AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Alia Bhatt: ‘ಗಂಗೂಬಾಯಿ’ ಯಶಸ್ಸಿನ ಬೆನ್ನಲ್ಲೇ ಹಾಲಿವುಡ್ ಕಡೆ ಮುಖ ಮಾಡಿದ್ರಾ ಆಲಿಯಾ? ಇಲ್ಲಿದೆ ಹೊಸ ಸಮಾಚಾರ

Heart of Stone | Gal Gadot: ‘ಗಂಗೂಬಾಯಿ ಕಾಠಿಯಾವಾಡಿ’ ಯಶಸ್ಸಿನ ಬೆನ್ನಲ್ಲೇ ಆಲಿಯಾ ಭಟ್ ಹೊಸ ಚಿತ್ರದ ಬಗ್ಗೆ ಮಾಹಿತಿ ಹರಿದಾಡುತ್ತಿದೆ. ನೆಟ್​ಫ್ಲಿಕ್ಸ್ ಒರಿಜಿನಲ್ ಚಿತ್ರದ ಮೂಲಕ ಆಲಿಯಾ ಹಾಲಿವುಡ್ ಪ್ರವೇಶ ಮಾಡಲಿದ್ದಾರೆ ಎಂದಿವೆ ವರದಿಗಳು.

Alia Bhatt: ‘ಗಂಗೂಬಾಯಿ’ ಯಶಸ್ಸಿನ ಬೆನ್ನಲ್ಲೇ ಹಾಲಿವುಡ್ ಕಡೆ ಮುಖ ಮಾಡಿದ್ರಾ ಆಲಿಯಾ? ಇಲ್ಲಿದೆ ಹೊಸ ಸಮಾಚಾರ
ಆಲಿಯಾ ಭಟ್, ಗಾಲ್ ಗಡೋಟ್
TV9 Web
| Edited By: |

Updated on: Mar 08, 2022 | 9:48 AM

Share

ಬಾಲಿವುಡ್ ನಟಿ ಆಲಿಯಾ ಭಟ್ (Alia Bhatt) ‘ಗಂಗೂಬಾಯಿ ಕಾಠಿಯಾವಾಡಿ’ (Gangubai Kathiawadi) ಚಿತ್ರದ ಯಶಸ್ಸಿನಲ್ಲಿದ್ದಾರೆ. ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದ ಈ ಚಿತ್ರ ವಿಶ್ವದೆಲ್ಲೆಡೆ ಉತ್ತಮ ಪ್ರದರ್ಶನ ಕಾಣುತ್ತಿದೆ. ವಿಮರ್ಶಕರಿಂದಲೂ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಟಿಯಾಗಿ ಆಲಿಯಾ ಮತ್ತೆ ತಮ್ಮನ್ನು ಸಾಬೀತುಪಡಿಸಿಕೊಂಡಿದ್ದಾರೆ. ಈ ದೊಡ್ಡ ಯಶಸ್ಸಿನ ಬೆನ್ನಲ್ಲೇ ಆಲಿಯಾ ಕುರಿತು ಹೊಸ ವಿಚಾರವೊಂದು ಓಡಾಡುತ್ತಿದೆ. ಆಲಿಯಾ ಹಾಲಿವುಡ್​ಗೆ ಪದಾರ್ಪಣೆ ಮಾಡಲಿದ್ದಾರೆ. ಈ ಕುರಿತು ಬಹಳ ಹಿಂದೆಯೇ ಸುದ್ದಿಗಳು ಹರಿದಾಡಿದ್ದವು. ಆದರೆ ಯಾವುದೂ ಖಚಿತವಾಗಿರಲಿಲ್ಲ. ಇದೀಗ ಆಲಿಯಾ ಕಡೆಯಿಂದ ಇನ್ನೂ ಅಧಿಕೃತ ಮಾಹಿತಿ ಬಂದಿಲ್ಲವಾದರೂ ಅವರು ಹಾಲಿವುಡ್​ಗೆ ಪದಾರ್ಪಣೆ ಮಾಡುತ್ತಿರುವುದು ಖಚಿತ ಎಂದಿವೆ ವರದಿಗಳು. ಆಲಿಯಾ ತೆರೆ ಹಂಚಿಕೊಳ್ಳುತ್ತಿರುವುದು ಹಾಲಿವುಡ್​ನ ಖ್ಯಾತ ನಟಿ ಗಾಲ್ ಗಡೋಟ್ ಅವರೊಂದಿಗೆ. ಸ್ಪೈ ಥ್ರಿಲ್ಲರ್ ಮಾದರಿಯ ಚಿತ್ರವಾದ ‘ಹಾರ್ಟ್ ಆಫ್ ಸ್ಟೋನ್’ನಲ್ಲಿ ಆಲಿಯಾ ಬಣ್ಣಹಚ್ಚಲಿದ್ದಾರೆ. ಈ ಸುದ್ದಿ ಅವರ ಅಭಿಮಾನಿಗಳಿಗೆ ಸಖತ್ ಸಂತಸ ತಂದಿದೆ.

