AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಜೊತೆ ಜೊತೆಯಲಿ’ ಧಾರಾವಾಹಿ ಮೇಘಾ ಶೆಟ್ಟಿಗೆ ಬಂತು ಪ್ರ್ಯಾಂಕ್​ ಕಾಲ್​​; ನಟಿಯ ಉತ್ತರ ಹೇಗಿತ್ತು?

ಕಳೆದ ವಾರ ಈ ಶೋಗೆ ನಟ ಅನಿರುದ್ಧ್​, ಮಾಸ್ಟರ್​ ಆನಂದ್​ ಹಾಗೂ ವಿನಾಯಕ್ ಜೋಶಿ ಆಗಮಿಸಿದ್ದರು. ಇವರು ಮೇಘಾ ಶೆಟ್ಟಿಗೆ ಕಾಲ್​ ಮಾಡಿ ಪ್ರ್ಯಾಂಕ್​ ಮಾಡಿದ್ದಾರೆ.

‘ಜೊತೆ ಜೊತೆಯಲಿ’ ಧಾರಾವಾಹಿ ಮೇಘಾ ಶೆಟ್ಟಿಗೆ ಬಂತು ಪ್ರ್ಯಾಂಕ್​ ಕಾಲ್​​; ನಟಿಯ ಉತ್ತರ ಹೇಗಿತ್ತು?
ಮೇಘಾ ಶೆಟ್ಟಿ
TV9 Web
| Edited By: |

Updated on: Mar 05, 2022 | 7:51 AM

Share

ನಟಿ ಮೇಘಾ ಶೆಟ್ಟಿ(Megha Shetty) ಅವರು ‘ಜೊತೆ ಜೊತೆಯಲಿ’ ಧಾರಾವಾಹಿ (Jothe Jotheyali) ಮೂಲಕ ಸಾಕಷ್ಟು ಹೆಸರು ಮಾಡಿದ್ದಾರೆ. ಅವರು ಸೋಶಿಯಲ್ ಮೀಡಿಯಾದಲ್ಲೂ ಆ್ಯಕ್ಟೀವ್​ ಆಗಿದ್ದಾರೆ. ಅವರನ್ನು ಕಂಡರೆ ಅನೇಕರಿಗೆ ಅಚ್ಚುಮೆಚ್ಚು. ಕಿರುತೆರೆ ಮಾತ್ರವಲ್ಲದೆ, ಹಿರಿತೆರೆಯಲ್ಲೂ ಅವರು ಆ್ಯಕ್ಟೀವ್​ ಆಗಿದ್ದಾರೆ. ಕೆಲ ಸಿನಿಮಾಗಳನ್ನು ಒಪ್ಪಿಕೊಂಡು ಮಾಡುತ್ತಿದ್ದಾರೆ. ಈಗ ಅವರನ್ನು ಪ್ರ್ಯಾಂಕ್​ ಮಾಡಲಾಗಿದೆ. ಈ ವಿಡಿಯೋ ಈಗ ಸಖತ್ ವೈರಲ್​ ಆಗುತ್ತಿದೆ. ಹಾಗಾದರೆ ಅವರಿಗೆ ಯಾವ ವಿಚಾರ ಇಟ್ಟುಕೊಂಡು ಪ್ರ್ಯಾಂಕ್​ ಮಾಡಲಾಗಿದೆ? ಪ್ರ್ಯಾಂಕ್​ ಮಾಡಿದವರು ಯಾರು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

ಜ.8ರಿಂದ ಈ ಹೊಚ್ಚ ಹೊಸ ರಿಯಾಲಿಟಿ ಶೋ ‘ಗೋಲ್ಡನ್​ ಗ್ಯಾಂಗ್​’ ಪ್ರಸಾರ ಆರಂಭ ಆಗಿದೆ. ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ವೀಕ್ಷಕರು ‘ಗೋಲ್ಡನ್​ ಗ್ಯಾಂಗ್​’ ಪ್ರಸಾರ ಆಗುತ್ತಿದೆ. ಜೀವನದ ಎಲ್ಲ ಪ್ರಮುಖ ಘಟ್ಟಗಳಲ್ಲೂ ಭಾಗವಾಗಿರುವ ಸ್ನೇಹಿತರು ಪ್ರತಿಯೊಬ್ಬರ ಪಾಲಿಗೂ ಮಹತ್ವದ ಪಾತ್ರ ವಹಿಸುತ್ತಾರೆ. ಕುಟುಂಬದಷ್ಟೇ ಸರಿಸಮನಾಗಿ, ನಂತರ ತಾವೂ ಕೂಡ ಕುಟುಂಬದ ಭಾಗವಾಗುವ ಸ್ನೇಹಿತರಿಗೆ ಜೀ ಕನ್ನಡ ವಾಹಿನಿ ಈ ಕಾರ್ಯಕ್ರಮವನ್ನು ಅರ್ಪಿಸಿದೆ. ಇದರ ಜೊತೆಗೆ ಒಂದಷ್ಟು ಮೋಜು-ಮಸ್ತಿ, ಆಟ-ತುಂಟಾಟ ಕೂಡ ಈ ಶೋನಲ್ಲಿ ಇದೆ. ಕಳೆದ ವಾರ ಈ ಶೋಗೆ ನಟ ಅನಿರುದ್ಧ್​, ಮಾಸ್ಟರ್​ ಆನಂದ್​ ಹಾಗೂ ವಿನಾಯಕ್ ಜೋಶಿ ಆಗಮಿಸಿದ್ದರು. ಇವರು ಮೇಘಾ ಶೆಟ್ಟಿಗೆ ಕಾಲ್​ ಮಾಡಿ ಪ್ರ್ಯಾಂಕ್​ ಮಾಡಿದ್ದಾರೆ.

