ಟಿಆರ್​ಪಿ ರೇಸ್​ನಲ್ಲಿ ಅಚ್ಚರಿ ಮೂಡಿಸಿದ ಹೊಸ ಧಾರಾವಾಹಿ; ನಾಲ್ಕೇ ಎಪಿಸೋಡ್​ನಲ್ಲಿ ಆಯ್ತು ಮೋಡಿ

ಸದ್ಯ, ಹಿಂದಿ ಧಾರಾವಾಹಿಗಳ ಟಿಆರ್​ಪಿ ಲಿಸ್ಟ್​ ಬಂದಿದೆ. ಈ ಪಟ್ಟಿಯಲ್ಲಿ ತೇಜಸ್ವಿ ಪ್ರಕಾಶ್​ ನಟನೆಯ ‘ನಾಗಿನ್​ 6’ ಧಾರಾವಾಹಿ ಕೂಡ ಸ್ಥಾನ ಪಡೆದುಕೊಂಡಿದೆ. ಈ ಧಾರಾವಾಹಿಗೆ ಆರಂಭದಲ್ಲೇ 2.1 ರೇಟಿಂಗ್​ ಸಿಕ್ಕಿದೆ.

ಟಿಆರ್​ಪಿ ರೇಸ್​ನಲ್ಲಿ ಅಚ್ಚರಿ ಮೂಡಿಸಿದ ಹೊಸ ಧಾರಾವಾಹಿ; ನಾಲ್ಕೇ ಎಪಿಸೋಡ್​ನಲ್ಲಿ ಆಯ್ತು ಮೋಡಿ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Feb 27, 2022 | 7:34 PM

ಕಿರುತೆರೆ ಲೋಕ ಸಂಪೂರ್ಣವಾಗಿ ಬದಲಾಗಿದೆ. ಸಿನಿಮಾ ಗುಣಮಟ್ಟದಲ್ಲೇ ಧಾರಾವಾಹಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಮೇಕಿಂಗ್​ ವಿಚಾರದಲ್ಲಿ ಹಿರಿತೆರೆಗೆ ಕಾಂಪಿಟೇಷನ್​ ಕೊಡುವಷ್ಟರಮಟ್ಟಿಗೆ ಕಿರುತೆರೆ ಬೆಳೆದು ನಿಂತಿದೆ. ಸಿನಿಮಾದಲ್ಲಿ ಮಾಡಿದಂತೆ ಧಾರಾವಾಹಿಗಳಲ್ಲೂ ಅದ್ದೂರಿ ಸೆಟ್​ಗಳನ್ನು ಹಾಕಲಾಗುತ್ತದೆ. ಮುಖ್ಯವಾಗಿ ವಾಹಿನಿಗಳ ಮಧ್ಯೆ ಟಿಆರ್​ಪಿ ರೇಸ್​ ಇದೆ. ಇತ್ತೀಚೆಗೆ ಆರಂಭವಾದ ‘ನಾಗಿನ್​ 6’ (Nagin 6)ಟಿಆರ್​ಪಿ ರೇಸ್​ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ. ಅಚ್ಚರಿ ಎಂದರೆ, ಧಾರಾವಾಹಿ ಆರಂಭವಾದ ಒಂದೇ ವಾರದಲ್ಲಿ ಆರನೇ ಸ್ಥಾನಕ್ಕೆ ಜಿಗಿದಿದೆ. ‘ಹಿಂದಿ ಬಿಗ್​ ಬಾಸ್​ 15’ ವಿನ್ನರ್​ (Bigg Bosss 15 Winner) ತೇಜಸ್ವಿ ಪ್ರಕಾಶ್ (Tejaswi Prakash)​ ಅವರು ದೊಡ್ಡಮನೆಯಿಂದ ಸಾಕಷ್ಟು ಜನಪ್ರಿಯತೆ ಪಡೆದುಕೊಂಡರು. ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿಯಾಗಿದೆ. ಬಿಗ್​ ಬಾಸ್​ ವಿನ್ನರ್​ ಆಗುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ದೊಡ್ಮನೆಯಲ್ಲಿರುವಾಗಲೇ ಅವರಿಗೆ ‘ನಾಗಿನ್​ 6’ಗೆ ಆಫರ್​ ಬಂದಿತ್ತು. ಅದನ್ನು ಅವರು ಒಪ್ಪಿಕೊಂಡು ಮಾಡುತ್ತಿದ್ದಾರೆ. ಈ ಧಾರಾವಾಹಿ ಎಲ್ಲ ಕಡೆಗಳಿಂದ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಈ ಧಾರಾವಾಹಿ ಫೆ.12ರಿಂದ ಪ್ರಸಾರ ಆರಂಭಿಸಿದ್ದು, ಶನಿವಾರ ಹಾಗೂ ಭಾನುವಾರ ಮಾತ್ರ ಪ್ರಸಾರವಾಗುತ್ತದೆ.

