ಉಕ್ರೇನ್​ನಲ್ಲಿ ಸಿಲುಕಿದ್ದಾರೆ ಕಿರುತೆರೆ ನಟಿ?; ಸ್ಪಷ್ಟನೆ ನೀಡಿದ ಪ್ರಿಯಾ ಮೋಹನ್  

ಉಕ್ರೇನ್​ನಲ್ಲಿ ಸಿಲುಕಿದ್ದಾರೆ ಕಿರುತೆರೆ ನಟಿ?; ಸ್ಪಷ್ಟನೆ ನೀಡಿದ ಪ್ರಿಯಾ ಮೋಹನ್  
ಪ್ರಿಯಾ ಮೋಹನ್

ಈ ಸುದ್ದಿ ನೋಡಿ ಪ್ರಿಯಾ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದರು. ಅವರಿಗೆ ಅನೇಕರು ಮೆಸೇಜ್​ ಮಾಡಿ ಪರಿಸ್ಥಿತಿ ವಿಚಾರಿಸಿದ್ದರು. ಇದು ಪ್ರಿಯಾ ಗಮನಕ್ಕೂ ಬಂದಿದೆ.

TV9kannada Web Team

| Edited By: Rajesh Duggumane

Feb 28, 2022 | 5:07 PM

ರಷ್ಯಾ (Russia)ಹಾಗೂ ಉಕ್ರೇನ್ (Ukraine)​ ನಡುವೆ ಯುದ್ಧ ನಡೆಯುತ್ತಿದೆ. ಉಕ್ರೇನ್​ನಲ್ಲಿರುವ ಅನೇಕ ಭಾರತೀಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರನ್ನು ಭಾರತಕ್ಕೆ ಕರೆತರೋಕೆ ಎಲ್ಲ ರೀತಿಯ ಪ್ರಯತ್ನಗಳು ನಡೆಯುತ್ತಿವೆ. ರಷ್ಯಾದ ದಾಳಿಯಿಂದ ಉಕ್ರೇನ್​ ತತ್ತರಿಸಿ ಹೋಗಿದ್ದು, ಅಲ್ಲಿನ ಜನರು ಪ್ರಾಣವನ್ನು ಕೈಯಲ್ಲಿ ಹಿಡಿದು ಕೂತಿದ್ದಾರೆ. ಆ ದೇಶದಲ್ಲಿ ಸಿಲುಕಿರುವ ಅನೇಕ ಭಾರತೀಯರು ಸೋಶಿಯಲ್​ ಮೀಡಿಯಾದಲ್ಲಿ ತಮ್ಮ ದುಃಖ ತೋಡಿಕೊಳ್ಳುತ್ತಿದ್ದಾರೆ. ಕಿರುತೆರೆ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗಿರುವ ನಟಿ ಪ್ರಿಯಾ ಮೋಹನ್ (Priya Mohan) ಕೂಡ ಉಕ್ರೇನ್​ನಲ್ಲಿ ಸಿಲುಕಿದ್ದಾರೆ ಎಂದು ವರದಿ ಆಗಿತ್ತು. ಇದಕ್ಕೆ ನಟಿಯ ಕಡೆಯಿಂದ ಸ್ಪಷ್ಟನೆ ಸಿಕ್ಕಿದೆ. ನಟ, ಉದ್ಯಮಿ ನಿಹಾಲ್ ಪಿಳ್ಳೆ ಅವರನ್ನು ಪ್ರಿಯಾ ಮೋಹನ್​ ಮದುವೆ ಆಗಿದ್ದಾರೆ. ಮದುವೆ ನಂತರ ಅವರು ನಟನೆಯಿಂದ ಬ್ರೇಕ್​ ತೆಗೆದುಕೊಂಡು, ಕುಟುಂಬಕ್ಕೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಅವರು ಸಾಮಾಜಿಕ ಮಾಧ್ಯಮದಲ್ಲಿ ಆ್ಯಕ್ಟೀವ್​ ಆಗಿದ್ದಾರೆ. ಅವರು ಯೂಟ್ಯೂಬ್​ ಚಾನೆಲ್​ ಕೂಡ ನಡೆಸುತ್ತಿದ್ದು, ಅದರ ಮೂಲಕ ಒಂದಷ್ಟು ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಇವರು ಉಕ್ರೇನ್​ನಲ್ಲಿ ಸಿಲುಕಿದ್ದಾರೆ ಎಂದು ವರದಿ ಆಗಿತ್ತು.

