AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯದ ಹಲವು ಯೋಜನೆ, ಸಂಸ್ಥೆಗಳ ರಾಯಭಾರಿಯಾಗಿದ್ದರು ಪುನೀತ್​ ರಾಜಕುಮಾರ್​: ಇಲ್ಲಿದೆ ಮಾಹಿತಿ

ಪುನೀತ್​ ರಾಜಕುಮಾರ್​ ಓರ್ವ ಅದ್ಭುತ ನಟನೆಯಲ್ಲಿ ಮಾತ್ರವಲ್ಲದೆ ಸಾಮಾಜಿಕ ಕೆಲಸಗಳಲ್ಲೂ ತೊಡಗಿಸಿಕೊಂಡಿದ್ದರು.. ಸರ್ಕಾರದ ಹಲವು ಯೋಜನೆಗಳಿಗೆ ರಾಯಭಾರಿಯಾಗಿ ಜನತೆಯಲ್ಲಿ ಅರಿವು ಮೂಡಿಸುವ ಕೆಲಸ ಮಾಡಿದ್ದರು.

ರಾಜ್ಯದ ಹಲವು ಯೋಜನೆ, ಸಂಸ್ಥೆಗಳ ರಾಯಭಾರಿಯಾಗಿದ್ದರು ಪುನೀತ್​ ರಾಜಕುಮಾರ್​: ಇಲ್ಲಿದೆ ಮಾಹಿತಿ
ಪುನೀತ್​ ರಾಜಕುಮಾರ್​
TV9 Web
| Updated By: Pavitra Bhat Jigalemane|

Updated on:Mar 17, 2022 | 11:02 AM

Share

ಕನ್ನಡಿಗರ ಪಾಲಿನ ಪ್ರೀತಿ ಅಪ್ಪು, ಕರ್ನಾಟಕ ರತ್ನ ಡಾ. ಪುನೀತ್​ ರಾಜ್​ಕುಮಾರ್ (Puneeth Rajkumar) ಅವರ ಜನ್ಮದಿನ. ಪುನೀತ್​ ರಾಜ್​ಕುಮಾರ್​ ಬದುಕಿದ್ದರೆ ಇಂದು 47ನೇ ವರ್ಷದ ಹುಟ್ಟುಹಬ್ಬದ ಸಂಭ್ರವಾಗಿತ್ತು. ಆದರೆ ವಿಧಿಯಾಟ ಅಪ್ಪು ಇಂದು ನಮ್ಮೊಂದಿಗಿಲ್ಲ. ಆದರೆ ಅವರ ಕೆಲಸ, ಅವರ ಆದರ್ಶ ಅಭಿಮಾನಿಗಳಲ್ಲಿ ಚಿರಸ್ಮರಣೀಯ. ಬರ್ತಡೇ ಹಿನ್ನಲೆಯಲ್ಲಿ ಅಪ್ಪು ನಟನೆಯ ಕೊನೆಯ ಚಿತ್ರ ಜೇಮ್ಸ್ (James)​ ಬಿಡುಗಡೆಯಾಗಿದೆ. ಅಭಿಮಾನಿಗಳು ಮುಂಜಾನೆಯಿಂದಲೇ ಥಿಯೇಟರ್​ ಬಳಿ ತೆರಳಿ ಸಿನಿಮಾ ವೀಕ್ಷಿಸುತ್ತಿದ್ದಾರೆ.

