- Kannada News Photo gallery Yash starrer KGF Chapter 2 movie producers all set for worldwide promotions
ವಿಶ್ವಾದ್ಯಂತ ‘ಕೆಜಿಎಫ್ 2’ ಪ್ರಚಾರ ಮಾಡಲು ‘ಹೊಂಬಾಳೆ ಫಿಲ್ಮ್ಸ್’ ಸಜ್ಜು; ಹೇಗಿದೆ ನೋಡಿ ತಯಾರಿ
ಯಶ್ ಅಭಿನಯದ ‘ಕೆಜಿಎಫ್: ಚಾಪ್ಟರ್ 2’ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಈ ಬಹುನಿರೀಕ್ಷಿತ ಸಿನಿಮಾ ಏಪ್ರಿಲ್ 14ರಂದು ವಿಶ್ವಾದ್ಯಂತ ರಿಲೀಸ್ ಆಗಲಿದೆ. ಅದಕ್ಕೆ ಈಗ ತಯಾರಿ ಜೋರಾಗಿದೆ.
Updated on: Mar 02, 2022 | 3:48 PM

Yash starrer KGF Chapter 2 movie producers all set for worldwide promotions

Yash starrer KGF Chapter 2 movie producers all set for worldwide promotions

ಕನ್ನಡ ಮಾತ್ರವಲ್ಲದೇ ಬಹುಭಾಷೆಯಲ್ಲಿ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ರಿಲೀಸ್ ಆಗಲಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಭರ್ಜರಿ ಪ್ರಚಾರಕಾರ್ಯಕ್ಕೆ ಚಿತ್ರತಂಡ ಪ್ಲ್ಯಾನ್ ಮಾಡಿಕೊಳ್ಳುತ್ತಿದೆ. ಈ ಚಿತ್ರ ನೋಡಲು ಯಶ್ ಮತ್ತು ಪ್ರಶಾಂತ್ ನೀಲ್ ಅಭಿಮಾನಿಗಳು ಕಾತರದಿಂದ ಕಾದಿದ್ದಾರೆ.

‘ಕೆಜಿಎಫ್ 2’ ಸಿನಿಮಾದಿಂದ ಈವರೆಗೆ ಬಿಡುಗಡೆ ಆಗಿರುವುದು ಕೆಲವು ಪೋಸ್ಟರ್ ಮತ್ತು ಒಂದೇ ಒಂದು ಟೀಸರ್. ಮುಂದಿನ ಅಪ್ಡೇಟ್ ಏನು ಎಂದು ತಿಳಿಯಲು ಅಭಿಮಾನಿಗಳಲ್ಲಿ ನಿರೀಕ್ಷೆ ಸೃಷ್ಟಿ ಆಗಿದೆ. ಟ್ರೇಲರ್ಗಾಗಿ ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ.

ಈ ಸಿನಿಮಾದಲ್ಲಿ ಸಂಜಯ್ ದತ್, ರವೀನಾ ಟಂಡನ್ ಕೂಡ ನಟಿಸಿರುವುದರಿಂದ ಸಹಜವಾಗಿಯೇ ಹಿಂದಿ ಭಾಷಿಕ ರಾಜ್ಯಗಳಲ್ಲಿ ಹೈಪ್ ಹೆಚ್ಚಿದೆ. ಅಧೀರ ಎಂಬ ಪಾತ್ರಕ್ಕೆ ಸಂಜಯ್ ದತ್ ಬಣ್ಣ ಹಚ್ಚಿದ್ದರೆ, ರಮಿಕಾ ಸೇನ್ ಎಂಬ ಪವರ್ಫುಲ್ ಮಹಿಳೆಯಾಗಿ ರವೀನಾ ಟಂಡನ್ ಕಾಣಿಸಿಕೊಳ್ಳಲಿದ್ದಾರೆ.