ಈ ಸುದ್ದಿ ನೋಡಿ ಪ್ರಿಯಾ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದರು. ಅವರಿಗೆ ಅನೇಕರು ಮೆಸೇಜ್​ ಮಾಡಿ ಪರಿಸ್ಥಿತಿ ವಿಚಾರಿಸಿದ್ದರು. ಈ ವಿಚಾರವನ್ನು ಕೆಲವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡು, ಪ್ರಿಯಾ ಅವರನ್ನು ರಕ್ಷಣೆ ಮಾಡಿ ಎಂದು ಕೋರಿಕೊಂಡಿದ್ದರು. ಇದು ಪ್ರಿಯಾ ಗಮನಕ್ಕೂ ಬಂದಿದೆ. ಈ ಬಗ್ಗೆ ಅವರು ಸ್ಪಷ್ಟನೆ ನೀಡಿದ್ದಾರೆ. ‘ಇದು ಫೇಕ್ ನ್ಯೂಸ್​. ನಾನು ಕೊಚ್ಚಿಯಲ್ಲಿ ಕುಟುಂಬದ ಜತೆಗೆ ಹಾಯಾಗಿದ್ದೇನೆ. ಈ ರೀತಿಯ ಸುಳ್ಳು ಸುದ್ದಿ ಹಬ್ಬಿಸಬೇಡಿ’ ಎಂದು ಅವರು ಕೋರಿದ್ದಾರೆ.

ಪ್ರಿಯಾ ಮೋಹನ್​, ನಿಹಾಲ್​ ಹಾಗೂ ಅವರ ಮಗ ಕೆಲ ತಿಂಗಳ ಹಿಂದೆ ಉಕ್ರೇನ್​ಗೆ ತೆರಳಿದ್ದರು. ಅಲ್ಲಿ ಕೆಲ ಫೋಟೋಗಳನ್ನು ಅವರು ಕ್ಲಿಕ್ಕಿಸಿಕೊಂಡಿದ್ದರು. ಅಲ್ಲಿ ವಿಡಿಯೋ ಮಾಡಿ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈ ಫೋಟೋ-ವಿಡಿಯೋಗಳನ್ನು ತಿರುಚಿ ತಪ್ಪಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳಲಾಗಿದೆ.

ಪ್ರಿಯಾ ಮೋಹನ್​ ಸಹೋದರಿ ಪೂರ್ಣಿಮಾ ಇಂದ್ರಜಿತ್​. ಮಲಯಾಳಂನ ಖ್ಯಾತ ನಟ ಇಂದ್ರಜಿತ್​ ಸುಕುಮಾರನ್​ ಅವರನ್ನು ಪೂರ್ಣಿಮಾ ವರಿಸಿದ್ದಾರೆ. ಪೂರ್ಣಿಮಾ ಕೂಡ ಚಿತ್ರರಂಗದಲ್ಲಿ ಆ್ಯಕ್ಟೀವ್​ ಆಗಿದ್ದಾರೆ. ಪ್ರಿಯಾ ಮೋಹನ್​ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂಬ ಸುದ್ದಿ ಪೂರ್ಣಿಮಾ ಅಭಿಮಾನಿಗಳಲ್ಲೂ ಆತಂಕ ತಂದೊಡ್ಡಿತ್ತು.

ಇದನ್ನೂ ಓದಿ: ಪುನೀತ್​ ರಾಜ್​ಕುಮಾರ್​ ಹೆಸರಲ್ಲಿ ಉಡಾವಣೆ ಆಗಲಿದೆ ಉಪಗ್ರಹ; ಇದಕ್ಕೆ ತಗಲುತ್ತಿರುವ ವೆಚ್ಚ ಎಷ್ಟು?

ಬೆನ್ನತ್ತಿ ಬಂತು ಯುದ್ಧ; ಅಫ್ಘಾನ್​​ನಿಂದ ತಪ್ಪಿಸಿಕೊಂಡು ಉಕ್ರೇನ್​ಗೆ ಬಂದಿದ್ದ ವ್ಯಕ್ತಿಯ ದುರದೃಷ್ಟದ ಕತೆ ಇದು

Follow us on

Related Stories

Most Read Stories

Click on your DTH Provider to Add TV9 Kannada