AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕೆಜಿಎಫ್​ 2’ ಜತೆಗಿನ ರೇಸ್​​ನಿಂದ ಹಿಂದೆ ಸರಿದ ‘ಲಾಲ್​ ಸಿಂಗ್​ ಛಡ್ಡಾ’​; ಆಮಿರ್​ ಖಾನ್ ನೀಡಿದ ಕಾರಣ ಏನು?

 ‘ಕೆಜಿಎಫ್​ 2’ ಎದುರು ‘ಲಾಲ್​ ಸಿಂಗ್​ ಛಡ್ಡಾ’ ಸಿನಿಮಾ ತೆರೆಗೆ ತರುತ್ತಿರುವುದಕ್ಕೆ ಆಮಿರ್​ ಖಾನ್​ ಅವರು ಕ್ಷಮೆ ಕೇಳಿದ್ದರು. ನಮ್ಮ ಮಧ್ಯೆ ಇರುವುದು ಆರೋಗ್ಯಕರ ಸ್ಪರ್ಧೆ ಎಂದು ಹೇಳಿದ್ದರು. ‘ಕೆಜಿಎಫ್​ 2’ ಎದುರು ತೆರೆಗೆ ಬಂದರೆ ಆಮಿರ್​ ಖಾನ್​ ಸಿನಿಮಾ ಸೋಲಲಿದೆ ಎಂದು ಅನೇಕರು ಭವಿಷ್ಯ ನುಡಿದಿದ್ದರು.

‘ಕೆಜಿಎಫ್​ 2’ ಜತೆಗಿನ ರೇಸ್​​ನಿಂದ ಹಿಂದೆ ಸರಿದ ‘ಲಾಲ್​ ಸಿಂಗ್​ ಛಡ್ಡಾ’​; ಆಮಿರ್​ ಖಾನ್ ನೀಡಿದ ಕಾರಣ ಏನು?
ಆಮಿರ್ ಖಾನ್​-ಯಶ್
TV9 Web
| Edited By: |

Updated on:Feb 15, 2022 | 5:40 PM

Share

ಏಪ್ರಿಲ್​ 14ರಂದು ‘ಕೆಜಿಎಫ್​ 2’ ಸಿನಿಮಾ (KGF Chapter 2) ತೆರೆಗೆ ಬರುತ್ತಿದೆ. ಈ ಸಿನಿಮಾದ ಎದುರು ಆಮಿರ್ ಖಾನ್ (Aamir Khanb)​ ನಟನೆಯ ‘ಲಾಲ್​ ಸಿಂಗ್​ ಛಡ್ಡಾ’ (Laal Singh Chaddha) ತೆರೆಗೆ ಬರಬೇಕಿತ್ತು. ಎರಡೂ ಸಿನಿಮಾಗಳ ನಡುವೆ ದೊಡ್ಡ ಕ್ಲ್ಯಾಶ್​ ಏರ್ಪಡಲಿದೆ ಎಂದು ಎಲ್ಲರೂ ಲೆಕ್ಕಾಚಾರ ಹಾಕಿಕೊಂಡಿದ್ದರು. ಆದರೆ, ಈಗ ಈ ರೇಸ್​ನಿಂದ ಆಮಿರ್ ಖಾನ್​ ಸಿನಿಮಾ ಹಿಂದೆ ಸರಿದಿದೆ. ಇದರಿಂದ ‘ಕೆಜಿಎಫ್​ 2’ ಸಿನಿಮಾಗೆ ಮತ್ತಷ್ಟು ಚಿತ್ರಮಂದಿರಗಳು ಸಿಗುವ ಸಾಧ್ಯತೆ ಇದೆ. ‘ಲಾಲ್​ ಸಿಂಗ್​ ಛಡ್ಡಾ’ ಸಿನಿಮಾದ ರಿಲೀಸ್​ ದಿನಾಂಕ ಆಗಸ್ಟ್ ತಿಂಗಳಿಗೆ ಮುಂದೂಡಲ್ಪಟ್ಟಿದೆ.

‘ಕೆಜಿಎಫ್​ 2’ ಸಿನಿಮಾ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಯಶ್​ ನಟನೆಯ ಈ ಚಿತ್ರಕ್ಕೆ ಪ್ರಶಾಂತ್​ ನೀಲ್​ ನಿರ್ದೇಶನವಿದೆ. ಈಗಾಗಲೇ ‘ಕೆಜಿಎಫ್​’ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್​ ಆಗಿರುವುದರಿಂದ ಪಾರ್ಟ್​ 2 ಬಗ್ಗೆ ಕುತೂಹಲ ಮೂಡುವುದು ಸಹಜ. ಈಗಾಗಲೇ ‘ಕೆಜಿಎಫ್​ 2’ ಸಿನಿಮಾದ ಟೀಸರ್​ ಸಾಕಷ್ಟು ಹವಾ ಸೃಷ್ಟಿ ಮಾಡಿದೆ. ಈ ಚಿತ್ರದಲ್ಲಿ ಸಂಜಯ್​ ದತ್​ ಹಾಗೂ ರವೀನಾ ಟಂಡನ್​ ನಟಿಸಿರುವುದರಿಂದ ಸಿನಿಮಾಗೆ ದೊಡ್ಡ ಮೈಲೇಜ್​ ಸಿಕ್ಕಿದೆ. ಹಿಂದಿಯಲ್ಲೂ ಈ ಸಿನಿಮಾ ದೊಡ್ಡ ಮಟ್ಟದಲ್ಲೇ ರಿಲೀಸ್​ ಆಗುತ್ತಿದೆ. ಈಗ ‘ಕೆಜಿಎಫ್​ 2’ಗೆ ಆಮೀರ್​ ಖಾನ್​ ಅವರು ಹಾದಿ ಮಾಡಿಕೊಟ್ಟಿದ್ದಾರೆ.