ಪುನೀತ್​ ರಾಜಕುಮಾರ್​ ಓರ್ವ ಅದ್ಭುತ ನಟನಾಗಿ ಮಾತ್ರವಲ್ಲದೆ ಸಾಮಾಜಿಕ ಕೆಲಸಗಳಲ್ಲೂ ತೊಡಗಿಸಿಕೊಂಡು ಕರ್ನಾಟಕದ ಮನೆಮನಗಳ ಮಗನಾಗಿದ್ದರು. ಸರ್ಕಾರದ ಹಲವು ಯೋಜನೆಗಳಿಗೆ ರಾಯಭಾರಿಯಾಗಿ ಜನತೆಯಲ್ಲಿ ಅರಿವು ಮೂಡಿಸುವ ಕೆಲಸ ಮಾಡಿದ್ದರು. ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಅವರು ಮಾಡಿದ್ದರು. ಕೊರೊನ ಸಂದರ್ಭದಲ್ಲಿ ಕೊವಿಡ್ ಲಸಿಕೆ ಪಡೆಯುವಂತೆ ಅವರು ಸರ್ಕಾರದ ಪರವಾಗಿ ಕೇಳಿಕೊಂಡಿದ್ದಿದೆ. ಹಾಗಾದರೆ ಪುನೀತ್​ ಯಾವೆಲ್ಲ ಯೋಜನೆ ಹಾಗೂ ಬ್ರ್ಯಾಂಡ್​ಗಳಿಗೆ ಅಂಬಾಸಿಡರ್​ ಆಗಿದ್ದರು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

  1. ಎಲ್‌ಇಡಿ ಬಲ್ಬ್​ ಬಳಕೆಯಿಂದ ವಿದ್ಯುತ್​ ಶಕ್ತಿ ಕಡಿಮೆ ವ್ಯಯವಾಗುತ್ತದೆ. ಹೀಗಾಗಿ ಎಲ್​ಇಡಿ ಬಲ್ಬ್​​ಗಳ ಬಳಕೆಗೆ ಉತ್ತೇಜನ ನೀಡುವ ಜಾಹೀರಾತಿನಲ್ಲಿ ಪುನೀತ್​ ಕಾಣಿಸಿಕೊಂಡಿದ್ದರು.
  2.  ಹಿಂದುಳಿದ, ಅಭಿವೃದ್ಧಿ ಹೊಂದದ ಜಿಲ್ಲೆ ಎನ್ನುವ ಹೆಸರು ಪಡೆದುಕೊಂಡಿದ್ದ ಚಾಮರಾಜನಗರ ಜಿಲ್ಲೆಯನ್ನು ಅಭಿವೃದ್ಧಿಗೊಳಿಸಲು  ಜಿಲ್ಲಾಡಳಿತ ಹಾಕಿಕೊಂಡಿರುವ ಮಹಾತ್ವಾಂಕ್ಷಿ ಯೋಜನೆಯಾದ ‘ಚೆಲುವ ಚಾಮರಾಜನಗರ’ ಯೋಜನೆಗೆ ಪುನೀತ್​ ರಾಯಭಾರಿ ಆಗಿದ್ದರು.
  3.  ಕೊರೊನಾ ಸಾಂಕ್ರಾಮಿಕದ ಸಮಯದಲ್ಲಿ ಕೊವಿಡ್​ ಲಸಿಕೆ ಪಡೆಯುವಂತೆ ಸರ್ಕಾರ ಆಂದೋಲನ ಆರಂಭಿಸಿದೆ. ಇದಕ್ಕೆ ಪುನೀತ್​ ರಾಯಭಾರಿ ಆಗಿದ್ದರು.
