AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Megha Shetty: ಕಲರ್ಸ್​ ಕನ್ನಡದಲ್ಲಿ ಹೊಸ ಪ್ರಯತ್ನಕ್ಕೆ ಮುಂದಾದ ನಟಿ ಮೇಘಾ ಶೆಟ್ಟಿ

ಧಾರಾವಾಹಿಯಿಂದ ಮೇಘಾ ಶೆಟ್ಟಿಗೆ ಬೇಡಿಕೆ ಹೆಚ್ಚಿದೆ. ಇದಲ್ಲದೆ, ಹಿರಿ ತೆರೆಯಿಂದಲೂ ಮೇಘಾಗೆ ಬೇಡಿಕೆ ಬರುತ್ತಿದ್ದು, ಕೆಲವು ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ಈಗ ಮೇಘಾ ಶೆಟ್ಟಿಗೆ ನಿರ್ಮಾಣಕ್ಕೆ ಇಳಿದಿದ್ದಾರೆ.

Megha Shetty: ಕಲರ್ಸ್​ ಕನ್ನಡದಲ್ಲಿ ಹೊಸ ಪ್ರಯತ್ನಕ್ಕೆ ಮುಂದಾದ ನಟಿ ಮೇಘಾ ಶೆಟ್ಟಿ
ಮೇಘಾ ಶೆಟ್ಟಿ
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Mar 16, 2022 | 6:00 AM

Share

ಬಣ್ಣದ ಲೋಕದಲ್ಲಿ ಹೀರೋ/ಹೀರೋಯಿನ್​ ಆಗಿ ಗುರುತಿಸಿಕೊಂಡ ನಂತರ ಅನೇಕರು ಅಷ್ಟಕ್ಕೆ ಸೀಮಿತ ಆಗುವುದಿಲ್ಲ. ನಿರ್ಮಾಣ ಕೆಲಸಕ್ಕೆ ಕೈ ಹಾಕುತ್ತಾರೆ. ಇದರಲ್ಲಿ ಅನೇಕರು ಯಶಸ್ವಿ ಕಂಡಿದ್ದಾರೆ. ಇದಕ್ಕೆ ಈಗ ಹೊಸ ಸೇರ್ಪಡೆ ಮೇಘಾ ಶೆಟ್ಟಿ (Megha Shetty). ಈ ಕುರಿತು ಪ್ರೋಮೋ ಕೂಡ ಹಂಚಿಕೊಂಡಿದ್ದಾರೆ ಮೇಘಾ. ಅವರಿಗೆ ಎಲ್ಲರೂ ಶುಭ ಹಾರೈಸುತ್ತಿದ್ದಾರೆ. ಮೇಘಾ ಶೆಟ್ಟಿ ನಿರ್ಮಾಣದ (Production) ಹೊಸ ಧಾರಾವಾಹಿ ಹೆಸರು ಏನು? ಈ ಧಾರಾವಾಹಿಯ ವಿಶೇಷತೆಗಳು ಏನು ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

ಜೀ ಕನ್ನಡದಲ್ಲಿ ಪ್ರಸಾರ ಆಗುವ ‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ಅನು ಸಿರಿಮನೆ ಹೆಸರಿನ ಪಾತ್ರದಲ್ಲಿ ಮೇಘಾ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಆರ್ಯವರ್ಧನ್​ನನ್ನು (ಅನಿರುದ್ಧ) ಮದುವೆ ಆಗಿರುವ ಅನುಗೆ ಈಗ ಒಂದೊಂದಾಗಿಯೇ ನಿಜಾಂಶ ಗೊತ್ತಾಗುತ್ತಿದೆ. ಆರ್ಯವರ್ಧನ್​ ತಾನು ತಿಳಿದುಕೊಂಡಷ್ಟು ಒಳ್ಳೆಯವನಲ್ಲ ಎನ್ನುವುದು ಅನುಗೆ ಸ್ಪಷ್ಟವಾಗಿದೆ. ಈ ಧಾರಾವಾಹಿ ಹಲವು ತಿರುವು ಪಡೆದುಕೊಂಡು ಸಾಗುತ್ತಿದೆ. ಈ ಧಾರಾವಾಹಿಯಿಂದ ಮೇಘಾ ಶೆಟ್ಟಿಗೆ ಬೇಡಿಕೆ ಹೆಚ್ಚಿದೆ. ಇದಲ್ಲದೆ, ಹಿರಿ ತೆರೆಯಿಂದಲೂ ಮೇಘಾಗೆ ಬೇಡಿಕೆ ಬರುತ್ತಿದ್ದು, ಕೆಲವು ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ಈಗ ಮೇಘಾ ಶೆಟ್ಟಿಗೆ ನಿರ್ಮಾಣಕ್ಕೆ ಇಳಿದಿದ್ದಾರೆ.

