ಯಶ್​ ನಡೆದುಕೊಂಡ ರೀತಿ ನನಗೆ ಇಷ್ಟವಾಯಿತು, ನಾನು ಅವರ​ ಬಳಿ ಕ್ಷಮೆ ಕೇಳಿದೆ; ಆಮಿರ್​ ಖಾನ್​

‘ಕೆಜಿಎಫ್​ 2’ ಬಾಕ್ಸ್​ ಆಫೀಸ್​ ಡಾಮಿನೇಟ್​ ಮಾಡಲಿದ್ದಾರೆ ಎಂದು ರಾಕಿಂಗ್​ ಸ್ಟಾರ್​ ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಈ ಮಧ್ಯೆ, ಯಶ್​ ಅವರಿಗೆ ಆಮಿರ್​ ಖಾನ್​ ಕರೆ ಮಾಡಿ ಮಾತನಾಡಿದ್ದಾರೆ. ಅಷ್ಟೇ ಅಲ್ಲ, ಅವರ ಬಳಿ ಕ್ಷಮೆ ಕೂಡ ಕೇಳಿದ್ದಾರೆ.

ಯಶ್​ ನಡೆದುಕೊಂಡ ರೀತಿ ನನಗೆ ಇಷ್ಟವಾಯಿತು, ನಾನು ಅವರ​ ಬಳಿ ಕ್ಷಮೆ ಕೇಳಿದೆ; ಆಮಿರ್​ ಖಾನ್​
ಯಶ್​-ಆಮಿರ್​ ಖಾನ್​

ರಾಕಿಂಗ್​ ಸ್ಟಾರ್​ ಯಶ್​ ನಟನೆಯ ‘ಕೆಜಿಎಫ್​ 2’ ಹಾಗೂ ಆಮಿರ್​ ಖಾನ್​ ಅಭಿನಯದ ‘ಲಾಲ್​ ಸಿಂಗ್​ ಚಡ್ಡಾ’ ಸಿನಿಮಾ ಏಪ್ರಿಲ್​ 14ರಂದು ತೆರೆಗೆ ಬರುತ್ತಿದೆ. ಈ ಎರಡು ಸಿನಿಮಾಗಳು ಒಂದೇ ದಿನ ತೆರೆಗೆ ಬರುತ್ತಿರುವುದರಿಂದ ಬಾಕ್ಸ್​ ಆಫೀಸ್​ನಲ್ಲಿ ದೊಡ್ಡ ಕ್ಲ್ಯಾಶ್​ ಏರ್ಪಡುತ್ತಿದೆ. ಇದರಲ್ಲಿ ಯಾವ ಚಿತ್ರ ಗೆಲ್ಲಲಿದೆ ಎನ್ನುವ ಬಗ್ಗೆ ದೊಡ್ಡ ಚರ್ಚೆ ನಡೆಯುತ್ತಿದೆ. ‘ಕೆಜಿಎಫ್​ 2’ ಬಾಕ್ಸ್​ ಆಫೀಸ್​ ಡಾಮಿನೇಟ್​ ಮಾಡಲಿದೆ ಎಂದು ರಾಕಿಂಗ್​ ಸ್ಟಾರ್​ ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಈ ಮಧ್ಯೆ, ಯಶ್​ ಅವರಿಗೆ ಆಮಿರ್​ ಖಾನ್​ ಕರೆ ಮಾಡಿ ಮಾತನಾಡಿದ್ದಾರೆ. ಅಷ್ಟೇ ಅಲ್ಲ, ಅವರ ಬಳಿ ಕ್ಷಮೆ ಕೂಡ ಕೇಳಿದ್ದಾರೆ.

ಸಂದರ್ಶನವೊಂದರಲ್ಲಿ ಆಮಿರ್​ ಖಾನ್​ ಮಾತನಾಡಿದ್ದಾರೆ. ಈ ವೇಳೆ ಅವರು ಎಲ್ಲಾ ವಿಚಾರಗಳಿಗೆ ಸ್ಪಷ್ಟನೆ ನೀಡಿದ್ದಾರೆ. ‘ಸಿನಿಮಾ ಕೆಲಸಗಳನ್ನು ಮಾಡೋಕೆ ಎರಡು ವಿಧಾನವಿದೆ. ಒಂದು ತರಾತುರಿಯಲ್ಲಿ ಕೆಲಸ ಮುಗಿಸುವುದು, ಮತ್ತೊಂದು ನಿಧಾನವಾಗಿ ಕೂತ ಕೆಲಸ ಮಾಡುವುದು. ನಾನು ಎರಡನೇ ಆಯ್ಕೆಯನ್ನು ಮಾಡಿಕೊಂಡೆ. ಈ ಕಾರಣಕ್ಕೆ ಸಿನಿಮಾ ರಿಲೀಸ್​ ವಿಳಂಬವಾಯಿತು. ಹೀಗಾಗಿ, ನಾನು ಅಭಿಮಾನಿಗಳ ಬಳಿ ಕ್ಷಮೆ ಕೇಳುತ್ತೇನೆ’ ಎಂದಿದ್ದಾರೆ ಆಮಿರ್​ ಖಾನ್​.

