AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಜಿ ಪ್ರಿಯಕರ ರಣಬೀರ್​ ಕಪೂರ್​ ಮದುವೆ ಸಮಯದಲ್ಲಿ ಮುಂಬೈ ತೊರೆದ ದೀಪಿಕಾ; ಸಖತ್​ ಟ್ರೋಲ್​

Deepika Padukone: ಯಾವ ಕಾರಣಕ್ಕಾಗಿ ದೀಪಿಕಾ ಪಡುಕೋಣೆ ಅವರು ಮುಂಬೈ ತೊರೆದಿದ್ದಾರೆ ಎಂಬುದು ಗೊತ್ತಾಗಿಲ್ಲ. ಅಷ್ಟರಲ್ಲಾಗಲೇ ನೆಟ್ಟಿಗರು ಟ್ರೋಲ್​ ಮಾಡಲು ಆರಂಭಿಸಿದ್ದಾರೆ.

ಮಾಜಿ ಪ್ರಿಯಕರ ರಣಬೀರ್​ ಕಪೂರ್​ ಮದುವೆ ಸಮಯದಲ್ಲಿ ಮುಂಬೈ ತೊರೆದ ದೀಪಿಕಾ; ಸಖತ್​ ಟ್ರೋಲ್​
ರಣಬೀರ್​ ಕಪೂರ್​, ಆಲಿಯಾ ಭಟ್​, ದೀಪಿಕಾ ಪಡುಕೋಣೆ
TV9 Web
| Edited By: |

Updated on: Apr 14, 2022 | 3:08 PM

Share

ಸೆಲೆಬ್ರಿಟಿಗಳಿಗೆ ಟ್ರೋಲ್​ (Troll) ಕಾಟ ತಪ್ಪಿದ್ದಲ್ಲ. ಸದಾ ಕಾಲ ಸಾರ್ವಜನಿಕರ ಕಣ್ಣಿಗೆ ಕಾಣಿಸಿಕೊಳ್ಳುವ ನಟ-ನಟಿಯರು ಎಷ್ಟು ಹುಷಾರಾಗಿದ್ದರೂ ಒಂದಿಲ್ಲೊಂದು ತಪ್ಪು ಕಂಡು ಹಿಡಿದು ಟ್ರೋಲ್​ ಮಾಡಲಾಗುತ್ತದೆ. ಅದರಲ್ಲೂ ಈಗಿನ ಸೋಶಿಯಲ್​ ಮೀಡಿಯಾ ಜಮಾನಾದಲ್ಲಿ ತಾರೆಯರಿಗೆ ಟ್ರೋಲ್​ನದ್ದೇ ಕಿರಿಕಿರಿ. ಕೆಲವೊಮ್ಮೆ ಏನೂ ತಪ್ಪು ಮಾಡದೇ ಇದ್ದರೂ ಕೂಡ ಜನರಿಂದ ನೆಗೆಟಿವ್​ ಕಮೆಂಟ್​ಗಳನ್ನು ಸ್ವೀಕರಿಸಬೇಕಾಗುತ್ತದೆ. ಈಗ ನಟಿ ದೀಪಿಕಾ ಪಡುಕೋಣೆ (Deepika Padukone) ಅವರನ್ನು ಅದೇ ರೀತಿ ಟಾರ್ಗೆಟ್​ ಮಾಡಲಾಗಿದೆ. ಇತ್ತೀಚೆಗೆ ಅವರು ಮುಂಬೈನ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ವಿಡಿಯೋ ಮತ್ತು ಫೋಟೋಗಳನ್ನು ಪಾಪರಾಜಿಗಳು ಸೆರೆ ಹಿಡಿದಿದ್ದಾರೆ. ಅವು ವೈರಲ್​ ಆಗುತ್ತಿದ್ದಂತೆಯೇ ಜನರು ಬಗೆಬಗೆಯಲ್ಲಿ ಕಮೆಂಟ್​ ಮಾಡಲು ಆರಂಭಿಸಿದ್ದಾರೆ. ದೀಪಿಕಾ ಪಡುಕೋಣೆ ಅವರು ಮುಂಬೈ ಬಿಟ್ಟು ಬೇರೆಡೆಗೆ ತೆರಳುತ್ತಿರುವುದಕ್ಕೂ ರಣಬೀರ್​ ಕಪೂರ್​-ಆಲಿಯಾ ಭಟ್​ ಮದುವೆಗೂ (Alia Bhatt Ranbir Kapoor Marriage) ಲಿಂಕ್​ ಇದೆ ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ. ಸದ್ಯ ಈ ವಿಡಿಯೋ ವೈರಲ್​ ಆಗಿದೆ.

