ಶಿರಸಿ ಮಾರಿಕಾಂಬೆ ರಥದ ಬಳಿ ತಲುಪಿತು ಅಪ್ಪು ಫೋಟೋ; ಜಾತ್ರೆಯಲ್ಲಿ ಅಭಿಮಾನ ಮೆರೆದ ಪುನೀತ್​ ಫ್ಯಾನ್ಸ್​

ಶಿರಸಿ ಜಾತ್ರೆಗೆ ಬಂದ ಅಪ್ಪು ಅಭಿಮಾನಿಗಳು ಪುನೀತ್​ ರಾಜ್​ಕುಮಾರ್​ ಫೋಟೋ ಜೊತೆಗೆ ದೇವರಿಗೆ ನಮಸ್ಕರಿಸಿದ್ದಾರೆ. ಮಾರಿಕಾಂಬೆಯ ರಥದ ಬಳಿ ಸಾಗಿ ಆಶೀರ್ವಾದ ಪಡೆದುಕೊಂಡಿದ್ದಾರೆ.

ಶಿರಸಿ ಮಾರಿಕಾಂಬೆ ರಥದ ಬಳಿ ತಲುಪಿತು ಅಪ್ಪು ಫೋಟೋ; ಜಾತ್ರೆಯಲ್ಲಿ ಅಭಿಮಾನ ಮೆರೆದ ಪುನೀತ್​ ಫ್ಯಾನ್ಸ್​
ಶಿರಸಿ ಮಾರಿಕಾಂಬಾ ಜಾತ್ರೆ
Follow us
TV9 Web
| Updated By: ಮದನ್​ ಕುಮಾರ್​

Updated on: Mar 17, 2022 | 12:06 PM

ಈಗ ಎಲ್ಲೆಲ್ಲೂ ಪುನೀತ್​ ರಾಜ್​ಕುಮಾರ್​ ಅವರಿಗೆ ಜೈಕಾರ ಕೇಳಿಸುತ್ತಿದೆ. ಈ ಪರಿ ಅಭಿಮಾನದ ಹೊಳೆ ಹರಿಯುತ್ತಿರುವುದನ್ನು ನೋಡಿದರೆ ಅಪ್ಪು ಇಲ್ಲ ಎಂದು ಒಪ್ಪಿಕೊಳ್ಳಲು ಸಾಧ್ಯವಾಗುವುದೇ ಇಲ್ಲ. ಪ್ರತಿಯೊಬ್ಬ ಅಭಿಮಾನಿಯ ಎದೆಯಲ್ಲೂ ಪುನೀತ್​ ರಾಜ್​ಕುಮಾರ್​ ಅವರು ಜೀವಂತವಾಗಿದ್ದಾರೆ. ಸಿನಿಮಾ ಮಾತ್ರವಲ್ಲದೇ ಅನೇಕ ಜನಪರ ಕಾರ್ಯಗಳನ್ನು ಮಾಡಿದ್ದ ಅವರಿಗೆ ಜನರು ದೇವರ ಸ್ಥಾನ ನೀಡಿದ್ದಾರೆ. ಹಾಗಾಗಿ ಹಲವು ಜಾತ್ರೆ, ಉತ್ಸವಗಳಲ್ಲಿ ಅಪ್ಪು ಫೋಟೋ ರಾರಾಜಿಸುತ್ತಿದೆ. ಈಗ ಶಿರಸಿಯ ಮಾರಿಕಾಂಬಾ ಜಾತ್ರೆಯಲ್ಲೂ (Sirsi Marikamba Jatre) ಇಂಥ ಘಟನೆ ನಡೆದಿದೆ. ಪುನೀತ್​ ರಾಜ್​ಕುಮಾರ್​ ಅವರ ಭಾವಚಿತ್ರವು ಮಾರಿಕಾಂಬೆಯ ರಥದ ಬಳಿ ತಲುಪಿದೆ. ಲಕ್ಷಾಂತರ ಜನರು ಶಿರಸಿ ಜಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಪುನೀತ್​ ರಾಜ್​ಕುಮಾರ್​ ಅಭಿಮಾನಿಗಳು (Puneeth Rajkumar Fans) ತಮ್ಮ ನೆಚ್ಚಿನ ನಟನ ಫೋಟೋ ಹಿಡಿದುಕೊಂಡು ಜಾತ್ರೆಗೆ ಬಂದಿದ್ದಾರೆ. ತಮ್ಮ ಪಾಲಿಗೆ ದೇವರ ಸಮಾನವಾಗಿ ಇರುವ ಅವರನ್ನು ಫ್ಯಾನ್ಸ್​ ಆರಾಧಿಸುತ್ತಿದ್ದಾರೆ. ಶಿರಸಿ ಜಾತ್ರೆಯಲ್ಲಿ ಪುನೀತ್​ ರಾಜ್​ಕುಮಾರ್​ ಫೋಟೋವನ್ನು (Puneeth Rajkumar Photo) ಹಿಡಿದು ಬಂದ ಅಭಿಮಾನಿಗಳ ವಿಡಿಯೋ ಈಗ ವೈರಲ್​ ಆಗಿದೆ. ಸದ್ಯ ಪುನೀತ್​ ಹೀರೋ ಆಗಿ ನಟಿಸಿದ ಕೊನೇ ಸಿನಿಮಾ ‘ಜೇಮ್ಸ್​’ ಬಿಡುಗಡೆ ಆಗಿದೆ. ಆ ಸಂಭ್ರದಲ್ಲಿಯೂ ಕೂಡ ಅಭಿಮಾನಿಗಳಿದ್ದಾರೆ. ನೆಚ್ಚಿನ ನಟನನ್ನು ಎಲ್ಲರೂ ಸಖತ್​ ಮಿಸ್​ ಮಾಡಿಕೊಳ್ಳುತ್ತಿದ್ದಾರೆ.

