James First Half Review: ಹೇಗಿದೆ ಪುನೀತ್​ ನಟನೆಯ ‘ಜೇಮ್ಸ್​’ ಚಿತ್ರದ ಫಸ್ಟ್​ಹಾಫ್​? ಇಲ್ಲಿದೆ ಫುಲ್ ಡಿಟೈಲ್ಸ್​

Puneeth Rajkumar: ಪುನೀತ್ ‘ಜೇಮ್ಸ್​’ ಚಿತ್ರದಲ್ಲಿ ಸೈನಿಕನ ಗೆಟಪ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗಾದರೆ, ಈ ಸಿನಿಮಾದ ಮೊದಲಾರ್ಧ ಹೇಗಿದೆ? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

James First Half Review: ಹೇಗಿದೆ ಪುನೀತ್​ ನಟನೆಯ ‘ಜೇಮ್ಸ್​’ ಚಿತ್ರದ ಫಸ್ಟ್​ಹಾಫ್​? ಇಲ್ಲಿದೆ ಫುಲ್ ಡಿಟೈಲ್ಸ್​
ಪುನೀತ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Mar 17, 2022 | 9:16 AM

ಚೇತನ್​ ಕುಮಾರ್ (Chetan Kumar) ನಿರ್ದೇಶನದ ‘ಜೇಮ್ಸ್​’ ಸಿನಿಮಾ (James) ಇಂದು (ಮಾರ್ಚ್​ 17) ತೆರೆಗೆ ಬಂದಿದೆ. ಪುನೀತ್ ರಾಜ್​ಕುಮಾರ್ (Puneeth Rajkumar) ನಾಯಕನಾಗಿ ನಟಿಸಿರುವ​ ಕೊನೆಯ ಸಿನಿಮಾ ಎಂಬ ಕಾರಣಕ್ಕೆ ಈ ಚಿತ್ರ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಪುನೀತ್​ಗೆ ಜತೆಯಾಗಿ ನಟಿ ಪ್ರಿಯಾ ಆನಂದ್​ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಶಿವರಾಜ್​ಕುಮಾರ್ ಹಾಗೂ ರಾಘವೇಂದ್ರ ರಾಜ್​ಕುಮಾರ್ ಕೂಡ ಅತಿಥಿ ಪಾತ್ರ ಮಾಡಿದ್ದಾರೆ. ಬೆಂಗಳೂರು ಒಂದರಲ್ಲೇ ಈ ಸಿನಿಮಾ ಮೊದಲ ದಿನ 800ಕ್ಕೂ ಅಧಿಕ ಶೋ ಪ್ರದರ್ಶನ ಕಾಣುತ್ತಿದೆ. ಪುನೀತ್ ಈ ಚಿತ್ರದಲ್ಲಿ ಸೈನಿಕನ ಗೆಟಪ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗಾದರೆ, ಈ ಸಿನಿಮಾದ ಮೊದಲಾರ್ಧ ಹೇಗಿದೆ? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