ವಿನಾಯಕ್​ ಜೋಶಿ ಅವರು ಮೇಘಾಗೆ ಕರೆ ಮಾಡಿದ್ದಾರೆ. ‘ನಾನು ವಿಗ್​ ಕುಮಾರ್​. ನೀವು ಸೀರಿಯಲ್​ಗೆ ವಿಗ್​ ಬೇಕು ಎಂದಿದ್ದೀರಲ್ಲ’ ಎಂದರು ವಿನಾಯಕ್​ ಜೋಶಿ. ‘ಕ್ಷಮಿಸಿ, ರಾಂಗ್​ ನಂಬರ್​. ನಾನು ವಿಗ್​ ಹೇಳಿಲ್ಲ. ನೀವು ಕನ್​ಫ್ಯೂಸ್​ ಆಗಿದ್ದೀರಿ ಅನಿಸುತ್ತದೆ. ನನಗೆ ನ್ಯಾಚುರಲ್​ ಆಗಿಯೇ ಕೂದಲು ಇದೆ’ ಎಂದರು ಮೇಘಾ ಶೆಟ್ಟಿ. ಇಬ್ಬರೂ ಚರ್ಚೆ ನಡೆಸುತ್ತಲೇ ಇದ್ದರು. ಆ ಬಳಿಕ ಮಾಸ್ಟರ್​ ಆನಂದ್​ ಮಾತನಾಡಿದರು.

‘ರಾಜ ನಂದಿನಿ ಪಾತ್ರಕ್ಕೆ ಬೇಕು ಅಂತ ನೀವೇ ಹೇಳಿದ್ರಿ. ಅದಕ್ಕಾಗಿ ವಿಗ್​ ಮಾಡಿಸಿದ್ದೀವಿ’ ಎಂದು ಮಾಸ್ಟರ್​ ಆನಂದ್ ಹೇಳಿದರು. ‘ನಾನು ರಾಜನಂದಿನಿ ಪಾತ್ರ ಮಾಡುತ್ತಾ ಇಲ್ಲ. ನೀವು ಕನ್​ಫ್ಯೂಸ್​ ಆಗಿದ್ದೀರಿ’ ಎಂದು ಮೇಘಾ ಶೆಟ್ಟಿ ಮತ್ತೆಮತ್ತೆ ಹೇಳಿದರು. ಕೊನೆಯಲ್ಲಿ ಕರೆ ಎತ್ತಿಕೊಂಡಿದ್ದು ಅನಿರುದ್ಧ್​ ಅವರು. ಅವರು ಮಾತನಾಡುತ್ತಿದ್ದಂತೆ ಮೇಘಾ ಶೆಟ್ಟಿಗೆ ಈ ವಿಚಾರ ಗೊತ್ತಾಗಿದೆ. ಆ ಬಳಿಕ ಅವರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.

ಇದನ್ನೂ ಓದಿ: ಮೇಘಾ ಶೆಟ್ಟಿ ಮನೆಗೆ ಬಂತು ಎರಡು ಐಷಾರಾಮಿ ಕಾರು; ಖುಷಿ ಹಂಚಿಕೊಂಡ ನಟಿ

ಡಾರ್ಲಿಂಗ್​ ಕೃಷ್ಣ ಜೊತೆ ಮೇಘಾ ಶೆಟ್ಟಿ ‘ದಿಲ್​ ಪಸಂದ್’​; ‘ಜೊತೆ ಜೊತೆಯಲಿ’ ನಟಿಗೆ ಸಿಕ್ಕ ಪಾತ್ರ ಹೇಗಿದೆ?