ಸದ್ಯ, ಹಿಂದಿ ಧಾರಾವಾಹಿಗಳ ರೇಟಿಂಗ್​ ಲಿಸ್ಟ್​ ಬಂದಿದೆ. ಈ ಪಟ್ಟಿಯಲ್ಲಿ ತೇಜಸ್ವಿ ಪ್ರಕಾಶ್​ ನಟನೆಯ ‘ನಾಗಿನ್​ 6’ ಧಾರಾವಾಹಿ ಕೂಡ ಸ್ಥಾನ ಪಡೆದುಕೊಂಡಿದೆ. ಈ ಧಾರಾವಾಹಿಗೆ ಆರಂಭದಲ್ಲೇ 2.1 ರೇಟಿಂಗ್ ಸಿಕ್ಕಿದೆ. ಹೊಸ ಧಾರಾವಾಹಿಗೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ರೇಟಿಂಗ್​ ಸಿಕ್ಕಿರುವುದಕ್ಕೆ ಧಾರಾವಾಹಿ ತಂಡ ಖುಷಿಯಾಗಿದೆ. ಇದನ್ನು ನಿರ್ಮಾಣ ಮಾಡುತ್ತಿರುವ ಏಕ್ತಾ ಕಪೂರ್​ ಅವರು ಸಖತ್​ ಖುಷಿಯಾಗಿದ್ದಾರೆ.

‘ನಾನು ತುಂಬಾ ಸಂತೋಷಗೊಂಡಿದ್ದೇನೆ. ಟಿಆರ್‌ಪಿ ಬಗ್ಗೆ ತಿಳಿದಾಗ, ನನಗೆ ಮೊದಲು ನಂಬಲಾಗಲಿಲ್ಲ. ಪ್ರೇಕ್ಷಕರು ಈ ಧಾರಾವಾಹಿ ಮೇಲೆ ತೋರಿಸುತ್ತಿರುವ ಎಲ್ಲಾ ಪ್ರೀತಿಗೆ ಧನ್ಯವಾದ’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ ಏಕ್ತಾ ಕಪೂರ್.

View this post on Instagram

A post shared by ColorsTV (@colorstv)

ತೇಜಸ್ವಿ ಪ್ರಕಾಶ್​ ಅವರ ಅಭಿಮಾನಿ ಬಳಗ ಹಿರಿದಾಗಿದೆ. ಅವರಿಗೋಸ್ಕರ ಈ ಧಾರಾವಾಹಿ ನೋಡುವವರ ಸಂಖ್ಯೆಯೂ ದೊಡ್ದದಿದೆ. ಕಲರ್ಸ್​ನಲ್ಲಿ ಪ್ರಸಾರವಾಗುವ ಈ ಧಾರಾವಾಹಿ ಎಲ್ಲ ಕಡೆಗಳಿಂದ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಈ ಧಾರಾವಾಹಿ ಯಾವ ರೀತಿಯಲ್ಲಿ ಸಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ. ಈಗಷ್ಟೇ ‘ನಾಗಿನ್​ 6’ ಆರಂಭಗೊಂಡಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ವೀಕ್ಷಕರನ್ನು ಇದು ಸೆಳೆದುಕೊಳ್ಳಬಹುದು.

ಇದನ್ನೂ ಓದಿ: Rakhi Sawant: ರಾಖಿ ಸಾವಂತ್ ನಿಗೂಢ ದಾಂಪತ್ಯಕ್ಕೆ ತೆರೆ?; ಬಿಗ್ ಬಾಸ್​ನಲ್ಲಿ ಅಚ್ಚರಿಯ ಬೆಳವಣಿಗೆ

ಬಿಗ್ ಬಾಸ್ ಒಟಿಟಿಯಲ್ಲಿ ಯಾವುದು ನಿಜ, ಯಾವುದು ಸುಳ್ಳು; ಚರ್ಚೆ ಹುಟ್ಟುಹಾಕಿತು ರಾಕೇಶ್ ಬಾಪಟ್ ಹೇಳಿಕೆ

Published On - 6:29 pm, Sun, 27 February 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