆಟ್​ ಸೋಲ್ಡ್​ಔಟ್​ ಆಗಿವೆ. ಹಾಗಾಗಿ ಎರಡನೇ ದಿನ ಕೂಡ ‘ಜೇಮ್ಸ್​’ ಉತ್ತಮ ಗಳಿಕೆ ಮಾಡಲಿದೆ.

ಪುನೀತ್​ ರಾಜ್​ಕುಮಾರ್​ ಅವರ ಸಿನಿಮಾಗಳಲ್ಲಿ ಸಾಹಸ ದೃಶ್ಯಗಳನ್ನು ಪ್ರೇಕ್ಷಕರು ಬಯಸುತ್ತಾರೆ. ಆ ವಿಚಾರದಲ್ಲಿ ಅಭಿಮಾನಿಗಳ ನಿರೀಕ್ಷೆ ತಲುಪಲು ‘ಜೇಮ್ಸ್​’ ಯಶಸ್ವಿ ಆಗಿದೆ. ಇನ್ನು, ಸಿನಿಮಾ ನೋಡಿದ ಎಲ್ಲರೂ ಭಾವುಕರಾಗುತ್ತಿದ್ದಾರೆ. ಪುನೀತ್​ ಅವರನ್ನು ಹೀರೋ ಆಗಿ ಕೊನೇ ಬಾರಿಗೆ ದೊಡ್ಡ ಪರದೆಯಲ್ಲಿ ನೋಡುತ್ತಿದ್ದೇವೆ ಎಂಬುದು ಎಲ್ಲ ಪ್ರೇಕ್ಷಕರನ್ನು ಕಾಡುತ್ತಿದೆ. ಮೈಸೂರಿನಲ್ಲಿ ಸಿನಿಮಾ ನೋಡಿದ ಬಳಿಕ ಶಿವರಾಜ್​ಕುಮಾರ್​ ಕೂಡ ಸಖತ್​ ಎಮೋಷನಲ್​ ಆದರು. ಬೆಂಗಳೂರಿನ ವೀರೇಶ್​ ಚಿತ್ರಮಂದಿರದಲ್ಲಿ ರಾಘವೇಂದ್ರ ರಾಜ್​ಕುಮಾರ್​ ಅವರು ಗುರುವಾರ ಮುಂಜಾನೆ 6 ಗಂಟೆಗೆ ‘ಜೇಮ್ಸ್​’ ವೀಕ್ಷಿಸಿದರು.

ಮೊದಲ ದಿನದ ಟೆಕೆಟ್​ಗಳು ನಾಲ್ಕು ದಿನ ಮುನ್ನವೇ ಸೋಲ್ಡ್​ ಔಟ್​ ಆಗಿದ್ದರಿಂದ ಅನೇಕರಿಗೆ ಟಿಕೆಟ್​ ಸಿಗಲಿಲ್ಲ. ಹಾಗಾಗಿ ಫಸ್ಟ್​ ಡೇ ಫಸ್ಟ್​ ಶೋ ನೋಡಲು ಸಾಧ್ಯವಾಗದೇ ಇರುವವರು ಶುಕ್ರವಾರ ಮತ್ತು ವೀಕೆಂಡ್​ನಲ್ಲಿ ಈ ಸಿನಿಮಾವನ್ನು ಕಣ್ತುಂಬಿಕೊಳ್ಳಲಿದ್ದಾರೆ. ಇದರಿಂದ ಸಹಜವಾಗಿಯೇ ಶನಿವಾರ ಮತ್ತು ಭಾನುವಾರ ‘ಜೇಮ್ಸ್​’ ಚಿತ್ರಕ್ಕೆ ಉತ್ತಮ ಕಲೆಕ್ಷನ್​ ಆಗುವ ನಿರೀಕ್ಷೆ ಇದೆ. ಆ ಮೂಲಕ ಕನ್ನಡ ಚಿತ್ರರಂಗದಲ್ಲಿ ಈ ಸಿನಿಮಾ ದಾಖಲೆ ಬರೆಯಲಿದೆ.

ಇದನ್ನೂ ಓದಿ:

ಶಿರಸಿ ಮಾರಿಕಾಂಬೆ ರಥದ ಬಳಿ ತಲುಪಿತು ಅಪ್ಪು ಫೋಟೋ; ಜಾತ್ರೆಯಲ್ಲಿ ಅಭಿಮಾನ ಮೆರೆದ ಪುನೀತ್​ ಫ್ಯಾನ್ಸ್​

‘ಜೇಮ್ಸ್​’ ಚಿತ್ರದ ಆ ಒಂದು ಸೀನ್​ ನೋಡಿ ಬಿಕ್ಕಿ ಬಿಕ್ಕಿ ಅತ್ತ ಅಭಿಮಾನಿ; ಪುನೀತ್​ ಮೇಲಿನ ಅಭಿಮಾನ​ ಶಾಶ್ವತ