ರಣಬೀರ್​ ಕಪೂರ್​ ಮತ್ತು ಆಲಿಯಾ ಭಟ್​ ಅವರು ಇತ್ತೀಚಿನ ವರ್ಷಗಳಲ್ಲಿ ಪರಸ್ಪರ ಪ್ರೀತಿಸಲು ಆರಂಭಿಸಿದ್ದರು. ಈಗ ಎರಡೂ ಕುಟುಂಬದ ಒಪ್ಪಿಗೆ ಮೇರೆಗೆ ಅವರು ಹಸೆಮಣೆ ಏರುತ್ತಿದ್ದಾರೆ. ಇಂದು (ಏ.14) ಮುಂಬೈನಲ್ಲಿ ಅದ್ದೂರಿಯಾಗಿ ಅವರ ವಿವಾಹ ಸಮಾರಂಭ ನಡೆಯುತ್ತಿದೆ. ಈ ಸಂದರ್ಭಕ್ಕೆ ಸರಿಯಾಗಿ ನಟಿ ದೀಪಿಕಾ ಪಡುಕೋಣೆ ಅವರು ಮುಂಬೈ ಬಿಟ್ಟು ಬೇರೆ ಕಡೆಗೆ ತೆರಳಿರುವುದು ಜನರ ಅನುಮಾನಕ್ಕೆ ಕಾರಣ ಆಗಿದೆ.

ರಣಬೀರ್​ ಕಪೂರ್​ ಮತ್ತು ದೀಪಿಕಾ ಪಡುಕೋಣೆ ಅವರು ಒಂದು ಕಾಲದಲ್ಲಿ ಪ್ರೇಮಿಗಳಾಗಿದ್ದರು. ನಂತರ ಅವರ ಸಂಬಂಧ ಬ್ರೇಕಪ್​ನಲ್ಲಿ ಅಂತ್ಯವಾಯ್ತು. ಈಗ ಮಾಜಿ ಪ್ರಿಯಕರನ ಮದುವೆಗೆ ಹೋಗುವುದನ್ನು ತಪ್ಪಿಸಿಕೊಳ್ಳುವ ಸಲುವಾಗಿಯೇ ದೀಪಿಕಾ ಪಡುಕೋಣೆ ಅವರು ಮುಂಬೈ ಬಿಟ್ಟು ಬೇರೆ ಊರಿಗೆ ತೆರಳಿದ್ದಾರೆ ಎಂದು ನೆಟ್ಟಿಗರು ಟೀಕಿಸುತ್ತಿದ್ದಾರೆ. ದೀಪಿಕಾ ಓರ್ವ ಸ್ಟಾರ್​ ನಟಿ. ಅವರಿಗೆ ಸಿನಿಮಾ ಮಾತ್ರವಲ್ಲದೇ ಹಲವು ಕೆಲಸಗಳು ಇರುತ್ತವೆ. ಆದರೆ ಯಾವ ಕಾರಣಕ್ಕಾಗಿ ಅವರು ಈಗ ಮುಂಬೈನಿಂದ ಹೊರಗೆ ಹೋಗಿದ್ದಾರೆ ಎಂಬುದು ತಿಳಿದು ಬಂದಿಲ್ಲ.

