‘ಕೈ ನಡುಕ ಬರುತ್ತಿತ್ತು’; ‘ಜೇಮ್ಸ್​’ ಡಬ್ಬಿಂಗ್​ ವೇಳೆ ಸಾಧು ಕೋಕಿಲಗೆ ಆದ ಅನುಭವ ಎಂಥದ್ದು?

‘ಕೈ ನಡುಕ ಬರುತ್ತಿತ್ತು’; ‘ಜೇಮ್ಸ್​’ ಡಬ್ಬಿಂಗ್​ ವೇಳೆ ಸಾಧು ಕೋಕಿಲಗೆ ಆದ ಅನುಭವ ಎಂಥದ್ದು?

TV9 Web
| Updated By: ರಾಜೇಶ್ ದುಗ್ಗುಮನೆ

Updated on: Mar 17, 2022 | 2:10 PM

ಪುನೀತ್​ ಇಲ್ಲದೆ ಇಂದು (ಮಾರ್ಚ್​ 17) ಬರ್ತ್​ಡೇ ಆಚರಿಸಲಾಗುತ್ತಿದೆ. ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿದೆ. ಎಲ್ಲಾ ಚಿತ್ರಮಂದಿರಗಳಲ್ಲಿ ಪುನೀತ್ ಅವರ ಕಟೌಟ್​ ನಿಲ್ಲಿಸಿ ಹಬ್ಬದ ರೀತಿಯಲ್ಲಿ ಬರ್ತ್​ಡೇ ಆಚರಿಸಲಾಗಿದೆ

ಪುನೀತ್​ ರಾಜ್​ಕುಮಾರ್ (Puneeth Rajkumar) ಅವರನ್ನು ಕಳೆದುಕೊಂಡು ಐದು ತಿಂಗಳು ಆಗುತ್ತಾ ಬಂದಿದೆ. ಅವರಿಲ್ಲದೆ ಇಂದು (ಮಾರ್ಚ್​ 17) ಬರ್ತ್​ಡೇ ಆಚರಿಸಲಾಗುತ್ತಿದೆ. ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿದೆ. ಎಲ್ಲಾ ಚಿತ್ರಮಂದಿರಗಳಲ್ಲಿ ಪುನೀತ್ ಅವರ ಕಟೌಟ್​ ನಿಲ್ಲಿಸಿ ಹಬ್ಬದ ರೀತಿಯಲ್ಲಿ ಬರ್ತ್​ಡೇ ಆಚರಿಸಲಾಗಿದೆ. ಪುನೀತ್ ಜತೆಗೆ ಕಳೆದ ಸಂತೋಷವನ್ನು ಮೆಲಕು ಹಾಕಲಾಗುತ್ತಿದೆ. ಪುನೀತ್​ ಅವರು ಈಗಲೂ ನಮ್ಮ ಜತೆಗೆ ಇದ್ದಾರೆ ಎನ್ನುವ ಭಾವನೆಯನ್ನು ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ವ್ಯಕ್ತಪಡಿಸುತ್ತಿದ್ದಾರೆ. ಪುನೀತ್​ ಜತೆ ತುಂಬಾನೇ ಆಪ್ತವಾಗಿದ್ದ ಸಾಧು ಕೋಕಿಲ ಅವರು (Sadhu Kokila) ‘ಜೇಮ್ಸ್​’ (James) ಡಬ್ಬಿಂಗ್​ ಬಗ್ಗೆ ಹೇಳಿಕೊಂಡಿದ್ದಾರೆ. ಈ ಚಿತ್ರದಲ್ಲಿ ಸಾಧು ಕೋಕಿಲ ಕೂಡ ನಟಿಸಿದ್ದಾರೆ. ಡಬ್ಬಿಂಗ್ ವೇಳೆ ಪುನೀತ್ ಜತೆಗೆ ನಟಿಸಿದ ದೃಶ್ಯ ನೋಡಿ ಸಾಧು ಕೋಕಿಲ ಅವರ ಕೈ ನಡುಗುತ್ತಿದ್ದವು, ಧ್ವನಿ ಬಿದ್ದಂತೆ ಭಾಸವಾಗುತ್ತಿತ್ತು. ಈ ವಿಚಿತ್ರ ಅನುಭವದ ಬಗ್ಗೆ ಅವರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ‘ಜೇಮ್ಸ್’ ಸಿನಿಮಾ ನೋಡಿ ಸಾರ್ವಜನಿಕವಾಗಿಯೇ ಕಣ್ಣೀರು ಹಾಕಿದ ಪ್ರಿಯಾ ಆನಂದ್

James Movie Review: ಜೇಮ್ಸ್​ ವಿಮರ್ಶೆ: ಗೆಳೆತನದ ಕಥೆ ಹೇಳುವ ಒಂದು ‘ಪವರ್​ಫುಲ್​’ ಶೋ