‘ಜೇಮ್ಸ್’ ಸಿನಿಮಾ ನೋಡಿ ಸಾರ್ವಜನಿಕವಾಗಿಯೇ ಕಣ್ಣೀರು ಹಾಕಿದ ಪ್ರಿಯಾ ಆನಂದ್
ಚಿತ್ರ ತಂಡದವರು ಅಭಿಮಾನಿಗಳ ಜತೆ ಈ ಸಿನಿಮಾ ವೀಕ್ಷಣೆ ಮಾಡಿದ್ದಾರೆ. ಸಿನಿಮಾ ನೋಡಿದ ಬಳಿಕ ಪ್ರಿಯಾ ಆನಂದ್ ಅತ್ತಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗುತ್ತಿದೆ.
ಒಂದು ಸಿನಿಮಾದಲ್ಲಿ ನಟಿಸುವಾಗ ಸಹ ನಟರ ಜತೆ ಒಳ್ಳೆಯ ಬಾಂಧವ್ಯ ಬೆಳೆದಿರುತ್ತದೆ. ಅದರಲ್ಲೂ ಪುನೀತ್ ರಾಜ್ಕುಮಾರ್ ಅವರು (Puneeth Rajkumar) ಎಲ್ಲರ ಜತೆ ನಗುನಗುತ್ತಾ ಮಾತನಾಡುತ್ತಿದ್ದರು. ಈ ಕಾರಣಕ್ಕೆ ಅವರು ಅನೇಕರಿಗೆ ಹತ್ತಿರವಾಗಿದ್ದರು. ‘ರಾಜಕುಮಾರ’ ಹಾಗೂ ‘ಜೇಮ್ಸ್’ ಸಿನಿಮಾದಲ್ಲಿ (James Movie) ಪುನೀತ್ ಜತೆ ಪ್ರಿಯಾ ಆನಂದ್ ನಟಿಸಿದ್ದರು. ಹೀಗಾಗಿ, ಅಪ್ಪು ಅವರನ್ನು ತುಂಬಾನೇ ಹತ್ತಿರದಿಂದ ಅವರು ಕಂಡಿದ್ದರು. ಈಗ ಅವರು ಇಲ್ಲ ಎನ್ನುವುದನ್ನು ಒಪ್ಪಿಕೊಳ್ಳಲು ಅವರಿಗೆ ತುಂಬಾನೇ ಬೇಸರ ಆಗುತ್ತಿದೆ. ಇಂದು (ಮಾರ್ಚ್ 17) ‘ಜೇಮ್ಸ್’ ಸಿನಿಮಾ ರಿಲೀಸ್ ಆಗಿದೆ. ಚಿತ್ರ ತಂಡದವರು ಅಭಿಮಾನಿಗಳ ಜತೆ ಈ ಸಿನಿಮಾ ವೀಕ್ಷಣೆ ಮಾಡಿದ್ದಾರೆ. ಸಿನಿಮಾ ನೋಡಿದ ಬಳಿಕ ಪ್ರಿಯಾ ಆನಂದ್ (Priya Anand) ಅತ್ತಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗುತ್ತಿದೆ. ಈ ವಿಡಿಯೋ ಪ್ರಿಯಾ ಆನಂದ್ ಹಾಗೂ ಪುನೀತ್ ನಡುವೆ ಇದ್ದ ಗೆಳೆತನವನ್ನು ತೋರಿಸುತ್ತದೆ.
ಇದನ್ನೂ ಓದಿ: ‘ಜೇಮ್ಸ್’ ಚಿತ್ರದ ಆ ಒಂದು ಸೀನ್ ನೋಡಿ ಬಿಕ್ಕಿ ಬಿಕ್ಕಿ ಅತ್ತ ಅಭಿಮಾನಿ; ಪುನೀತ್ ಮೇಲಿನ ಅಭಿಮಾನ ಶಾಶ್ವತ
James Movie Review: ಜೇಮ್ಸ್ ವಿಮರ್ಶೆ: ಗೆಳೆತನದ ಕಥೆ ಹೇಳುವ ಒಂದು ‘ಪವರ್ಫುಲ್’ ಶೋ

ಇದ್ದಕ್ಕಿದ್ದಂತೆ ಚಲಿಸಿ ಒಬ್ಬ ವ್ಯಕ್ತಿಯ ಜೀವ ಬಲಿ ಪಡೆದ ಟಾಟಾ ಹ್ಯಾರಿಯರ್!

ಸಾಲು ಸಾಲು ರಜೆ: ಊರಿಗೆ ತೆರಳುತ್ತಿರುವ ಜನ, ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್

‘ಖಂಡಿತವಾಗಿಯೂ ನ್ಯಾಯ ಗೆಲ್ಲುತ್ತದೆ’: ದರ್ಶನ್ ಕೇಸ್ ಬಗ್ಗೆ ರಾಗಿಣಿ ಮಾತು

ಮೈಸೂರು ಸ್ಯಾಂಡಲ್ ಸೋಪ್ ಜಾಹೀರಾತಿಗೆ ಕೋಟ್ಯಾಂತರ ರೂ.ಖರ್ಚು!