ದೀಪಿಕಾ ಪಡುಕೋಣೆ ಕಡೆಯಿಂದ ಪ್ರತಿಕ್ರಿಯೆ ಬರುವುದಕ್ಕೂ ಮುನ್ನವೇ ಜನರು ಬಗೆಬಗೆಯಲ್ಲಿ ನೆಗೆಟಿವ್​ ಕಮೆಂಟ್​ ಮಾಡಲು ಆರಂಭಿಸಿದ್ದಾರೆ. ‘ರಣಬೀರ್​ ಕಪೂರ್​ ಹೊಸ ಜೀವನ ಕಟ್ಟಿಕೊಳ್ಳುತ್ತಿರುವುದು ದೀಪಿಕಾಗೆ ಇಷ್ಟ ಇಲ್ಲ. ಹೊಟ್ಟೆ ಕಿಚ್ಚಿನಿಂದಾಗಿ ಅವರು ಅವರು ಮುಂಬೈ ಬಿಟ್ಟು ಹೋಗುತ್ತಿದ್ದಾರೆ’ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಈ ರೀತಿಯ ಸಿಲ್ಲಿ ಕಮೆಂಟ್​ಗಳಿಗೆ ಪ್ರತಿಕ್ರಿಯೆ ನೀಡಲು ದೀಪಿಕಾ ಅವರಿಗೆ ಟೈಮ್​ ಇಲ್ಲ. ತಮ್ಮ ಪಾಡಿಗೆ ಅವರು ಕೆಲಸದ ಕಡೆಗೆ ಗಮನ ಹರಿಸಿದ್ದಾರೆ.

ಮಾಜಿ ಬಾಯ್​ಫ್ರೆಂಡ್​ ಮದುವೆ ಸಂದರ್ಭದಲ್ಲಿ ದೀಪಿಕಾ ಪಡುಕೋಣೆ ಅವರು ಸೈಲೆಂಟ್​ ಆಗಿದ್ದಾರೆ. ರಣಬೀರ್​-ಆಲಿಯಾ ವಿವಾಹಕ್ಕೆ ಸಂಬಂಧಿಸಿದಂತೆ ಅವರು ಯಾವುದೇ ಹೇಳಿಕೆ ನೀಡಿಲ್ಲ. ಕೇವಲ ಒಂದೇ ಒಂದು ಲೈಕ್​ ಮೂಲಕ ಅವರು ಪ್ರತಿಕ್ರಿಯಿಸಿದ್ದಾರೆ. ಹೌದು, ‘ಬ್ರಹ್ಮಾಸ್ತ್ರ’ ನಿರ್ದೇಶಕ ಅಯಾನ್​ ಮುಖರ್ಜಿ ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಆಲಿಯಾ-ರಣಬೀರ್​ಗೆ ಶುಭಾಶಯ ಕೋರಿ ಒಂದು ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ. ಆ ವಿಡಿಯೋವನ್ನು ದೀಪಿಕಾ ಪಡುಕೋಣೆ ಲೈಕ್​ ಮಾಡಿದ್ದಾರೆ ಅಷ್ಟೇ. ಈ ವಿಚಾರ ಅವರ ಅಭಿಮಾನಿಗಳ ವಲಯದಲ್ಲಿ ಚರ್ಚೆ ಆಗುತ್ತಿದೆ.

ಇದನ್ನೂ ಓದಿ:

ಮದುವೆ ವಿಚಾರ ಖಚಿತಪಡಿಸಿದ ಆಲಿಯಾ ಭಟ್​; ಒಂದೇ ಕಮೆಂಟ್ ಮೂಲಕ ಎಲ್ಲವೂ ಬಹಿರಂಗ

ಮುಂಬೈಗೆ ತೆರಳಿ ಆಲಿಯಾಗೆ ಶುಭ ಹಾರೈಸಲಿದೆ ‘ಆರ್​ಆರ್​ಆರ್​’ ತಂಡ; ಬುಕ್ ಆಯ್ತು ವಿಶೇಷ ವಿಮಾನ

ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಅಜಿತ್ ಪವಾರ್ ಅಂತ್ಯಕ್ರಿಯೆ; ಮಕ್ಕಳಿಂದ ಅಪ್ಪನ ಚಿತೆಗೆ ಅಗ್ನಿಸ್ಪರ್ಶ
ಅಜಿತ್ ಪವಾರ್ ಅಂತ್ಯಕ್ರಿಯೆ; ಮಕ್ಕಳಿಂದ ಅಪ್ಪನ ಚಿತೆಗೆ ಅಗ್ನಿಸ್ಪರ್ಶ