Updated on: Apr 11, 2022 | 4:46 PM
ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಮದುವೆಗೆ ಕ್ಷಣಗಣನೆ ಆರಂಭವಾಗಿದೆ. ಈ ಜೋಡಿ ಹಕ್ಕಿಗಳು ವಿವಾಹ ಆಗುತ್ತಿರುವ ಡೇಟ್ ಬಗ್ಗೆ ದಿನಕ್ಕೊಂದು ಮಾಹಿತಿ ಬರುತ್ತಿದೆ. ಈಗ ಮದುವೆ ಆಗುತ್ತಿರುವ ವಿಚಾರವನ್ನು ಆಲಿಯಾ ಪರೋಕ್ಷವಾಗಿ ಖಚಿತಪಡಿಸಿದ್ದಾರೆ.
‘ಅರ್ಜುನ್ ರೆಡ್ಡಿ’ ಸಿನಿಮಾದಲ್ಲಿ ಒಂದು ದೃಶ್ಯ ಬರುತ್ತದೆ. ತಾನು ಪ್ರೀತಿಸಿದ ಹುಡುಗಿ ಮದುವೆ ವಿಚಾರ ತಿಳಿದು ರಸ್ತೆಯಮೇಲೆ ಓಡಿಯೇ ಸಾಗುತ್ತಾನೆ ಹೀರೋ. ಇದೇ ಥೀಮ್ನಲ್ಲಿ ಯೂಟ್ಯೂಬರ್ ನಿಕ್ ಅವರು ವಿಡಿಯೋ ಮಾಡಿದ್ದಾರೆ. ಬಿಳಿ ಬಟ್ಟೆ ಧರಿಸಿ ರಸ್ತೆಮೇಲೆ ಓಡುತ್ತಿದ್ದಾರೆ.
‘ಏಪ್ರಿಲ್ 17ರಂದು ನಾನು ಹೀಗೆಯೇ ಓಡುತ್ತೇನೆ’ ಎಂಬರ್ಥದಲ್ಲಿ ಕ್ಯಾಪ್ಶನ್ ನೀಡಿದ್ದಾರೆ ನಿಕ್. ನಿಕ್ ಅವರು ಆಲಿಯಾ ಫ್ಯಾನ್. ಆಲಿಯಾಗೆ ಮದುವೆ ಆಗುತ್ತಿರುವ ಹಿನ್ನೆಲೆಯಲ್ಲಿ ನಿಕ್ ಈ ರೀತಿ ಪೋಸ್ಟ್ ಮಾಡಿದ್ದಾರೆ.
ಇದಕ್ಕೆ ಆಲಿಯಾ ಕಮೆಂಟ್ ಹಾಕಿದ್ದಾರೆ. ‘Ded’ ಎಂದು ಕಮೆಂಟ್ ಮಾಡಿದ್ದಾರೆ. ಫನ್ನಿ ಘಟನೆ ನಡೆದಾಗ ‘Dead’ ಎಂಬುದನ್ನು ಈ ರೀತಿಯಲ್ಲಿ ಬರೆಯಲಾಗುತ್ತದೆ. ಈ ಮೂಲಕ ಪರೋಕ್ಷವಾಗಿ ಮದುವೆ ವಿಚಾರ ಖಚಿತಪಡಿಸಿದ್ದಾರೆ.
ಆಲಿಯಾ ಭಟ್ ಹಾಗೂ ರಣಬೀರ್ ವಿವಾಹ ಆಗುತ್ತಿರುವ ವಿಚಾರ ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ. ಆದರೆ, ಇವರು ಮದುವೆ ದಿನಾಂಕವನ್ನು ಅಧಿಕೃತ ಮಾಡಿಲ್ಲ.