Sign In

By signing in or creating an account, you agree with Associated Broadcasting Company's Terms & Conditions and Privacy Policy.

Priya Anand: ‘ಜೇಮ್ಸ್’ ಹಾಗೂ ಪುನೀತ್ ಬಗ್ಗೆ ಮಾತನಾಡುತ್ತಾ ಭಾವುಕರಾದ ಪ್ರಿಯಾ ಆನಂದ್

Priya Anand: ‘ಜೇಮ್ಸ್’ ಹಾಗೂ ಪುನೀತ್ ಬಗ್ಗೆ ಮಾತನಾಡುತ್ತಾ ಭಾವುಕರಾದ ಪ್ರಿಯಾ ಆನಂದ್

TV9 Web
| Updated By: shivaprasad.hs

Updated on: Mar 13, 2022 | 8:11 PM

James Pre-Release Event | Puneeth Rajkumar: ‘ಜೇಮ್ಸ್’ ಚಿತ್ರದ ಪ್ರಿ-ರಿಲೀಸ್ ಈವೆಂಟ್​ಗೂ ಮುನ್ನ ಮಾತನಾಡಿದ ಚಿತ್ರದ ನಾಯಕಿ ಪ್ರಿಯಾ ಆನಂದ್ ಪುನೀತ್ ಬಗ್ಗೆ ಮಾತನಾಡುತ್ತಾ ಭಾವುಕರಾಗಿದ್ದಾರೆ.

ಇಂದು (ಮಾ.13) ಪುನೀತ್ ರಾಜ್​ಕುಮಾರ್ (Puneeth Rajkumar) ನಾಯಕರಾಗಿ ನಟಿಸಿರುವ ಕೊನೆಯ ಚಿತ್ರ ‘ಜೇಮ್ಸ್’ನ ಪ್ರಿ-ರಿಲೀಸ್ ಈವೆಂಟ್ (James Pre-Release Event) ನಡೆಯುತ್ತಿದೆ. ಕಾರ್ಯಕ್ರಮಕ್ಕೂ ಮುನ್ನ ಟಿವಿ9 ಜತೆ ಮಾತನಾಡಿದ ಚಿತ್ರದ ನಾಯಕಿ ಪ್ರಿಯಾ ಆನಂದ್ (Priya Anand), ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ‘ಜೇಮ್ಸ್’ ಬಗ್ಗೆ ಮಾತನಾಡಿದ ಅವರು, ‘‘ಅಪ್ಪು ನಟನೆಯ ಚಿತ್ರವನ್ನು ವಿಶ್ವದೆಲ್ಲೆಡೆ ಜನರು ಬೆಳ್ಳಿ ತೆರೆಯಲ್ಲಿ ಕಣ್ತುಂಬಿಕೊಳ್ಳಲು ಕಾದಿದ್ದಾರೆ. ಇದೇ ಕಾರಣದಿಂದ ಇಷ್ಟೊಂದು ಸ್ಕ್ರೀನ್​ಗಳಲ್ಲಿ ‘ಜೇಮ್ಸ್’ ಪ್ರದರ್ಶನವಾಗುತ್ತಿದೆ’’ ಎಂದಿದ್ದಾರೆ. ಪೂರ್ತಿ ಸಿನಿಮಾ ನೋಡಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ನಟಿ, ‘‘ಇಲ್ಲ, ಪೂರ್ಣ ನೋಡಿಲ್ಲ. ಆದರೆ ದೃಶ್ಯಗಳಲ್ಲಿ ಪುನೀತ್​ರನ್ನು ನೋಡುವಾಗ ಮನಸ್ಸು ಭಾರವಾಗುತ್ತದೆ’’ ಎಂದಿದ್ದಾರೆ.

ಪುನೀತ್ ಅವರ ಬಗ್ಗೆ ಮಾತನಾಡಿದ ಪ್ರಿಯಾ ಆನಂದ್, ‘‘ಅಪ್ಪು ಹೃದಯದಿಂದ ನಗುತ್ತಿದ್ದರು. ಅದು ಪ್ರತಿಯೊಬ್ಬರಿಗೆ ಕನೆಕ್ಟ್ ಆಗುತ್ತಿತ್ತು. ಅವರು ಸಣ್ಣ ವಯಸ್ಸಿನಿಂದ ಇಲ್ಲಿಯವರೆಗೆ ನಗುತ್ತಲೇ ಇದ್ದರು, ಎಲ್ಲರನ್ನೂ ರಂಜಿಸುತ್ತಾ ಇದ್ದರು. ಆದರೆ ‘ಜೇಮ್ಸ್’ ಚಿತ್ರದ ಪ್ರಿ ರಿಲೀಸ್ ಈವೆಂಟ್​ನಲ್ಲಿ ಅವರಿಲ್ಲ. ಪುನೀತ್ ಇಲ್ಲದೇ ಹೀಗೆ ಸಮಾರಂಭ ಮಾಡುವುದು ಬಹಳ ದುಃಖಕರ ವಿಚಾರ’’ ಎಂದು ಹೇಳುತ್ತಾ ನಟಿ ಭಾವುಕರಾಗಿದ್ದಾರೆ.

ಇದೇ ವೇಳೆ ಪ್ರಿಯಾ ಆನಂದ್, ‘ರಾಜಕುಮಾರ’ ಚಿತ್ರದ ನಂತರ ಮತ್ತೊಮ್ಮೆ ಪುನೀತ್ ಜತೆ ತೆರೆ ಹಂಚಿಕೊಳ್ಳುವ ಭಾಗ್ಯ ಸಿಕ್ಕಿದ್ದು ತಮ್ಮ ಅದೃಷ್ಟ ಎಂದು ಹೇಳಿಕೊಂಡಿದ್ದಾರೆ.

‘ಜೇಮ್ಸ್’ ಚಿತ್ರದ ಪ್ರಿ-ರಿಲೀಸ್ ಈವೆಂಟ್ ಇಲ್ಲಿ ವೀಕ್ಷಿಸಬಹುದು:

ಇದನ್ನೂ ಓದಿ:

James Pre-Release Event: ‘ಜೇಮ್ಸ್’ ಪ್ರಿ-ರಿಲೀಸ್ ಈವೆಂಟ್ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Puneeth Rajkumar: ಕನ್ನಡಿಗರ ಕಣ್ಮಣಿ ನಮ್ಮ ಅಪ್ಪು ಇನ್ಮುಂದೆ, ಡಾಕ್ಟರ್ ಪುನೀತ್ ರಾಜ್‍ಕುಮಾರ್..!