ಬೆಂಗಳೂರು ಮೆಟ್ರೋ ವಿಸ್ತರಣೆ ಬಗ್ಗೆ ದೆಹಲಿಯಲ್ಲಿ ಡಿಕೆಶಿ ಬಿಗ್ ಅಪ್ಡೇಟ್!
ಬೆಂಗಳೂರು ಮೆಟ್ರೋ ವಿಸ್ತರಣೆ ಬಗ್ಗೆ ದೆಹಲಿಯಲ್ಲಿ ಡಿಕೆಶಿ ಬಿಗ್ ಅಪ್ಡೇಟ್!
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್‌ ಗಡಿಯಲ್ಲಿ ದೈತ್ಯ ಹುಲಿ ಪ್ರತ್ಯಕ್ಷ
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್‌ ಗಡಿಯಲ್ಲಿ ದೈತ್ಯ ಹುಲಿ ಪ್ರತ್ಯಕ್ಷ
ಜಮೀರ್ ಅಹ್ಮದ್ ಆಪ್ತಗೆ ಲೋಕಾ ಶಾಕ್! ಎಲ್ಲೆಲ್ಲಿ ಆಸ್ತಿ, ಸಂಪತ್ತಿದೆ ಗೊತ್ತೇ?
ಜಮೀರ್ ಅಹ್ಮದ್ ಆಪ್ತಗೆ ಲೋಕಾ ಶಾಕ್! ಎಲ್ಲೆಲ್ಲಿ ಆಸ್ತಿ, ಸಂಪತ್ತಿದೆ ಗೊತ್ತೇ?
ಅಂಜನಾದ್ರಿ: ಆಂಜನೇಯನ ಗರ್ಭಗುಡಿಯಲ್ಲೇ ಸ್ವಾಮೀಜಿಗಳ ಫೈಟ್, ವಿಡಿಯೋ ವೈರಲ್
ಅಂಜನಾದ್ರಿ: ಆಂಜನೇಯನ ಗರ್ಭಗುಡಿಯಲ್ಲೇ ಸ್ವಾಮೀಜಿಗಳ ಫೈಟ್, ವಿಡಿಯೋ ವೈರಲ್
ಮಗಳನ್ನು ಮದುವೆ ಮಾಡಿಕೊಡಲಿಲ್ಲವೆಂದು ತಾಯಿಗೆ ಬೆಂಕಿ ಹಚ್ಚಿದ ಕಿರಾತಕ!
ಮಗಳನ್ನು ಮದುವೆ ಮಾಡಿಕೊಡಲಿಲ್ಲವೆಂದು ತಾಯಿಗೆ ಬೆಂಕಿ ಹಚ್ಚಿದ ಕಿರಾತಕ!
ಫ್ಯಾನ್ ವಾರ್ ಬಗ್ಗೆ ಮಾತನಾಡಲ್ಲ ಎಂದ ಸಾಧು ಕೋಕಿಲ
ಫ್ಯಾನ್ ವಾರ್ ಬಗ್ಗೆ ಮಾತನಾಡಲ್ಲ ಎಂದ ಸಾಧು ಕೋಕಿಲ
‘ಶಿವ ತಾಂಡವ ನೋಡಿದಂತಾಯ್ತು’; ಹೊರಬಿತ್ತು‘45’ ಚಿತ್ರದ ಮೊದಲ ವಿಮರ್ಶೆ
‘ಶಿವ ತಾಂಡವ ನೋಡಿದಂತಾಯ್ತು’; ಹೊರಬಿತ್ತು‘45’ ಚಿತ್ರದ ಮೊದಲ ವಿಮರ್ಶೆ
140 ಕೆಜಿ ಬೆಳ್ಳಿ ದೋಚಿದ್ದು ಸಿಸಿ ಕ್ಯಾಮೆರಾದಲ್ಲಿ ಸೆರೆ
140 ಕೆಜಿ ಬೆಳ್ಳಿ ದೋಚಿದ್ದು ಸಿಸಿ ಕ್ಯಾಮೆರಾದಲ್ಲಿ ಸೆರೆ
ವಿಚ್ಛೇದನ ನೋಟಿಸ್‌ ನೀಡಿದಕ್ಕೆ ಪತ್ನಿಯ ಮೇಲೆ ಗುಂಡು ಹಾರಿಸಿದ ಪತಿ
ವಿಚ್ಛೇದನ ನೋಟಿಸ್‌ ನೀಡಿದಕ್ಕೆ ಪತ್ನಿಯ ಮೇಲೆ ಗುಂಡು ಹಾರಿಸಿದ ಪತಿ
ಕೃಷಿ ಅಧಿಕಾರಿ ಬಳಿ 2.50 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಪತ್ತೆ!
ಕೃಷಿ ಅಧಿಕಾರಿ ಬಳಿ 2.50 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಪತ್ತೆ!