  1. ಭರ್ಜರಿಯಾದ ಕಾರ್​ ಚೇಸಿಂಗ್​ ದೃಶ್ಯದ ಮೂಲಕ ಪುನೀತ್​ ರಾಜ್​ಕುಮಾರ್​ ಎಂಟ್ರಿ ನೀಡುತ್ತಾರೆ. ಈ ಎಂಟ್ರಿ ಸೀನ್​ ತುಂಬ ಮಾಸ್​ ಆಗಿದೆ. ಆರಂಭಿಕ ದೃಶ್ಯವೇ ಕಾರ್​ ಚೇಸಿಂಗ್ ಆಗಿರುವುದರಿಂದ ಪ್ರೇಕ್ಷಕರಿಗೆ ಥ್ರಿಲ್​ ಎನಿಸುತ್ತದೆ.
  2. ‘ಜೇಮ್ಸ್’ ಬಿಡುಗಡೆಗೂ ಮುನ್ನ ‘ಟ್ರೇಡ್​ ಮಾರ್ಕ್​’ ಸಾಂಗ್​ ಧೂಳೆಬ್ಬಿಸಿತ್ತು. ಆ ಗೀತೆ ಕೂಡ ಸಿನಿಮಾದ ಆರಂಭದಲ್ಲೇ ಬರುತ್ತದೆ. ಇದು ಅಭಿಮಾನಿಗಳಿಗೆ ಕಿಕ್​ ನೀಡುತ್ತದೆ.
  3. ಫಸ್ಟ್​ಹಾಫ್​ನಲ್ಲಿ ಸಂತೋಷ್​ ಎಂಬ ಪಾತ್ರದಲ್ಲಿ ಪುನೀತ್​ ಕಾಣಿಸಿಕೊಂಡಿದ್ದಾರೆ. ಸೆಕ್ಯುರಿಟಿ ಏಜೆನ್ಸಿಯ ಸಿಬ್ಬಂದಿಯಾಗಿ ಅವರ ಪಾತ್ರ ಪರಿಚಯಗೊಳ್ಳುತ್ತದೆ. ವಿಲನ್​ಗಳ ದರ್ಶನ ಕೂಡ ಆಗುತ್ತದೆ.
  4. ‘ಜೇಮ್ಸ್​’ ಮೊದಲಾರ್ಧದಲ್ಲಿ ನಾಯಕ-ನಾಯಕಿಯ ಲವ್​ ಸ್ಟೋರಿ ಹೆಚ್ಚು ಹೈಲೈಟ್​ ಆಗಿದೆ. ಪ್ರಿಯಾ ಆನಂದ್​ ಮತ್ತು ಪುನೀತ್​ ರಾಜ್​ಕುಮಾರ್​ ಕಾಂಬಿನೇಷನ್​ ಚೆನ್ನಾಗಿ ಮೂಡಿಬಂದಿದೆ.
  5. ಅಪ್ಪು ಸಿನಿಮಾ ಎಂದರೆ ಅಭಿಮಾನಿಗಳು ಸಹಜವಾಗಿಯೇ ಆ್ಯಕ್ಷನ್​ ಬಯಸುತ್ತಾರೆ. ‘ಜೇಮ್ಸ್​’ ಚಿತ್ರದಲ್ಲಿ ಫೈಟಿಂಗ್​ ದೃಶ್ಯಗಳಿಗೆ ಕೊರತೆ ಇಲ್ಲ. ಫಸ್ಟ್​ ಹಾಫ್​ನಲ್ಲಿ ಭರ್ಜರಿ ಆ್ಯಕ್ಷನ್​ ಸೀನ್​ಗಳಿವೆ.
  6. ಫಸ್ಟ್​ ಹಾಫ್​ ಕೊನೆಯಲ್ಲಿ ಒಂದು ಮಜವಾದ ಟ್ವಿಸ್ಟ್​ ಇದೆ. ಆ ಟ್ವಿಸ್ಟ್​ ಏನು ಎಂಬುದನ್ನು ಚಿತ್ರಮಂದಿರದಲ್ಲಿಯೇ ನೋಡಿ ತಿಳಿಯಬೇಕು. ಒಟ್ಟಿನಲ್ಲಿ, ಮುಂದೇನು ಎಂಬ ಕೌತುಕ ಮೂಡಿಸುವುದರೊಂದಿಗೆ ಮಧ್ಯಂತರ ಬರುತ್ತದೆ.

    ((ಜೇಮ್ಸ್​ ಸಿನಿಮಾ ಸಂಪೂರ್ಣ ವಿಮರ್ಶೆಗೆ ಇಲ್ಲಿ ಕ್ಲಿಕ್​ ಮಾಡಿ))

ಇದನ್ನೂ ಓದಿ: James Movie Review: ಜೇಮ್ಸ್​ ವಿಮರ್ಶೆ: ಗೆಳೆತನದ ಕಥೆ ಹೇಳುವ ಒಂದು ‘ಪವರ್​ಫುಲ್​’ ಶೋ

‘ಜೇಮ್ಸ್​’ ಚಿತ್ರದ ಆ್ಯಕ್ಷನ್​ ನೋಡಿ ಪುನೀತ್​ ಏನು ಹೇಳಿದ್ದರು? ವೈರಲ್ ಆಯ್ತು ಹಳೆಯ ವಾಯ್ಸ್​ನೋಟ್​

Published On - 6:40 am, Thu, 17 March 22

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