‘ಹಾರ್ಟ್ ಆಫ್ ಸ್ಟೋನ್’ ಬಗ್ಗೆ ನೆಟ್​ಫ್ಲಿಕ್ಸ್ ಪೋಸ್ಟ್:

View this post on Instagram

A post shared by Netflix Film (@netflixfilm)

‘ಹಾರ್ಟ್ ಆಫ್ ಸ್ಟೋನ್’ ಚಿತ್ರವನ್ನು ನಿರ್ದೇಶಿಸುತ್ತಿರುವವರು ಟಾಮ್ ಹಾರ್ಪರ್. ಇದು ನೆಟ್​ಫ್ಲಿಕ್ಸ್ ಒರಿಜಿನಲ್ ಚಿತ್ರವಾಗಿದೆ. ಟ್ರೇಡ್ ಅನಲಿಸ್ಟ್ ಆಗಿರುವ ತರಣ್ ಆದರ್ಶ್ ಟ್ವಿಟರ್​ನಲ್ಲಿ ಈ ಕುರಿತು ಬರೆದುಕೊಂಡಿದ್ದು, ‘ಆಲಿಯಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಯಾರಾಗುತ್ತಿರುವ ಸ್ಪೈ ಥ್ರಿಲ್ಲರ್ ಚಿತ್ರ ಹಾರ್ಟ್ ಆಫ್ ಸ್ಟೋನ್ ಮೂಲಕ ಹಾಲಿವುಡ್​ಗೆ ಪದಾರ್ಪಣೆ ಮಾಡುತ್ತಿದ್ದಾರೆ’ ಎಂದು ಬರೆದುಕೊಂಡಿದ್ದಾರೆ.

ಈ ಕುರಿತ ಟ್ವೀಟ್ ಇಲ್ಲಿದೆ:

‘ಹಾರ್ಟ್ ಆಫ್ ಸ್ಟೋನ್’ ಚಿತ್ರದಲ್ಲಿ ಜೇಮಿ ಡೋರ್ನಾನ್ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಕುರಿತು ಇನ್ನೂ ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ.

ಬಾಕ್ಸಾಫೀಸ್​ನಲ್ಲಿ ಕಮಾಯಿ ಮಾಡುತ್ತಿರುವ ‘ಗಂಗೂಬಾಯಿ ಕಾಠಿಯಾವಾಡಿ’:

ಆಲಿಯಾ ಭಟ್ ನಟನೆಯ ‘ಗಂಗೂಬಾಯಿ ಕಾಠಿಯಾವಾಡಿ’ ಬಾಕ್ಸಾಫೀಸ್​ನಲ್ಲಿ ಉತ್ತಮ ಗಳಿಕೆ ಮಾಡುತ್ತಿದೆ. ಕಳೆದ ಕೆಲವು ದಿನದ ಹಿಂದೆ ಚಿತ್ರತಂಡ ಕಲೆಕ್ಷನ್ ಕುರಿತ ಮಾಹಿತಿ ಹಂಚಿಕೊಂಡಿತ್ತು. ಅದರಲ್ಲಿ ‘ಗಂಗೂಬಾಯಿ ಕಾಠಿಯಾವಾಡಿ’ ವಿಶ್ವದಲ್ಲೆಡೆ ಸುಮಾರು 108.3 ಕೋಟಿ ರೂ ಬಾಚಿಕೊಂಡಿದೆ ಎಂದು ತಿಳಿಸಲಾಗಿತ್ತು. ಇದೀಗ ‘ಗಂಗೂಬಾಯಿ’ ಯಶಸ್ಸಿನ ಹಿಂದೆಯೇ ಆಲಿಯಾ ಹೊಸ ಚಿತ್ರದ ಬಗ್ಗೆ ಮಾಹಿತಿ ಹೊರಬಿದ್ದಿದೆ.

ಆಲಿಯಾ ಬತ್ತಳಿಕೆಯಲ್ಲಿ ಹಲವು ಚಿತ್ರಗಳಿವೆ. ಗೆಳೆಯ ರಣಬೀರ್ ಜತೆ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿರುವ ‘ಬ್ರಹ್ಮಾಸ್ತ್ರ’ ಈ ವರ್ಷ ಸೆಪ್ಟೆಂಬರ್ 9ರಂದು ತೆರೆಕಾಣಲಿದೆ. ಅಮಿತಾಭ್ ಬಚ್ಚನ್, ನಾಗಾರ್ಜುನ ಅಕ್ಕಿನೇನಿ, ಮೌನಿ ರಾಯ್ ಮೊದಲಾದ ಖ್ಯಾತನಾಮರು ಈ ಚಿತ್ರದಲ್ಲಿ ಬಣ್ಣಹಚ್ಚುತ್ತಿದ್ದಾರೆ.

ಇದನ್ನೂ ಓದಿ:

Radhika Pandit: ಕುಟುಂಬದೊಂದಿಗೆ ಜನ್ಮದಿನ ಆಚರಿಸಿದ ರಾಧಿಕಾ ಪಂಡಿತ್; ಇಲ್ಲಿವೆ ಮುದ್ದಾದ ಫೋಟೋಗಳು

Women’s Day: ಮಹಿಳಾ ಪ್ರಧಾನ ಸಿನಿಮಾಗಳಿಗೆ ವಿಶೇಷ ಮನ್ನಣೆ ನೀಡಿರುವ ಕನ್ನಡ ಪ್ರೇಕ್ಷಕ; ಇಲ್ಲಿವೆ ಜನಮನ ಗೆದ್ದ ಚಿತ್ರಗಳು

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್