Kannada News » Photo gallery » Sandalwood Actress Radhika Pandit celebrates 38th birthday with Yash and Ayra and Yatharv see pics
Radhika Pandit: ಕುಟುಂಬದೊಂದಿಗೆ ಜನ್ಮದಿನ ಆಚರಿಸಿದ ರಾಧಿಕಾ ಪಂಡಿತ್; ಇಲ್ಲಿವೆ ಮುದ್ದಾದ ಫೋಟೋಗಳು
Yash | Yatharv | Ayra: ಸ್ಯಾಂಡಲ್ವುಡ್ ನಟಿ ರಾಧಿಕಾ ಪಂಡಿತ್ ಸೋಮವಾರದಂದು 38ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಪತಿ ಯಶ್ ಹಾಗೂ ಮಕ್ಕಳೊಂದಿಗೆ ಅವರು ಜನ್ಮದಿನ ಆಚರಿಸಿಕೊಂಡಿದ್ದು, ಈ ಸಂದರ್ಭದ ಫೋಟೋಗಳು ವೈರಲ್ ಆಗಿವೆ.
Mar 08, 2022 | 8:59 AM
ಸ್ಯಾಂಡಲ್ವುಡ್ ನಟಿ ರಾಧಿಕಾ ಪಂಡಿತ್ ಸೋಮವಾರ (ಮಾರ್ಚ್ 07) ಜನ್ಮದಿನ ಆಚರಿಸಿಕೊಂಡಿದ್ದಾರೆ.
38ನೇ ವಸಂತಕ್ಕೆ ಕಾಲಿಟ್ಟಿರುವ ನಟಿಗೆ ಚಿತ್ರರಂಗ, ಅಭಿಮಾನಿಗಳು ಶುಭಹಾರೈಸಿದ್ದರು.
ಅಭಿಮಾನಿಗಳೊಂದಿಗೆ ಕೇಕ್ ಕಟ್ ಮಾಡಿ ರಾಧಿಕಾ ಜನ್ಮದಿನವನ್ನು ಸಂಭ್ರಮಿಸಿದ್ದಾರೆ.
ರಾಧಿಕಾ ತಮ್ಮ ಕುಟುಂಬದೊಂದಿಗೆ ಹುಟ್ಟುಹಬ್ಬ ಆಚರಿಸುತ್ತಿರುವ ಫೋಟೋಗಳು ಸದ್ಯ ವೈರಲ್ ಆಗಿವೆ.
ಪತಿ ಯಶ್, ಪುತ್ರ ಯಥರ್ವ್ ಹಾಗೂ ಪುತ್ರಿ ಆಯ್ರಾ ಜತೆ ರಾಧಿಕಾ ಪಂಡಿತ್ ಜನ್ಮದಿನ ಆಚರಿಸಿಕೊಂಡಿದ್ದಾರೆ.
ರಾಧಿಕಾ ಪಂಡಿತ್ ಅವರ ಅಭಿಮಾನಿ ಖಾತೆಗಳಲ್ಲಿ ಫೋಟೋಗಳು ವೈರಲ್ ಆಗಿದ್ದು, ಮುದ್ದಾದ ಫೋಟೋಗಳನ್ನು ನೋಡಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ.
ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ಯಶ್- ರಾಧಿಕಾ ಪಂಡಿತ್ ಕುಟುಂಬ