‘ಕೆಜಿಎಫ್​ 2’ ಎದುರು ‘ಲಾಲ್​ ಸಿಂಗ್​ ಛಡ್ಡಾ’ ಸಿನಿಮಾ ತೆರೆಗೆ ತರುತ್ತಿರುವುದಕ್ಕೆ ಆಮಿರ್​ ಖಾನ್​ ಅವರು ಕ್ಷಮೆ ಕೇಳಿದ್ದರು. ನಮ್ಮ ಮಧ್ಯೆ ಇರುವುದು ಆರೋಗ್ಯಕರ ಸ್ಪರ್ಧೆ ಎಂದು ಹೇಳಿದ್ದರು. ‘ಕೆಜಿಎಫ್​ 2’ ಎದುರು ತೆರೆಗೆ ಬಂದರೆ ಆಮಿರ್​ ಖಾನ್​ ಸಿನಿಮಾ ಸೋಲಲಿದೆ ಎಂದು ಅನೇಕರು ಭವಿಷ್ಯ ನುಡಿದಿದ್ದರು. ಆದರೆ, ಈಗ ಆಮಿರ್​ ಖಾನ್​ ಸಿನಿಮಾದ ರಿಲೀಸ್​ ದಿನಾಂಕವೇ ಮುಂದೂಡಲ್ಪಟ್ಟಿದೆ.

‘ನಮ್ಮ ಚಿತ್ರ ‘ಲಾಲ್ ಸಿಂಗ್ ಛಡ್ಡಾ’ ಏಪ್ರಿಲ್ 14 ರಂದು ಬಿಡುಗಡೆಯಾಗುತ್ತಿಲ್ಲ. ಸಿನಿಮಾ ಕೆಲಸಗಳು ಮುಗಿಯಲು ಸಾಧ್ಯವಾಗದೇ ಇರುವುದೇ ಇದಕ್ಕೆ ಕಾರಣ. ಆಗಸ್ಟ್ 11, 2022ರಂದು ವಿಶ್ವದಾದ್ಯಂತ ಈ ಚಿತ್ರ ಬಿಡುಗಡೆಯಾಗಲಿದೆ’ ಎಂದು ಚಿತ್ರತಂಡ ಪ್ರಕಟಣೆಯಲ್ಲಿ ತಿಳಿಸಿದೆ. ಪ್ರಭಾಸ್​ ನಟನೆಯ ‘ಆದಿಪುರಷ್​’ ಚಿತ್ರ ಆಗಸ್ಟ್ ಸಂದರ್ಭದಲ್ಲಿ ತೆರೆಗೆ ಬರುವ ನೀರಿಕ್ಷೆ ಇದೆ. ಆಮಿರ್​ ಖಾನ್​ ಹಾಗೂ ಪ್ರಭಾಸ್​ ಸಿನಿಮಾ ನಡುವೆ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಆಮಿರ್​ ಖಾನ್​ ಚಿತ್ರ ರೇಸ್​ನಿಂದ ಹಿಂದೆ ಸರಿಯುವ ಘೋಷಣೆ ಮಾಡಿದ ಬೆನ್ನಲ್ಲೇ ಶಾಹಿದ್ ಕಪೂರ್ ನಟನೆಯ ‘ಜೆರ್ಸಿ’ ಸಿನಿಮಾ ಏಪ್ರಿಲ್​ 14ರಂದು ತೆರೆಗೆ ಬರುವ ಬಗ್ಗೆ ಘೋಷಣೆ ಮಾಡಿದೆ. ‘ಕೆಜಿಎಫ್​ 2’ ಹಾಗೂ ‘ಜೆರ್ಸಿ’ ನಡುವೆ ಈಗ ಸ್ಪರ್ಧೆ ಏರ್ಪಡುತ್ತಿದೆ.

ಇದನ್ನೂ ಓದಿ: ಮಗಳ ಪಾತ್ರ ಮಾಡಿದ್ದ ನಟಿ ಜತೆ ಆಮಿರ್​ ಖಾನ್​ ಶಾದಿ? ವೈರಲ್​ ಫೋಟೋದ ಅಸಲಿಯತ್ತು ಇಲ್ಲಿದೆ 

ಯಶ್​ ನಡೆದುಕೊಂಡ ರೀತಿ ನನಗೆ ಇಷ್ಟವಾಯಿತು, ನಾನು ಅವರ​ ಬಳಿ ಕ್ಷಮೆ ಕೇಳಿದೆ; ಆಮಿರ್​ ಖಾನ್​

Published On - 5:33 pm, Tue, 15 February 22

ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್