ಕನ್ನಡದ ಭಾವುಟ ಮತ್ತು ಪುನೀತ್​ ರಾಜ್​ಕುಮಾರ್ ಅವರ ಭಾವಚಿತ್ರವನ್ನು ಹಿಡಿದ ಅಭಿಮಾನಿಗಳು ಶಿರಸಿ ಮಾರಿಕಾಂಬೆ ಜಾತ್ರೆಗೆ ಬಂದಿದ್ದಾರೆ. ಜನಜಗುಳಿಯ ನಡುವೆ ಈ ಫೋಟೋ ಹೈಲೈಟ್​ ಆಗಿದೆ. ಫೋಟೋ ಹಿಡಿದಿದ್ದ ಅಭಿಮಾನಿಯನ್ನು ದೂರದಿಂದಲೇ ಗಮನಿಸಿದ ಎಲ್ಲರೂ ಅವರಿಗೆ ದಾರಿ ಮಾಡಿಕೊಟ್ಟಿದ್ದಾರೆ. ನಂತರ ಮಾರಿಕಾಂಬೆಯ ರಥದ ಬಳಿ ಸಾಗಿದ ಆ ಅಭಿಮಾನಿಯು ಅಪ್ಪು ಫೋಟೋ ಜೊತೆಗೆ ದೇವರಿಗೆ ನಮಸ್ಕರಿಸಿದ್ದಾರೆ. ಈ ರೀತಿಯಲ್ಲಿ ಪುನೀತ್​ ರಾಜ್​ಕುಮಾರ್​ ಮೇಲಿನ ತಮ್ಮ ಅಭಿಮಾನವನ್ನು ಜನರು ಪ್ರದರ್ಶಿಸಿದ್ದಾರೆ.

ಇಂಥ ಹಲವು ಘಟನೆಗಳನ್ನು ಕರುನಾಡಿನಾದ್ಯಂತ ನಡೆದಿದೆ. ಕೇವಲ ಸಿನಿಮಾ ನಟ ಆಗಿದ್ದರೆ ಪುನೀತ್​ ರಾಜ್​ಕುಮಾರ್​​ ಅವರಿಗೆ ಈ ಪರಿ ಅಭಿಮಾನಿಗಳು ಇರುತ್ತಿದ್ದರೋ ಇಲ್ಲವೋ ಗೊತ್ತಿಲ್ಲ. ಆದರೆ ಸಾಮಾಜಿಕ ಕಾರ್ಯಗಳ ಮೂಲಕ ಅವರು ಅಭಿಮಾನಿಗಳ ಎದೆಯಲ್ಲಿ ದೇವರ ಸ್ಥಾನ ಪಡೆದುಕೊಂಡರು. ತಾವು ಸಂಪಾದಿಸಿದ ಹಣದಲ್ಲಿ ಅವರು ಅನೇಕ ಜನರಿಗೆ ನೆರವಾಗಿದ್ದರು. ಆದರೆ ಎಂದಿಗೂ ಅದನ್ನು ಪ್ರಚಾರಕ್ಕಾಗಿ ಹೇಳಿಕೊಳ್ಳಲಿಲ್ಲ. ಈ ಎಲ್ಲ ಗುಣಗಳಿಂದಾಗಿ ಪುನೀತ್​ ಅವರು ಜನರ ಹೃದಯ ಗೆದ್ದಿದ್ದರು. ಇಂದು ಅವರು ಭೌತಿಕವಾಗಿ ನಮ್ಮೊಂದಿಗೆ ಇಲ್ಲದೇ ಇರಬಹುದು. ಆದರೆ ಇಂಥ ಘಟನೆಗಳನ್ನು ನೋಡಿದಾಗಿ ‘ಅಪ್ಪು ಅಮರ’ ಎಂಬ ಮಾತು ಪದೇಪದೇ ಸಾಬೀತಾಗುತ್ತದೆ.