  4.  ನಂದಿನಿ ಹಾಲಿನ ಉತ್ಪನ್ನಗಳಿಗೆ ದೊಡ್ಡ ಮಾರುಕಟ್ಟೆ ಇದೆ. ಇದರ ಪ್ರಚಾರ ರಾಯಭಾರಿಯಾಗಿ ಪುನೀತ್​ ಕಾರ್ಯ ನಿರ್ವಹಿಸುತ್ತಿದ್ದರು.
  5.  ಬಿಎಂಟಿಸಿ ಬಸ್ ಆದ್ಯತಾ ಪಥದ ಬಗ್ಗೆಯೂ ಜನರಲ್ಲಿ ಪುನೀತ್​ ಮಾಹಿತಿ ನೀಡುವ ಕೆಲಸ ಮಾಡುತ್ತಿದ್ದರು.
  6. ಕರ್ನಾಟಕ ಪ್ರವಾಸೋದ್ಯಮದ ಪ್ರಚಾರಕ್ಕೆ ಪುನೀತ್​ ರಾಯಭಾರಿ ಆಗಿದ್ದರು.
  7.  SSLC ಶಿಕ್ಷಣದ ಬಳಿಕ ಜಿಟಿಟಿಸಿ ಸೇರಿ ‘ಕೌಶಲ ಕರ್ನಾಟಕ’ಕ್ಕೆ ನೆರವಾಗಲು ಪುನೀತ್ ಜಾಗೃತಿ ಮೂಡಿಸುತ್ತಿದ್ದರು.
  8.  ಸಿಡಾಕ್, ಉದ್ಯಮಶೀಲತಾ ತರಬೇತಿಯ ಪ್ರಯೋಜನದ ಮನವರಿಕೆ ಮಾಡುವ ಕೆಲಸವನ್ನು ಪುನೀತ್​ ಮಾಡುತ್ತಿದ್ದರು.
  9.  ಗ್ರಾಮೀಣ ಯುವಜನರಿಗೆ ಸರ್ಕಾರಿ ಐಟಿಐ ಸೇರಲು ಪ್ರೋತ್ಸಾಹ ನೀಡುವ ಕೆಲಸ ಪುನೀತ್​ ಅವರಿಂದ ಆಗುತ್ತಿತ್ತು.
  10.  ಮತದಾನ ಜಾಗೃತಿ ಅಭಿಯಾನಕ್ಕೆ ಪುನೀತ್​ ಕೈ ಜೋಡಿಸಿದ್ದರು.
  11.  ಸ್ತ್ರೀ ಶಕ್ತಿ ಸ್ವಸಹಾಯ ಗುಂಪುಗಳು ತಯಾರಿಸಿದ ‘ದೀಪ ಸಂಜೀವಿನಿ’ ಮಣ್ಣಿನ ಹಣತೆ ಖರೀದಿಸಿ ದೀಪಾವಳಿ ಆಚರಿಸುವ ಮೂಲಕ ಸ್ವಸಹಾಯ ಗುಂಪುಗಳನ್ನು ಬಲಪಡಿಸಲು ಮನವಿ ಮಾಡಿಕೊಂಡಿದ್ದರು ಪುನೀತ್​.
  12.  ಗ್ರಾಮೀಣ ಮಹಿಳೆಯರಿಗೆ ಸ್ವಾವಲಂಬಿ ಜೀವನಕ್ಕೆ ನೆರವಾಗುವ ‘ಸಂಜೀವಿನಿ’ ಯೋಜನೆ ಮಹತ್ವ ಸಾರುವ ಮೂಲಕ ಪ್ರೇರಣೆ ನೀಡುತ್ತಿದ್ದರು.

