ಮೈಸೂರಲ್ಲಿ ಈಗಲೇ ಶುರು ‘ಜೇಮ್ಸ್​’ ಜಾತ್ರೆ: ಅಪ್ಪು ಫ್ಯಾನ್ಸ್​ ಜೋಶ್​ ಹೇಗಿದೆ ತಿಳಿಯಲು ಈ ವಿಡಿಯೋ ನೋಡಿ

‘ಜೇಮ್ಸ್​’ ಚಿತ್ರದ ಬಿಡುಗಡೆಗೆ 4 ದಿನ ಬಾಕಿ ಇರುವಾಗಲೇ ಮೈಸೂರಿನ ಪುನೀತ್​ ರಾಜ್​ಕುಮಾರ್​ ಅಭಿಮಾನಿಗಳು ನೂರಾರು ಬೈಕ್​, ಆಟೋಗಳ ಮೂಲಕ ಮೆರವಣಿಗೆ ಮಾಡುತ್ತಿದ್ದಾರೆ. ಆ ವಿಡಿಯೋ ಇಲ್ಲಿದೆ..

TV9kannada Web Team

| Edited By: Madan Kumar

Mar 13, 2022 | 1:05 PM

ಪುನೀತ್​ ರಾಜ್​ಕುಮಾರ್ (Puneeth Rajkumar)​​ ಅಭಿಮಾನಿಗಳು ಮಾ.17ಕ್ಕಾಗಿ ಕಾಯುತ್ತಿದ್ದಾರೆ. ಅಂದು ಅಪ್ಪು ಜನ್ಮದಿನ. ಅದರ ಜೊತೆಗೆ ‘ಜೇಮ್ಸ್​’ ಸಿನಿಮಾ ಕೂಡ ರಿಲೀಸ್​ ಆಗುತ್ತಿದೆ. ಈ ಎರಡು ವಿಶೇಷಗಳನ್ನು ಒಟ್ಟಾಗಿ ಸಂಭ್ರಮಿಸಲು ಅಭಿಮಾನಿಗಳು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಯಾವುದೇ ಸ್ಟಾರ್​ ನಟನ ಸಿನಿಮಾ ರಿಲೀಸ್​ ಆದ ದಿನ ಅಭಿಮಾನಿಗಳು ಮೆರವಣಿಗೆ ಮಾಡಿ, ಕಟೌಟ್​ಗೆ ಅಭಿಷೇಕ ಮಾಡಿ ಸಂಭ್ರಮಿಸುವುದು ಸಹಜ. ಆದರೆ ಮೈಸೂರಿನಲ್ಲಿ ಅಪ್ಪು ಅಭಿಮಾನಿಗಳು (Puneeth Rajkumar Fans) 5 ದಿನ ಮುನ್ನವೇ ಹಾಡಿ-ಕುಣಿದು ‘ಪವರ್ ಸ್ಟಾರ್​’ಗೆ ಜೈಕಾರ ಹಾಕುತ್ತಿದ್ದಾರೆ. ನೂರಾರು ಬೈಕ್​, ಆಟೋಗಳ ಮೂಲಕ ಮೆರವಣಿಗೆ ಮಾಡುತ್ತಿದ್ದಾರೆ. ಪುನೀತ್​ ನಟಿಸಿದ ಎಲ್ಲ ಸಿನಿಮಾಗಳ ಪೋಸ್ಟರ್​ ಇರುವ ಸ್ಟಾರ್​ಗಳನ್ನು ಆಟೋ ಮೇಲೆ ಇರಿಸಿಕೊಂಡು ಮೈಸೂರು ನಗರದ ಬೀದಿಗಳಲ್ಲಿ ರೌಂಡ್ ಹೊಡೆಯಲಾಗಿದೆ. ಪುನೀತ್​ ಜನ್ಮದಿನದಂದು ಅನ್ನ ಸಂತರ್ಪಣೆ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಫ್ಯಾನ್ಸ್​ ಹಮ್ಮಿಕೊಳ್ಳಲಿದ್ದಾರೆ. ಪುನೀತ್​ ರಾಜ್​ಕುಮಾರ್​ ಅವರು ಹೀರೋ ಆಗಿ ನಟಿಸಿದ ಕೊನೇ ಸಿನಿಮಾ ಆದ್ದರಿಂದ ‘ಜೇಮ್ಸ್​’ (James Movie) ಬಗ್ಗೆ ಅಭಿಮಾನಿಗಳು ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಚೇತನ್​ಕುಮಾರ್​ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದು, ಪ್ರಿಯಾ ಆನಂದ್​ ನಾಯಕಿಯಾಗಿ ನಟಿಸಿದ್ದಾರೆ.

ಇದನ್ನೂ ಓದಿ:

ಪುನೀತ್​ಗೆ ಗಾನ ನಮನ ಸಲ್ಲಿಸಲು ಒಂದಾದ ನಾಲ್ವರು ಗಾಯಕರು; ಮಾ.15ಕ್ಕೆ ‘ಮಹಾನುಭಾವ’ ರಿಲೀಸ್​

‘ಕನ್ನಡದ ಕೋಟ್ಯಧಿಪತಿ’ಯಿಂದ ಪುನೀತ್​ಗೆ ಸಿಕ್ಕ ಸಂಭಾವನೆ ಎಷ್ಟು ಕೋಟಿ? ಆ ದುಡ್ಡಲ್ಲಿ ಆಗ್ತಿದೆ ಪುಣ್ಯದ ಕೆಲಸ

Follow us on

Click on your DTH Provider to Add TV9 Kannada