ಹಲವು ಕಡೆಗಳಲ್ಲಿ ಪುನೀತ್​ಗೆ ದೇವಸ್ಥಾನ ಕಟ್ಟಿದ್ದಾರೆ. ಪುನೀತ್​ ಅವರ ಪ್ರತಿಭೆ, ಪುತ್ಥಳಿ ನಿರ್ಮಿಸಿ ನಮಿಸುತ್ತಿದ್ದಾರೆ. ಅನೇಜ ರಸ್ತೆ, ವೃತ್ತ, ಪಾರ್ಕ್​ ಮುಂತಾದ ಸಾರ್ವಜನಿಕ ಸ್ಥಳಗಳಿಗೆ ಪುನೀತ್​ ರಾಜ್​ಕುಮಾರ್​ ಅವರ ಹೆಸರು ಇಡಲಾಗಿದೆ. ಅಪ್ಪು ಹೆಸರಿನಲ್ಲಿ ನೂರಾರು ಸಮಾಜಮುಖಿ ಕೆಲಸಗಳು ನಡೆಯುತ್ತಿವೆ. ಈ ಹಿಂದೆ ಅಯ್ಯಪ್ಪ ಸ್ವಾಮಿಯ ಅನೇಕ ಭಕ್ತರು ಪುನೀತ್​ ರಾಜ್​ಕುಮಾರ್ ಅವರ ಫೋಟೋ ಹಿಡಿದು ಶಬರಿಮಲೆ ಯಾತ್ರೆ ಮಾಡಿದ್ದರು. ಇರುಮುಡಿಯ ಜೊತೆಗೆ ಪುನೀತ್ ಅವರ​ ಫೋಟೋವನ್ನೂ ಹೊತ್ತುಕೊಂಡು ಅಯ್ಯಪ್ಪನ ದೇವಾಲಯದ 18 ಮೆಟ್ಟಿಲುಗಳನ್ನು ಭಕ್ತರು ಏರಿದ್ದರು. ಅನೇಕ ದಂಪತಿಗಳು ತಮ್ಮ ಮಕ್ಕಳಿಗೆ ಪುನೀತ್​ ರಾಜ್​ಕುಮಾರ್​ ಎಂದು ನಾಮಕರಣ ಮಾಡಿ ಅಭಿಮಾನ ಮೆರೆದಿದ್ದಾರೆ. ಇಂಥ ಹಲವು ನಿದರ್ಶನಗಳು ಆಗಾಗ ಕಾಣಿಸುತ್ತಲೇ ಇವೆ.

ಇದನ್ನೂ ಓದಿ:

‘ಜೇಮ್ಸ್​’ ಚಿತ್ರದ ಆ ಒಂದು ಸೀನ್​ ನೋಡಿ ಬಿಕ್ಕಿ ಬಿಕ್ಕಿ ಅತ್ತ ಅಭಿಮಾನಿ; ಪುನೀತ್​ ಮೇಲಿನ ಅಭಿಮಾನ​ ಶಾಶ್ವತ

‘ಕನ್ನಡದ ಕೋಟ್ಯಧಿಪತಿ’ಯಿಂದ ಪುನೀತ್​ಗೆ ಸಿಕ್ಕ ಸಂಭಾವನೆ ಎಷ್ಟು ಕೋಟಿ? ಆ ದುಡ್ಡಲ್ಲಿ ಆಗ್ತಿದೆ ಪುಣ್ಯದ ಕೆಲಸ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