ಇದನ್ನೂ ಓದಿ:

ಅಪ್ಪು ಇಲ್ಲದ ಮೊದಲ ಬರ್ತ್​ಡೇ; ನೋವನ್ನು ನುಂಗಿ ಸಂಭ್ರಮಿಸಿದ ಅಭಿಮಾನಿಗಳು; ಇಲ್ಲಿದೆ ಪೂರ್ತಿ ವಿವರ

Published On - 10:59 am, Thu, 17 March 22

ಹೇಗೆ ಹೆಣ ಎಸೆದು ಹೋದ ನೋಡಿ ಆಂಬ್ಯುಲೆನ್ಸ್​ ಚಾಲಕ
ಹೇಗೆ ಹೆಣ ಎಸೆದು ಹೋದ ನೋಡಿ ಆಂಬ್ಯುಲೆನ್ಸ್​ ಚಾಲಕ
ಮಗುವಿನ ಮೇಲೆ ನಾಯಿ ದಾಳಿ, ಹೀರೋನಂತೆ ಬಂದು ಕಾಪಾಡಿದ ತಂದೆ
ಮಗುವಿನ ಮೇಲೆ ನಾಯಿ ದಾಳಿ, ಹೀರೋನಂತೆ ಬಂದು ಕಾಪಾಡಿದ ತಂದೆ
ಜಿಪಂ ಕಚೇರಿ ಆವರಣದಲ್ಲಿ ನೇಣು ಬಿಗಿದುಕೊಂಡು ಗುತ್ತಿಗೆ ನೌಕರ ಸಾವಿಗೆ ಶರಣು
ಜಿಪಂ ಕಚೇರಿ ಆವರಣದಲ್ಲಿ ನೇಣು ಬಿಗಿದುಕೊಂಡು ಗುತ್ತಿಗೆ ನೌಕರ ಸಾವಿಗೆ ಶರಣು
ಕಿತ್ತೂರು ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಈ ಸಲ ಫ್ಲಾವರ್​ ಶೋ ಥೀಮ್
ಕಿತ್ತೂರು ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಈ ಸಲ ಫ್ಲಾವರ್​ ಶೋ ಥೀಮ್
100 ಎಸೆತಗಳ ಪಂದ್ಯ: 99ನೇ ಎಸೆತದಲ್ಲಿ 1 ವಿಕೆಟ್​ನ ರೋಚಕ ಗೆಲುವು..!
100 ಎಸೆತಗಳ ಪಂದ್ಯ: 99ನೇ ಎಸೆತದಲ್ಲಿ 1 ವಿಕೆಟ್​ನ ರೋಚಕ ಗೆಲುವು..!
ಕಂದಕಕ್ಕೆ ಉರುಳಿದ ವಾಹನ,ಮೂವರು ಸಿಆರ್​​ಪಿಎಫ್​ ಸಿಬ್ಬಂದಿ ಸಾವು
ಕಂದಕಕ್ಕೆ ಉರುಳಿದ ವಾಹನ,ಮೂವರು ಸಿಆರ್​​ಪಿಎಫ್​ ಸಿಬ್ಬಂದಿ ಸಾವು
ರಾತ್ರಿ ಸುರಿದ ಭಾರೀ ಮಳೆಯಿಂದ ನೀರು ಜಮೀನಿಗೆ ನುಗ್ಗಿ ರೈತ ರಾಜಣ್ಣ ಕಂಗಾಲು
ರಾತ್ರಿ ಸುರಿದ ಭಾರೀ ಮಳೆಯಿಂದ ನೀರು ಜಮೀನಿಗೆ ನುಗ್ಗಿ ರೈತ ರಾಜಣ್ಣ ಕಂಗಾಲು
VIDEO: ಕೆಣಕಿದ ದಿಗ್ವೇಶ್ ರಾಥಿಯ ಬೆಂಡೆತ್ತಿದ ಅಂಕಿತ್
VIDEO: ಕೆಣಕಿದ ದಿಗ್ವೇಶ್ ರಾಥಿಯ ಬೆಂಡೆತ್ತಿದ ಅಂಕಿತ್
ಚಿನ್ನಾಭರಣ ಖರೀದಿಗೆ ಬಂದು ಮಗುವನ್ನೇ ಮರೆತ ತಾಯಿ; ಮುಂದೇನಾಯ್ತು ಗೊತ್ತಾ?
ಚಿನ್ನಾಭರಣ ಖರೀದಿಗೆ ಬಂದು ಮಗುವನ್ನೇ ಮರೆತ ತಾಯಿ; ಮುಂದೇನಾಯ್ತು ಗೊತ್ತಾ?
ತೆಲುಗು ವೇದಿಕೆ ಮೇಲೆ ‘ಬಾವ’ ಹಾಡಿಗೆ ರಾಜ್, ಜೆಪಿ, ಶನೀಲ್ ಭರ್ಜರಿ ಸ್ಟೆಪ್
ತೆಲುಗು ವೇದಿಕೆ ಮೇಲೆ ‘ಬಾವ’ ಹಾಡಿಗೆ ರಾಜ್, ಜೆಪಿ, ಶನೀಲ್ ಭರ್ಜರಿ ಸ್ಟೆಪ್