Published On - 8:34 am, Fri, 18 March 22

ಪ್ರತಿ ಹುಟ್ಟುಹಬ್ಬಕ್ಕೆ ಇಬ್ರಾಹಿಂ ನನಗೆ ವಿಶ್ ಮಾಡುತ್ತಾರೆ: ಜಿಟಿ ದೇವೇಗೌಡ
ಪ್ರತಿ ಹುಟ್ಟುಹಬ್ಬಕ್ಕೆ ಇಬ್ರಾಹಿಂ ನನಗೆ ವಿಶ್ ಮಾಡುತ್ತಾರೆ: ಜಿಟಿ ದೇವೇಗೌಡ
ಯೋಗೇಶ್ವರ್ ಕೇವಲ ಅಭಿವೃದ್ಧಿ ಕೆಲಸಗಳನ್ನು ಉಲ್ಲೇಖಿಸಿ ಮತ ಕೇಳಿದರು: ಶಾಸಕ
ಯೋಗೇಶ್ವರ್ ಕೇವಲ ಅಭಿವೃದ್ಧಿ ಕೆಲಸಗಳನ್ನು ಉಲ್ಲೇಖಿಸಿ ಮತ ಕೇಳಿದರು: ಶಾಸಕ
ಸಿಎಂ ಇಬ್ರಾಹಿಂ ಮತ್ತು ಜಿಟಿ ದೇವೇಗೌಡ ನೊಂದಜೀವಿ ಮತ್ತು ಸಮಾನಮನಸ್ಕರು
ಸಿಎಂ ಇಬ್ರಾಹಿಂ ಮತ್ತು ಜಿಟಿ ದೇವೇಗೌಡ ನೊಂದಜೀವಿ ಮತ್ತು ಸಮಾನಮನಸ್ಕರು
ಕುಮಾರಸ್ವಾಮಿ ಹೇಳಿದ್ದರಲ್ಲಿ ತಪ್ಪಿಲ್ಲ, ಮುಸ್ಲಿಂ ಮತದಾರ ಕೈಬಿಟ್ಟ: ಅಶೋಕ
ಕುಮಾರಸ್ವಾಮಿ ಹೇಳಿದ್ದರಲ್ಲಿ ತಪ್ಪಿಲ್ಲ, ಮುಸ್ಲಿಂ ಮತದಾರ ಕೈಬಿಟ್ಟ: ಅಶೋಕ
ನಾನಿಲ್ಲದಿದ್ದರೂ ಕಾಂಗ್ರೆಸ್ ಅಸ್ತಿತ್ವಕ್ಕೆ ಯಾವುದೇ ತೊಂದರೆಯಿಲ್ಲ: ಡಿಕೆಶಿ
ನಾನಿಲ್ಲದಿದ್ದರೂ ಕಾಂಗ್ರೆಸ್ ಅಸ್ತಿತ್ವಕ್ಕೆ ಯಾವುದೇ ತೊಂದರೆಯಿಲ್ಲ: ಡಿಕೆಶಿ
ಕ್ಯಾಪ್ಟನ್​ ಆಗೋಕೆ ಬಿಗ್ ಬಾಸ್ ಬೆಡ್​ರೂಂನಲ್ಲಿ ದೊಡ್ಡ ಡೀಲಿಂಗ್
ಕ್ಯಾಪ್ಟನ್​ ಆಗೋಕೆ ಬಿಗ್ ಬಾಸ್ ಬೆಡ್​ರೂಂನಲ್ಲಿ ದೊಡ್ಡ ಡೀಲಿಂಗ್
ಸಾಯೋವರೆಗೂ ಕುಮಾರಣ್ಣ ಮತ್ತು ದೇವೇಗೌಡರ ಜೊತೆ ಇರ್ತೀವಿ :ಸಾರಾ ಮಹೇಶ್
ಸಾಯೋವರೆಗೂ ಕುಮಾರಣ್ಣ ಮತ್ತು ದೇವೇಗೌಡರ ಜೊತೆ ಇರ್ತೀವಿ :ಸಾರಾ ಮಹೇಶ್
ನೋಡ ನೋಡ್ತಿದ್ದಂತೆಯೇ ಹತ್ತಾರು ಲೀಟರ್ ಹಾಲು ರಸ್ತೆಗೆ ಸುರಿದರು!
ನೋಡ ನೋಡ್ತಿದ್ದಂತೆಯೇ ಹತ್ತಾರು ಲೀಟರ್ ಹಾಲು ರಸ್ತೆಗೆ ಸುರಿದರು!
ವಕ್ಫ್ ಬೋರ್ಡ್ ವಿರುದ್ಧ 5 ಜಿಲ್ಲೆಗಳಲ್ಲಿ ನಡೆಯಲಿದೆ ಯತ್ನಾಳ್ ತಂಡದ ಅಭಿಯಾನ
ವಕ್ಫ್ ಬೋರ್ಡ್ ವಿರುದ್ಧ 5 ಜಿಲ್ಲೆಗಳಲ್ಲಿ ನಡೆಯಲಿದೆ ಯತ್ನಾಳ್ ತಂಡದ ಅಭಿಯಾನ
ಪಾರ್ಕಿಂಗ್ ವಿಚಾರವಾಗಿ ಜಗಳ, ವ್ಯಕ್ತಿಗೆ ಮನಬಂದಂತೆ ಥಳಿಸಿದ ಗುಂಪು
ಪಾರ್ಕಿಂಗ್ ವಿಚಾರವಾಗಿ ಜಗಳ, ವ್ಯಕ್ತಿಗೆ ಮನಬಂದಂತೆ ಥಳಿಸಿದ ಗುಂಪು