‘ನಾನು ಇದೇ ಮೊದಲ ಬಾರಿಗೆ ಸಿಖ್​ ಅವತಾರ ತಾಳಿದ್ದೇನೆ. ಏಪ್ರಿಲ್​ 14 ಬೈಸಾಖಿ ದಿನ. ನಾನು ಆ ದಿನಕ್ಕಾಗಿ ಕಾದು ಕೂತಿದ್ದೇನೆ. ಸಿನಿಮಾ ರಿಲೀಸ್​ ದಿನಾಂಕ ಫೈನಲ್​ ಮಾಡುವುದಕ್ಕೂ ಮೊದಲು ‘ಕೆಜಿಎಫ್​ 2’ ನಿರ್ಮಾಪಕ ವಿಜಯ್​ ಕಿರಗಂದೂರು, ನಿರ್ದೇಶಕ ಪ್ರಶಾಂತ್​ ನೀಲ್​, ಹಾಗೂ ಯಶ್​ಗೆ ಕ್ಷಮೆ ಕೇಳಿದ್ದೆ’ ಎಂದಿದ್ದಾರೆ ಆಮಿರ್​ ಖಾನ್​.

‘ನಮ್ಮ ಸಿನಿಮಾವನ್ನು ಏಪ್ರಿಲ್​ 14ರಂದು ಏಕೆ ತೆರೆಮೇಲೆ ತರುತ್ತಿದ್ದೇವೆ ಮತ್ತು ಲಾಕ್​ಡೌನ್​ನಿಂದ ಸಿನಿಮಾ ಕೆಲಸಗಳು ಹೇಗೆ ವಿಳಂಬವಾದವು ಎನ್ನುವುದನ್ನು ವಿವರಿಸಿದ್ದೆ. ನಾನು ಹೇಳಿದ್ದನ್ನು ಅವರು ಅರ್ಥ ಮಾಡಿಕೊಂಡರು. ಸಿನಿಮಾ ರಿಲೀಸ್​ ಮಾಡುವಂತೆ ಹೇಳಿದರು. ಅವರು ನಡೆದುಕೊಂಡ ರೀತಿ ಇಷ್ಟವಾಯಿತು. ಯಶ್​ ಜತೆ ನಾನು ಸುದೀರ್ಘವಾಗಿ ಮಾತುಕತೆ ನಡೆಸಿದ್ದೆ’ ಎಂದಿದ್ದಾರೆ ಆಮಿರ್​ ಖಾನ್​.

ಇಂಗ್ಲಿಷ್​ನಲ್ಲಿ ತೆರೆಗೆ ಬಂದ ‘ಫಾರೆಸ್ಟ್​ ಗಂಪ್​’ ಚಿತ್ರದ ರಿಮೇಕ್​ ‘ಲಾಲ್​ ಸಿಂಗ್​ ಚಡ್ಡಾ’. ಆಮಿರ್​ ಖಾನ್​ ಹೆಚ್ಚು ಇಷ್ಟಪಟ್ಟು ಈ ಸಿನಿಮಾವನ್ನು ನಿರ್ಮಿಸಿ, ನಟಿಸುತ್ತಿದ್ದಾರೆ. ಕೊವಿಡ್​ ಕಾರಣದಿಂದ ಚಿತ್ರದ ಶೂಟಿಂಗ್​ ತಡವಾಗಿದೆ. ಇಲ್ಲವಾದರೆ ಈ ಸಿನಿಮಾ ಈ ವರ್ಷ ಕ್ರಿಸ್​ಮಸ್​ಗೆ ತೆರೆಗೆ ಬರಬೇಕಿತ್ತು. ಆದರೆ, ಎಲ್ಲ ಕೆಲಸಗಳು ವಿಳಂಬವಾಗಿವೆ. ಹೀಗಾಗಿ, ಈ ‘ಲಾಲ್​ ಸಿಂಗ್​ ಚಡ್ಡಾ’ ರಿಲೀಸ್​ ದಿನಾಂಕ ಏಪ್ರಿಲ್​ 14ಕ್ಕೆ ಮುಂದೂಡಲ್ಪಟ್ಟಿದೆ.

ಇದನ್ನೂ ಓದಿ: ಯಶ್​ ನಟನೆಯ ‘ಕೆಜಿಎಫ್​ 2’ಗೆ ಹೆದರಿದ ಬಾಲಿವುಡ್​; ರಿಲೀಸ್​ ದಿನಾಂಕ ಮುಂದೂಡಿದ ಸ್ಟಾರ್​ ನಟ

Click on your DTH Provider to Add TV9 Kannada