ಸ್ಲಂ ರೀತಿಯ ಏರಿಯಾದಲ್ಲಿ ಬದುಕುತ್ತಾಳೆ ಕಥಾ ನಾಯಕಿ ಸುಮನಾ. ಆಕೆಯನ್ನು ಕಂಡರೆ ಎಲ್ಲರಿಗೂ ಅಚ್ಚುಮೆಚ್ಚು. ಪ್ರೀತಿ ಹಂಚೋಕೂ ಇವಳೇ ಬೇಕು, ಜಗಳ ನಿಲ್ಲಿಸೋಕೂ ಇವಳೇ ಬೇಕು. ಕೈಗೆ ಸಿಗದೇ ಇರೋದನ್ನು ಆಸೆ ಪಡಲ್ಲ. ಕೈ ತುತ್ತನ್ನ ಹಾಕೋದನ್ನು ಮಿಸ್ ಮಾಡೋದೆ ಇಲ್ಲ. ತಮ್ಮ ಎಂದರೆ ಆಕೆಗೆ ಸಾಕಷ್ಟು ಪ್ರೀತಿ. ಎಲ್ಲರ ಕಷ್ಟಕ್ಕೆ ಆಗ್ತಾಳೆ. ಈ ಧಾರಾವಾಹಿಯ ಹೆಸರು ‘ಕೆಂಡಸಂಪಿಗೆ’.

ವೈರಲ್​ ಆಗಿತ್ತು ಪ್ರ್ಯಾಂಕ್​ ಕಾಲ್​ ವಿಡಿಯೋ

ಇತ್ತೀಚೆಗೆ ‘ಗೋಲ್ಡನ್​ ಗ್ಯಾಂಗ್​’ ಕಾರ್ಯಕ್ರಮದಲ್ಲಿ ನಟ ಅನಿರುದ್ಧ್​, ಮಾಸ್ಟರ್​ ಆನಂದ್​ ಹಾಗೂ ವಿನಾಯಕ್ ಜೋಶಿ ಆಗಮಿಸಿದ್ದರು. ಇವರು ಮೇಘಾ ಶೆಟ್ಟಿಗೆ ಕಾಲ್​ ಮಾಡಿ ಪ್ರ್ಯಾಂಕ್​ ಮಾಡಿದ್ದರು.

ವಿನಾಯಕ್​ ಜೋಶಿ ಅವರು ಮೇಘಾಗೆ ಕರೆ ಮಾಡಿದ್ದರು. ‘ನಾನು ವಿಗ್​ ಕುಮಾರ್​. ನೀವು ಸೀರಿಯಲ್​ಗೆ ವಿಗ್​ ಬೇಕು ಎಂದಿದ್ದೀರಲ್ಲ’ ಎಂದರು ವಿನಾಯಕ್​ ಜೋಶಿ. ‘ಕ್ಷಮಿಸಿ, ರಾಂಗ್​ ನಂಬರ್​. ನಾನು ವಿಗ್​ ಹೇಳಿಲ್ಲ. ನೀವು ಕನ್​ಫ್ಯೂಸ್​ ಆಗಿದ್ದೀರಿ ಅನಿಸುತ್ತದೆ. ನನಗೆ ನ್ಯಾಚುರಲ್​ ಆಗಿಯೇ ಕೂದಲು ಇದೆ’ ಎಂದರು ಮೇಘಾ ಶೆಟ್ಟಿ. ಇಬ್ಬರೂ ಚರ್ಚೆ ನಡೆಸುತ್ತಲೇ ಇದ್ದರು. ಆ ಬಳಿಕ ಮಾಸ್ಟರ್​ ಆನಂದ್​ ಮಾತನಾಡಿದ್ದರು.

‘ರಾಜ ನಂದಿನಿ ಪಾತ್ರಕ್ಕೆ ಬೇಕು ಅಂತ ನೀವೇ ಹೇಳಿದ್ರಿ. ಅದಕ್ಕಾಗಿ ವಿಗ್​ ಮಾಡಿಸಿದ್ದೀವಿ’ ಎಂದು ಮಾಸ್ಟರ್​ ಆನಂದ್ ಹೇಳಿದರು. ‘ನಾನು ರಾಜನಂದಿನಿ ಪಾತ್ರ ಮಾಡುತ್ತಾ ಇಲ್ಲ. ನೀವು ಕನ್​ಫ್ಯೂಸ್​ ಆಗಿದ್ದೀರಿ’ ಎಂದು ಮೇಘಾ ಶೆಟ್ಟಿ ಮತ್ತೆಮತ್ತೆ ಹೇಳಿದರು. ಕೊನೆಯಲ್ಲಿ ಕರೆ ಎತ್ತಿಕೊಂಡಿದ್ದು ಅನಿರುದ್ಧ್​ ಅವರು. ಅವರು ಮಾತನಾಡುತ್ತಿದ್ದಂತೆ ಮೇಘಾ ಶೆಟ್ಟಿಗೆ ಈ ವಿಚಾರ ಗೊತ್ತಾಗಿದೆ. ಆ ಬಳಿಕ ಅವರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದರು.

ಇದನ್ನೂ ಓದಿ: ‘ಜೊತೆ ಜೊತೆಯಲಿ’ ಮೇಘಾ ಶೆಟ್ಟಿಗೆ ಬಹುಭಾಷಾ ಸಿನಿಮಾ ಆಫರ್​; ಈ ಚಿತ್ರಕ್ಕೆ ಹೀರೋ ಯಾರು?

‘ಜೊತೆ ಜೊತೆಯಲಿ’ ಧಾರಾವಾಹಿ ಮೇಘಾ ಶೆಟ್ಟಿಗೆ ಬಂತು ಪ್ರ್ಯಾಂಕ್​ ಕಾಲ್​​; ನಟಿಯ ಉತ್ತರ ಹೇಗಿತ್ತು?